ಶುಂಠಿ-ಬೆಳ್ಳುಳ್ಳಿ ಪೇಸ್ಟ್ ತಿಂಗಳುಗಟ್ಟಲೇ ಹಾಳಾಗದೆ ಫ್ರೆಶ್ ಆಗಿ ಇರ್ಬೇಕು ಅಂದ್ರೆ ಹೀಗೆ ಸ್ಟೋರ್ ಮಾಡಿ
ಅಡುಗೆ ಕೆಲ್ಸ ಈಝಿಯಾಗ್ಲಿ ಅಂತ ಗೃಹಿಣಿಯರು ಸಣ್ಣಪುಟ್ಟ ಕೆಲಸಗಳನ್ನು ಮೊದಲೇ ಮಾಡಿಟ್ಟುಕೊಳ್ಳೋದು ಕಾಮನ್. ಅದರಲ್ಲೊಂದು ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ನ್ನು ಮೊದಲೇ ಮಾಡಿಟ್ಟುಕೊಳ್ಳುವುದು. ಆದ್ರೆ ಹೀಗೆ ಮಾಡಿಡೋ ಪೇಸ್ಟ್ ಸ್ಪಲ್ಪ ದಿನದಲ್ಲೇ ಹಾಳಾಗುತ್ತೆ ಅನ್ನೋದು ಹಲವರ ಕಂಪ್ಲೇಟ್..ಹೀಗಾಗದಿರಲು ಏನ್ ಮಾಡ್ಬೇಕು?
ಭಾರತೀಯ ಅಡುಗೆಗಳಲ್ಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸಾಮಾನ್ಯವಾಗಿ ಹೆಚ್ಚು ಬಳಕೆಯಾಗುತ್ತದೆ. ಆದರೆ ಪ್ರತಿ ಬಾರಿಯೂ ಅಡುಗೆ ಮಾಡುವಾಗಲೂ ಇದನ್ನು ತಯಾರಿಸಿಕೊಳ್ಳುವುದು ಕಷ್ಟ. ಹೀಗಾಗಿ ಹೆಚ್ಚಿನವರು ಜಿಂಜರ್-ಗಾರ್ಲಿಕ್ ಪೇಸ್ಟ್‌ನ್ನು ಮೊದಲೇ ಸಿದ್ಧಪಡಿಸಿ ಇಟ್ಟುಕೊಳ್ಳುತ್ತಾರೆ.
ಆದರೆ ಬಹುತೇಕರಿಗೆ ಬೇಸರ ತರಿಸೋ ವಿಚಾರವೆಂದರೆ ಹೀಗೆ ತಯಾರಿಸೋ ಶುಂಠಿ ಬೆಳ್ಳುಳ್ಳಿ ಪೇಸ್ಟ್ ತುಂಬಾ ಬೇಗನೇ ಹಾಳಾಗುತ್ತದೆ. ಹೀಗಾಗಿಯೇ ಗೃಹಿಣಿಯರು ದೀರ್ಘಕಾಲ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಕೆಡದಿರಲು ನಾನಾ ಟೆಕ್ನಿಕ್ಸ್ ಹುಡುಕುತ್ತಿರುತ್ತಾರೆ. ಅಂಥಾ ಕೆಲವು ಕುಕ್ಕಿಂಗ್ ಟಿಪ್ಸ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.
ಹಂತ 1: ಉಪ್ಪು ಮತ್ತು ಎಣ್ಣೆಯನ್ನು ಸೇರಿಸಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಳಾಗದೆ ಉಳಿಯಲು ಉತ್ತಮ ಮಾರ್ಗವೆಂದರೆ ಅದಕ್ಕೆ ಉಪ್ಪು ಅಥವಾ ಎಣ್ಣೆಯಂತಹ ನೈಸರ್ಗಿಕ ಸಂರಕ್ಷಕವನ್ನು ಸೇರಿಸುವುದು. ಈ ರೀತಿ ಮಾಡಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ರೆಫ್ರಿಜರೇಟ್ ಮಾಡಲು ಅಥವಾ ಫ್ರೀಜ್ ಮಾಡಲು ಹೊರಟರೂ, ಇದು ಕನಿಷ್ಠ ಒಂದೆರಡು ವಾರಗಳವರೆಗೆ ಇರುತ್ತದೆ.
ಹಂತ 2: ಪೇಸ್ಟ್ ಹಸಿರು ಬಣ್ಣಕ್ಕೆ ತಿರುಗದಂತೆ ವಿನೇಗರ್ ಬಳಸಿ.
