MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • Food: ಮಳೆಗಾಲದಲ್ಲಿ ಮೀನು ಅಥವಾ ಚಿಕನ್? ಈ ಎರಡರಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು?

Food: ಮಳೆಗಾಲದಲ್ಲಿ ಮೀನು ಅಥವಾ ಚಿಕನ್? ಈ ಎರಡರಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು?

ಮಳೆಗಾಲದಲ್ಲಿ ಜೀರ್ಣಕ್ರಿಯೆ ನಿಧಾನವಾಗುವುದರಿಂದ ಆಹಾರದ ಆಯ್ಕೆ ಮುಖ್ಯವಾಗಿರುತ್ತದೆ. ಈ ಸಮಯದಲ್ಲಿ ಮೀನುಗಳ ಸಂತಾನೋತ್ಪತ್ತಿ ಕಾಲವಾಗಿದ್ದು, ನೀರಿನ ಮಾಲಿನ್ಯದಿಂದ ಸೋಂಕಿನ ಅಪಾಯವಿರುತ್ತದೆ. ಆದ್ದರಿಂದ, ತಜ್ಞರ ಪ್ರಕಾರ ಸರಿಯಾಗಿ ಸ್ವಚ್ಛಗೊಳಿಸಿದ ಚಿಕನ್ ಸೇವಿಸುವುದು ಮೀನಿಗಿಂತ ಉತ್ತಮ ಆಯ್ಕೆಯಾಗಿದೆ.

1 Min read
Author : Mahmad Rafik
Published : Jul 11 2026, 02:26 PM IST
Share this Photo Gallery
  • FB
  • TW
  • Linkdin
  • Whatsapp
15
ಮಳೆಗಾಲದ ಆಹಾರ
Image Credit : Gemini

ಮಳೆಗಾಲದ ಆಹಾರ

ಮಳೆಗಾಲ ಬರುತ್ತಿದ್ದಂತೆ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆಗಳು ಅಧಿಕವಾಗಿರುತ್ತದೆ. ಮಕ್ಕಳ ಜೊತೆ ದೊಡ್ಡವರಲ್ಲಿ ಶೀತ ಸಂಬಂಧಿತ ರೋಗ, ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಈ ಸಮಯದಲ್ಲಿ ಯಾವ ಆಹಾರ ಸೇವಿಸಬೇಕು ಎಂಬುದರ ಬಗ್ಗೆ ಸ್ಪಷ್ಟವಾಗಿರಬೇಕು. ಸೇವಿಸುವ ಆಹಾರದಲ್ಲಿ ಕೊಂಚ ವ್ಯತ್ಯಾಸವಾದ್ರೂ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಪೌಷ್ಟಿಕಾಂಶ
Image Credit : Gemini

ಪೌಷ್ಟಿಕಾಂಶ

ಮೀನುಗಳಲ್ಲಿ ಪ್ರೋಟೀನ್ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಿವೆ. ಈ ಅಂಶಗಳು ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಮೀನು ಆಹಾರ ಜೀರ್ಣವಾಗಲು ಹೆಚ್ಚು ಸಮಯ ಬೇಕಾಗುತ್ತದೆ.

ಇನ್ನು ಚಿಕನ್‌ನಲ್ಲಿ ಗುಣಮಟ್ಟದ ಪ್ರೋಟೀನ್, ವಿಟಮಿನ್ ಬಿ6 ಮತ್ತು ಸತುವಿನಂಶಗಳನ್ನು ಹೊಂದಿರುತ್ತದೆ. ಈ ಅಂಶಗಳು ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸ್ನಾಯುಗಳ ಬಲ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.

Related Articles

Related image1
ಮತ್ಸ್ಯಪ್ರಿಯರಿಗೆ ಸಿಗೋದಿಲ್ಲ ಭೂತಾಯಿ/ಮತ್ತಿ ಮೀನು, ಬೆಚ್ಚಿ ಬೀಳಿಸುವ ವರದಿ ನೀಡಿದ CMFRI
Related image2
ಚಿಕನ್ Vs ಮಟನ್… ಮಳೆಗಾಲದಲ್ಲಿ ಯಾವ ಮಾಂಸ ತಿನ್ನೋದು ಆರೋಗ್ಯಕ್ಕೆ ಬೆಸ್ಟ್
35
ಮಳೆಗಾಲದಲ್ಲಿ ಜೀರ್ಣಕ್ರಿಯೆ ಹೇಗಿರುತ್ತೆ?
Image Credit : Getty

ಮಳೆಗಾಲದಲ್ಲಿ ಜೀರ್ಣಕ್ರಿಯೆ ಹೇಗಿರುತ್ತೆ?

ಸಾಮಾನ್ಯ ದಿನಗಳಿಗಿಂತ ಮಳೆಗಾಲದಲ್ಲಿ ದೇಹದ ಚಯಾಪಚಯ (ಜೀರ್ಣ) ಕ್ರಿಯೆ ಸ್ವಲ್ಪ ನಿಧಾನವಾಗಿರುತ್ತದೆ. ಈ ಸಮಯದಲ್ಲಿ ಸೇವಿಸುವ ಹೆಚ್ಚು ಪೋಷಕಾಂಶಗಳ ಆಹಾರ ಸೇವಿಸಿದ್ರೆ ಜೀರ್ಣಕ್ರಿಯೆಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಅದರಲ್ಲೂ ಮಕ್ಕಳಿಗೆ ಜೀರ್ಣಕ್ರಿಯೆ ಕಷ್ಟವಾಗುವ ಸಾಧ್ಯತೆಗಳಿರುತ್ತವೆ.

