Ganesh Chaturthi 2024: ವಿಘ್ನ ವಿನಾಯಕನಿಗೆ ಇಷ್ಟವಾದ 5 ವಿಧದ ಮೋದಕ ಮಾಡುವ ವಿಧಾನ ಇಲ್ಲಿದೆ
ಗಣೇಶ ಚತುರ್ಥಿ ರುಚಿಕರವಾದ ಮೋದಕಗಳು: ಸೆಪ್ಟೆಂಬರ್ 7 ರಂದು ಗಣೇಶ ಚತುರ್ಥಿ ಹಬ್ಬ ಆರಂಭವಾಗುತ್ತಿದೆ. ಈ ದಿನ ಜನರು ಗಣಪತಿ ಮೂರ್ತಿ ಸ್ಥಾಪಿಸಿ ವಿವಿಧ ನೈವೇದ್ಯಗಳನ್ನು ಅರ್ಪಿಸುತ್ತಾರೆ. ವಿಘ್ನ ವಿನಾಯಕನಿಗೆ ಪ್ರಿಯವಾದ ಮೋದಕ ತಯಾರಿಸುವ ವಿಧಾನ
ಕೊಕೊನಟ್ ರೋಸ್ ಮೋದಕ
ಗುಲಾಬಿ ಬಣ್ಣದ ಮೋದಕಗಳನ್ನು ನೋಡಿ ಯಾರಿಗಾದರೂ ತಿನ್ನಬೇಕೆನಿಸುತ್ತದೆ. ನೀವು ಗಣೇಶ ಚತುರ್ಥಿ 2024 ರ ದಿನ ಬಪ್ಪನಿಗೆ ನೈವೇದ್ಯ ಮಾಡಲು ಮೋದಕದ ಹಿಟ್ಟಿನಲ್ಲಿ ರೋಸ್ ಸಿರಪ್ ಮತ್ತು ಸ್ವಲ್ಪ ಪ್ರಮಾಣದಲ್ಲಿ ಬೀಟ್ರೂಟ್ ರಸವನ್ನು ಬೆರೆಸಿ. ಇದರಿಂದ ಮೋದಕದ ಬಣ್ಣ ತಿಳಿ ಗುಲಾಬಿ ಆಗುತ್ತದೆ.
ಮಖಾನ ಮೋದಕ
ನೀವು ಮೋದಕದಲ್ಲಿ ಒಣ ಹಣ್ಣುಗಳ ರುಚಿಯನ್ನು ಬಯಸಿದರೆ ಮಖಾನ ಮೋದಕವನ್ನು ಮಾಡಿ. ಮಖಾನವನ್ನು ಲಘುವಾಗಿ ಹುರಿದ ನಂತರ ನಿಮ್ಮ ಇಷ್ಟದ ಒಣ ಹಣ್ಣುಗಳಾದ ಬಾದಾಮಿ, ಪಿಸ್ತಾಗಳನ್ನು ಸಹ ಪ್ರತ್ಯೇಕವಾಗಿ ಹುರಿಯಿರಿ. ನಂತರ ಮಖಾನವನ್ನು ಮಿಕ್ಸರ್‌ನಲ್ಲಿ ಪುಡಿ ಮಾಡಿ. ಈಗ ಪ್ಯಾನ್‌ನಲ್ಲಿ ಹಾಲನ್ನು ಬಿಸಿ ಮಾಡಿ ಪುಡಿಮಾಡಿದ ಮಖಾನವನ್ನು ಸೇರಿಸಿ ದಪ್ಪವಾಗುವವರೆಗೆ ಬೇಯಿಸಿ. ಜೊತೆಗೆ ಒಣ ಹಣ್ಣುಗಳು ಮತ್ತು ಸಕ್ಕರೆ ಸೇರಿಸಿ ಪೇಸ್ಟ್ ಮಾಡಿ. ಅಚ್ಚಿನ ಸಹಾಯದಿಂದ ಮೋದಕ ತಯಾರಿಸಿ.
