ಹೃದಯದ ಆರೋಗ್ಯಕ್ಕಾಗಿ ಈ ಎಣ್ಣೆ ಅಡುಗೆಯಲ್ಲಿ ಬಳಸುವುದನ್ನ ತಪ್ಪಿಸಿ
ಆಹಾರದಲ್ಲಿನ ಕೊಬ್ಬುಗಳು ಆರೋಗ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಆರೋಗ್ಯಕರ ಕೊಬ್ಬನ್ನು ಊಟ ಮತ್ತು ತಿಂಡಿಗಳಲ್ಲಿ ಸೇರಿಸುವುದರಿಂದ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಸುಧಾರಿಸಬಹುದು, ಹೃದಯದ ಆರೋಗ್ಯವನ್ನು ಉತ್ತೇಜಿಸಬಹುದು ಜೊತಗೆ ಆಹಾರದ ಸುವಾಸನೆ ಅಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಕೊಬ್ಬುಗಳು ಅಡುಗೆ ಎಣ್ಣೆಗಳು ಮುಖ್ಯವಾದವು.. ಕೆಲವು ಎಣ್ಣೆಗಳು ಅಡುಗೆಗೆ ಹೆಚ್ಚು ಸೂಕ್ತವಾದವು ಮತ್ತು ಆರೋಗ್ಯಕ್ಕೆ ಪ್ರಯೋಜನಕಾರಿ . ಅದೇ ಸಮಯದಲ್ಲಿ ಕೆಲವು ಎಣ್ಣೆಗಳನ್ನು ಅಡುಗೆಯಲ್ಲಿ ಬಳಸುವುದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು.

ಆಲಿವ್ ಎಣ್ಣೆ: ಹೃದಯಕ್ಕೆ ಆರೋಗ್ಯಕರವಾದ ಮ್ಯಾನೊಸಾಚುರೇಟೆಡ್ ಕೊಬ್ಬುಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ವಿಶೇಷವಾಗಿ ಎಕ್ಸ್‌ಟ್ರಾ ವರ್ಜಿನ್ ಆಲಿವ್ ಎಣ್ಣೆಯಲ್ಲಿ ಸಮೃದ್ಧವಾಗಿದೆ. ಆಲಿವ್ ಎಣ್ಣೆ ಉರಿಯೂತ ಕಡಿಮೆ ಮಾಡುವುದರ ಜೊತೆಗೆ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.
വെളിച്ചെണ്ണ
ತೆಂಗಿನ ಎಣ್ಣೆ: ತೆಂಗಿನ ಎಣ್ಣೆಯಲ್ಲಿರುವ ಸ್ಯಾಚುರೇಟೆಡ್ ಕೊಬ್ಬಿನಂಶದಿಂದಾಗಿ ಇದು ಚರ್ಚೆಗೆ ಗುರಿಯಾಗುತ್ತಲೇ ಇರುತ್ತದೆ. ಆದರೆ ಇದು ಅದರ ವಿಶಿಷ್ಟವಾದ ಕೊಬ್ಬಿನಾಮ್ಲ ಮತ್ತು ಉರಿಯೂತ ವಿರೋಧಿ ಗುಣಲಕ್ಷಣಗಳಿಂದಾಗಿ ತೂಕ ನಷ್ಟ ಮತ್ತು ಹೃದಯದ ಆರೋಗ್ಯಕ್ಕೆ ಪ್ರಯೋಜನಗಳನ್ನು ನೀಡುತ್ತದೆ.
avacado oil
ಆವಕಾಡೊ ಎಣ್ಣೆ: ಆವಕಾಡೊ ಆಯಿಲ್‌ನಲ್ಲಿ ಮನೊಸಾಚುರೇಟೆಡ್, ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿದೆ. ಅಧಿಕ ಸ್ಮೋಕ್ ಪಾಯಿಂಟ್ ಹೊಂದಿರುವ ಈ ಎಣ್ಣೆ ವಿವಿಧ ಅಡುಗೆ ವಿಧಾನಗಳಿಗೆ ಸೂಕ್ತವಾಗಿದೆ. ಇದನ್ನು ಹೆಚ್ಚಾಗಿ ಡ್ರೆಸ್ಸಿಂಗ್ ಮತ್ತು ಮ್ಯಾರಿನೇಡ್‌ಗಳಲ್ಲಿ ಬಳಸಲಾಗುತ್ತದೆ
ಕನೋಲಾ ಎಣ್ಣೆ: ಕಡಿಮೆ ಸ್ಯಾಚುರೇಟೆಡ್ ಕೊಬ್ಬುಗಳನ್ನು ಮತ್ತು ಹೆಚ್ಚಿನ ಮೊನೊಸಾಚುರೇಟೆಡ್ ಹಾಗೂ ಒಮೆಗಾ 3 ಹೊಂದಿರುವ ಕನೋಲಾ ಆಯಿಲ್ ಹೃದಯವನ್ನು ಆರೋಗ್ಯಕರವಾಗಿಸುತ್ತದೆ ಮತ್ತು ತಟಸ್ಥ ಸುವಾಸನೆ ಮತ್ತು ಹೆಚ್ಚಿನ ಸ್ಮೋಕ್ ಪಾಯಿಂಟ್ ಹೊಂದಿರುವ ಇದು ಅಡುಗೆಗೆ ಸೂಕ್ತವಾಗಿದೆ.
