ವಿಶ್ವದ ಟಾಪ್ 50 ಮೊಟ್ಟೆ ಆಹಾರದಲ್ಲಿ ಭಾರತದ ಮಸಾಲಾ ಆಮ್ಲೆಟ್‌ಗೆ ಎಷ್ಟನೇ ಸ್ಥಾನ?
ಮೊಟ್ಟೆ ಬಹುತೇಕರ ನೆಟ್ಟಿನ ಆಹಾರ. ಇದೀಗ ವಿಶ್ವದ ವಿವಿಧ ದೇಶಗಳ ಅತ್ಯುತ್ತಮ 50 ಮೊಟ್ಟೆಯಿಂದ ತಯಾರಿಸಿದ ಆಹಾರವನ್ನು ಪಟ್ಟಿ ಮಾಡಲಾಗಿದೆ. ಇದರಲ್ಲಿ ಭಾರತದ ಮಸಾಲಾ ಆಮ್ಲೆಟ್‌ಗೆ ಎಷ್ಟನೇ ಸ್ಥಾನ ಗೊತ್ತಾ?

ಬಹುತೇಕರ ತಿಂಡಿ, ಊಟ ಸೇರಿದಂತೆ ಆಹಾರದಲ್ಲಿ ಮೊಟ್ಟೆ ಸಾಮಾನ್ಯ. ಬೇಯಿಸಿದ ಮೊಟ್ಟೆ, ಆಮ್ಲೆಟ್, ಹಾಫ್ ಬಾಯಿಲ್ ಸೇರಿದಂತೆ ಹಲವು ರೀತಿಯ ಮೊಟ್ಟೆ ತಿನಿಸುಗಳು ಪ್ರತಿ ದಿನ ತೆಗೆದುಕೊಳ್ಳುತ್ತಾರೆ. ಅದರಲ್ಲೂ ಬೆಳಗಿನ ತಿಂಡಿ ಜೊತೆ ಹಲವರಿಗೆ ಮೊಟ್ಟೆ ಯಾವುದಾರೊಂದು ತಿನಿಸು ಇರಲೇಬೇಕು. ಭಾರತದಲ್ಲಿ ಮೊಟ್ಟೆಯಿಂದ ಹಲವು ರೀತಿಯ ಆಹಾರ, ತಿನಿಸು ಲಭ್ಯವಿದೆ.
ವಿಶ್ವದ ವಿವಿಧ ದೇಶಗಳಲ್ಲಿ ಲಭ್ಯವಿರುವ ಅತ್ಯುತ್ತಮ ಮೊಟ್ಟೆಯಿಂದ ತಯಾರಿಸಿದ ತಿನಿಸುಗಳನ್ನು ಪಟ್ಟಿ ಮಾಡಲಾಗಿದೆ. ವಿಶೇಷ ಅಂದರೆ ಇದರಲ್ಲಿ ಭಾರತದ ಮಸಾಲ ಆಮ್ಲೆಟ್ ಕೂಡ ಸ್ಥಾನ ಪಡೆದಿದೆ. ಟೇಸ್ಟ್ ಅಟ್ಲಾಸ್ ಈ ಕುರಿತು ಸರ್ವೆ ನಡೆಸಿದೆ. ವಿಶ್ವದ ಹಲವು ದೇಶಗಳ ಉತ್ತಮ ಮೊಟ್ಟೆ ಆಹಾರ ಖಾದ್ಯಗಳನ್ನು ಪಟ್ಟಿ ಮಾಡಲಾಗಿದೆ.
ಭಾರತದ ಮಸಾಲಾ ಆಮ್ಲೆಟ್ ಬಹುತೇಕರ ಬೆಳಗಿನ ತಿಂಡಿಯಲ್ಲಿ ಇದ್ದೇ ಇರುತ್ತದೆ. ಮಸಾಲಾ ಆಮ್ಲೆಟ್ ಭಾರತದ ಮೊಟ್ಟೆಯ ತಿನಿಸುಗಳಲ್ಲಿ ಅತೀ ಹೆಚ್ಚು ಜನಪ್ರಿಯ ಹಾಗೂ ಎಲ್ಲೆಡೆ ಲಭ್ಯವಿರುವ ತಿನಿಸಾಗಿದೆ. ವಿಶ್ವದ 50 ಉತ್ತಮ ಮೊಟ್ಟೆ ಭಕ್ಷ್ಯಗಳಲ್ಲಿ ಭಾರತದ ಮಸಾಲಾ ಆಮ್ಲೆಟ್ 22ನೇ ಸ್ಥಾನ ಪಡೆದುಕೊಂಡಿದೆ.
ಟಾಪ್ 25ರಲ್ಲಿ ಭಾರತದ ಮಸಾಲ ಆಮ್ಲೆಟ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಇದೀಗ ಹಲವರು ಮಸಾಲಾ ಆಮ್ಲೆಟ್ ರುಚಿ ಸವಿಯಲು ಮುಂದಾಗಿದ್ದಾರೆ. ಅದರಲ್ಲೂ ಬೀದಿ ಬದಿಯ ಅಂಗಡಿಗಳಲ್ಲಿ ಮಸಾಲಾ ಆಮ್ಲೆಟ್‌ಗಳಲ್ಲೂ 50ಕ್ಕೂ ಹೆಚ್ಚು ವೆರೈಟಿ ಲಭ್ಯವಿದೆ.
ವಿಶ್ವದ ಉತ್ತಮ ಮೊಟ್ಟೆ ಭಕ್ಷ್ಯಗಳಲ್ಲಿ ಜಪಾನ್‌ನ ಅಜಿಟ್ಸುಕೆ ತಮಾಗೋ ಮೊದಲ ಸ್ಥಾನ ಪೆಡಿದೆ. ಈ ಮೊಟ್ಟೆ ಭಕ್ಷ್ಯ ಸಿಹಿ ಹಾಗೂ ಉಪ್ಪು ಮಿಶ್ರಿತವಾಗಿದೆ. ಈ ಅಜಿಟ್ಸುಕೆ ತಮಾಗೋ ಮೊಟ್ಟೆ ಆಹಾರಕ್ಕೆ ವಿಶ್ವದಲ್ಲೇ ಅತೀ ಹೆಚ್ಚಿನ ಮಂದಿ ಮಾರು ಹೋಗಿದ್ದಾರೆ. ಹೀಗಾಗಿ ಉತ್ತಮ ಮೊಟ್ಟೆ ಆಹಾರದಲ್ಲಿ ಅಜಿಟ್ಸುಕೆ ತಮಾಗೋ ಮೊದಲ ಸ್ಥಾನದಲ್ಲಿದೆ.
ಪಿಲಿಪೈನ್ಸ್‌ನ ತೊರ್ತಾಂಗ್ ತಲೊಂಗ್ 2ನೇ ಸ್ಥಾನ ಪಡೆದುಕೊಂಡಿದೆ. ಗ್ರೀಸ್ ದೇಶದ ಸ್ಟಾಕಾ ಮಿ ಅಯಗ ಮೊಟ್ಟ ತಿನಿಸು ಮೂರನೇ ಸ್ಥಾನದಲ್ಲಿದೆ. ಭಾರತದಿಂದ ಮಸಾಲಾ ಆಮ್ಲೆಟ್ ಈ ಪಟ್ಟಿಯಲ್ಲಿ ಕಾಣಿಸಿಕೊಂಡ ಏಕೈಕ ಮೊಟ್ಟೆ ಆಹಾರವಾಗಿದೆ. ನೀವು ಮಸಾಲಾ ಆಮ್ಲೆಟ್ ಪ್ರಯತ್ನಿಸದಿದ್ದರೆ ಇಂದೇ ರುಚಿ ಸವಿದು ನೋಡಿ.