ಬೇಸಿಗೆಯಲ್ಲಿ ಫ್ರಿಡ್ಜ್‌ನಲ್ಲಿ ಇಡದೆಯೇ ಹಾಲು ಕೆಡದಂತೆ ತಡೆಯಲು ಇಲ್ಲಿದೆ ಕೆಲ ಟಿಪ್ಸ್
ಬೇಸಿಗೆಯಲ್ಲಿ ಹಾಲನ್ನು ತಾಜಾವಾಗಿಡಿ: ಬೇಸಿಗೆಯಲ್ಲಿ ಹಾಲು ಕೆಡದಂತೆ ಈ ವಿಧಾನಗಳನ್ನು ಪ್ರಯತ್ನಿಸಿ ನೋಡಿ. ತುಂಬಾ ಉಪಯುಕ್ತವಾಗಿರುತ್ತದೆ.

ಬೇಸಿಗೆ ಕಾಲ ಶುರುವಾಗಿದೆ. ಬೇಸಿಗೆಯ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರ ಜೊತೆಗೆ ಅನೇಕ ಆರೋಗ್ಯ ಸಮಸ್ಯೆಗಳೂ ಬರುತ್ತವೆ. ಜತೆಗೆ ಮನೆಯಲ್ಲಿರುವ ಕೆಲವು ಆಹಾರ ಪದಾರ್ಥಗಳು ಬಿಸಿಯಿಂದ ಹಾಳಾಗುತ್ತವೆ. ಆದ್ದರಿಂದ ಅವುಗಳ ಬಗ್ಗೆ ವಿಶೇಷ ಗಮನ ಕೊಡುವುದು ಬಹಳ ಮುಖ್ಯ. ಆ ಲಿಸ್ಟ್‌ನಲ್ಲಿ ಹಾಲೂ ಇದೆ.
ಬೇಸಿಗೆಯಲ್ಲಿ ಹಾಲು ಕೆಟ್ಟರೆ ಏನು ಮಾಡುವುದು
?ಬೇಸಿಗೆಯಲ್ಲಿ ಹಾಲು ಕೆಡುವುದು ಸಾಮಾನ್ಯ ಸಮಸ್ಯೆ. ಆದ್ದರಿಂದ ಹಾಲು ಕೆಡದಂತೆ ತಡೆಯಲು ಹಾಲನ್ನು ಚೆನ್ನಾಗಿ ಕುದಿಸಿ ನಂತರ ತಣ್ಣಗಾಗಿಸಿ ಫ್ರಿಡ್ಜ್‌ನಲ್ಲಿ ಇಟ್ಟು ಸಂಗ್ರಹಿಸಿ. ಆದರೂ ಕೆಲವು ಬಾರಿ ಹೀಗೆ ಮಾಡಿದರೂ ಹಾಲು ಕೆಟ್ಟು ಹೋಗುತ್ತದೆ. ಏಕೆಂದರೆ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹಾಲನ್ನು ಫ್ರಿಡ್ಜ್‌ನಲ್ಲಿ ಇಟ್ಟು ಸಂಗ್ರಹಿಸುವುದು ಕಷ್ಟ.
ಫ್ರಿಡ್ಜ್‌ನಲ್ಲಿ ಇಡದೆ ಹಾಲು ಕೆಡದಂತೆ ತಡೆಯಲು ಕೆಲವು ಟಿಪ್ಸ್‌ಗಳಿವೆ. ಅವುಗಳನ್ನು ಅನುಸರಿಸಿದರೆ ಸಾಕು. ಹಾಲು ಕೆಡದಂತೆ ಫ್ರೆಶ್ ಆಗಿರುತ್ತದೆ. ಆದ್ದರಿಂದ ಈಗ ಹಾಲನ್ನು ಫ್ರಿಡ್ಜ್‌ನಲ್ಲಿ ಇಡದೆ, ಕೆಟ್ಟು ಹೋಗದಂತೆ ಏನು ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಹಾಲನ್ನು ಕುದಿಸುವ ವಿಧಾನ:
ನೀವು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಹಾಲನ್ನು ಕಾಯಿಸಬೇಕು. ಹಾಗೆ ಕಾಯಿಸುವಾಗ 2-3 ನಿಮಿಷ ಕುದಿಸಿದರೆ ಸಾಕು. ಅದರ ನಂತರ ಸ್ಟವ್ ಆಫ್ ಮಾಡಿ.
ಇದನ್ನೂ ಓದಿ: ಮನೆಯಲ್ಲೇ ಮಾಡಿ ರುಚಿ ರುಚಿಯಾದ ಜಿಲೇಬಿ ಚಾಟ್: ಇಲ್ಲಿದೆ ರೆಸಿಪಿ
ಹಾಲು ಪಾತ್ರೆಯನ್ನು ಸ್ವಚ್ಛವಾಗಿಡಿ
ನೀವು ಹಾಲು ಕಾಯಿಸುವ ಪಾತ್ರೆಯನ್ನು ಸ್ವಚ್ಛವಾಗಿ ತೊಳೆದು ಬಳಸಿ. ಅಂದರೆ ಹಾಲು ಕಾಯಿಸುವ ಮೊದಲು ಆ ಪಾತ್ರೆ ಸ್ವಚ್ಛವಾಗಿದೆಯೇ ಇಲ್ಲವೇ ಎಂಬುದನ್ನು ಮೊದಲು ಪರೀಕ್ಷಿಸಿ. ಚೆನ್ನಾಗಿ ಸ್ವಚ್ಛಗೊಳಿಸಿದ ನಂತರವೇ ಅದರಲ್ಲಿ ಹಾಲನ್ನು ಹಾಕಿ ಕಾಯಿಸಿ. ಹಾಗೆಯೇ ಹಾಲು ಕಾಯಿಸುವ ಮೊದಲು ಪಾತ್ರೆಯಲ್ಲಿ ಎರಡು ಅಥವಾ ಮೂರು ಚಮಚ ನೀರು ಸೇರಿಸಿದರೆ ಹಾಲು ಕಾಯಿಸುವಾಗ ತಳ ಹಿಡಿಯದಂತೆ ತಡೆಯಬಹುದು.
ಇದನ್ನೂ ಓದಿ: ಬೆಳಗಿನ ಓಟದ ನಂತರ ತಿನ್ನಬೇಕಾದ ಸೂಪರ್ ಫುಡ್‌ಗಳಿವು
ಪ್ಯಾಕೆಟ್ ಹಾಲು
ನಗರ ಪ್ರದೇಶಗಳಲ್ಲಿ ಪ್ಯಾಕೆಟ್ ಹಾಲು ಹೆಚ್ಚಾಗಿ ಸಿಗುತ್ತದೆ. ತಜ್ಞರ ಪ್ರಕಾರ, ಪಾಶ್ಚರೀಕರಿಸಿದ ಹಾಲನ್ನು ಬಿಸಿ ಮಾಡುವ ಅಗತ್ಯವಿಲ್ಲ. ಮತ್ತು ಅದನ್ನು ಹೆಚ್ಚು ಹೊತ್ತು ಕುದಿಸುವ ಅಗತ್ಯವಿಲ್ಲ. ಏಕೆಂದರೆ ಕಂಪನಿಗಳಲ್ಲಿ ಪ್ಯಾಕಿಂಗ್ ಮಾಡುವ ಮೊದಲು ಹಾಲನ್ನು ಚೆನ್ನಾಗಿ ಸ್ವಚ್ಛಗೊಳಿಸುತ್ತಾರೆ. ಇದರಿಂದ ಅದರಲ್ಲಿ ಬ್ಯಾಕ್ಟೀರಿಯಾಗಳು ಇಲ್ಲದಂತೆ ನೋಡಿಕೊಳ್ಳುತ್ತಾರೆ. ಹಾಗೆಯೇ ಪ್ಯಾಕೆಟ್ ಹಾಲನ್ನು ಮತ್ತೆ ಬಿಸಿ ಮಾಡಿದರೆ ಅದರಲ್ಲಿರುವ ಪೋಷಕಾಂಶಗಳು ಕಡಿಮೆಯಾಗುತ್ತವೆ. ಪ್ಯಾಕೆಟ್ ಹಾಲು ಖರೀದಿಸಿದರೆ, ಒಂದು ಗೋಣಿ ಚೀಲವನ್ನು ತಣ್ಣೀರಿನಲ್ಲಿ ನೆನೆಸಿ ಪ್ಯಾಕೆಟ್ ಹಾಲನ್ನು ಅದರಿಂದ ಮುಚ್ಚಿಡಿ. ಹೀಗೆ ಮಾಡಿದರೆ ಐದರಿಂದ ಆರು ಗಂಟೆಗಳ ಕಾಲ ಹಾಲು ಕೆಡದಂತೆ ಹಾಗೆಯೇ ಇರುತ್ತದೆ.