ಪಾನ್ ಮೋದಕ
ಪಾನ್ ಮೋದಕ ಮಾಡಲು ನಿಮಗೆ ಪಾನ್ ಎಲೆಗಳು, ಕಂಡೆನ್ಸ್ಡ್ ಹಾಲು, ಒಣಗಿದ ತೆಂಗಿನಕಾಯಿ, ಹಾಲಿನ ಪುಡಿ ಬೇಕಾಗುತ್ತದೆ. ಇದರ ಮಧ್ಯದಲ್ಲಿ ನೀವು ಗುಲ್ಕಂದ್ ಮತ್ತು ಸೋಂಪಿನ ಸ್ಟಫಿಂಗ್ ಹಾಕಬಹುದು. ಈ ಬಾರಿ ಗಣೇಶ ಚತುರ್ಥಿಯಂದು ಸಾಂಪ್ರದಾಯಿಕ ಮೋದಕ ಮಾಡುವ ಬದಲು ಈ ವಿಭಿನ್ನ ಪಾಕವಿಧಾನವನ್ನು ಪ್ರಯತ್ನಿಸಬಹುದು.
ಬೆಲ್ಲ ತೆಂಗಿನಕಾಯಿ ಮೋದಕ
ಬೆಲ್ಲ ಮತ್ತು ತೆಂಗಿನಕಾಯಿಯ ಮೋದಕವನ್ನು ಅಕ್ಕಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ತುಂಬಲು ಬೆಲ್ಲದೊಂದಿಗೆ ತುರಿದ ತೆಂಗಿನಕಾಯಿ ಮತ್ತು ಗಸಗಸೆ ಬೀಜಗಳನ್ನು ಸಹ ಸೇರಿಸಿ. ಮೋದಕವನ್ನು ಸ್ಟೀಮರ್‌ನಲ್ಲಿ ಬೇಯಿಸುವಾಗ ಬಾಳೆ ಎಲೆಯಲ್ಲಿ ಮುದ್ದೆ ಮಾಡಿ. ಹೀಗೆ ಮಾಡುವುದರಿಂದ ಮೋದಕಕ್ಕೆ ಅದ್ಭುತ ರುಚಿ ಬರುತ್ತದೆ. ಮಾರ್ಕೆಟ್‌ನಲ್ಲಿ ನೀವು ಸುಲಭವಾಗಿ ಮೋದಕ ತಯಾರಿಸುವ ಅಚ್ಚುಗಳನ್ನು ಕಾಣಬಹುದು.
Ganehsa Chaturthi 2022: ಗಣೇಶ ಹಬ್ಬಕ್ಕೆ ಡಯೆಟ್ ಫ್ರೆಂಡ್ಲೀ ಮೋದಕ ತಿನ್ನಿ
ಚಾಕೊಲೇಟ್ ಮೋದಕ
ಬಪ್ಪನೊಂದಿಗೆ ಮನೆಯಲ್ಲಿ ಮಕ್ಕಳನ್ನು ಸಂತೋಷಪಡಿಸಲು ನೀವು ಚಾಕೊಲೇಟ್ ಮೋದಕವನ್ನು ಸಹ ಪ್ರಯತ್ನಿಸಬಹುದು. ಇದಕ್ಕಾಗಿ ನೀವು ಅಕ್ಕಿ ಹಿಟ್ಟಿನಲ್ಲಿ ಚಾಕೊಲೇಟ್ ಪುಡಿಯನ್ನು ಬೆರೆಸಬೇಕು. ಈ ರೀತಿಯ ಮೋದಕಗಳು ತಿನ್ನಲು ರುಚಿಕರವಾಗಿರುತ್ತವೆ ಮತ್ತು ಮಕ್ಕಳು - ದೊಡ್ಡವರು ಇಷ್ಟಪಟ್ಟು ತಿನ್ನುತ್ತಾರೆ.
ಗಣೇಶನನ್ನು ಹೀಗೆ ಸಂತೋಷಪಡಿಸಿದ್ರೆ, ಜೀವನದ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತೀರಿ!