MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 1st Test
Bandipur National Park
Hanur Shootout Case
Bengaluru Schools H1N1 Case
Ayodhye Ram Mandir Theft Case
Tungabhadra Backwaters Accident
DPL Nitish Rana
Congress Vande Mataram Row
Karnataka Housing Scheme
Bengaluru Elevated Corridor
JDS MLC Suraj Revanna
Bengaluru Outer Ring-Road Project
  • Home
  • Life
  • Food
  • ನಾಗರ ಪಂಚಮಿ ಸ್ಪೆಷಲ್: ಬಾಯಲ್ಲಿಟ್ಟರೆ ಕರಗುವ ಗರಿಗರಿ ‘ಶೇಂಗಾ ಉಂಡೆ’ ಮಾಡುವ ಸುಲಭ ವಿಧಾನ ಇಲ್ಲಿದೆ!

ನಾಗರ ಪಂಚಮಿ ಸ್ಪೆಷಲ್: ಬಾಯಲ್ಲಿಟ್ಟರೆ ಕರಗುವ ಗರಿಗರಿ ‘ಶೇಂಗಾ ಉಂಡೆ’ ಮಾಡುವ ಸುಲಭ ವಿಧಾನ ಇಲ್ಲಿದೆ!

ನಾಗರ ಪಂಚಮಿ ಹಬ್ಬಕ್ಕೆ ವಿಶೇಷವಾಗಿ ತಯಾರಿಸುವ ಶೇಂಗಾ ಉಂಡೆಯು ಆರೋಗ್ಯಕರ ಮತ್ತು ರುಚಿಕರ ಸಿಹಿ ತಿಂಡಿಯಾಗಿದೆ. ಪ್ರೋಟೀನ್‌ಯುಕ್ತ ಕಡಲೆಕಾಯಿ ಮತ್ತು ಕಬ್ಬಿಣಾಂಶಭರಿತ ಬೆಲ್ಲ ಬಳಸಿ, ಗರಿಗರಿಯಾದ ಉಂಡೆಯನ್ನು ಕಡಿಮೆ ಸಮಯದಲ್ಲಿ ಮಾಡುವ ಸಂಪೂರ್ಣ ವಿಧಾನವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

2 Min read
Author : Sathish Kumar KH
Published : Aug 15 2026, 03:15 PM IST
Share this Photo Gallery
  • FB
  • TW
  • Linkdin
  • Whatsapp
18
Image Credit : YouTube

ನಾಗರ ಪಂಚಮಿ ಬಂತೆಂದರೆ ಸಾಕು, ಮನೆಗಳಲ್ಲಿ ಬಗೆಬಗೆಯ ಉಂಡೆಗಳ ಘಮಲು ಹರಡುತ್ತದೆ. ಎಳ್ಳುಂಡೆ, ತಂಬಿಟ್ಟು ಜೊತೆಗೆ ಉತ್ತರ ಕರ್ನಾಟಕ ಹಾಗೂ ಕರುನಾಡಿನಾದ್ಯಂತ ಪಂಚಮಿ ಹಬ್ಬಕ್ಕೆ ಅತ್ಯಂತ ಪ್ರಮುಖವಾಗಿ ಮಾಡುವ ಸಿಹಿ ತಿಂಡಿ ಎಂದರೆ ಅದು ‘ಶೇಂಗಾ ಉಂಡೆ’ (Peanut Laddu).

ಕಡಲೆಕಾಯಿ ಬೀಜದಲ್ಲಿ ಪ್ರೋಟೀನ್ ಹೇರಳವಾಗಿದ್ದರೆ, ಬೆಲ್ಲದಲ್ಲಿ ಕಬ್ಬಿಣದಂಶ ಸಮೃದ್ಧವಾಗಿದೆ. ಹೀಗಾಗಿ ಇದು ಹಬ್ಬದ ನೈವೇದ್ಯಕ್ಕೆ ಮಾತ್ರವಲ್ಲದೆ, ಆರೋಗ್ಯಕ್ಕೂ ಅತ್ಯಂತ ಶ್ರೇಷ್ಠ. ಈ ಬಾರಿ ಹಬ್ಬಕ್ಕೆ ಅತಿ ಕಡಿಮೆ ಸಮಯದಲ್ಲಿ, ಪರಿಪೂರ್ಣ ರುಚಿಯೊಂದಿಗೆ ಗರಿಗರಿಯಾದ ಶೇಂಗಾ ಉಂಡೆ ಮಾಡುವುದು ಹೇಗೆ ಎಂದು ಇಲ್ಲಿ ನೋಡೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
Image Credit : YouTube