45
ಮಳೆಗಾಲದಲ್ಲಿ ಮೀನು ಅಥವಾ ಚಿಕನ್‌ನಲ್ಲಿ ಯಾವುದು ಒಳ್ಳೆಯದು?
Image Credit : Getty

ಮಳೆಗಾಲದಲ್ಲಿ ಮೀನು ಅಥವಾ ಚಿಕನ್‌ನಲ್ಲಿ ಯಾವುದು ಒಳ್ಳೆಯದು?

ಮಳೆಗಾಲದಲ್ಲಿ ಅತಿಯಾಗಿ ಸಮುದ್ರಾಹಾರ ಸೇವನೆ ಸೋಂಕಿನ ಅಪಾಯಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತೆ. ಮಳೆಗಾಲವು ಮೀನುಗಳ ಸಂತಾನೋತ್ಪತ್ತಿ ಸಮಯವಾಗಿದ್ದು, ಜಲಚರಗಳ ದೇಹದಲ್ಲಿ ನೈಸರ್ಗಿಕ ಬದಲಾವಣೆ ಆಗುತ್ತಿರುತ್ತೆ. ಹಾಗೆಯೇ ಮಳೆಗಾಲದಲ್ಲಿ ನದಿಗಳು ಮತ್ತು ಕೊಳಗಳಲ್ಲಿನ ನೀರು ಕಲುಷಿತಗೊಳ್ಳುತ್ತದೆ. ಇದು ಸಹ ಮೀನುಗಳಲ್ಲಿ ಬ್ಯಾಕ್ಟಿರಿಯಾ ಮತ್ತು ಪರವಾಲಂಬಿ ಜೀವಿಗಳ ಅಪಾಯವನ್ನು ಹೆಚ್ಚಳ ಮಾಡುವ ಸಾಧ್ಯತೆಗಳಿರುತ್ತವೆ.

55
ಚಿಕನ್ ಒಳ್ಳೆಯದಾ?
Image Credit : Getty

ಚಿಕನ್ ಒಳ್ಳೆಯದಾ?

ಮಳೆಗಾಲದಲ್ಲಿ ಮೀನುಗಳಿಗಿಂತ ಕೋಳಿಮಾಂಸ ಒಳ್ಳೆಯದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಮಳೆಗಾಲದಲ್ಲಿ ಕೋಳಿ ಸಾಕಾಣಿಕಾ ಕೇಂದ್ರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಹಾಗೆಯೇ ಫ್ರೆಶ್ ಕೋಳಿಮಾಂಸ ಸೇವನೆಗೆ ಆದ್ಯತೆ ನೀಡಬೇಕು. ಕೋಳಿಮಾಂಸವನ್ನು ಎರಡರಿಂದ ಮೂರು ಬಾರಿ ಬಿಸಿನೀರಿನಲ್ಲಿ ತೊಳೆಗೆ ಆಹಾರ ತಯಾರಿಸಬೇಕಾಗುತ್ತದೆ. ಒಂದು ವೇಳೆ ನೀವು ಫಿಶ್ ಲವರ್ ಆಗಿದ್ರೆ, ಫ್ರೆಶ್ ಫಿಶ್‌ ಖರೀದಿಸಿ ಮನೆಯಲ್ಲಿಯೇ ಅಡುಗೆ ಮಾಡಿಕೊಳ್ಳಿ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಚಿಕನ್
ಆಹಾರ
ಜೀವನಶೈಲಿ

Latest Videos
Recommended Stories
Recommended image1
ಎಲ್ಲರಿಂದಲೂ ತಿನ್ನೋಕೆ ಆಗಲ್ಲ, ಈ ಮೊಟ್ಟೆ ತಿಂದ್ರೆ 7 ವರ್ಷ ಆಯಸ್ಸು ಹೆಚ್ಚಾಗುತ್ತೆ!
Recommended image2
ಈ ರೀತಿ ಜಜ್ಜಿ ಪೌಡರ್ ಹಾಕಿ.. ಟೀ ರುಚಿ ದುಪ್ಪಟ್ಟುಗೊಳಿಸುವ ಸೀಕ್ರೆಟ್ ಇದೆ ನೋಡಿ
Recommended image3
Chicken Vs Mutton: ಮೈ ನೆನೆಯೋ ಮಳೆಗಾಲಕ್ಕೆ ಚಿಕನ್-ಮಟನ್‌ ಮಾಂಸದ ನಡುವೆ ಯಾವುದು ಬೆಸ್ಟ್‌?
Related Stories
Recommended image1
ಮತ್ಸ್ಯಪ್ರಿಯರಿಗೆ ಸಿಗೋದಿಲ್ಲ ಭೂತಾಯಿ/ಮತ್ತಿ ಮೀನು, ಬೆಚ್ಚಿ ಬೀಳಿಸುವ ವರದಿ ನೀಡಿದ CMFRI
Recommended image2
ಚಿಕನ್ Vs ಮಟನ್… ಮಳೆಗಾಲದಲ್ಲಿ ಯಾವ ಮಾಂಸ ತಿನ್ನೋದು ಆರೋಗ್ಯಕ್ಕೆ ಬೆಸ್ಟ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved