MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ಬಟಾಣಿ ನಕಲಿ ಅಥವಾ ಅಸಲಿ ಗುರುತಿಸೋದು ಹೇಗೆ?

ಬಟಾಣಿ ನಕಲಿ ಅಥವಾ ಅಸಲಿ ಗುರುತಿಸೋದು ಹೇಗೆ?

ಇತ್ತಿಚಿನ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ಎಲ್ಲವೂ ನಕಲಿಯಾಗಿ (fake) ಬರುತ್ತವೆ. ಮೊಟ್ಟೆ, ಅಕ್ಕಿ, ಹಾಲು ಹೀಗೆ ಪ್ರತಿದಿನ ಸೇವನೆ ಮಾಡುವ ಆಹಾರಗಳು ಸಹ ನಕಲಿಯಾಗಿ ಗ್ರಾಹಕರಿಗೆ (consumer)  ಲಭ್ಯವಾಗುತ್ತದೆ. ಆದರೆ ಈ ನಕಲಿ ವಸ್ತುಗಳು ಅಸಲಿಯಂತೆಯೇ ಕಾಣುವುದರಿಂದ ಜನರಿಗೆ ಅದನ್ನು ಗುರುತಿಸಲು ಸಾಧ್ಯವಾಗೋದಿಲ್ಲ. ಇಂತಹ ನಕಲಿ ಆಹಾರಗಳಲ್ಲಿ ಬಟಾಣಿಯೂ (green peas) ಒಂದು.

2 Min read
Author : Suvarna News | Asianet News
Published : Sep 29 2021, 05:11 PM IST
Share this Photo Gallery
  • FB
  • TW
  • Linkdin
  • Whatsapp
19

ಬಟಾಣಿ (green peas) ಖರೀದಿಸುವಾಗ ಅಸಲಿ ಬದಲು ನಕಲಿ ಬಟಾಣಿಗಳನ್ನು ಖರೀದಿಸಿ ನೀವು ಮೋಸ ಹೋದರೆ, FSSAI (ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ) ಸೂಚಿಸಿದ ಸಲಹೆಯೊಂದಿಗೆ ನೈಜ ಮತ್ತು ನಕಲಿ ಬಟಾಣಿಗಳನ್ನು ಗುರುತಿಸಿ ಖರೀದಿಸಿ.

29

ಸಣ್ಣ ಹಸಿರು ಕಾಳುಗಳಿರುವ ಸಿಹಿ ಬಟಾಣಿ ಚಳಿಗಾಲದ ವಿಶೇಷ ತರಕಾರಿಯಾಗಿದ್ದು, ಹೆಚ್ಚಿನವರು ತಿನ್ನಲು ಇಷ್ಟಪಡುತ್ತಾರೆ. ಬಟಾಣಿ ಆರೋಗ್ಯಕ್ಕೆ ಪ್ರಯೋಜನಕಾರಿ ಜೊತೆಗೆ ರುಚಿಕರವಾಗಿವೆ. ಇದರಲ್ಲಿ ಇರುವ ಪೋಷಕಾಂಶಗಳ ವಿಷಯಕ್ಕೆ ಬಂದಾಗ ಇದರಲ್ಲಿ ಫೈಟೋನ್ಯೂಟ್ರಿಯೆಂಟ್ಸ್, (phytonutrients) ಲ್ಯೂಟಿನ್ಸ್ ಮತ್ತು ಝೆಕ್ಸಾಂಥಿನ್ (phytonutrients) ಮತ್ತು ವಿಟಮಿನ್ ಎ, ಬಿ, ಸಿ, ಇ ಮತ್ತು ಕೆ ಪೋಷಕಾಂಶಗಳು ಅಧಿಕವಾಗಿವೆ.

39

ಬಟಾಣಿ ಕಾಳುಗಳಲ್ಲಿ ಇರುವ ಫೈಬರ್ ಜೀರ್ಣಕ್ರಿಯೆಯನ್ನು (digestion) ಆರೋಗ್ಯಕರವಾಗಿರಿಸುತ್ತದೆ. ಇದರಲ್ಲಿ ಯಾವುದೇ ಕೊಬ್ಬಿನ ಅಂಶವಿರುವುದಿಲ್ಲ, ಇದು ತೂಕವನ್ನು ನಿಯಂತ್ರಿಸುತ್ತದೆ.(weight control)  ಜೊತೆಗೆ ಇದನ್ನು ಸೇವಿಸುವುದರಿಂದ ಹೃದಯದ ಆರೋಗ್ಯ (Heart Health)ಕ್ಕೂ ಪ್ರಯೋಜನಕಾರಿ.

49

ಇನ್ನು ಹಲವಾರು ಗುಣಗಳನ್ನು ಹೊಂದಿರುವ ಬಟಾಣಿ ಕಾಳುಗಳಲ್ಲಿ ಸ್ವಲ್ಪವೂ ಕೊಲೆಸ್ಟ್ರಾಲ್  (cholesterol) ಇಲ್ಲ. ಇಂತಹ ಪ್ರಯೋಜನಕಾರಿ ಮತ್ತು ಜನರು ಇಷ್ಟಪಡುವಂತಹ ಬಟಾಣಿಯನ್ನು ಸೇವಿಸುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ.

