MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Food
  • Health Tips: ಅಡುಗೆ ಮಾಡೋಕೆ ಈ ಎರಡು ಎಣ್ಣೆಗಳೇ ಬೆಸ್ಟ್‌ !

Health Tips: ಅಡುಗೆ ಮಾಡೋಕೆ ಈ ಎರಡು ಎಣ್ಣೆಗಳೇ ಬೆಸ್ಟ್‌ !

ಭಾರತೀಯ ಅಡುಗೆಗೆ ಸೂಕ್ತವಾದ ಎಣ್ಣೆಗಳ ಬಗ್ಗೆ ಪೌಷ್ಟಿಕತಜ್ಞರ ಅಭಿಪ್ರಾಯಗಳನ್ನು ಈ ಲೇಖನ ಒಳಗೊಂಡಿದೆ. ಹೃದಯದ ಆರೋಗ್ಯಕ್ಕೆ ಉತ್ತಮವಾದ, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವ ಎಣ್ಣೆಗಳನ್ನು ಚರ್ಚಿಸಲಾಗಿದೆ.

2 Min read
Santosh Naik
Published : Jan 15 2025, 05:28 PM IST
Share this Photo Gallery
  • FB
  • TW
  • Linkdin
  • Whatsapp
110

ಭಾರತೀಯರು ಅಡುಗೆಗೆ ಬಳಸುವ ಎಣ್ಣೆಯ ಬಗ್ಗೆ ಅಷ್ಟಾಗಿ ಗಮನ ಕೊಡೋದಿಲ್ಲ. ಆದರೆ, ನಮ್ಮ ಆರೋಗ್ಯ ಉತ್ತಮವಾಗಿರಬೇಕೆಂದರೆ ಅಡುಗೆಗೆ ನಾವು ಬಳಸುವ ಎಣ್ಣೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಎಣ್ಣೆಗಳನ್ನೂ ಬಳಸಲು ಆರಂಭಿಸಿದರೆ, ಆರೋಗ್ಯ ಕೈಕೊಡುವುದು ಗ್ಯಾರಂಟಿ. ಹಾಗಾಗಿ ಅಡುಗೆ ಮಾಡಲು ಉತ್ತಮ ಎಣ್ಣೆ ಯಾವುದು ಅನ್ನೋದರ ವಿವರ ಇಲ್ಲಿದೆ.

210

ದೇಹದಲ್ಲಿ ಕೊಲೆಸ್ಟ್ರಾಲ್‌ ಮಟ್ಟ ಏರಿಕೆಗೆ ನಾವು ಅಡುಗೆಯಲ್ಲಿ ಬಳಸುವ ಎಣ್ಣೆಯೂ ಒಂದೂ ಕಾರಣ. ಕೊಲೆಸ್ಟ್ರಾಲ್‌ನಿಂದ ನೇರ ಅಪಾಯಕ್ಕೆ ಈಡಾಗುವುದು ಹೃದಯ. ತಿನ್ನುವ ಪದಾರ್ಥಗಳಲ್ಲಿ ಎಣ್ಣೆಯನ್ನು ಕಡಿಮೆ ಬಳಸುವ ಆಹಾರವನ್ನು ಆಯ್ಕೆ ಮಾಡುವ ಕ್ರೇಜ್‌ ಕೂಡ ಜಾಸ್ತಿಯಾಗುತ್ತಿದೆ. ಆದರೆ, ಕೆಲವರಿಗೆ ಕರಿದ ಆಹಾರವಿಲ್ಲದೆ ಎಣ್ಣೆ ಬಳಸದ ಅಡುಗೆ ತಿನ್ನದೇ ದಿನ ಪೂರ್ತಿ ಆಗೋದೇ ಇಲ್ಲ.
 

310

ಕೆಲವೊಂದು ಅಡುಗೆ ಎಣ್ಣೆಯಿಂದ ತಯಾರಿಸಿದ ಆಹಾರ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ, ಇದರ ಪ್ರಮಾಣ ಸರಿಯಾದ ರೀತಿಯಲ್ಲಿರಬೇಕು. ಕೊಲೆಸ್ಟ್ರಾಲ್‌ ಹೆಚ್ಚಾಗುವ ಅಪಾಯವೂ ಇದರಲ್ಲಿ ಕಡಿಮೆ ಇರುತ್ತದೆ. ಪ್ರಸಿದ್ಧ ಪೌಷ್ಟಿಕತಜ್ಞರಾದ ಭವೇಶ್ ಗುಪ್ತಾ  ಇದರ ಬಗ್ಗೆ ಕೆಲವು ವಿಚಾರ ತಿಳಿಸಿದ್ದು, ಭಾರತೀಯರಿಗೆ ಅಡುಗೆ ಮಾಡಲು ಯಾವ ಎಣ್ಣೆ ಬೆಸ್ಟ್‌ ಎಂದೂ ತಿಳಿಸಿದ್ದಾರೆ.

410

ಈ ಎಣ್ಣೆಗಳಿಂದ ತಯಾರಿಸಿದ ಆಹಾರ ರುಚಿಕರವಾಗಿರುವುದು ಮಾತ್ರವಲ್ಲ, ಪರಿಮಳಯುಕ್ತವಾಗಿಯೂ ಇರುತ್ತದೆ ಎಂದು ಹೇಳಿದ್ದಾರೆ. ವಿವಿಧ ದೇಶಗಳಲ್ಲಿ ಅವರು ಕೆಲಸ ಮಾಡುವ ವಿಧಾನ, ಅಡುಗೆ ಶೈಲಿ, ವ್ಯಾಯಾಮ ಇದರಲ್ಲಿ ವ್ಯತ್ಯಾಸಗಳಿವೆ. ವಿದೇಶದ ಜನರು ಬಳಕೆ ಮಾಡುವ ಎಣ್ಣೆ ಭಾರತೀಯರಿಗೆ ಅಷ್ಟಾಗಿ ಒಳ್ಳೆಯದಲ್ಲ.
 

510

ಭಾರತದಲ್ಲಿ ಅಡುಗೆ ಮಾಡಲು ಸಾಸಿವೆ ಎಣ್ಣೆ ಹಾಗೂ ತೆಂಗಿನ ಎಣ್ಣೆ ಅತ್ಯಂತ ಉತ್ತಮ ಎಂದು ಹೇಳಿದ್ದಾರೆ. ಅದಕ್ಕೆ ಕೆಲವು ಕಾರಣಗಳನ್ನೂ ಅವರು ನೀಡಿದ್ದಾರೆ.

610

ಭಾರತೀಯರು ಅಡುಗೆ ಮಾಡಲು ಸಾಸಿವೆ ಎಣ್ಣೆ ಹಾಗೂ ತೆಂಗಿನ ಎಣ್ಣೆ ಬಳಸಬಹುದು. ಇವುಗಳು ಬೇಗನೆ ಸುಡೋದಿಲ್ಲ. ಇದರ ಉಷ್ಣತೆ ಸುಮಾರು 200 ಡಿಗ್ರಿ ಸೆಲ್ಸಿಯಸ್‌ ಇರುತ್ತದೆ.  ಇವುಗಳಿಂದ ಪೂರಿ, ಪಕೋಡ, ಪರಾಠ ಮುಂತಾದ ಆಹಾರಗಳನ್ನು ಕರಿಯಲು ಬಳಸಬಹುದು.
 

710

ತುಪ್ಪದ ಅತಿಯಾದ ಬಳಕೆ ಬೇಡ: ಅಡುಗೆಗೆ ತುಪ್ಪವನ್ನು ಬಳಸುವ ಅಭ್ಯಾಸ ನಿಮ್ಮಲ್ಲಿದ್ದರೆ ಅದನ್ನು ನಿಲ್ಲಿಸಿ. ತುಪ್ಪ ಮಾತ್ರವಲ್ಲ ಬೆಣ್ಣೆ ಕೂಡ ಹೆಚ್ಚಾದಷ್ಟು ದೇಹಕ್ಕೆ ಅಪಾಯಕಾರಿ. ಇದು ದೇಹದಲ್ಲಿ ಕೊಲೆಸ್ಟ್ರಾಲ್‌ ಏರಿಕೆಗೆ ಕಾರಣವಾಗುತ್ತದೆ.

810

ತೈಲ ಆಕ್ಸಿಡೀಕರಣದಿಂದ ಹೃದಯಾಘಾತ, ಪಾರ್ಶ್ವವಾಯು ಮತ್ತು ಕ್ಯಾನ್ಸರ್ ಅಪಾಯ ಏರುತ್ತದೆ.  ಸಾಸಿವೆ ಮತ್ತು ತೆಂಗಿನ ಎಣ್ಣೆಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ಬಿಸಿ ಮಾಡುವಾಗ ಆಕ್ಸಿಡೀಕರಣಗೊಳ್ಳಲು ಆಗೋದಿಲ್ಲ. ಎನ್‌ಸಿಬಿಐನಲ್ಲಿ ಲಭ್ಯವಿರುವ ಸಂಶೋಧನೆಯು ಆಕ್ಸಿಡೀಕರಣ, ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್‌ಗಳಿಂದಾಗಿ ಲಿಪಿಡ್ ಪ್ರೊಫೈಲ್ ವೇಗವಾಗಿ ಹೆಚ್ಚಾಗುತ್ತದೆ ಎಂದು ತಿಳಿಸುತ್ತದೆ
 

910

ತೆಂಗಿನ ಎಣ್ಣೆ ಮತ್ತು ಸಾಸಿವೆ ಎಣ್ಣೆಯು ಕಡಿಮೆ PUFA ವಿಷಯವನ್ನು ಹೊಂದಿವೆ. ಇದು ಆರೋಗ್ಯಕ್ಕೆ ಒಳ್ಳೆಯದು. ಏಕೆಂದರೆ ಬಹು ಅಪರ್ಯಾಪ್ತ ಕೊಬ್ಬುಗಳು ಹೆಚ್ಚಿನ ಶಾಖದಲ್ಲಿ ಸ್ಥಿರವಾಗಿರುವುದಿಲ್ಲ. ಬದಲಿಗೆ, MUFA ಮತ್ತು ಸ್ಯಾಚುರೇಟೆಡ್ ಕೊಬ್ಬುಗಳನ್ನು ಹೊಂದಿರುತ್ತವೆ ಎಂದು ಪೌಷ್ಟಿಕತಜ್ಞರು ತಿಳಿಸಿದ್ದಾರೆ.

Kitchen Hacks: ಮೊಳಕೆ ಬರದ ಹಾಗೆ ಆಲೂಗಡ್ಡೆಯನ್ನು ತಾಜಾವಾಗಿ ಹೀಗೆ ಶೇಖರಿಸಿಡಿ!

1010

ಅಮೆರಿಕ ಅಥವಾ ಪಾಶ್ಚಿಮಾತ್ಯ ದೇಶಗಳಲ್ಲಿ ಆಹಾರ ಪದಾರ್ಥವನ್ನು ಹುರಿಯುವ ಅಭ್ಯಾಸವಿಲ್ಲ. ಅಲ್ಲಿನ ಜನರು ಸಲಾಡ್, ಮಾಂಸ ಅಥವಾ ತರಕಾರಿಗಳಿಗೆ ಎಣ್ಣೆ ಸುರಿದು ಹಾಗೆಯೇ ತಿನ್ನಲು ಇಷ್ಟಪಡುತ್ತಾರೆ. ಅಮೆರಿಕ ಸೇರಿದಂತೆ ವಿದೇಶಗಳಲ್ಲಿ ಆಲಿವ್ ಎಣ್ಣೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ. 
 

ಅನ್ನದ ಬದಲು ಇವುಗಳನ್ನು ತಿನ್ನಿ, ತೂಕ ಇಳಿಸೋಕೆ ಬೆಸ್ಟ್‌!

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಭಾರತ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved