- Home
- Life
- Food
- ರಾತ್ರಿ ಉಳಿದ ದಾಲ್ ಎಸೆಯೋ ಬದಲು ಬೆಳಿಗ್ಗೆ ಮಾಡಿ ರುಚಿಯಾದ ಈ ರೆಸಿಪಿ, ಮತ್ತೆ ಮತ್ತೆ ಕೇಳಿ ತಿಂತಾರೆ ಮಕ್ಕಳು
ರಾತ್ರಿ ಉಳಿದ ದಾಲ್ ಎಸೆಯೋ ಬದಲು ಬೆಳಿಗ್ಗೆ ಮಾಡಿ ರುಚಿಯಾದ ಈ ರೆಸಿಪಿ, ಮತ್ತೆ ಮತ್ತೆ ಕೇಳಿ ತಿಂತಾರೆ ಮಕ್ಕಳು
Leftover Dal Recipe : ಏನೇ ಪ್ರಯತ್ನ ಮಾಡಿದ್ರೂ ಅನ್ನ ಇಲ್ಲ ದಾಲ್ ಮಿಕ್ಕೇ ಮಿಕ್ಕುತ್ತೆ. ರಾತ್ರಿ ಉಳಿದ ದಾಲ್ ಏನು ಮಾಡೋದು ಎಂಬ ಟೆನ್ಷನ್ ಮಹಿಳೆರಯದ್ದು. ಇನ್ಮುಂದೆ ಈ ಚಿಂತೆ ಬೇಡ, ಈ ರೆಸಿಪಿ ಟ್ರೈ ಮಾಡಿ.

ಉಳಿದ ದಾಲ್ ಎಸೆಯಬೇಡಿ
ರಾತ್ರಿ ಊಟದ ನಂತ್ರ ಉಳಿದ ದಾಲ್ ಮರುದಿನ ತಿನ್ನೋಕೆ ಇಷ್ಟವಾಗೋದಿಲ್ಲ. ಅದನ್ನು ಪದೇ ಪದೇ ಬಿಸಿ ಮಾಡಿದ್ರೆ ರುಚಿ ಹಾಳಾಗುತ್ತೆ. ಹಾಗಂತ ತುಂಬಾ ಹೆಚ್ಚಿದ್ರೆ ಎಸೆಯೋಕೆ ಮನಸ್ಸು ಬರೋದಿಲ್ಲ. ಕೆಲವರು ಫ್ರಿಜ್ ನಲ್ಲಿ ಬೇಳೆ ಇಡ್ತಾರೆ ಆದ್ರೆ ಬಳಸೋದಿಲ್ಲ. ಮರುದಿನ ಅದನ್ನು ಕಸಕ್ಕೆ ಹಾಕ್ತಾರೆ. ಅದ್ರ ಬದಲು ನೀವು ಉಳಿದ ದಾಲ್ ನಿಂದ ರುಚಿಕರವಾದ ಖಾಸ್ತಾ ಪೂರಿ ಮಾಡಿದರೆ ಮನೆಯವರೆಲ್ಲರೂ ಖುಷಿಯಿಂದ ತಿಂತಾರೆ.
ಖಾಸ್ತ ಪೂರಿಗೆ ಬೇಕಾಗುವ ಪದಾರ್ಥ
ಪ್ಲೇಟ್ ಉಳಿದ ದಾಲ್ (ತೊಗರಿ ಬೇಳೆ, ಹೆಸರುಬೇಳೆ ಅಥವಾ ಮಿಕ್ಸ್ ಬೇಳೆ), 2 ಕಪ್ ಗೋಧಿ ಹಿಟ್ಟು, 2 ಚಮಚ ರವೆ, 2 ಚಮಚ ಕಡಲೆ ಹಿಟ್ಟು, ½ ಚಮಚ ಓಮ, ½ ಚಮಚ ಕೆಂಪು ಮೆಣಸಿನ ಪುಡಿ,¼ ಚಮಚ ಅರಿಶಿನ,½ ಚಮಚ ಗರಂ ಮಸಾಲೆ, 2-3 ಚಮಚ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು,ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಎಣ್ಣೆ ಹಿಟ್ಟಿಗೆ , ಕರಿಯಲು ಬೇಕಾದಷ್ಟು ಎಣ್ಣೆ
ಹಿಟ್ಟು ಕಲಸುವ ವಿಧಾನ
ಗೋಧಿ ಹಿಟ್ಟು, ರವೆ ಮತ್ತು ಕಡಲೆ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಎಲ್ಲಾ ಮಸಾಲೆಗಳು, ಕೊತ್ತಂಬರಿ ಸೊಪ್ಪು ಮತ್ತು ಎಣ್ಣೆ ಸೇರಿಸಿ. ಈಗ ಉಳಿದ ದಾಲನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತಾ ನೀರು ಹಾಕದೆ ಗಟ್ಟಿಯಾದ ಹಿಟ್ಟನ್ನು ಕಲಸಿ. ಹಿಟ್ಟಿಗೆ ಸ್ವಲ್ಪ ಎಣ್ಣೆ ಸವರಿ, ಮುಚ್ಚಿ 10 ರಿಂದ 15 ನಿಮಿಷಗಳ ಕಾಲ ಬಿಡಿ. ಇದರಿಂದ ರವೆ ಚೆನ್ನಾಗಿ ಉಬ್ಬಿ ಪೂರಿ ಇನ್ನಷ್ಟು ಗರಿಗರಿಯಾಗುತ್ತದೆ.
ಖಾಸ್ತ ಪೂರಿ ತಯಾರಿಸುವ ವಿಧಾನ
ಹಿಟ್ಟನ್ನು ಸಣ್ಣ ಉಂಡೆಗಳಾಗಿ ಮಾಡಿ, ಪೂರಿಯಂತೆ ಲಟ್ಟಿಸಿ. ಬಿಸಿ ಎಣ್ಣೆಯಲ್ಲಿ ಎರಡೂ ಬದಿಗಳೂ ಗೋಲ್ಡನ್ ಕಲರ್ ಗೆ ಬರುವವರೆಗೆ ಕರಿಯಿರಿ.
ಬಡಿಸುವ ವಿಧಾನ
ಬಿಸಿ ಬಿಸಿ ಖಾಸ್ತ ಪೂರಿಯನ್ನು ಮಾವಿನಕಾಯಿ ಅಥವಾ ನಿಂಬೆ ಉಪ್ಪಿನಕಾಯಿ, ಹಸಿರು ಚಟ್ನಿ, ರೈತಾ ಅಥವಾ ದಪ್ಪ ಮೊಸರಿನೊಂದಿಗೆ ಬಡಿಸಿದರೆ ಅದರ ರುಚಿ ಇನ್ನಷ್ಟು ಹೆಚ್ಚುತ್ತದೆ.
ವಿಶೇಷ ಸಲಹೆ
ಈ ಪೂರಿಗಳು ಹೆಚ್ಚು ಸಮಯ ಮೃದುವಾಗಿಯೇ ಇರುತ್ತವೆ. ಆದ್ದರಿಂದ ಮಕ್ಕಳ ಲಂಚ್ಬಾಕ್ಸ್, ಪ್ರಯಾಣ ಅಥವಾ ಸಂಜೆ ತಿಂಡಿಗೂ ಇದು ಅತ್ಯುತ್ತಮ ಆಯ್ಕೆಯಾಗಿದೆ. ಉಳಿದ ದಾಲನ್ನು ಹಾಳು ಮಾಡದೇ ಈ ಸುಲಭ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

