ಜಿಟಿ ಜಿಟಿ ಮಳೆಗೆ ಮಂಗಳೂರಿನ ಈ ತಿನಿಸು ಬೆಸ್ಟ್ ಕಾಂಬಿನೇಶನ್
ಮಳೆಗಾಲದಲ್ಲಿ ಮಂಗಳೂರಿನ ರುಚಿಕರವಾದ ತಿನಿಸುಗಳನ್ನು ಸವಿಯುವುದು ಒಂದು ಅದ್ಭುತ ಅನುಭವ. ಮೆತ್ತಗಿರುವ ಮಂಗಳೂರಿನ ಬನ್ಸ್‌ನಿಂದ ಹಿಡಿದು ಗರಿಗರಿಯಾದ ಗೋಳಿ ಬಜೆಯವರೆಗೆ ಮಳೆಯ ಸಂಜೆಯಲ್ಲಿ ತಿನ್ನಬಹುದಾದ ಟೇಸ್ಟೀ ಸ್ನ್ಯಾಕ್ಸ್ ವಿವರ ಇಲ್ಲಿದೆ.
ಗೋಳಿ ಬಜೆ
ಮಂಗಳೂರು ಬೋಂಡಾ ಎಂದು ಕರೆಯಲ್ಪಡುವ ಗೋಳೆ ಬಜೆಯು ಸಂಜೆಯ ಟೀ, ಕಾಫಿ ಜೊತೆ ಹೇಳಿ ಮಾಡಿಸಿದ ಸ್ನ್ಯಾಕ್ಸ್ ಆಗಿದೆ. ಇದು ಜನಪ್ರಿಯ ಮಾನ್ಸೂನ್ ತಿಂಡಿಯಾಗಿದ್ದು, ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಹುದುಗಿಸಿದ ಹಿಟ್ಟಿನಿಂದ ತಯಾರಿಸುತ್ತಾರೆ..ಗರಿಗರಿಯಾಗಿರುವ ಗೋಳಿಬಜೆಯನ್ನು ಬಿಸಿಯಿದ್ದಾಗಲೇ ತೆಂಗಿನ ಕಾಯಿ ಚಟ್ನಿಯೊಂದಿಗೆ ಸವಿಯಲು ಸಖತ್ತಾಗಿರುತ್ತದೆ.
ಮಂಗಳೂರು ಬನ್ಸ್
ಮಂಗಳೂರು ಬನ್‌ಗಳು ಹಿಸುಕಿದ ಬಾಳೆಹಣ್ಣು ಮತ್ತು ಹಿಟ್ಟಿನಿಂದ ಮಾಡಿದ ಸಿಹಿ ಮತ್ತು ತುಪ್ಪುಳಿನಂತಿರುವ ಡೀಪ್-ಫ್ರೈಡ್ ಬ್ರೆಡ್ ಆಗಿದೆ. ಈ ಬನ್‌ಗಳು ಬೆಳಗಿನ ಉಪಾಹಾರಕ್ಕಾಗಿ ಅಥವಾ ಮಳೆಗಾಲದಲ್ಲಿ ಒಂದು ಕಪ್ ಚಹಾದೊಂದಿಗೆ ಸಂಜೆಯ ತಿಂಡಿಯಾಗಿ ಪರಿಪೂರ್ಣವಾಗಿವೆ.
ಕೋರಿ ರೊಟ್ಟಿ
ಕೋರಿ ರೊಟ್ಟಿ ಎಂದರೆ ಸಾಕು ಮಂಗಳೂರಿಗರ ಬಾಯಲ್ಲಿ ನೀರೂರುತ್ತದೆ. ಇಲ್ಲಿನ ಎಲ್ಲಾ ಸಮಾರಂಭಗಳಲ್ಲೂ ಸಾಮಾನ್ಯವಾಗಿ ಕೋರಿ ರೊಟ್ಟಿ ಇದ್ದೇ ಇರುತ್ತದೆ. ತೆಳ್ಳಗೆ ಪೇಪರ್‌ನಂತಿರೋ ಈ ರೊಟ್ಟಿಯನ್ನು ಚಿಕನ್ ಸಾರಿನೊಂದಿಗೆ ಸರ್ವ್ ಮಾಡುತ್ತಾರೆ. ಚಿಕನ್ ಸಾರಿನಲ್ಲಿ ನೆನೆಸಿ ರೊಟ್ಟಿಯನ್ನು ತಿನ್ನುತ್ತಾರೆ.
ಫಿಶ್ ಕರಿ
ಮಂಗಳೂರು ತನ್ನ ರುಚಿಕರವಾದ ಮೀನಿನ ಕರಿಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಫಿಶ್ ಕರಿಯನ್ನು ಮಸಾಲೆಗಳು, ತೆಂಗಿನಕಾಯಿ ಮತ್ತು ಹುಣಸೆಹಣ್ಣುಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ, ಇದು ಕಟುವಾದ ಮತ್ತು ಮಸಾಲೆಯುಕ್ತ ಪರಿಮಳವನ್ನು ನೀಡುತ್ತದೆ. ಇದನ್ನು ಸಾಮಾನ್ಯವಾಗಿ ಆವಿಯಲ್ಲಿ ಬೇಯಿಸಿದ ಅನ್ನ ಅಥವಾ ಅಪ್ಪಂ ಜೊತೆಗೆ ಸವಿಯಲಾಗುತ್ತದೆ.
ಚಿಕನ್ ಸುಕ್ಕಾ
ಈ ಸುವಾಸನೆಯ ಮತ್ತು ಮಸಾಲೆಯುಕ್ತ ಚಿಕನ್ ಖಾದ್ಯ ಮಂಗಳೂರಿನ ವಿಶೇಷತೆಯಾಗಿದೆ. ಚಿಕನ್ ಅನ್ನು ಆರೊಮ್ಯಾಟಿಕ್ ಮಸಾಲೆಗಳ ಮಿಶ್ರಣದಲ್ಲಿ ಮ್ಯಾರಿನೇಟ್ ಮಾಡಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಅನ್ನ ಅಥವಾ ನೀರ್ ದೋಸೆಯೊಂದಿಗೆ ಸೈಡ್ ಡಿಶ್ ಆಗಿ ಬಡಿಸಲಾಗುತ್ತದೆ.
ನೀರ್ ದೋಸೆ
ನೀರ್ ದೋಸೆ ಒಂದು ತೆಳುವಾದ ದೋಸೆಯಾಗಿದ್ದು, ತಿನ್ನಲು ರುಚಿಕರವಾಗಿರುತ್ತದೆ ಮತ್ತು ಮಳೆಗಾಲಕ್ಕೆ ಸೂಕ್ತವಾದ ತಿಂಡಿಯಾಗಿದೆ. ಇದನ್ನು ಅಕ್ಕಿ ಮತ್ತು ತೆಂಗಿನಕಾಯಿ ಹಿಟ್ಟಿನೊಂದಿಗೆ ತಯಾರಿಸಲಾಗುತ್ತದೆ. ಇದನ್ನು ಹೆಚ್ಚಾಗಿ ಚಟ್ನಿ ಅಥವಾ ಚಿಕನ್ ಸಾರಿನ ಜೊತೆ ಸರ್ವ್ ಮಾಡುತ್ತಾರೆ.