ಶೇಂಗಾ ಉಂಡೆ ಮಾಡಲು ಬೇಕಾಗುವ ಸಾಮಗ್ರಿಗಳು:

  • ಶೇಂಗಾ (ಕಡಲೆಕಾಯಿ ಬೀಜ): 2 ಕಪ್
  • ಹುರಿಗಡಲೆ (ಪುಠಾಣಿ): 1 ಕಪ್
  • ಸಾವಯವ ಬೆಲ್ಲ (Organic Jaggery): 2 ಕಪ್ (ಪುಡಿ ಮಾಡಿದ್ದು)
  • ಒಣ ಕೊಬ್ಬರಿ ತುರಿ: 1/2 ಕಪ್ (ಅರ್ಧ ಕಪ್)
  • ಗಸಗಸೆ: 1 ರಿಂದ2 ಚಮಚ
  • ಶುಂಠಿ ಮತ್ತು ಏಲಕ್ಕಿ ಪುಡಿ: 1/2(ಅರ್ಧ) ಟೀ ಚಮಚ
  • ನೀರು: 1/4 ಕಪ್

Related Articles

Related image1
ನಾಗರ ಪಂಚಮಿ ಪೂಜೆಗೆ ಮೂಲ ನಾಗನ ಪೂಜೆಯೇ ಶ್ರೇಷ್ಠ: ಮೂಲ ನಾಗ ಎಲ್ಲಿದೆ ಗೊತ್ತಾ?
Related image2
ನಾಗರ ಪಂಚಮಿ ದಿನ ಕನ್ನಡದಲ್ಲಿ ನೀವು ನೋಡಲೇಬೇಕಾದ ಸರ್ಪ ಸಿನಿಮಾಗಳು!
38
Image Credit : YouTube

ಹಂತ 1: ಶೇಂಗಾ ಸಿದ್ಧತೆ

ಮೊದಲು ಶೇಂಗಾವನ್ನು ತವಾ ಅಥವಾ ಬಾಣಲೆಯಲ್ಲಿ ಕಡಿಮೆ ಉರಿಯಲ್ಲಿ ಹುರಿಯಬೇಕು. ಕಡಲೆ ಕಾಳಿನ ಮೇಲೆ ಸಣ್ಣ ಸಣ್ಣ ಕಪ್ಪು ಬಂದಾಕ್ಷಣ, ಕಡಲೆಯನ್ನು ಒಂದು ತಟ್ಟೆಗೆ ಬಗ್ಗಿಸಿ ಇಟ್ಟುಕೊಳ್ಳಿ. ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಬೇಕು.

48
Image Credit : YouTube

ಶೇಂಗಾ ತಣ್ಣಗಾದ ನಂತರ ಅದರ ಮೇಲಿರುವ ಸಿಪ್ಪೆಯನ್ನು ಕೈಯಿಂದ ಉಜ್ಜಿ ಅಥವಾ ಅದರ ಮೇಲೆ ಒಂದು ಸಣ್ಣ ಭಾರವಾದ ವಸ್ತುವಿನಿಂದ ಉಜ್ಜಿ ಸಿಪ್ಪೆಯನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು.

ಇಲ್ಲಿ ತೋರಿಸಿದ ಚಿತ್ರದಂತೆ ಶೇಂಗಾ ಸಿಪ್ಪೆ ತೆಗೆದ ನಂತರ ಮಿಕ್ಸಿ ಜಾರಿಗೆ ಹಾಕಿ ಒಂದೇ ಒಂದು ಸುತ್ತು (Pulse mode) ತಿರುಗಿಸಿ ತರಿತರಿಯಾಗಿ (Crushed/Coarse) ಪುಡಿ ಮಾಡಿಕೊಳ್ಳಿ (ತೀರಾ ನುಣ್ಣಗೆ ಮಾಡಬೇಡಿ).

58
Image Credit : YouTube

ಹಂತ 2: ಬೆಲ್ಲದ ಪಾಕ ತಯಾರಿಕೆ

ಒಂದು ದಪ್ಪ ತಳದ ಪಾತ್ರೆಗೆ ಪುಡಿ ಮಾಡಿದ ಬೆಲ್ಲ ಮತ್ತು 1/4 ಕಪ್ ನೀರು ಹಾಕಿ (ಬೆಲ್ಲ ಮುಳುಗುವಷ್ಟು ಮಾತ್ರ).

