ಬಿಗ್ಬಾಸ್ ಖ್ಯಾತಿಯ ಮಲಯಾಳಿ ಕುಟ್ಟಿ ಫಾತಿಮಾ ಹೇಳಿದ JUJUBE BUM BUM ರೆಸಿಪಿ ವೈರಲ್
ಮಲಯಾಳಂ ಬಿಗ್ಬಾಸ್ ಸ್ಪರ್ಧಿ ಫಾತಿಮಾ ನೇಹಾ ಹೇಳಿದ ಜೀರೋ ಆಯಿಲ್ 'JUJUBE BUM BUM' ಮೊಟ್ಟೆ ರೆಸಿಪಿ ಈಗ ವೈರಲ್ ಆಗಿದೆ. ಕೇವಲ ಒಂದು ನಿಮಿಷದಲ್ಲಿ ಮೈಕ್ರೋ ಓವನ್ ಬಳಸಿ ಈ ರುಚಿಕರವಾದ ಫ್ಲಫಿ ರೆಸಿಪಿಯನ್ನು ಸುಲಭವಾಗಿ ತಯಾರಿಸಬಹುದು.

JUJUBE BUM BUM ರೆಸಿಪಿ
ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಒಂದಿಷ್ಟು ರೆಸಿಪಿಗಳು ವೈರಲ್ ಆಗುತ್ತಿವೆ. ಇತ್ತೀಚೆಗಷ್ಟೇ ಬಿಗ್ಬಾಸ್ ಮಲಯಾಳಂನ ಸ್ಪರ್ಧಿ ಫಾತಿಮಾ ನೇಹಾ ಹೇಳಿದ ಮೊಟ್ಟೆಯ JUJUBE BUM BUM ರೆಸಿಪಿ ಹೆಚ್ಚು ವೈರಲ್ ಆಗುತ್ತಿದೆ. ಮಲಯಾಳಂ ಭಾಷೆಯ ಬಿಗ್ಬಾಸ್ ನಿರೂಪಕ, ನಟ ಮೋಹನ್ಲಾಲ್ (Mohanlal) ಸಹ ಈ ರೆಸಿಪಿ ಬಗ್ಗೆ ಮಾತನಾಡಿದ್ದಾರೆ.
JUJUBE BUM BUM ರೆಸಿಪಿ ಮಾಡಲು ಬೇಕಾಗುವ ಸಾಮಾಗ್ರಿಗಳು
- ಮೊಟ್ಟೆ: ಎರಡು
- ಈರುಳ್ಳಿ: ಒಂದು (ಮಧ್ಯಮ ಗಾತ್ರದ್ದು)
- ಪೆಪ್ಪರ್ ಪೌಡರ್: 1/4 ಟೀ ಸ್ಪೂನ್
- ರುಚಿಗೆ ತಕ್ಕಷ್ಟು ಉಪ್ಪು
- ಅಡುಗೆ ಎಣ್ಣೆ: 1 ಟೀ ಸ್ಪೂನ್ (ಬೇಕಾಗಿದ್ರೆ ಮಾತ್ರ)
JUJUBE BUM BUM ರೆಸಿಪಿ ಮಾಡುವ ವಿಧಾನ
ಮೊದಲಿಗೆ ಒಂದು ಬೌಲ್ಗೆ ಎರಡು ಮೊಟ್ಟೆಗಳನ್ನು ಒಡೆದು ಹಾಕಿಕೊಳ್ಳಿ. ನಂತರ ಇದಕ್ಕೆ ಕತ್ತರಿಸಿಕೊಂಡಿರುವ ಈರುಳ್ಳಿ, ಉಪ್ಪು, ಪೆಪ್ಪರ್ ಪೌಡರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಮೊಟ್ಟೆ ಮಿಶ್ರಣದ ಬೌಲ್ನ್ನು ಮೈಕ್ರೋ ಓವನ್ನಲ್ಲಿಟ್ಟು 1 ನಿಮಿಷ ಹೀಟ್ ಮಾಡಿಕೊಂಡ್ರೆ ರುಚಿಯಾದ ಜೀರೋ ಆಯಿಲ್. ಫ್ಲಫಿಯಾದ JUJUBE BUM BUM ಸವಿಯಲು ಸಿದ್ಧವಾಗುತ್ತದೆ.
ಮೋರ್ ಟೇಸ್ಟ್ಗೆ ಇವುಗಳನ್ನು ಸೇರಿಸಿಕೊಳ್ಳಿ
ಫಾತಿಮಾ ಹೇಳಿದ ಪ್ರಕಾರ, JUJUBE BUM BUM ರೆಸಿಪಿ ಇದು ಜೀರೋ ಆಯಿಲ್ ಫುಡ್ ಆಗಿದೆ. ಈ ರೆಸಿಪಿಯ ರುಚಿಯನ್ನು ಹೆಚ್ಚಿಸಿಕೊಳ್ಳಲು ನೀವು ಬೇಕಿದ್ದಲ್ಲಿ ಚಿಟಿಕೆಯಷ್ಟು ಅರಿಶಿನಪುಡಿ, ಸಣ್ಣದಾಗಿ ಕತ್ತರಿಸಿಕೊಂಡಿರುವ ಟೊಮೆಟೋ, ಕೋತಂಬರಿ ಸೊಪ್ಪನ್ನು ಸಹ ಸೇರಿಸಿಕೊಂಡು ರುಚಿಯನ್ನು ಹೆಚ್ಚಿಸಿಕೊಳ್ಳಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.













