ಜಗತ್ತಿನ ಅತ್ಯಂತ ದುಬಾರಿ ಸಸ್ಯವಿದು, 'ರೆಡ್ ಗೋಲ್ಡ್' ಹೆಸರಿನ ಈ ಮಸಾಲೆ ಬೆಳೆದ್ರೆ ಕೋಟ್ಯಾಧಿಪತಿ ಆಗೋದು ಗ್ಯಾರಂಟಿ!
ಜಗತ್ತಿನಲ್ಲಿ ದುಬಾರಿಯಾದ ಹಲವು ವಸ್ತುಗಳಿವೆ. ಹಾಗೆ ಸಸ್ಯ, ಹಣ್ಣು, ತರಕಾರಿಗಳ ವರ್ಗದಲ್ಲೂ ಅತೀ ದುಬಾರಿಯೆಂದು ಕರೆಸಿಕೊಂಡವುಗಳಿವು. ಅದರಲ್ಲೂ ಈ ಅಪರೂಪದ ಕೆಲವು ಸಸ್ಯಗಳನ್ನು ಬೆಳೆದ್ರೆ ವರ್ಷದಲ್ಲೇ ಕೋಟ್ಯಾಧಿಪತಿಯಾಗ್ಬೋದು. ಯಾವುದು ಆ ಗಿಡ?
ಜಗತ್ತಿನಲ್ಲಿ ದುಬಾರಿಯಾದ ಹಲವು ವಸ್ತುಗಳಿವೆ. ಹಾಗೆ ಸಸ್ಯ, ಹಣ್ಣು, ತರಕಾರಿಗಳ ವರ್ಗದಲ್ಲೂ ಅತೀ ದುಬಾರಿಯೆಂದು ಕರೆಸಿಕೊಂಡವುಗಳು ಯಾವುವು ನಿಮಗೆ ಗೊತ್ತಿದ್ಯಾ? ಮಾರುಕಟ್ಟೆಗೆ ಹೋದಾಗ ನಮಗೆ ದುಬಾರಿಯೆಂದು ಕಾಣಸಿಗುವ ಹಲವು ಹಣ್ಣು, ತರಕಾರಿಗಳು ಸಿಗುತ್ತವೆ. ಆದರೆ ಕೇಸರಿ ಜಗತ್ತಿನ ಅತೀ ದುಬಾರಿ ಸಸ್ಯವಾಗಿದೆ.
ಇತ್ತೀಚೆಗೆ, Quoraದಲ್ಲಿ ಜಗತ್ತಿನ ಅತೀ ದುಬಾರಿ ಸಸ್ಯ ಯಾವುದು ಎಂಬ ಬಗ್ಗೆ ಒಬ್ಬರು ಪ್ರಶ್ನೆ ಕೇಳಿದ್ದರು. ಇದಕ್ಕೆ ನೀಡಿದ ಉತ್ತರದಲ್ಲಿ ಅತೀ ದುಬಾರಿ ಸಸ್ಯ ಕೇಸರಿಯೆಂದು ತಿಳಿಸಲಾಗಿದೆ. ಇದನ್ನು ಬೆಳೆಸುವುದರಿಂದ ಒಬ್ಬ ವ್ಯಕ್ತಿ ಸುಲಭವಾಗಿ ಮಿಲಿಯನೇರ್ ಸಹ ಆಗಬಹುದು ಎಂಬುದನ್ನು ಸಹ ಸ್ಪಷ್ಟಪಡಿಸಲಾಗಿದೆ.
ಸಾಮಾನ್ಯವಾಗಿ ಕೇಸರಿಯನ್ನು ಕೆಂಪು ಚಿನ್ನ ಎಂದು ಸಹ ಹೇಳುತ್ತಾರೆ. ಪ್ರಧಾನವಾಗಿ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಜಮ್ಮುವಿನ ಕಿಶ್ತ್ವಾರ್ ಮತ್ತು ಜನ್ನತ್-ಎ-ಕಾಶ್ಮೀರದ ಪಾಂಪುರದಂತಹ ಪ್ರದೇಶಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ.
ಸಸ್ಯವು ಕಾಂಡವಿಲ್ಲದ ರಚನೆಯೊಂದಿಗೆ 15 ರಿಂದ 25 ಸೆಂ.ಮೀ ಎತ್ತರದಲ್ಲಿರುತ್ತದೆ. ಇದರ ತೆಳ್ಳಗಿನ, ಹುಲ್ಲಿನಂತಿರುವ ಎಲೆಗಳು ಮತ್ತು ನೀಲಿ, ನೇರಳೆ ಮತ್ತು ಬಿಳಿ ಹೂವುಗಳು ಇದನ್ನು ವಿಶಿಷ್ಟ ಸಸ್ಯಶಾಸ್ತ್ರೀಯ ಮಾದರಿಯನ್ನಾಗಿ ಮಾಡುತ್ತವೆ.
ಆದರೆ ಕೇಸರಿಯು ಗಣನೀಯ ಆದಾಯವನ್ನು ನೀಡುವ ಏಕೈಕ ಸಸ್ಯವಲ್ಲ. ಕರಿಮೆಣಸು ಅತ್ಯಂತ ದುಬಾರಿ ಸಸ್ಯವಾಗಿದೆ. ಕೇರಳದಲ್ಲಿ ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ. ಐತಿಹಾಸಿಕವಾಗಿ, ಕರಿಮೆಣಸು ವಿದೇಶಿ ಆಕ್ರಮಣಕಾರರನ್ನು ಆಕರ್ಷಿಸಿತು.
ಯುರೋಪಿನಲ್ಲಿ ತನ್ನ ಹೆಚ್ಚುತ್ತಿರುವ ಬೇಡಿಕೆಯನ್ನು ಲಾಭ ಮಾಡಿಕೊಳ್ಳಲು ಪ್ರಯತ್ನಿಸಿದರು. ಮಸಾಲೆಯು ಅಮೂಲ್ಯವಾದ ಸರಕು ಮತ್ತು ಹಲವಾರು ಐತಿಹಾಸಿಕ ಸಂಘರ್ಷಗಳಿಗೆ ಕಾರಣವಾಯಿ
ಸಸ್ಯ ಸಾಮ್ರಾಜ್ಯದಲ್ಲಿ ಮತ್ತೊಂದು ಲಾಭದಾಯಕ ಸಸ್ಯ ವೆನಿಲ್ಲಾ. ಭಾರತದಲ್ಲಿ ಇದರ ಕೃಷಿ ತುಲನಾತ್ಮಕವಾಗಿ ಕಡಿಮೆಯಿದ್ದರೂ, ಪ್ರತಿ ಕಿಲೋಗ್ರಾಂಗೆ 50 ಸಾವಿರ ರೂ.ವರೆಗೆ ಸಿಗುತ್ತದೆ, ವೆನಿಲ್ಲಾ ರೈತರಿಗೆ ಸಂಪತ್ತಿನ ಮೂಲವಾಗಿದೆ.