ಬೆಲ್ಲ ಕರಗಿ ಸ್ವಲ್ಪ ನೊರೆ ಬಂದು ಗಟ್ಟಿಯಾಗುವವರೆಗೆ ಕುದಿಸಿ.

ಪಾಕ ಪರೀಕ್ಷೆ: ಒಂದು ತಟ್ಟೆಯಲ್ಲಿ ಸ್ವಲ್ಪ ನೀರು ಹಾಕಿ, ಅದರಲ್ಲಿ ಒಂದು ಹನಿ ಬೆಲ್ಲದ ಪಾಕ ಹಾಕಿ ನೋಡಿ. ಪಾಕ ನೀರಿನಲ್ಲಿ ಹರಡದೆ ಒಂದೇ ಕಡೆ ನಿಂತರೆ (ಒಂದೆಳೆ ಪಾಕ ಬರುವ ಹಂತ) ತಕ್ಷಣ ಸ್ಟವ್ ಆಫ್ ಮಾಡಿ.

68
Image Credit : YouTube

ಹಂತ 3: ಎಲ್ಲ ಸಾಮಗ್ರಿ ಬೆರೆಸುವುದು

ಉಂಡೆ ಕಟ್ಟಲು ಅನುಕೂಲ ಆಗುವಂತೆ ಅಗಲವಾದ ತಟ್ಟೆ ಅಥವಾ ಪರಾತಕ್ಕೆ ಶೇಂಗಾ ಪುಡಿ, ಶುಂಠಿ-ಏಲಕ್ಕಿ ಪುಡಿಯನ್ನು ಸೇರಿಸಿ. ಕೆಲವರು ಬಿಳಿ ಎಳ್ಳನ್ನು ಹುರಿದು ಸೇರಿಸುತ್ತಾರೆ. ನೀವು ಸೇರಿಸಬಹುದು, ಅಥವಾ ಹಾಗೆಯೇ ಉಂಡೆ ಮಾಡಬಹುದು.

ಈ ಎಲ್ಲ ಮಿಶ್ರಣದ ಮೇಲೆ ಬೆಲ್ಲದ ಪಾಕವನ್ನು ಬಿಸಿಯಾಗಿರುವಾಗಲೇ ಅದರ ಮೇಲೆ ಸುರಿಯಬೇಕು. ಒಂದು ಸ್ಪೂನ್‌ನಿಂದ ಎಲ್ಲವನ್ನು ಮಿಶ್ರಣ ಮಾಡಬೇಕು. ಆಗ ಉಂಡೆ ಕಟ್ಟುವ ಹದಕ್ಕೆ ಈ ಚಿತ್ರದಲ್ಲಿ ತೋರಿಸಿದಂತೆ ಬರುತ್ತದೆ.

78
Image Credit : YouTube

ಹಂತ 4: ಉಂಡೆ ಕಟ್ಟುವುದು ಮತ್ತು ಕೋಟಿಂಗ್

ಒಂದು ಅಗಲವಾದ ತಟ್ಟೆಯಲ್ಲಿ ಒಣ ಕೊಬ್ಬರಿ ತುರಿ ಮತ್ತು ಗಸಗಸೆಯನ್ನು ಹರಡಿ ಇಟ್ಟುಕೊಳ್ಳಿ.

ಕಡಲೆ ಮಿಶ್ರಣ ಬೆಚ್ಚಗೆ ಇರುವಾಗಲೇ ಸ್ವಲ್ಪ ನೀರು ಅಥವಾ ಹುರಿಗಡಲೆ ಹಿಟ್ಟು ಕೈಗೆ ಸವರಿಕೊಂಡು ಉಂಡೆಗಳನ್ನು ಕಟ್ಟಬೇಕು. ಉಂಡೆ ಕಟ್ಟುವಾಗ ಬೆಚ್ಚಗಿರುವ ಮಿಶ್ರಣ ತಣ್ಣಗಾಗಲು ಬಿಡದಂತೆ ಬೇಗ ಬೇಗನೇ ಉಂಡೆ ಕಟ್ಟಬೇಕು. ಆದ್ದರಿಂದ ಉಂಡೆ ಕಟ್ಟುವಾಗ ಮನೆಯ ಇತರ ಸದಸ್ಯರ ಸಹಾಯವನ್ನೂ ಪಡೆಯಬಹುದು.

ನಂತರ ಈ ಉಂಡೆಗಳನ್ನು ತಟ್ಟೆಯಲ್ಲಿರುವ ಕೊಬ್ಬರಿ-ಗಸಗಸೆ ಮಿಶ್ರಣದ ಮೇಲೆ ಉರುಳಿಸಿ (Roll ಮಾಡಿ). ಇದರಿಂದ ಉಂಡೆಯ ಮೇಲ್ಭಾಗದಲ್ಲಿ ಗಸಗಸೆ-ಕೊಬ್ಬರಿ ಅಂಟಿಕೊಂಡು ನೋಡಲು ಸುಂದರವಾಗಿ, ತಿನ್ನಲು ಗರಿಗರಿಯಾಗಿ ರುಚಿ ನೀಡುತ್ತದೆ.

ಈಗ ನಿಮ್ಮ ಮನೆಯಲ್ಲೇ ಮಾಡಿದ ಸಾಂಪ್ರದಾಯಿಕ ಶೈಲಿಯ ರುಚಿಕರ ಹಾಗೂ ಪೌಷ್ಟಿಕ ಶೇಂಗಾ ಉಂಡೆ ಸವಿಯಲು ಸಿದ್ಧ!

88
Image Credit : YouTube

ಪರ್ಫೆಕ್ಟ್ ಶೇಂಗಾ ಉಂಡೆಗೆ ಮುಖ್ಯ ಸಲಹೆಗಳು (Tips):

  • ಬೆಲ್ಲದ ಪಾಕವನ್ನು ಅತಿಯಾಗಿ ಗಟ್ಟಿ ಮಾಡಬೇಡಿ, ಇದರಿಂದ ಉಂಡೆ ಕಲ್ಲಿನಂತೆ ಗಟ್ಟಿಯಾಗಬಹುದು.
  • ಶೇಂಗಾ ಜೊತೆಗೆ ಹುರಿಗಡಲೆ ಪುಡಿ ಸೇರಿಸುವುದರಿಂದ ಉಂಡೆಗೆ ಅದ್ಭುತ ರುಚಿ ಹಾಗೂ ಮೃದುತ್ವ ಸಿಗುತ್ತದೆ.
  • ಈ ಉಂಡೆಯನ್ನು ಗಾಳಿಯಾಡದ ಡಬ್ಬದಲ್ಲಿ (Airtight container) ಇಟ್ಟರೆ 20 ರಿಂದ 30 ದಿನಗಳ ಕಾಲ ತಾಜಾವಾಗಿರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಆಹಾರ
ಆಹಾರ ವ್ಲಾಗರ್
ಹಬ್ಬ
ಜೀವನಶೈಲಿ

Latest Videos
Recommended Stories
Recommended image1
ಮುದ್ದೆ ಪ್ರಿಯರಿಗಾಗಿ ಇಲ್ಲಿದೆ ಸ್ಪೆಷಲ್ ಮಸೊಪ್ಪು ಸಾರು ಮಾಡುವ ವಿಧಾನ.. ಕೇವಲ 10 ನಿಮಿಷದಲ್ಲಿ ರೆಡಿ
Recommended image2
ಡಾಕ್ಟರ್‌ಗಳಿಗೂ ದೋಸೆ ತಿನ್ನೋದು ಹೇಗೆ ಅಂತ ಹೇಳಿಕೊಟ್ಟ ಆಸಾಮಿ: ಫೋರ್ಕ್ ಬೇಡ, ಕೈಯೇ ಮೇಲು ಅಂದ್ರು ನೆಟ್ಟಿಗರು!
Recommended image3
ಒಂದು ಕೆಜಿ ಚಟ್ನಿಗೆ ₹70 ಸಾವಿರ! ಚಿನ್ನ-ಬೆಳ್ಳಿ ಬಳಸಿ ತಯಾರಿಸುವ ಈ ಶಾಹಿ ಚಟ್ನಿಯ ವಿಶೇಷತೆ ಏನು?
Related Stories
Recommended image1
ನಾಗರ ಪಂಚಮಿ ಪೂಜೆಗೆ ಮೂಲ ನಾಗನ ಪೂಜೆಯೇ ಶ್ರೇಷ್ಠ: ಮೂಲ ನಾಗ ಎಲ್ಲಿದೆ ಗೊತ್ತಾ?
Recommended image2
ನಾಗರ ಪಂಚಮಿ ದಿನ ಕನ್ನಡದಲ್ಲಿ ನೀವು ನೋಡಲೇಬೇಕಾದ ಸರ್ಪ ಸಿನಿಮಾಗಳು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved