ಹೆಚ್ಚು ಖರ್ಚು ಮಾಡದೆ ಬಹಳ ಸಿಂಪಲ್ಲಾಗಿ ಮನೆಯಲ್ಲಿಯೇ ಮಾಡಿ ಗರಿಗರಿಯಾದ ಕುರ್ಕುರೆ
Homemade Kurkure Recipe: ಈಗ ನೀವು ಮಾರುಕಟ್ಟೆಯಲ್ಲಿ ಸಿಗುವ ಹಾಗೆಯೇ ರುಚಿಯಾದ ಕುರ್ಕುರೆಯನ್ನು ಮನೆಯಲ್ಲಿಯೇ ಮಾಡಬಹುದು. ಅದು ನಿಮ್ಮ ಹೊಟ್ಟೆ ತುಂಬಿಸುವುದಲ್ಲದೇ, ನಿಮ್ಮ ಜೇಬಿಗೂ ಕತ್ತರಿ ಬೀಳಲ್ಲ.

ಥೇಟ್ ಅಂಗಡಿ ಸ್ಟೈಲ್‌ನಲ್ಲಿ
ಮಳೆಗಾಲದ ಸಂಜೆಗೆ ಬಿಸಿ ಬಿಸಿಯಾದ, ಗರಿಗರಿಯಾದ, ರುಚಿಯಾದ ಕುರ್ಕುರೆ ಬೇಕೆಂದರೆ ನೀವು ಮಾರುಕಟ್ಟೆಗೆ ಹೋಗಬೇಕಿಲ್ಲ. ಅದನ್ನು ಮನೆಯಲ್ಲಿಯೇ ಮಾಡಬಹುದು. ಹಾಗಾದರೆ ಮನೆಯಲ್ಲಿಯೇ ಕುರ್ಕುರೆ ಮಾಡುವ ಸುಲಭ ವಿಧಾನ ಇಲ್ಲಿದೆ. ಇದನ್ನು ತಿನ್ನುತ್ತಿದ್ದರೆ ನಿಮಗೆ ಥೇಟ್ ಅಂಗಡಿಯಲ್ಲಿ ಮಾಡಿದಂತಹ ಕುರ್ಕುರೆ ತಿಂದ ಹಾಗೆ ಅನಿಸುತ್ತದೆ. ಅದು ಹೆಚ್ಚು ಖರ್ಚು ಮಾಡದೆ.
ಮನೆಯಲ್ಲಿ ಮಾಡೋದು ಕಷ್ಟವಲ್ಲ
ಸಂಜೆ ಮಳೆ ಬಂದು ಖಾರವಾಗಿರುವ ಏನನ್ನಾದರೂ ತಿನ್ನಲು ಅವಕಾಶ ಸಿಕ್ಕರೆ ಏನನ್ನು ತಿನ್ನಲು ಇಷ್ಟಪಡುತ್ತೀರ?. ಈ ಸಮಯದಲ್ಲಿ ಜನರು ಹೆಚ್ಚಾಗಿ ಚಹಾದೊಂದಿಗೆ ಬಿಸಿ ಬಿಸಿಯಾದ, ಗರಿಗರಿಯಾದ ಪಕೋಡಾಗಳನ್ನು ತಿನ್ನಲು ಬಯಸುತ್ತಾರೆ. ಆದರೆ ನಿಮಗೆ ಕುರ್ಕುರೆ ತಿನ್ನಲು ಅವಕಾಶ ಸಿಕ್ಕರೆ ಹೇಗಿರುತ್ತದೆ. ಸಿಕ್ಕಾಪಟ್ಟೆ ಖುಷಿಯಾಗುತ್ತದೆ ಅಲ್ಲವೇ, ಅದರಲ್ಲೂ ಇದು ಮಕ್ಕಳ ನೆಚ್ಚಿನ ತಿಂಡಿ. ಆದರೆ ಜನರು ಮನೆಯಲ್ಲಿ ಕುರ್ಕುರೆ ಮಾಡುವುದು ಕಷ್ಟ ಎಂದು ಭಾವಿಸುತ್ತಾರೆ.
ನಿಮ್ಮ ಜೇಬಿಗೂ ಕತ್ತರಿ ಬೀಳಲ್ಲ
ಬಹುತೇಕರು ಕುರುಕಲು ಮತ್ತು ರುಚಿ ಅಂಗಡಿಯಲ್ಲಿ ಸಿಗುವ ಕುರ್ಕುರೆ ಹಾಗೆ ಇರುವುದಿಲ್ಲ ಅಂತಾರೆ. ಆದರೆ ಈಗ ನೀವು ಮಾರುಕಟ್ಟೆಯಲ್ಲಿ ಸಿಗುವ ಹಾಗೆಯೇ ರುಚಿಯಾದ ಕುರ್ಕುರೆಯನ್ನು ಮನೆಯಲ್ಲಿಯೇ ಮಾಡಬಹುದು. ಅದು ನಿಮ್ಮ ಹೊಟ್ಟೆ ತುಂಬಿಸುವುದಲ್ಲದೇ, ನಿಮ್ಮ ಜೇಬಿಗೂ ಕತ್ತರಿ ಬೀಳಲ್ಲ.
