ನಿಂಬೆಹಣ್ಣು ಹೆಚ್ಚು ಕಾಲ ಫ್ರೆಶ್ ಅಗಿಡಲು ಈ ಟಿಪ್ಸ್ ಫಾಲೋ ಮಾಡಿ!
ನಿಂಬೆಹಣ್ಣುಗಳು ದಿನ ನಿತ್ಯದ ಬಳಕೆಯಲ್ಲಿ ಅತಿ ಮುಖ್ಯ. ಜ್ಯೂಸ್‌ನಿಂದ ಸಲಾಡ್ ವರೆಗೆ ಮತ್ತು ಎಲ್ಲಾ ಅಡುಗೆಗಳಲ್ಲಿ ನಿಂಬೆ ಹಣ್ಣಿನ ಬಳಕೆ ಸಾಮಾನ್ಯ. ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ ನಿಂಬೆ ಹಣ್ಣು. ಆದರೆ ಇದನ್ನು ಹೆಚ್ಚು ಕಾಲ ಫ್ರೆಶ್ ಆಗಿ ಉಳಿಸಿಕೊಳ್ಳುವುದೇ ಸಮಸ್ಯೆ. ಅದಕ್ಕಾಗಿ ಇಲ್ಲಿವೆ ನಿಂಬೆಹಣ್ಣುಗಳನ್ನು ಹೆಚ್ಚು ಕಾಲ ತಾಜಾವಾಗಿಡಲು ಕೆಲವು ಟಿಪ್ಸ್.

ದಿನ ನಿತ್ಯದ ಬಳಕೆಗೆ ನಿಂಬೆ ಹಣ್ಣು ಅಗತ್ಯ. ಆದರೆ ನಿಂಬೆಹಣ್ಣುಗಳು ಸರಿಯಾಗಿ ಸಂಗ್ರಹಿಸದಿದ್ದರೆ ಬೇಗ ಹಾಳಾಗುತ್ತದೆ.

ಮುಖ್ಯವಾಗಿ ಅವು ತೇವಾಂಶವನ್ನು ಕಳೆದುಕೊಂಡು ಅವುಗಳ ಮೇಲೆ ಕಪ್ಪು ಕಲೆಗಳಾಗಿ ಒಣಗಿ ಹೋಗುತ್ತದೆ.

ಕೆಳಗಿನ ಕೆಲವು ಟಿಪ್ಸ್ ಫಾಲೋ ಮಾಡಿ ನಿಂಬೆಹಣ್ಣಿನ ಶೆಲ್ಫ್-ಲೈಫ್ ಹೆಚ್ಚಿಸಬಹುದು ಮತ್ತು ಅವುಗಳನ್ನು ಫ್ರೆಶ್ ಆಗಿ ಇಡಲು ಸಾಧ್ಯ.

ಯಾವಾಗಲೂ ಜಿಪ್-ಲಾಕ್ ಬ್ಯಾಗ್‌ನಲ್ಲಿ ನಿಂಬೆಹಣ್ಣುಗಳನ್ನು ಸಂಗ್ರಹಿಸುವ ಅಭ್ಯಾಸ ಮಾಡಿಕೊಳ್ಳಿ. ಬ್ಯಾಗ್‌ನಿಂದ ಸಾಧ್ಯವಾದಷ್ಟು ಗಾಳಿಯನ್ನು ತೆಗೆದು ನಿಂಬೆ ಹಣ್ಣುಗಳನ್ನು ಅದರಲ್ಲಿಡಿ. ಹೀಗೆ ಮಾಡುವುದರಿಂದ ನಿಂಬೆಹಣ್ಣು ರಸ ಮತ್ತು ಪರಿಮಳವನ್ನು ನಾಲ್ಕು ವಾರಗಳವರೆಗೆ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ನಿಂಬೆರಸ ಕೋಣೆಯ ಉಷ್ಣಾಂಶದಲ್ಲಿ ಇಟ್ಟರೆ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅದ್ದರಿಂದ ನಿಂಬೆರಸ ಹೆಚ್ಚು ಕಾಲ ಇಡಲು ಪಾರದರ್ಶಕವಲ್ಲದ ಪ್ಲಾಸ್ಟಿಕ್ ಅಥವಾ ಗಾಜಿನ ಬಾಟಲಿಗಳಲ್ಲಿಟ್ಟರೆ ಫ್ರಿಜ್‌ನಲ್ಲಿ ಸುಮಾರು 2-3 ದಿನಗಳವರೆಗೆ ಇರುತ್ತದೆ.

ನಿಂಬೆರಸವನ್ನು ಶೇಖರಿಸಿಡಲು ಒಂದು ಉತ್ತಮ ವಿಧಾನವೆಂದರೆ ನಿಂಬೆಹಣ್ಣಿನ ಎಲ್ಲಾ ರಸವನ್ನು ಐಸ್ ಟ್ರೇಗೆ ಹಾಕಿ ಫ್ರೀಜ್ ಮಾಡಿ ಏಸ್‌ಕ್ಯೂಬ್‌ಗಳನ್ನು ತಯಾರಿಸುವುದು.

ಕತ್ತರಿಸಿದ ನಿಂಬೆಹಣ್ಣನ್ನು ಇಡಲು ಬಯಸಿದರೆ, ನಿಂಬೆಯನ್ನು ಸಣ್ಣ ತಟ್ಟೆಯಲ್ಲಿ ಇರಿಸಿ ಪ್ಲಾಸ್ಟಿಕ್ ಕವರ್ ಸುತ್ತಿ ಅದನ್ನು ಏರ್ ಟೈಟ್ ಡಬ್ಬದಲ್ಲಿ ಹಾಕಿ ರೆಫ್ರಿಜರೇಟರ್‌ನಲ್ಲಿಡಿ.

ನೀರು ತುಂಬಿದ ಗಾಜಿನ ಜಾರ್‌ನಲ್ಲಿ ನಿಂಬೆಹಣ್ಣುಗಳನ್ನು ಹಾಕಿ ಫ್ರಿಜ್‌ನಲ್ಲಿಡುವುದು ತುಂಬಾ ಸರಳವಾದ ಟ್ರಿಕ್.

ಎಥಿಲೀನ್ ಅನ್ನು ಹಣ್ಣು ಮಾಡುವ ಹಾರ್ಮೋನ್ ಎಂದು ಕರೆಯಲಾಗುತ್ತದೆ. ನಿಂಬೆಹಣ್ಣು ಎಥಿಲೀನ್ ಕಾರಣದಿಂದ ತುಂಬಾ ಬೇಗ ಹಾಳಾಗುತ್ತದೆ. ಆದ್ದರಿಂದ, ಏಪ್ರಿಕಾಟ್, ಸೇಬು, ಬಾಳೆಹಣ್ಣು ಮತ್ತು ಇತರ ಹಣ್ಣುಗಳನ್ನು ಹೊರಸೂಸುವ ಎಥಿಲೀನ್ ಬಳಿ ನಿಂಬೆಹಣ್ಣುಗಳನ್ನು ಎಂದಿಗೂ ಇಡಬೇಡಿ.

ನಿಂಬೆಹಣ್ಣುಗಳನ್ನು ಖರೀದಿಸುವಾಗ ತೆಳು ಸಿಪ್ಪೆಯ ಹಣ್ಣುಗಳನ್ನು ಆರಿಸಿಕೊಳ್ಳಿ, ದಪ್ಪ ಸಿಪ್ಪೆಯ ನಿಂಬೆಗಿಂತ ಇವುಗಳಲ್ಲಿ ಹೆಚ್ಚು ರಸವಿರುತ್ತದೆ. ನಿಂಬೆಹಣ್ಣುಗಳು ಹಸಿರಾಗಿದರೆ ಹೆಚ್ಚ ದಿನ ಕೆಡದೆ ಉಳಿಯುತ್ತವೆ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.