ಭಾನುವಾರಕ್ಕೆ ತಾಜಾ ಮೀನು ಖರೀದಿಸಲು ಇಲ್ಲಿವೆ ಸಲಹೆಗಳು..
ಭಾನುವಾರ ಅಂದ್ರೆ ರಜಾ ದಿನ. ಒಂದೊಳ್ಳೆ ಮೀನೂಟ ಮಾಡಬೇಕು ಅನ್ನೋ ಆಸೆ ಇರುತ್ತದೆ. ಆದರೆ, ಮಾರುಕಟ್ಟೆಯಿಂದ ಖರೀದಿ ಮಾಡಿರುವ ಮೀನು ತಾಜಾ ಇದ್ರೆ ಮಾತ್ರ ಸಾಂಬಾರ್ ರುಚಿಕರವಾಗಿರುತ್ತದೆ. ಇಲ್ಲದೆ ಇದ್ರೆ ವೇಸ್ಟ್.

ಕೆಟ್ಟ ಮೀನು ಹೀಗಿರುತ್ತೆ, ಒಳ್ಳೆ ಮೀನು ಗುರುತಿಸಲು 7 ಸಲಹೆಗಳು!
ಮೀನುಗಳು ಆರೋಗ್ಯಕ್ಕೆ ಒಳ್ಳೆಯದು. ಪ್ರೋಟೀನ್‍ಗೆ ಹೆಸರುವಾಸಿ. ಮೀನು ತಿನ್ನುವುದು ಕಣ್ಣಿನಿಂದ ಹಿಡಿದು ಹೃದಯದವರೆಗೆ ಹಲವು ಅಂಗಗಳಿಗೆ ಒಳ್ಳೆಯದು. ಆದರೆ ಈಗೀಗ ಮೀನುಗಳಿಗೆ ರಾಸಾಯನಿಕ ಹಚ್ಚಿ ಮಾರುವುದು, ಹಲವು ದಿನಗಳ ಕಾಲ ಐಸ್‍ನಲ್ಲಿಟ್ಟು ಹಾಳಾದ ಮೀನನ್ನು ಮಾರುವುದು ಹೀಗೆ ವಂಚನೆಗಳು ನಡೆಯುತ್ತಿವೆ. ಒಳ್ಳೆಯ ಮೀನುಗಳು, ಒಳ್ಳೆಯದರಂತೇ ಇರುವ ಹಾಳಾದ ಮೀನುಗಳು, ರಾಸಾಯನಿಕ ಬೆರೆಸಿದ ಮೀನುಗಳು ದೇಹಕ್ಕೆ ಹಾನಿ ಮಾಡುತ್ತವೆ. ಈ ಲೇಖನದಲ್ಲಿ ಹಾಳಾದ ಮೀನುಗಳನ್ನು ಗುರುತಿಸುವುದು ಹೇಗೆಂದು ನೋಡೋಣ.
ರಾಸಾಯನಿಕ ಬಳಿದ ಮೀನುಗಳು:
ಕೆಲವು ಕಡೆಗಳಲ್ಲಿ ಮೀನುಗಳು ಹಾಳಾಗದಂತೆ ತಾಜಾವಾಗಿ ಕಾಣುವಂತೆ ಫಾರ್ಮಾಲಿನ್ ಎಂಬ ರಾಸಾಯನಿಕವನ್ನು ಹಚ್ಚುತ್ತಾರೆ. 2020ರಲ್ಲಿ ನಡೆದ ಸಮೀಕ್ಷೆಯೊಂದರಲ್ಲಿ ಇಂತಹ ಮೀನುಗಳು ಪತ್ತೆಯಾಗಿವೆಯಂತೆ. ಈ ರಾಸಾಯನಿಕವನ್ನು ಶವಗಳನ್ನು ಹಾಳಾಗದಂತೆ ಇಡಲು ಶವಾಗಾರಗಳಲ್ಲಿ ಬಳಸುತ್ತಾರೆ. ಈ ಮೀನುಗಳನ್ನು ತಿಂದರೆ ವಾಂತಿ, ಭೇದಿ, ತಲೆನೋವು ಮುಂತಾದ ಸಮಸ್ಯೆಗಳು ಬರಬಹುದು. ಮುಂದುವರೆದು ತಿನ್ನುತ್ತಿದ್ದರೆ ಕ್ಯಾನ್ಸರ್ ಕೂಡ ಬರಬಹುದು.
ಒಳ್ಳೆಯ ಮೀನು ಖರೀದಿ ಸಲಹೆಗಳು:
1). ಐಸ್‍ನಲ್ಲಿಟ್ಟ ಮೀನುಗಳನ್ನು ಎರಡು ದಿನಕ್ಕಿಂತ ಹೆಚ್ಚು ದಿನ ಇಟ್ಟರೆ ಒಳ್ಳೆಯದಲ್ಲ. ಮೀನಿನ ಕಿವಿರುಗಳನ್ನು ನೋಡಬೇಕು. ಮೀನು ಹಾಳಾಗಿಲ್ಲದಿದ್ದರೆ ಅವು ಕೆಂಪಾಗಿರುತ್ತವೆ. ಹಾಳಾದ ಮೀನಿನಲ್ಲಿ ಬಣ್ಣ ಕಳೆದುಕೊಂಡಿರುತ್ತದೆ.
2). ಕಿವಿರುಗಳ ಬಣ್ಣ ಹೋಗದಂತೆ ಕೆಲವರು ರಾಸಾಯನಿಕ ಹಚ್ಚಬಹುದು. ಐಸ್‍ನಲ್ಲಿಡುವುದರಿಂದಲೂ ಕಿವಿರುಗಳ ಬಣ್ಣ ಬದಲಾಗಬಹುದು. ಮೀನಿನ ದೇಹ ಗಟ್ಟಿಯಾಗಿದೆಯೇ ಎಂದು ಪರೀಕ್ಷಿಸಬೇಕು. ಮೀನಿನ ದೇಹ ಗಟ್ಟಿಯಾಗಿದ್ದರೆ ಖರೀದಿಸಬಹುದು.
3). ಕಿವಿರುಗಳನ್ನು ಬೇರ್ಪಡಿಸಿ ಬೆರಳುಗಳಿಂದ ಮುಟ್ಟಿದರೆ ಅಂಟಂಟಾಗಿ ಇದ್ದರೆ ಅದು ತಾಜಾ ಮೀನು. ಸಂಶಯ ಬೇಡ.
4). ಮೀನಿನ ಕಣ್ಣುಗಳು ಚೈತನ್ಯದಿಂದ ಇರಬೇಕು. ಸ್ಪಷ್ಟವಾಗಿ ನಮ್ಮನ್ನು ನೋಡುವಂತಿದ್ದರೆ ಒಳ್ಳೆಯ ಮೀನು. ರಕ್ತದ ಬಣ್ಣ, ಮಸುಕು ಬಣ್ಣ, ಉಬ್ಬಿದ ಕಣ್ಣುಗಳಿದ್ದರೆ ಅದು ಹಳೆಯ ಮೀನು.
5). ರಾಸಾಯನಿಕ ಬಳಿದ ಮೀನುಗಳಿಂದ ಔಷಧದ ವಾಸನೆ ಬರುತ್ತದೆ. ಈ ಬಗ್ಗೆ ಗಮನ ನೀಡಿ
6). ಮೀನಿನ ತಲೆಯನ್ನು ಹಿಡಿದು ಎತ್ತಿದಾಗ ಬಾಲ ಗಟ್ಟಿಯಾಗಿ ನಿಲ್ಲಬೇಕು. ಹಾಗಲ್ಲದೆ ಬಾಲ ಜೋತುಬಿದ್ದಿದ್ದರೆ ಹಾಳಾದ ಮೀನು. ಒಳ್ಳೆಯ ಮೀನಿನ ತಲೆ ಎತ್ತಿದಾಗ ಗಟ್ಟಿಯಾಗಿರುತ್ತದೆ.
7). ಕೆಲವು ಮೀನುಗಳ ಕಿವಿರುಗಳು ಬಣ್ಣ ಕಳೆದುಕೊಂಡಿದ್ದರೂ ಅವು ಒಳ್ಳೆಯ ಮೀನಾಗಿರಬಹುದು. ದೇಹ, ಬಾಲ, ಕಣ್ಣುಗಳನ್ನು ಗಮನಿಸಿ.
ಮೀನು ಖರೀದಿಸುವುದು ಹೇಗೆ?
ಮೀನು ಖರೀದಿಸಲು ಹೋದಾಗ ಮೀನಿನ ದೇಹವನ್ನು ಮುಟ್ಟಿ ನೋಡಬೇಕು. ಬೆರಳುಗಳಿಂದ ಒತ್ತಿದಾಗ ದೇಹ ಗಟ್ಟಿಯಾಗಿದ್ದರೆ ಒಳ್ಳೆಯ ಮೀನು. ಕೊಳೆತ ಟೊಮೆಟೊದಂತೆ ಬೆರಳುಗಳು ಮುಟ್ಟಿದ ಕೂಡಲೇ ಗುಳಿ ಬಿದ್ದರೆ ಹಾಳಾದ ಮೀನು.
ಕೆರೆಯ ಮೀನು ಖರೀದಿ ಸಲಹೆ!
ನದಿ, ಕೆರೆ, ಮೀನು ಸಾಕಣೆ ಕೇಂದ್ರಗಳಲ್ಲಿ ಸಿಗುವ ಮೀನುಗಳನ್ನು ಐಸ್‍ನಲ್ಲಿಟ್ಟು ತಿನ್ನಬಾರದು. ಅವುಗಳನ್ನು ಜೀವಂತವಾಗಿ ಹಿಡಿದು ಅಡುಗೆ ಮಾಡುವುದು ಒಳ್ಳೆಯದು. ಐಸ್‍ನಲ್ಲಿಟ್ಟು ಬಳಸಬಾರದು. ಅವು ಒಳ್ಳೆಯದಲ್ಲ.
ಸೀರಿಯಲ್‌ನಲ್ಲಿ ಅತ್ತೆ-ಅಳಿಯ, ನಿಜ ಜೀವನದಲ್ಲಿ ಗಂಡ-ಹೆಂಡ್ತಿ, ಮಕ್ಕಳಿಲ್ಲ ಅನ್ನೋದೇ ಕೊರಗು!
ಮೀನು ಅಡುಗೆ ತಡವಾದರೆ!!
ಮೀನು ಅಡುಗೆ ಮಾಡಲು ತಡವಾದರೆ ಅದನ್ನು ತೊಳೆದು ಹುಣಸೆಹಣ್ಣಿನ ರಸದಲ್ಲಿ ಹಾಕಿಡಬಹುದು. ಇಲ್ಲದಿದ್ದರೆ ನಿಂಬೆರಸದಲ್ಲಿ ನೆನೆಸಿಡಬಹುದು. ಇದರಿಂದ ಅಡುಗೆ ಮಾಡುವವರೆಗೂ ಮೀನು ತಾಜಾವಾಗಿರುತ್ತದೆ.
ಮದುವೆ ಕಾರ್ಡ್‌ನ 'ಆಗಮನಾಭಿಲಾಷಿಗಳು' ಲಿಸ್ಟ್‌ನಲ್ಲಿ ಸತ್ತವರ ಹೆಸರು, ಕಾರ್ಡ್ ನೋಡಿದವರು ಶಾಕ್!