10 ನಿಮಿಷದಲ್ಲಿ ಈ ಆಮ್ಲೆಟ್ ತಿಂದ್ರೆ…. 50 ಸಾವಿರ ರೂಪಾಯಿ ಬಹುಮಾನ!
ಗುರುಗ್ರಾಮದ ಫುಡ್ ಸ್ಟಾಲ್ ಮಾಲೀಕರೊಬ್ಬರು ಜನರಿಗೆ ವಿಚಿತ್ರ ಸವಾಲನ್ನು ನೀಡಿದ್ದಾರೆ. ಯಾರಾದರೂ ತಮ್ಮ ವಿಶೇಷ ಚೀಸ್ ಆಮ್ಲೆಟ್ ಅನ್ನು 10 ನಿಮಿಷದಲ್ಲಿ ತಿಂದ್ರೆ, ಅವರಿಗೆ ಐವತ್ತು ಸಾವಿರ ರೂಪಾಯಿಗಳನ್ನು ಬಹುಮಾನವಾಗಿ ನೀಡಲಾಗುತ್ತೆ ಅಂತೆ.
ನೀವು ಜಗತ್ತಿನಲ್ಲಿ ಅನೇಕ ರೀತಿಯ ಆಹಾರ ಪ್ರಿಯರನ್ನು (food lover) ನೋಡಿರಬೇಕು. ಈ ಆಹಾರ ಪ್ರಿಯರಿಗೆ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ರೀತಿಯ ಚಾಲೆಂಜ್ ನೀಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಫುಡ್ ಬ್ಲಾಗರ್‌ಗಳಂತೂ ಯಾವ್ಯಾವುದೋ ಮೂಲೆಯಲ್ಲಿರುವ ಸ್ಟ್ರೀಟ್ ಫುಡ್ (street food) ಅಂಗಡಿಗಳಿಗೆ ಭೇಟಿ ನೀಡಿ, ಅಲ್ಲಿ ನೀವು ಚಿತ್ರ ವಿಚಿತ್ರ ಆಹಾರಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅಂತಹುದೇ ಒಂದು ಆಮ್ಲೆಟ್ ಇದಾಗಿದೆ.
ಇತ್ತೀಚೆಗೆ, ಗುರುಗ್ರಾಮದ ಆಹಾರ ಮಳಿಗೆ ಮಾಲೀಕರು ಜನರಿಗೆ ವಿಚಿತ್ರ ಆಹಾರ ಸವಾಲನ್ನು ನೀಡಿದ್ದಾರೆ. ತಾನು ತಯಾರಿಸಿದ ವಿಶೇಷ ಚೀಸ್ ಆಮ್ಲೆಟ್ (ಣheese Omellete) ಅನ್ನು ಯಾರಾದರೂ ಹತ್ತು ನಿಮಿಷಗಳಲ್ಲಿ ತಿಂದು ಮುಗಿಸಿದರೆ, ಅವರು ಆ ವ್ಯಕ್ತಿಗೆ ಐವತ್ತು ಸಾವಿರ ರೂಪಾಯಿಗಳನ್ನು ಬಹುಮಾನವಾಗಿ ನೀಡುತ್ತಾರೆ ಎಂದು ಈ ವ್ಯಕ್ತಿ ಹೇಳಿಕೊಂಡಿದ್ದಾನೆ.
ಈ ವಿಶೇಷ ಆಮ್ಲೆಟ್ ತಯಾರಿಸುವ ವಿಧಾನವನ್ನು ಫುಡ್ ಬ್ಲಾಗರ್ (food blogger) ಒಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಆಮ್ಲೆಟ್ ತಯಾರಿಕೆಯನ್ನು ನೋಡಿದ ನಂತರ, ಎಲ್ಲರೂ ಶಾಕ್ ಆಗಿದ್ದಾರೆ. ಈ ವಿಶೇಷ ಆಮ್ಲೆಟ್ ತಯಾರಕರು ಇದನ್ನು ಸೇವಿಸಿದ ನಂತರ ಮುಂದಿನ ಐದು ದಿನಗಳವರೆಗೆ ನಿಮಗೆ ಹಸಿವಾಗುವುದಿಲ್ಲ ಎಂದು ಹೇಳುತ್ತಾರೆ.
ಈ ಚಾಲೆಂಜ್ ಪ್ರಾರಂಭಿಸಿದಾಗಿನಿಂದ, ಇಲ್ಲಿಯವರೆಗೆ ಯಾರೂ ಈ ಚಾಲೆಂಜ್ (omellete eating challenge) ಪೂರ್ಣಗೊಳಿಸಿಲ್ಲ ಎಂದು ಆಮ್ಲೆಟ್ ಮೇಕರ್ ತಿಳಿಸಿದ್ದಾರೆ. ಇಲ್ಲಿವರೆಗೆ ಯಾರೂ ಅದನ್ನು ಹತ್ತು ನಿಮಿಷಗಳಲ್ಲಿ ಮುಗಿಸಲು ಸಾಧ್ಯವಾಗಿಲ್ಲ, ಆಗೋದು ಇಲ್ಲ ಬಿಡಿ. ಯಾಕಂದ್ರೆ 15 ಮೊಟ್ಟೆಯನ್ನು ಹಾಕಿ, 2 ಬಟರ್ ಸ್ಲೈಸ್ ಪೂರ್ತಿಯಾಗಿ ಹಾಕಿ ಮಾಡಿದಂತಹ ಆಮ್ಲೆಟ್ ಇದಾಗಿದೆ.
ಈ ವಿಶೇಷ ಆಮ್ಲೆಟ್ ತಯಾರಿಸೋದು ಹೇಗೆ?
ಈ ಆಮ್ಲೆಟ್ ತಯಾರಿಸಲು ಹದಿನೈದು ಮೊಟ್ಟೆಗಳನ್ನು ಬಳಸಲಾಗುತ್ತದೆ. ಈ ಮೊಟ್ಟೆಯನ್ನು ಇಡೀ ಅಮುಲ್ ಬಟರ್ ಪ್ಯಾಕೆಟ್ ಹಾಕಿ ಬೇಯಿಸಲಾಗುತ್ತದೆ. ಇದಕ್ಕೆ ಸಾಕಷ್ಟು ಚೀಸ್, ಸಾಸ್ ಮತ್ತು ಅನೇಕ ತರಕಾರಿಗಳನ್ನು ಸೇರಿಸಲಾಗುತ್ತದೆ. ಆಮ್ಲೆಟ್ ಗೆ ನಾಲ್ಕು ಬ್ರೆಡ್ ಗಳನ್ನು ಸಹ ಸೇರಿಸಲಾಗುತ್ತದೆ. ಆಮ್ಲೆಟ್ ಸಿದ್ಧವಾದ ನಂತರ, ಅದರ ಮೇಲೆ ಪನೀರ್ ನ ದೊಡ್ಡ ಸ್ಲೈಸ್ ಗಳನ್ನು ಹಾಕಿ, ಮತ್ತೊಂದು ಪ್ಯಾಕೆಟ್ ಬೆಣ್ಣೆಯನ್ನು(butter packet) ಕರಗಿಸಿ ಅದರ ಮೇಲೆ ಸುರಿಯಲಾಗುತ್ತದೆ.
ಇದರ ಬೆಲೆ ಎಷ್ಟು ಗೊತ್ತಾ?
ರಾಜೀವ್ ಆಮ್ಲೆಟ್ ಗುರುಗ್ರಾಮದ ಹುಡಾ ಮಾರುಕಟ್ಟೆಯಲ್ಲಿ ಈ ಚಾಲೆಂಜನ್ನು ಪ್ರಾರಂಭಿಸಿದೆ. ಅದರ ಬೆಲೆಯನ್ನು ನಾಲ್ಕು ನೂರ ನಲವತ್ತು ರೂಪಾಯಿ ಎನ್ನಲಾಗುತ್ತದೆ. ಅಂದರೆ, 440ರ ಈ ಆಮ್ಲೆಟ್ ನಿಮಗೆ ಐವತ್ತು ಸಾವಿರ ಗಳಿಸುವ ಅವಕಾಶವನ್ನು ನೀಡುತ್ತದೆ.
ಇನ್ನು ಈ ಚಾಲೆಂಜ್‌ನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (social Media Viral Video) ಆಗುತ್ತಿದೆ. ಇದನ್ನು ನೋಡಿದ ನಂತರ, ಜನರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಐವತ್ತು ಹೃದಯಾಘಾತಗಳು ಸಹ ಈ ಆಮ್ಲೆಟ್ನೊಂದಿಗೆ ಉಚಿತವಾಗಿ ಸಿಗಬಹುದು ಎಂದಿದ್ದಾರೆ ಒಬ್ಬರು. ಮತ್ತೊಬ್ಬರು ಇಂತಹ ಅನಾರೋಗ್ಯಕರ ಆಹಾರವನ್ನು (unhealthy food) ಉತ್ತೇಜಿಸಬಾರದು, ಇದರಿಂದ 50 ಸಾವಿರ ಗೆದ್ದರೆ, ಅದನ್ನು ಆಸ್ಪತ್ರೆಗೆ ಕೊಡಬೇಕಾಗುತ್ತೆ ಎಂದು ಕೆಲವರು ಟೀಕಿಸಿದ್ದಾರೆ.