ಗ್ರೇಪ್ ಸೀಡ್ ಆಯಿಲ್: ಪಾಲಿಅನ್‌ಸ್ಯಾಚುರೇಟೆಡ್ ಫ್ಯಾಟ್ಸ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಗ್ರೇಪ್ ಸೀಡ್ ಆಯಿಲ್ ಹೆಚ್ಚಿನ ಸ್ಮೋಕ್ ಪಾಯಿಂಟ್ ಹೊಂದಿದ್ದು ಇದು ಆಹಾರ ಹುರಿಯಲು ಮತ್ತು ಕರಿಯಲು ಬೆಸ್ಟ್ ಮತ್ತು ವಿವಿಧ ಭಕ್ಷ್ಯಗಳಿಗೆ ಸೂಕ್ತವಾದ ತಟಸ್ಥ ಪರಿಮಳವನ್ನು ನೀಡುತ್ತದೆ.
ಪಾಮಮ ಆಯಿಲ್: ಪಾಮ್ ಆಯಿಲ್‌ನಲ್ಲಿ ಹೃದಯದ ಕಾಯಿಲೆಗಳಿಗೆ ಸಂಬಂಧಿಸಿದ ಸ್ಯಾಚುರೇಟೆಡ್ ಕೊಬ್ಬು ಅಧಿಕವಾಗಿದು ಆರೋಗ್ಯಕ್ಕೆ ಹಾನಿಕಾರವಾಗಿದೆ ಮತ್ತು ಅದರ ಉತ್ಪಾದನೆಯು ಅರಣ್ಯನಾಶದಂತಹ ಪರಿಸರ ಸಮಸ್ಯೆಗಳಿಗೆ ಕಾರಣವಾಗಬಹುದು.
ಹತ್ತಿ ಬೀಜದ ಎಣ್ಣೆ: ಸಾಮಾನ್ಯವಾಗಿ ಸಂಸ್ಕರಿಸುವ ಕಾಟನ್ ಸೀಡ್ ಆಯಿಲ್ ಹೃದಯಕ್ಕೆ ಹಾನಿಕಾರಕವಾದ ಟ್ರಾನ್ಸ್ ಕೊಬ್ಬನ್ನು ಹೊಂದಿರುತ್ತದೆ ಮತ್ತು ಇದರ ಸಂಸ್ಕರಣ ವಿಧಾನದ ಕಾರಣ ಇದನ್ನು ಒಳಸದೆ ಇರುವುದು ಉತ್ತಮ.
ಹೈಡ್ರೋಜನೀಕರಿಸಿದ ತೈಲ: ಹೈಡ್ರೋಜೆನೆಟೆಡ್ ಆಯಿಲ್‌ಗಳನ್ನು ಹೃದಯದ ಅಪಾಯಕ್ಕೆ ಕೊಡುಗೆ ನೀಡುವ ಟ್ರಾನ್ಸ್ ಕೊಬ್ಬು ಹೊಂದಿದ್ದು , ದಿನ್ನು ಕೈಗಾರಿಕಾವಾಗಿ ಸಂಸ್ಕರಿಸಲಾಗುತ್ತದೆ ಮತ್ತು ಆರೋಗ್ಯಕರ ಅಡುಗೆ ಮಾಡಲು ಶಿಫಾರಸು ಮಾಡುವುದಿಲ್ಲ.
ಸೋಯಾಬೀನ್ ಎಣ್ಣೆ: ಸೋಯಾಬೀನ್ ಆಯಿಲ್ ಪಾಲಿಅನ್‌ಸ್ಯಾಚುರೇಟೆಡ್ ಫ್ಯಾಟ್ ಅಂಶವನ್ನು ಹೊಂದಿದ ಹೊರತಾಗಿಯೂ ಭಾರೀ ಸಂಸ್ಕರಣೆಯು ಟ್ರಾನ್ಸ್ ಕೊಬ್ಬುಗಳು ಮತ್ತು ಪೋಷಕಾಂಶಗಳ ನಷ್ಟಕ್ಕೆ ಕಾರಣವಾಗಬಹುದು ಮತ್ತು ಎಣ್ಣೆಯನ್ನು ಕಡಿಮೆ ಆರೋಗ್ಯಕರವಾಗಿಸುತ್ತದೆ.
ಕಾರ್ನ್ ಆಯಿಲ್: ಮೆಗಾ 6 ಕೊಬ್ಬಿನಾಮ್ಲವನ್ನು ಅಧಿಕವಾಗಿ ಹೊಂದಿರುವ ಜೋಳದ ಎಣ್ಣೆಯನ್ನು ಸೇವಿಸಿದಾಗ ಉರಿಯೂತವನ್ನು ಉತ್ತೇಜಿಸುತ್ತದೆ, ಇದು ಅಡುಗೆಯಲ್ಲಿ ಬಳಸಬಹುದಾದರೂ ದೀರ್ಘಕಾಲದ ಕಾಯಿಲೆಗಳಿಗೆ ಅಪಾಯವನ್ನುಂಟುಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.