ಕುರ್ಕುರೆ ಮಾಡಲು ಬೇಕಾಗುವ ಪದಾರ್ಥಗಳು
ಕಡಲೆ ಹಿಟ್ಟು - 1 ಕಪ್
ಅಕ್ಕಿ ಹಿಟ್ಟು - ½ ಕಪ್
ಆರೋರೂಟ್(Arrowroot Powder) ಅಥವಾ ಕಾರ್ನ್ ಫ್ಲೋರ್ - 2 ಚಮಚ
ಅಡುಗೆ ಸೋಡಾ - ಒಂದು ಚಿಟಿಕೆ
ಉಪ್ಪು, ಅರಿಶಿನ, ಕೆಂಪು ಮೆಣಸಿನ ಪುಡಿ - ರುಚಿಗೆ ತಕ್ಕಂತೆ
ಬಿಸಿನೀರು - ಮಿಶ್ರಣಕ್ಕಾಗಿ
ಎಣ್ಣೆ - ಹುರಿಯಲು
ಪೆರಿ-ಪೆರಿ ಮಸಾಲ ಅಥವಾ ಚಾಟ್ ಮಸಾಲ - ರುಚಿ ಹೆಚ್ಚಿಸಲು
ಕುರ್ಕುರೆಗೆ ಲೇಪಿಸಲು ತೆಳುವಾದ ಮೈದಾ ಹಿಟ್ಟು.
ಮಾಡುವುದು ಹೇಗೆ?
* ಮೊದಲಿಗೆ ಒಂದು ಬಟ್ಟಲಿನಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಆರೋರೂಟ್ ಮತ್ತು ಅಡುಗೆ ಸೋಡಾ ಹಾಕಿ. ಈಗ ಅದಕ್ಕೆ ಅರಿಶಿನ, ಉಪ್ಪು ಮತ್ತು ಕೆಂಪು ಮೆಣಸಿನ ಪುಡಿ ಸೇರಿಸಿ. ನಂತರ ಬಿಸಿ ನೀರನ್ನು ಸೇರಿಸಿ ಹಿಟ್ಟನ್ನು ಕಲಸಿ. ಆದರೆ ನೆನಪಿರಲಿ ಈ ಹಿಟ್ಟು ದಪ್ಪಗಿರಬಾರದು, ಹರಿಯುವ ಹಾಗೆ ದ್ರಾವಣವನ್ನು ತಯಾರಿಸಿ.
* ಈಗ ಒಂದು ಪ್ಯಾನ್ ಗೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ನೆನಪಿಡಿ ಉರಿ ಕಡಿಮೆಯಿರಲಿ. ಇದು ಕುರ್ಕುರೆ ಸೀಯುವುದು ಅಥವಾ ಸುಡುವುದನ್ನು ತಡೆಯುತ್ತದೆ. ಅದು ಚಿನ್ನದ ಬಣ್ಣಕ್ಕೆ ತಿರುಗಿದ ನಂತರ ಗರಿಗರಿಯಾಗುತ್ತದೆ.
* ಈಗ ಒಂದು ಸ್ವಚ್ಛವಾದ ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ತಯಾರಿಸಿದ ದ್ರಾವಣವನ್ನು ಸುರಿಯಿರಿ, ಪೋಟ್ಲಿ ತರಹ ವಿನ್ಯಾಸ ಮಾಡಿಕೊಳ್ಳಿ. ನಂತರ ಮುಂಭಾಗದಲ್ಲಿ ಒಂದು ಸಣ್ಣ ರಂಧ್ರವನ್ನು ಮಾಡಿ, ನಿಧಾನವಾಗಿ ಒತ್ತಿ. ಅಂದರೆ ಈ ದ್ರಾವಣವನ್ನು ಪ್ಯಾನ್‌ನಲ್ಲಿ ಬಿಡಿ. ಇದು ಅವುಗಳಿಗೆ ಕುರ್ಕುರೆ ಆಕಾರವನ್ನು ನೀಡುತ್ತದೆ.
* ಈಗ ಕುರ್ಕುರೆಯನ್ನು ಕಡಿಮೆ ಉರಿಯಲ್ಲಿ ಚಿನ್ನದ ಕಂದು ಬಣ್ಣ ಬರುವವರೆಗೆ ಮತ್ತು ಗರಿಗರಿಯಾಗುವವರೆಗೆ ಹುರಿಯಿರಿ. ನಂತರ ಅದನ್ನು ಒಂದು ತಟ್ಟೆಯಲ್ಲಿ ತೆಗೆದಿಟ್ಟುಕೊಳ್ಳಿ.
* ನಂತರ ಪೆರಿ-ಪೆರಿ ಮಸಾಲ ಅಥವಾ ಚಾಟ್ ಮಸಾಲವನ್ನು ಮೇಲೆ ಸಿಂಪಡಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಿಮ್ಮ ಕುರ್ಕುರೆ ಸವಿಯಲು ಸಿದ್ಧ.