59

ಕೆಲವೊಮ್ಮೆ ಬಟಾಣಿಗಳನ್ನು ಖರೀದಿಸುವಾಗ ಮೋಸ ಹೋಗುತ್ತೇವೆ ಮತ್ತು ನಿಜವಾದ ಬಟಾಣಿಗಳಂತೆ ಕಾಣುವ ಆದರೆ ಸಂಪೂರ್ಣವಾಗಿ ವಿಭಿನ್ನ ರುಚಿಯನ್ನು ಹೊಂದಿರುವ ನಿಜವಾದ ಬಟಾಣಿಗಳ ಬದಲಿಗೆ ಕೃತಕ ಬಟಾಣಿಗಳನ್ನು (fake green peas) ಖರೀದಿಸುತ್ತೇವೆ. ಕೃತಕ ಬಟಾಣಿ, ಬಣ್ಣದ ನಕಲಿ ಬಟಾಣಿ, ಬೇಯಿಸಿದಾಗ, ಅವುಗಳ ಸಿಪ್ಪೆ ಬೇರ್ಪಟ್ಟು ಅವುಗಳ ಬಣ್ಣ ಹಗುರಗೊಳ್ಳುತ್ತದೆ.

69

ಬಟಾಣಿ ಖರೀದಿಸುವಾಗ  ಮೋಸ ಹೋದರೆ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಸೂಚಿಸಿದ ಸಲಹೆಯೊಂದಿಗೆ ನೈಜ ಮತ್ತು ನಕಲಿ ಬಟಾಣಿಗಳನ್ನು ಗುರುತಿಸುವ ಮೂಲಕ ಮಾತ್ರ ಬಟಾಣಿ ಖರೀದಿಸಿ. ಬಟಾಣಿಯನ್ನು ಸೇವಿಸುವ ಮೊದಲು ನಿಜವಾದ ಮತ್ತು ನಕಲಿ ಬಟಾಣಿಗಳನ್ನು ಹೇಗೆ ಗುರುತಿಸುವುದು ಎಂದು ತಿಳಿಯಿರಿ.

79

ಬಣ್ಣ ಕಲಬೆರಕೆಯನ್ನು ಪರೀಕ್ಷಿಸಲು ಹಸಿರು ಬಟಾಣಿಗಳ ಸರಳ ಅದ್ಭುತತೆಯನ್ನು ಎಫ್ ಎಸ್ ಎಸ್ ಎಐ (Food Safety and Standards Authority of India) ವಿವರಿಸಿದೆ. ಅವುಗಳನ್ನು ತಿಳಿದುಕೊಂಡು ನಿಯಮಗಳನ್ನು ಅನುಸರಿಸಿ. ಸುಲಭವಾಗಿ ಕಲಬೆರಕೆ ಪತ್ತೆ ಮಾಡಬಹುದು. 

89

ಖರೀದಿ ಮಾಡಿದ ಬಟಾಣಿಯನ್ನು ಅಡುಗೆಯಲ್ಲಿ ಬಳಸುವ ಮುನ್ನ. ಒಂದು ಗಾಜಿನ ಲೋಟದಲ್ಲಿ ಸ್ವಲ್ಪ ಹಸಿರು ಬಟಾಣಿಯನ್ನು ಹಾಕಿ, ನಂತರ ಗಾಜಿಗೆ ನೀರನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಅರ್ಧ ಗಂಟೆ ಕಾಯಿರಿ.ಆವಾಗ ಅಸಲಿ - ನಕಲಿ ಎಂದು ತಿಳಿಯುತ್ತದೆ. 

99

ಬಟಾಣಿ ನಿಜವಾದರೆ, ಬಟಾಣಿ ಬಣ್ಣವನ್ನು ಬಿಟ್ಟು ಕೊಡುವುದಿಲ್ಲ. ಕಲಬೆರಕೆಯಾದ ಬಟಾಣಿಗಳು ನೀರಿನ ಲೋಟವನ್ನು ಹಸಿರು ಬಣ್ಣಕ್ಕೆ ತಿರುಗಿಸುತ್ತದೆ.
ನೀವು ನಿಜವಾದ ಮತ್ತು ನಕಲಿ ಬಟಾಣಿಗಳನ್ನು ಪತ್ತೆ ಹಚ್ಚಲು ಬಯಸಿದರೆ ಬಟಾಣಿಯ ಶುದ್ಧತೆಯನ್ನು (purity) ಈ ಸುಲಭ ರೀತಿಯಲ್ಲಿ ಪರಿಶೀಲಿಸಿ. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಬೇಸಿಗೆಯಲ್ಲಿ ದೋಸೆ, ಇಡ್ಲಿ ಹಿಟ್ಟು ಹುಳಿಯಾಗಿ ಹಾಳಾಗಿದ್ದರೆ ಸರಿಪಡಿಸಲು ಇಲ್ಲಿದೆ 5 ಸೂಪರ್ Kitchen Tips
Recommended image2
ದಪ್ಪ ಕೆನೆಯುಕ್ತ ಇರಾನಿ ಚಾಯ್, ಮನೆಯಲ್ಲೇ ಮಾಡೋದು ಹೇಗೆ? ಇಲ್ಲಿದೆ ನೋಡಿ ರೆಸಿಪಿ
Recommended image3
ಬೆಂಡೆಕಾಯಿ ಕಟ್ ಮಾಡುವ ಮುನ್ನ ಇದನ್ನ ಸಿಂಪಡಿಸಿ.. ಲೋಳೆ ಮಾಯವಾಗಿ ಅಡುಗೆ ಸೂಪರ್ ಆಗುತ್ತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved