ನೀವು ಭಾರತದ್ದೇ ಎಂದು ಅಂದುಕೊಂಡಿರುವ ಈ ಆಹಾರಗಳು ಭಾರತದ್ದು ಅಲ್ವೇ ಅಲ್ಲ!
ಭಾರತದ್ದೇ ತಿನಿಸು ಎಂದು ನೀವು ಅಂದುಕೊಂಡು, ಬಾಯ ಚಪ್ಪರಿಸಿ ತಿನ್ನುವ ಈ ಆಹಾರಗಳು ಭಾರತೀಯ ಮೂಲದ್ದು ಅಲ್ವೇ ಅಲ್ಲ. ಇವು ವಿದೇಶದಿಂದ ಭಾರತಕ್ಕೆ ಬಂದಿರೋದು.

ಸಮೋಸಾ ಭಾರತೀಯ ಸ್ನ್ಯಾಕ್ ಅಲ್ವಾ? ಪ್ರಿಯವಾದ ಗುಲಾಬ್ ಜಾಮುನೂ ಕೂಡ ನಮ್ಮ ದೇಶದ್ದು ಅಲ್ವೇ ಅಲ್ವಾ? ಹಾಗಿದ್ರೆ ನಿಜವಾಗಿಯೂ ನಾವು ನಮ್ಮ ದೇಶದ್ದು ಎಂದು ಸೇವಿಸುತ್ತಿರುವ ಈ ರುಚಿಯಾದ ಆಹಾರಗಳು ಯಾವ ದೇಶದ್ದು? ಇಲ್ಲಿದೆ ಆ ಬಗ್ಗೆ ಸಂಪೂರ್ಣ ಮಾಹಿತಿ.
ಪನೀರ್
ಭಾರತೀಯ ಸಸ್ಯಾಹಾರಿಗಳ ಫೇವರಿಟ್ ಆಹಾರ ಆಗಿರುವ ಪನೀರ್ (Paneer) ಇರಾನ್ ಅಥವಾ ಅಫ್ಘಾನಿಸ್ತಾನದಿಂದ ರೇಷ್ಮೆ ಮಾರ್ಗದ ಮೂಲಕ ಭಾರತಕ್ಕೆ ಬಂದಿತೆನ್ನಲಾಗುತ್ತಿದೆ. ಶ್ರೀಕೃಷ್ಣ ಮತ್ತು ಬೆಣ್ಣೆ, ಮಜ್ಜಿಗೆ ಬಗ್ಗೆ ಕಥೆಗಳು ಅಸ್ತಿತ್ವದಲ್ಲಿವೆ ಆದರೆ ಪನೀರ್ ಬಗ್ಗೆ ಎಲ್ಲೂ ಉಲ್ಲೇಖಗಳಿಲ್ಲ. ಪನೀರ್ ಪರ್ಷಿಯನ್ ಪದದಿಂದ ಬಂದಿದೆ. ಪೆಯ್ನಿರ್ ಎಂಬ ಚೀಸ್ ಅನ್ನು ಪಶ್ಚಿಮ ಏಷ್ಯಾದಾದ್ಯಂತ ತಿನ್ನಲಾಗುತ್ತದೆ.
ಜಲೇಬಿ
ನಾವು ಹಾಲು ಅಥವಾ ರಬ್ಡಿಯೊಂದಿಗೆ ತಿನ್ನುವ ರುಚಿಕರವಾದ ಜಿಲೇಬಿ (Jalebi), ಮಧ್ಯಪ್ರಾಚ್ಯ ಮೂಲವನ್ನು ಹೊಂದಿದೆ. ಅಲ್ಲಿಂದ ಇದು ಭಾರತಕ್ಕೆ ಬಂದಿತು ಎನ್ನಲಾಗಿದೆ. ಜಲೇಬಿ ಎನ್ನುವ ಹೆಸರು ಪರ್ಷಿಯನ್-ಅರೇಬಿಕ್ ಪದ ಜಲಾಬಿಯಾ ಅಥವಾ ಫ್ರಿಟರ್ ನಿಂದ ಬಂದಿದೆ. ಇದನ್ನು ಉತ್ತರ ಆಫ್ರಿಕಾ, ಯುರೋಪಿನ ಕೆಲವು ಭಾಗಗಳು, ಮಧ್ಯಪ್ರಾಚ್ಯ, ಏಷ್ಯಾದ ಜನರು ಇಷ್ಟಪಡುತ್ತಿದ್ದು, ಇದನ್ನು ಫನಲ್ ಕೇಕ್, ಚೆಬಾಕಿಯಾ, ಜ್ಲೆಬಿಯಾ ಮುಂತಾದ ಹಲವಾರು ಹೆಸರುಗಳನ್ನು ಹೊಂದಿದೆ.
ಗುಲಾಬ್ ಜಾಮೂನ್
ಗುಲಾಬ್ ಜಾಮೂನ್ ಕೂಡ ಭಾರತದಲ್ಲ. ಈ ಸಿಹಿ ತಿನಿಸು ಪರ್ಷಿಯಾ ಮತ್ತು ಮೆಡಿಟರೇನಿಯನ್‌ನಿಂದ ಬಂದಿದ್ದು. ಟರ್ಕಿಶ್ ಆಡಳಿತಗಾರರ ಮೂಲಕ ಭಾರತಕ್ಕೆ ಬಂದಿತು ಎಂಬ ಕಥೆ ಇದೆ. ಇನ್ನೊಂದು ಕಥೆಯು ಇದು ಭಾರತೀಯ ಮೊಘಲ್ ಸಾಮ್ರಾಜ್ಯದ ಸಮಯದಲ್ಲಿ ಹುಟ್ಟಿಕೊಂಡಿದುದ್, ಇದು ಪರ್ಷಿಯನ್ ಪ್ರಭಾವಗಳನ್ನು ಹೊಂದಿತ್ತು ಎಂದಿದ್ದಾರೆ. ಗುಲಾಬ್ ಎಂಬುದು ಪರ್ಷಿಯನ್ ಪದ. ಗುಲಾಬ್ ಜಾಮೂನ್‌ಗಳಂತೆಯೇ ಕಾಣುವ ಲುಕ್ಮತ್ ಅಲ್ ಖಾದಿ ಎಂಬ ಸ್ವಲ್ಪ ವಿಭಿನ್ನವಾದ ಪರ್ಷಿಯನ್ ಸಿಹಿತಿಂಡಿ ಇದೆ.
ವಿಂಡಾಲೂ
ಈಗ ಗೋವಾದ ಜನಪ್ರಿಯ ಖಾದ್ಯವಾದ ವಿಂಡಾಲೂ (Goan Vindaloo Curry) ಅಥವಾ ವಿಂಡಾಲ್ಹೋ, ಮಡೈರಾದಲ್ಲಿ ಕ್ರಿಸ್‌ಮಸ್‌ನಲ್ಲಿ ತಿನ್ನಲಾಗುವ ಗಾರ್ಲಿಕ್ ಮೀಟ್ ಪೋರ್ಚುಗೀಸ್ ಕಾರ್ನೆ ಡಿ ವಿನ್ಹಾ ಡಿ'ಅಲ್ಹೋಸ್‌ನ ಮಸಾಲೆಯುಕ್ತ ಉತ್ಪನ್ನವಾಗಿದೆ. ಇದನ್ನು 15 ನೇ ಶತಮಾನದಲ್ಲಿ ಪೋರ್ಚುಗೀಸರು ಗೋವಾಕ್ಕೆ ತಂದರು ಮತ್ತು ಗೋವಾ ಜನರು ಇದನ್ನು ತಮ್ಮದೇ ಆಹಾರವನ್ನಾಗಿ ಮಾಡಿದರು.
ಇಡ್ಲಿ
ನೀವು ಇಡ್ಲಿ ಭಾರತದ್ದು, ಅದು ನಮ್ ಕರ್ನಾಟಕದ್ದೂ ಅಂದುಕೊಂಡ್ರಾ? ಅದೂ ಕೂಡ ನಮ್ಮದಲ್ವಂತೆ. ಇಡ್ಲಿಗಳ ಆರಂಭದ ಬಗ್ಗೆ ಎರಡು ಸಿದ್ಧಾಂತಗಳು ಉಳಿದಿವೆ. ಕನ್ನಡ ಕೃತಿಗಳಲ್ಲಿ-- ಶಿವಕೋಟಿಯಾಚಾರ್ಯರ ಕ್ರಿ.ಶ. 920 ರ ವಡ್ಡಾರಾಧನೆ, ಚಾವುಂಡರಾಯ II ರ ಕ್ರಿ.ಶ. 1025 ರ ಲೋಕೋಪಕಾರ ಇದರಲ್ಲಿ ಇಡ್ಲಿ ಬಗ್ಗೆ ಉಲ್ಲೇಖ ಇದೆ ಎನ್ನಲಾಗುತ್ತದೆ. ಇತರರು ಕ್ರಿ.ಶ. 800 ಮತ್ತು 1200 ರ ನಡುವೆ ಭಾರತಕ್ಕೆ ಪ್ರಯಾಣಿಸಿದ ಹಿಂದೂ ಇಂಡೋನೇಷ್ಯಾದ ರಾಜರಿಗಾಗಿ ಇಡ್ಲಿಗಳನ್ನು ತಯಾರಿಸಲಾಗುತ್ತಿತ್ತು ಎನ್ನಲಾಗಿದೆ. ದಕ್ಷಿಣ ಭಾರತ ಮತ್ತು ಮಲೇಷ್ಯಾ, ಇಂಡೋನೇಷ್ಯಾ, ಶ್ರೀಲಂಕಾ ನಡುವೆ ಸ್ವಾಭಾವಿಕವಾಗಿ ಅನೇಕ ಆಹಾರ ಸಮಾನತೆಗಳಿವೆ.
ಸಮೋಸಾ
ಭಾರತದಲ್ಲಿ ಸಮೋಸ ಅಂದ್ರೆ ಜನರ ನೆಚ್ಚಿನ ಸ್ನಾಸ್. ಆದರೆ ಇದು ಭಾರತದ್ದಲ್ಲ, ಮೂಲತಃ ಪರ್ಷಿಯಾದಿಂದ ಬಂದಿದೆ, ಅದು ಆಧುನಿಕ ಇರಾನ್ ಆಗಿದ್ದು, ರೇಷ್ಮೆ ಮಾರ್ಗದ ಮೂಲಕ ಭಾರತಕ್ಕೆ ಬಂದಿತು. ಸಮೋಸಾ ಎಂಬ ಹೆಸರು ಪರ್ಷಿಯನ್ ಪದ ಸಾಂಬುಸಕ್ ನಿಂದ ಬಂದಿದೆ. ಅವುಗಳನ್ನು ಮಾಂಸ, ಬೀಜಗಳು ಮತ್ತು ಮಸಾಲೆಗಳಿಂದ ತುಂಬಿಸಲಾಗುತ್ತಿತ್ತು. ಆದರೆ ಭಾರತದಲ್ಲಿ ಅವುಗಳಿಗೆ ಆಲೂಗಡ್ಡೆಯನ್ನು ತುಂಬಿಸಲಾಗುತ್ತದೆ.
ಚಹಾ
ಚಹಾ ಭಾರತದ್ದು ಅಲ್ವೇ ಅಲ್ಲ, ಅನ್ನೋದು ಹೆಚ್ಚಿನ ಜನರಿಗೆ ಗೊತ್ತೇ ಇರೋದಿಲ್ಲ ಆದರೆ ಅದು ಸತ್ಯ. ಚಹಾ ಚೀನಾದಲ್ಲಿ ಹುಟ್ಟಿಕೊಂಡಿತು. ಬ್ರಿಟಿಷರು ಭಾರತಕ್ಕೆ ಚಹಾವನ್ನು ಪರಿಚಯಿಸಿದರು ಮತ್ತು ಅಸ್ಸಾಂ, ಡಾರ್ಜಿಲಿಂಗ್ ಮತ್ತು ಇತರೆಡೆಗಳಲ್ಲಿ ವಾಣಿಜ್ಯ ಕೃಷಿಯನ್ನು ಪ್ರಾರಂಭಿಸಿದರು.
ಬಿರಿಯಾನಿ
ಪಿಜ್ಜಾ, ಪಾಸ್ತಾ ಮತ್ತು ನೂಡಲ್ಸ್‌ಗಳನ್ನು ಹೊರತುಪಡಿಸಿ, ಜೊಮಾಟೊದಲ್ಲಿ ಭಾರತದ ಅತಿ ಹೆಚ್ಚು ಆರ್ಡರ್ ಮಾಡಲಾದ ಖಾದ್ಯ ಅಂದ್ರೆ ಅದು ಬಿರಿಯಾನಿ. ಜನ ಇಷ್ಟಪಟ್ಟು ತಿನ್ನುವ ಈ ಬಿರಿಯಾನಿ (Biriyani) ಸಹ ಭಾರತದ್ದಲ್ಲ, ಇದು ಪರ್ಷಿಯಾದಲ್ಲಿ ಹುಟ್ಟಿಕೊಂಡಿತು! ಬಿರಿಯಾನಿ ಎನ್ನುವ ಪದವು ಅದರ ಮೂಲ ಪದ ಬಿರಿಯನ್ ನಿಂದ ಬಂದಿದೆ, ಬಿರಿಯನ್ ಎಂದರೆ ಪರ್ಷಿಯನ್ ಭಾಷೆಯಲ್ಲಿ ಅಕ್ಕಿ ಅಥವಾ ಅನ್ನ ಎಂದರ್ಥ.
ದಾಲ್ ಚಾವಲ್
ನಮ್ಮ ಪ್ರೀತಿಯ ಆರಾಮದಾಯಕ ಆಹಾರ ದಾಲ್ ಚಾವಲ್, ಅಂದ್ರೆ ಬೇಳೆ ಸಾರು ಮತ್ತು ಅನ್ನ ಕೂಡ ನಮ್ಮದಲ್ಲ. ಮೂಲಗಳ ಪ್ರಕಾರ, ನೆರೆಯ ಹಿಮಾಲಯನ್ ದೇಶವಾದ ನೇಪಾಳದಿಂದ ಇದು ಬಂದಿರೋದು. ಅಲ್ಲಿ ಇದನ್ನು ದಾಲ್ ಭಾತ್ ಎಂದು ಕರೆಯಲಾಗುತ್ತದೆ. ಜನಪ್ರಿಯ ನೇಪಾಳಿ ನುಡಿಗಟ್ಟು ‘ದಾಲ್ ಭಾತ್ ಪವರ್ 24 ಅವರ್ ' ಎನ್ನುವ ಮಾತಿದೆ. ಅಂದ್ರೆ ಇದು ಆರೋಗ್ಯಯುತ ಸಮತೋಲಿತ ಆಹಾರ ಅನ್ನೋದನ್ನು ಸೂಚಿಸುತ್ತದೆ.
ರಾಜ್ಮಾ - ಚಾವಲ್
ರಾಜ್ಮಾ-ಚಾವಲ್ ಉತ್ತರ ಭಾರತೀಯ ಮನೆಗಳಲ್ಲಿ ಮಾಡುವಂತಹ ಮುಖ್ಯ ಆಹಾರ, ಆದರೆ ರಾಜ್ಮಾ ಅಥವಾ ಲೋಬಿಯಾ ಅಥವಾ ಕೆಂಪು ಕಿಡ್ನಿ ಬೀನ್ಸ್ ಅನ್ನು ಮೂಲತಃ ಭಾರತದಲ್ಲಿ ಎಂದಿಗೂ ಬೆಳೆಸಲಾಗುತ್ತಿರಲಿಲ್ಲ. ಮೆಕ್ಸಿಕನ್ ಮೂಲದ ಈ ಬೀಜವನ್ನು, ಮೊದಲು ಪೆರುವಿನಲ್ಲಿ ಬೆಳೆದಿದ್ದರೂ, ರಾಜ್ಮಾವನ್ನು ಉತ್ತರ ಅಮೆರಿಕಾ ಮತ್ತು ದಕ್ಷಿಣ ಅಮೆರಿಕಾದಲ್ಲಿ ವ್ಯಾಪಕವಾಗಿ ಪ್ರಯಾಣಿಸಿದ ಪೋರ್ಚುಗೀಸರು ಭಾರತದಲ್ಲಿ ಪರಿಚಯಿಸಿದ್ದಾರೆ ಎನ್ನಲಾಗುತ್ತೆ.
ಫಿಲ್ಟರ್ ಕಾಫಿ
ಹೌದು, ಚಹಾದಂತೆಯೇ, ಕಾಫಿ (Coffee) ಕೂಡ ಭಾರತೀಯ ಮೂಲದದ್ದಲ್ಲ. ಬಾಬಾ ಬುಡನ್ ಎಂಬ ಸೂಫಿ, ಮೆಕ್ಕಾದಿಂದ ತೀರ್ಥಯಾತ್ರೆ ಮಾಡಿದ ನಂತರ ಯೆಮೆನ್‌ನಿಂದ ಭಾರತಕ್ಕೆ ಕಾಫಿ ಬೀಜಗಳನ್ನು ತಂದರು. ಹಿಂದಿರುಗಿದ ನಂತರ, ಅವರು ಅಂತಿಮವಾಗಿ ಕರ್ನಾಟಕದ ಚಿಕ್ಕಮಗಳೂರಿನಲ್ಲಿ ನೆಲೆಸಿದರು ಮತ್ತು ಕಾಫಿ ಕೃಷಿಯನ್ನು ಪ್ರಾರಂಭಿಸಿದರು.