MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 1st Test
Bandipur National Park
Hanur Shootout Case
Bengaluru Schools H1N1 Case
Ayodhye Ram Mandir Theft Case
Tungabhadra Backwaters Accident
DPL Nitish Rana
Congress Vande Mataram Row
Karnataka Housing Scheme
Bengaluru Elevated Corridor
JDS MLC Suraj Revanna
Bengaluru Outer Ring-Road Project
  • Home
  • Life
  • Food
  • ಚಪಾತಿ ಹಿಟ್ಟು ಕಲಸಿರೋದು ಹೆಚ್ಚಾಗಿದ್ಯಾ? ಹೀಗೆ ಮಾಡಿ ಸ್ಟೋರ್ ಮಾಡಿದ್ರೆ ಹಾಳಾಗಲ್ಲ

ಚಪಾತಿ ಹಿಟ್ಟು ಕಲಸಿರೋದು ಹೆಚ್ಚಾಗಿದ್ಯಾ? ಹೀಗೆ ಮಾಡಿ ಸ್ಟೋರ್ ಮಾಡಿದ್ರೆ ಹಾಳಾಗಲ್ಲ

ಭಾರತೀಯ ಮನೆಗಳಲ್ಲಿ ಚಪಾತಿಯಿಲ್ಲದೆ ಅಡುಗೆ ಪೂರ್ಣವಾಗುವುದೇ ಇಲ್ಲ. ಆದರೆ ಒಮ್ಮೊಮ್ಮೆ ಹಿಟ್ಟು ಕಲಸಿದ್ದು ಜಾಸ್ತಿಯಾಗಿ ಬಿಡುತ್ತದೆ. ಹೀಗಾದಾಗ ಏನ್‌ ಮಾಡೋದಪ್ಪಾ ಅಂತ ಹಲವು ಮಹಿಳೆಯರು ತಲೆಕೆಡಿಸಿಕೊಳ್ತಾರೆ. ಹಿಟ್ಟನ್ನು ಹಾಳಾಗದಂತೆ ಸಂಗ್ರಹಿಸಲು ಇಲ್ಲಿದೆ ಕೆಲವು ಟಿಪ್ಸ್.

2 Min read
Author : Vinutha Perla
| Updated : Jun 29 2023, 01:20 PM IST
Share this Photo Gallery
  • FB
  • TW
  • Linkdin
  • Whatsapp
16

\ಚಪಾತಿ ಎಲ್ಲರ ಮನೆಯಲ್ಲಿ ವಾರದಲ್ಲಿ ಪ್ರತಿನಿತ್ಯ ತಯಾರಿಸುವ ಆಹಾರವಾಗಿದೆ. ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಅಥವಾ ರಾತ್ರಿಯ ಊಟಕ್ಕೆ ಕೆಲವೊಬ್ಬರಿಗೆ ಚಪಾತಿ ಬೇಕೇ ಬೇಕು. ಆದರೆ ಚಪಾತಿ ಮಾಡುವಾಗ ಕೆಲವೊಬ್ಬರು ಎಷ್ಟು ಪ್ರಮಾಣದ ಹಿಟ್ಟನ್ನು ಬೆರೆಸಬೇಕು ಎಂಬ ಗೊಂದಲಕ್ಕೆ ಒಳಗಾಗುತ್ತಾರೆ. ಹಿಟ್ಟು ಗಟ್ಟಿಯಾಯ್ತ ಅನ್ನೋ ಕಾರಣಕ್ಕೆ ನೀರು ಸೇರಿಸಿ, ಹಿಟ್ಟು ನೀರಾಯ್ತು ಅನ್ನೋ ಕಾರಣಕ್ಕೆ ಮತ್ತೆ ಚಪಾತಿ ಪುಡಿ ಸೇರಿಸಿ ಕೊನೆಯಲ್ಲಿ ಕಲಸಿದ ಹಿಟ್ಟಿನ ಪ್ರಮಾಣ ಹೆಚ್ಚಾಗಿ ಬಿಡುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26

ಹೀಗೆ ಚಪಾತಿ ಹಿಟ್ಟು ಹೆಚ್ಚಾದಾಗ ಚಪಾತಿ ಮಾಡಿ ತೆಗೆದಿಡೋದಾ ಅಥವಾ ಹಿಟ್ಟನ್ನೇ ತೆಗೆದಿಡೋದಾ ಅನ್ನೋದು ಹಲವರಿಗೆ ಕನ್‌ಫ್ಯೂಸ್ ಆಗೋ ವಿಷಯ. ಚಪಾತಿ ಮಾಡಿ ತೆಗೆದಿಟ್ಟರೆ ಗಟ್ಟಿಯಾಗುತ್ತದೆ. ಹಿಟ್ಟನ್ನೇ ತೆಗೆದರೆ ಹಾಳಾಗುತ್ತದೆ ಎಂದು ತಲೆಕೆಡಿಸಿಕೊಳ್ಳುತ್ತಾರೆ. ಹೀಗಾಗಿ ಚಪಾತಿ ಹಿಟ್ಟನ್ನು ಸಂಗ್ರಹಿಸಲು ಮತ್ತು ದೀರ್ಘಕಾಲದವರೆಗೆ ತಾಜಾವಾಗಿಡಲು ಇಲ್ಲಿದೆ ಕೆಲವೊಂದು ಟಿಪ್ಸ್‌.

36

ಹಿಟ್ಟಿಗೆ ಸ್ವಲ್ಪ ಎಣ್ಣೆ ಸೇರಿಸಿ
ಹಿಟ್ಟನ್ನು ಬೆರೆಸುವಾಗ ಯಾವಾಗಲೂ ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಸೇರಿಸಿ. ಹೀಗೆ ಮಾಡಿದರೆ ಹಿಟ್ಟು ಉಳಿದರೂ ನೀವು ಅದನ್ನು ಸಂಗ್ರಹಿಸಿದಾಗ ಹಿಟ್ಟನ್ನು ದೀರ್ಘಕಾಲದವರೆಗೆ ಮೃದುವಾಗಿಡಲು ಇದು ಸಹಾಯ ಮಾಡುತ್ತದೆ.
 

46

ಅಲ್ಯೂಮಿನಿಯಂ ಫಾಯಿಲ್ ಅಥವಾ ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ
ತೇವಾಂಶವನ್ನು ಸಾಧ್ಯವಾದಷ್ಟು ತೆಗೆದು ಹಾಕುವುದರಿಂದ ಹಿಟ್ಟು ದೀರ್ಘಕಾಲ ಉಳಿಯುತ್ತದೆ. ಹಿಟ್ಟನ್ನು ಬಿಗಿಯಾಗಿ ಕಟ್ಟಲು ಯಾವಾಗಲೂ ಅಲ್ಯೂಮಿನಿಯಂ ಫಾಯಿಲ್ ಅಥವಾ ಪ್ಲಾಸ್ಟಿಕ್ ಕವರ್‌ನ್ನು ಬಳಸಬಹುದು. ಹಿಟ್ಟನ್ನು ಎಲ್ಲಾ ಕಡೆಯಿಂದ ಚೆನ್ನಾಗಿ ಮುಚ್ಚಲಾಗಿದೆ ಎಂದು ಖಚಿತಪಡಿಸಿಕೊಳ್ಳಿ. ನಂತರ ಅದನ್ನು ಪಾತ್ರೆಯಲ್ಲಿ ಇರಿಸಿ ಮತ್ತು ಸಂಗ್ರಹಿಸಿ.

56

ಏರ್ ಟೈಟ್ ಕಂಟೇನರ್ ಬಳಸಿ
ಮನೆಯಲ್ಲಿ ಫಾಯಿಲ್ ಶೀಟ್ ಇಲ್ಲದಿದ್ದರೆ ಬದಲಿಗೆ ನೀವು ಸ್ವಚ್ಛ ಮತ್ತು ಗಾಳಿಯಾಡದ ಕಂಟೇನರ್‌ ಬಳಸಬಹುದು. ಇದು ತೇವಾಂಶ ಬರದಂತೆ ಚಪಾತಿ ಹಿಟ್ಟನ್ನು ದೀರ್ಘಕಾಲದವರೆಗೆ ತಾಜಾವಾಗಿರಿಸಲು ಸಹಾಯ ಮಾಡುತ್ತದೆ. ಸಂಗ್ರಹಿಸುವ ಮೊದಲು ಹಿಟ್ಟನ್ನು ಸ್ವಚ್ಛವಾದ ಅಡಿಗೆ ಬಟ್ಟೆಯಿಂದ ಮುಚ್ಚಿ; ಇದು ಹೆಚ್ಚುವರಿ ತೇವಾಂಶವನ್ನು ತೆಗೆಯಲು ಸಹಾಯ ಮಾಡುತ್ತದೆ.

66

ಜಿಪ್ ಲಾಕ್ ಬ್ಯಾಗ್‌ಗಳಲ್ಲಿ ಇರಿಸಿ
ಹಿಟ್ಟನ್ನು ಸಂಗ್ರಹಿಸಲು ಜಿಪ್ ಲಾಕ್ ಬ್ಯಾಗ್‌ಗಳು ಉತ್ತಮ ಆಯ್ಕೆಯಾಗಿದೆ. ನಿಮಗೆ ಶೇಖರಣಾ ಸ್ಥಳದ ಕೊರತೆಯಿದ್ದರೆ, ಈ ಚೀಲಗಳು ಹೋಗಲು ಪರಿಪೂರ್ಣ ಆಯ್ಕೆಗಳಾಗಿವೆ. ಹಿಟ್ಟನ್ನು ಜಿಪ್ ಲಾಕ್ ಬ್ಯಾಗ್‌ನಲ್ಲಿ ಸಂಗ್ರಹಿಸಿ, ಹೆಚ್ಚುವರಿ ಗಾಳಿಯನ್ನು ತೆಗೆದುಹಾಕಿ ಮತ್ತು ಅದನ್ನು ಜಿಪ್ ಮಾಡಿ. ಅಷ್ಟೇ. ನಿಮ್ಮ ಹಿಟ್ಟು ದೀರ್ಘಕಾಲದವರೆಗೆ ತಾಜಾವಾಗಿರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

VP
Vinutha Perla
ಆಹಾರ

Latest Videos
Recommended Stories
Recommended image1
ಒಂದು ಚಮಚ ಕಡಲೆಕಾಯಿ ಪುಡಿ, ಕೋಟಿ ಮೌಲ್ಯದ ಬಿಸಿನೆಸ್; ಸ್ಟಾರ್ಟ್‌ಅಪ್‌ನ ಹೊಸ ಪ್ರಯೋಗ
Recommended image2
ಮುದ್ದೆ ಪ್ರಿಯರಿಗಾಗಿ ಇಲ್ಲಿದೆ ಸ್ಪೆಷಲ್ ಮಸೊಪ್ಪು ಸಾರು ಮಾಡುವ ವಿಧಾನ.. ಕೇವಲ 10 ನಿಮಿಷದಲ್ಲಿ ರೆಡಿ
Recommended image3
ಡಾಕ್ಟರ್‌ಗಳಿಗೂ ದೋಸೆ ತಿನ್ನೋದು ಹೇಗೆ ಅಂತ ಹೇಳಿಕೊಟ್ಟ ಆಸಾಮಿ: ಫೋರ್ಕ್ ಬೇಡ, ಕೈಯೇ ಮೇಲು ಅಂದ್ರು ನೆಟ್ಟಿಗರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved