- Home
- Life
- Food
- ಮಿಕ್ಕ ಅನ್ನದಲ್ಲಿ ಚಿತ್ರಾನ್ನ ಮಾಡೋದು ಬಿಟ್ಬಿಡಿ, ಮಳೆಗಾಲಕ್ಕೆ ಬಿಸಿ ಬಿಸಿ ಕೆಫೆ ಸ್ಟೈಲ್ ಕಟ್ಲೆಟ್ ತಯಾರಿಸಿ
ಮಿಕ್ಕ ಅನ್ನದಲ್ಲಿ ಚಿತ್ರಾನ್ನ ಮಾಡೋದು ಬಿಟ್ಬಿಡಿ, ಮಳೆಗಾಲಕ್ಕೆ ಬಿಸಿ ಬಿಸಿ ಕೆಫೆ ಸ್ಟೈಲ್ ಕಟ್ಲೆಟ್ ತಯಾರಿಸಿ
rice cutlet recipe : ರಾತ್ರಿ ಮಿಕ್ಕ ಅನ್ನದಲ್ಲಿ ನಮ್ಗೆ ಚಿತ್ರಾನ್ನ ಮಾಡೋಕೆ ಮಾತ್ರ ಗೊತ್ತು. ಆದ್ರೆ ಈ ಅನ್ನದಲ್ಲಿ ನೀವು ಇನ್ನೂ ಅನೇಕ ರುಚಿ ರುಚಿ ರೆಸಿಪಿ ಮಾಡ್ಬಹುದು. ಇವತ್ತು ಕೆಫೆ ಸ್ಟೈಟ್ ಕಟ್ಲೆಟ್ ಹೇಗೆ ಮಾಡೋದು ಅಂತ ನಾವು ಹೇಳ್ತೇವೆ.

ಚಿತ್ರಾನ್ನ ಬೋರ್ ಆಗಿದ್ಯಾ?
ರಾತ್ರಿ ಇಲ್ಲ ಬೆಳಿಗ್ಗೆ ಮಾಡಿದ ಅನ್ನ ಸಂಪೂರ್ಣ ಖಾಲಿ ಆಗೋದು ಕಷ್ಟ. ಕೆಲವೊಮ್ಮೆ ಗೆಸ್ಟ್ ಕೈಕೊಟ್ಟಾಗ ಅನ್ನ ಹಾಗೆ ಉಳಿಯುತ್ತೆ. ಅದನ್ನು ವೇಸ್ಟ್ ಮಾಡೋದು ಸಾಧ್ಯವಿಲ್ಲದ ಮಾತು. ಬಹುತೇಕ ಮಹಿಳೆಯರು ಅದನ್ನು ಬೆಳಿಗ್ಗೆ ಚಿತ್ರಾನ್ನವಾಗಿ ಬದಲಿಸ್ತಾರೆ. ಅದೇ ಚಿತ್ರಾನ್ನ ಮಾಡಿ ನಿಮಗೆ ಮಾತ್ರ ಅಲ್ಲ ಅದನ್ನು ತಿಂದು ಮನೆಯವರಿಗೂ ಬೋರ್ ಆಗಿರುತ್ತೆ. ಇನ್ಮುಂದೆ ಹೊಸ ರೆಸಿಪಿ ಟ್ರೈ ಮಾಡಿ.
ಕೆಫೆ ಸ್ಟೈಲ್ ಕಟ್ಲೆಟ್
ಮನೆಯವರೆಲ್ಲ ಬಾಯಿ ಚಪ್ಪರಿಸಿ ನೀವು ಮಾಡಿದ ತಿಂಡಿ ತಿನ್ಬೇಕು ಅಂದ್ರೆ ನೀವು ಕೆಫೆ ಸ್ಟೈಲ್ ಕಟ್ಲೆಟ್ ತಯಾರಿಸಿ. ಇದನ್ನು ತಯಾರಿಸೋದು ಸುಲಭ. ಕೆಲವೇ ನಿಮಿಷದಲ್ಲಿ ರುಚಿಯಾದ ಕಟ್ಲೆಟ್ ರೆಡಿಯಾಗುತ್ತೆ.
ಕಟ್ಲೆಟ್ ಗೆ ಬೇಕಾಗುವ ಪದಾರ್ಥ
2 ಕಪ್ ಅನ್ನ, 2 ಬೇಯಿಸಿ ಹಿಸುಕಿದ ಆಲೂಗಡ್ಡೆ, 1 ಸಣ್ಣಗೆ ಕತ್ತರಿಸಿದ ಈರುಳ್ಳಿ, 1-2 ಹಸಿರು ಮೆಣಸಿನಕಾಯಿ, ಸ್ವಲ್ಪ ತುರಿದ ಕ್ಯಾರೆಟ್, 1 ಟೀಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 1/2 ಟೀ ಚಮಚ ಕೆಂಪು ಮೆಣಸಿನ ಪುಡಿ, 1/2 ಟೀ ಚಮಚ ಗರಂ ಮಸಾಲ, 1/2 ಟೀ ಚಮಚ ಚಾಟ್ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು, 2-3 ಟೀ ಚಮಚ ಕಾರ್ನ್ಫ್ಲೋರ್ ಅಥವಾ ಬ್ರೆಡ್ ಕ್ರಂಬ್ಸ್ ಮತ್ತು ಬ್ರೆಡ್ ಕ್ರಂಬ್ಸ್ ಬಳಸಿ. ಸ್ವಲ್ಪ ಎಣ್ಣೆ ಫ್ರೈ ಮಾಡಲು.
ಕಟ್ಲೆಟ್ ತಯಾರಿಸುವ ವಿಧಾನ
ಅನ್ನದ ಜೊತೆ ಉಳಿದ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಆಲೂಗಡ್ಡೆ, ಈರುಳ್ಳಿ, ಕ್ಯಾರೆಟ್, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಎಲ್ಲಾ ಮಸಾಲೆಗಳು ಮತ್ತು ಕಾರ್ನ್ಫ್ಲೋರ್ ಅನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣ ಮೃದುವಾಗಿದ್ದರೆ ನೀವು ಬ್ರೆಡ್ ತುಂಡುಗಳನ್ನು ಇದಕ್ಕೆ ಸೇರಿಸ್ಬಹುದು. ನಂತ್ರ ನಿಮಗೆ ಬೇಕಾದ ಆಕಾರ ನೀಡಿ, ಬ್ರೆಡ್ ಪುಡಿಯಲ್ಲಿ ಹೊರಳಾಡಿಸಿ. ಒಂದು ಬಾಣೆಲೆಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ಮೇಲೆ ಇದನ್ನು ಹಾಕಿ ಫ್ರೈ ಮಾಡಿ. ನೀವು ಸ್ವಲ್ಪ ಎಣ್ಣೆ ಬಳಸಿ ಏರ್ ಫ್ರೈಯರ್ ನಲ್ಲಿ ಫ್ರೈ ಕೂಡ ಮಾಡಬಹುದು.
ಕಟ್ಲೆಟ್ ರೆಡಿ
ಹೊರಗೆ ಗರಿಯಾದ ಒಳಗಿ ಮೃದುವಾಗಿರುವ ಕಟ್ಲೆಟ್ ಸವಿಯಲು ಸಿದ್ಧವಾಗುತ್ತದೆ. ನೀವಿದನ್ನು ಪುದೀನಾ ಚಟ್ನಿ ಅಥವಾ ಕೆಚಪ್ ಜೊತೆ ಸರ್ವ್ ಮಾಡಬಹುದು. ನೀವು ಚೀಸ್ ಕ್ಯೂಬ್ ಅಥವಾ ಬೇಯಿಸಿದ ಬಟಾಣಿ, ನಿಮ್ಮಷ್ಟದ ತರಕಾರಿಯನ್ನು ಹಾಕಿಯೂ ಇದನ್ನು ತಯಾರಿಸ್ಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