ಈ ರೀತಿ ಸ್ಟೋರ್ ಮಾಡುವ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಸಿರು ಬಣ್ಣಕ್ಕೆ ತಿರುಗದಂತೆ ವಿನೇಗರ್ ಬಳಸಬಹುದು. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಸಿರು ಬಣ್ಣಕ್ಕೆ ತಿರುಗಿದರೆ, ಇದು ಸಾಮಾನ್ಯವಾಗಿ ರುಚಿಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಪೇಸ್ಟ್ ಬಣ್ಣವನ್ನು ಬದಲಾಯಿಸದಂತೆ ಇರಿಸಿಕೊಳ್ಳಲು ನೀವು ಪೇಸ್ಟ್‌ಗೆ 1 ಟೀಸ್ಪೂನ್ (4.9 ಮಿಲಿ) ಅಥವಾ ಬಿಳಿ ವಿನೇಗರ್ ಸೇರಿಸಿ ಮಿಕ್ಸ್ ಮಾಡಿ.
ಹಂತ 3: ಮಿಶ್ರಣಕ್ಕೆ ನೀರನ್ನು ಸೇರಿಸಬೇಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್‌ನ್ನು ತಯಾರಿಸುವಾಗ ಯಾವಾಗಲೂ ನೀರನ್ನು ಸೇರಿಸುವುದನ್ನು ತಪ್ಪಿಸಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್‌ಗೆ ನೀರನ್ನು ಸೇರಿಸುವುದರಿಂದ ಅದು ಬೇಗನೇ ಹಾಳಾಗುತ್ತದೆ. ಬದಲಿಗೆ ನೀರನ್ನು ಬಳಸದೇ ಇರುವುದರಿಂದ ಈ ಪೇಸ್ಟ್ ಹೆಚ್ಚು ಕಾಲ ಹಾಳಾಗದೆ ಉಳಿಯುತ್ತದೆ.
ಹಂತ 4: ಗಾಳಿಯಾಡದ ಜಾಗದಲ್ಲಿ ಸಂಗ್ರಹಿಸಿ
ಪೇಸ್ಟ್ ಅನ್ನು ಗಾಳಿಯಾಡದ ಗಾಜಿನ ಅಥವಾ ಪ್ಲಾಸ್ಟಿಕ್ ಪಾತ್ರೆಯಲ್ಲಿ ಇರಿಸಿ. ಗಾಜಿನ ಜಾರ್ ಅಥವಾ ಇತರ ಯಾವುದೇ ಪಾತ್ರೆಯಾಗಿರಲಿ ಇದನ್ನು ಮೊದಲೇ ತುಂಬಾ ಚೆನ್ನಾಗಿ ಒಣಗಿಸಿಟ್ಟುಕೊಂಡಿರಬೇಕು.
ನೀವು ತಯಾರಿಸಿರುವ ಪೇಸ್ಟ್‌ಗೆ ಹೊಂದಿಕೆಯಾಗುವಷ್ಟೇ ದೊಡ್ಡದಾದ ಕಂಟೇನರ್‌ನ್ನು ಆಯ್ಕೆ ಮಾಡಲು ಪ್ರಯತ್ನಿಸಿ. ಹೀಗೆ ಮಾಡುವುದರಿಂದ ಹಾಳಾಗುವ ಸಾಧ್ಯತೆ ಕಡಿಮೆ.
ಹಂತ 5: ಫ್ರಿಡ್ಜ್‌ನಲ್ಲಿ ಸಂಗ್ರಹಿಸಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಫ್ರಿಜ್‌ನಲ್ಲಿ 3 ವಾರಗಳವರೆಗೆ ಸಂಗ್ರಹಿಸಿ. ಪೇಸ್ಟ್‌ಗೆ ಉಪ್ಪು ಅಥವಾ ಎಣ್ಣೆಯಂತಹ ನೈಸರ್ಗಿಕ ಸಂರಕ್ಷಕಗಳನ್ನು ಸೇರಿಸಿದರೆ, ಅದು 2-3 ವಾರಗಳವರೆಗೆ ಫ್ರಿಜ್‌ನಲ್ಲಿ ಉಳಯುತ್ತದೆ. ಸಂರಕ್ಷಕಗಳನ್ನು ಬಳಸದಿದ್ದರೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಳಾಗಲು ಆರಂಭವಾಗುತ್ತದೆ,