ಆರೋಗ್ಯಕ್ಕಾಗಿ ತಿನ್ನಲೇಬೇಕಾದ ನುಗ್ಗೆ ಸೊಪ್ಪು ಕ್ಲೀನ್ ಮಾಡಲು ಬೆಸ್ಟ್ ಟಿಪ್ಸ್
ನುಗ್ಗೆ ಸೊಪ್ಪು ಒಂದು ಸೂಪರ್‌ಫುಡ್. ಜೀವಸತ್ವ, ಖನಿಜಗಳು ಮತ್ತು ರೋಗ ನಿರೋಧಕ ಶಕ್ತಿಯಿಂದ ಸಮೃದ್ಧವಾಗಿರೋ ಸೊಪ್ಪಿದು. ಈ ಸೊಪ್ಪನ್ನು ಸುಲಭವಾಗಿ ಬಿಡಿಸಲೊಂದು ಸರಳ ವಿಧಾನವಿದೆ. ಹೇಗೆ?
ಒಟ್ಟಾರೆ ಆರೋಗ್ಯವನ್ನು ಹಲವು ವಿಧಗಳಲ್ಲಿ ಸುಧಾರಿಸಲು ನಗ್ಗು ಸೊಪ್ಪು ಸಹಾಯ ಮಾಡುತ್ತದೆ. ಈ ಸೊಪ್ಪಿನಲ್ಲಿ ಗಣನೀಯ ಪ್ರಮಾಣದ ವಿಟಮಿನ್ ಸಿ, ವಿಟಮಿನ್ ಎ, ಪೊಟ್ಯಾಷಿಯಮ್, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶಗಳಿವೆ. ಈ ಸೊಪ್ಪಿನಲ್ಲಿ ಪ್ರೊಟೀನ್ ಸಹ ಹೇರಳವಾಗಿದೆ. ಸಸ್ಯಾಹಾರಿಗಳಿಗೆ ನುಗ್ಗೆ ಸೊಪ್ಪು ಒಳ್ಳೆ ಆಯ್ಕೆ. ದೇಹದ ಹಾನಿಕಾರಕ ಅಂಶಗಳನ್ನು ತೆಗೆದು ಹಾಕುವ ಹಾಗೂ ತಟಸ್ಥಗೊಳಿಸುವಲ್ಲಿ ಈ ನುಗ್ಗೆ ಸೊಪ್ಪಿನಲ್ಲಿರುವ ರೋಗ ನಿರೋಧಕಗಳು ಪ್ರಮುಖ ಪಾತ್ರವಹಿಸುತ್ತವೆ.
ನುಗ್ಗೆ ಸೊಪ್ಪಲ್ಲಿ ಕ್ವೆರ್ಸೆಟಿನ್, ಕ್ಲೋರೊಜೆನಿಕ್ ಆಮ್ಲ ಮತ್ತು ಬೀಟಾ ಕ್ಯಾರೋಟಿನ್ ನಂತಹ ರೋಗ ನಿರೋಧಕಗಳಿವೆ. (Antioxidants) ಇದು ಆಕ್ಸಿಡೇಟಿವ್ ಒತ್ತಡವನ್ನು ನಿವಾರಿಸಲು ಹಾಗೂ ಉರಿಯೂತವನ್ನು ಕಡಿಮೆ ಮಾಡಬಲ್ಲದು. ಒಟ್ಟಾರೆ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಿದು ಅತ್ಯಗತ್ಯ. ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡುವಲ್ಲಿಯೂ ನುಗ್ಗೆ ಸೊಪ್ಪು ಪ್ರಮುಖ ಪಾತ್ರ ವಹಿಸುತ್ತದೆ. ಮಧುಮೇಹಿಗಳಿಗಂತೂ ಬೆಸ್ಟ್. ನುಗ್ಗೆ ಸೊಪ್ಪುಗಳಲ್ಲಿ ಕ್ಲೋರೊಜೆನಿಕ್ ಆಮ್ಲದಂತಹ ಸಂಯುಕ್ತಗಳ ಉಪಸ್ಥಿತಿ ಸುಧಾರಿತ ಇನ್ಸುಲಿನ್ ಸಂವೇದನೆ ಮತ್ತು ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ.
ನುಗ್ಗೆ ಸೊಪ್ಪು ಕೊಲೆಸ್ಟ್ರಾಲ್ ಮಟ್ಟವನ್ನೂ ನಿಯಂತ್ರಿಸುತ್ತದೆ. ವಿಶೇಷವಾಗಿ 'ಕೆಟ್ಟ' ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡುತ್ತದೆ. ನುಗ್ಗೆ ಸೊಪ್ಪಿನಲ್ಲಿರುವ ಜೈವಿಕವಾಗಿ ಸಕ್ರಿಯ ಸಂಯುಕ್ತಗಳ ಉಪಸ್ಥಿತಿ ಕೊಬ್ಬಿನ ಚಯಾಪಚಯವನ್ನು ನಿಯಂತ್ರಿಸುತ್ತದೆ, ಆರೋಗ್ಯಕರ ಹೃದಯಕ್ಕೆ ಕೊಡುಗೆ ನೀಡುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ರೋಗನಿರೋಧಕ ವ್ಯವಸ್ಥೆಯು ರೋಗಗಳ ವಿರುದ್ಧ ಹೋರಾಡುವುದರಲ್ಲಿ ಮತ್ತು ಸೂಕ್ತ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನುಗ್ಗೆ ಸೊಪ್ಪಿನಲ್ಲಿ ಹೇರಳವಾಗಿರುವ ವಿಟಮಿನ್ ಸಿ ಸೇರಿ ಮತ್ತು ರೋಗನಿರೋಧಕ-ಹೆಚ್ಚಿಸುವ ಗುಣಲಕ್ಷಣಗಳು, ಬಲವಾದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಯಮಿತ ಸೇವನೆಯು ಸೋಂಕು ಮತ್ತು ಕಾಯಿಲೆ ವಿರುದ್ಧ ದೇಹವನ್ನು ಉತ್ತಮವಾಗಿ ರಕ್ಷಿಸುತ್ತದೆ.
ನುಗ್ಗೆ ಸೊಪ್ಪಲ್ಲಿ ಉರಿಯೂತ ನಿವಾರಿಸುವ ಗುಣಲಕ್ಷಣಗಳಿವೆ. ಇದರ ನಿಯಮಿತ ಸೇವನೆ ಉರಿಯೂತವನ್ನು ಖಂಡಿತಾ ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯಕ್ಕೆ ಅತ್ಯಗತ್ಯವಾಗಿರುವ ನೈಸರ್ಗಿಕ ಮತ್ತು ಪೌಷ್ಟಿಕಾಂಶಗಳನ್ನು ನೀಡಬಲ್ಲದು. ಇಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿರುವ ನುಗ್ಗೆ ಸೊಪ್ಪನ್ನು ನಿಯಮಿತವಾಗಿ ಆಹಾರದಲ್ಲಿ ಸೇವಿಸಿಕೊಳ್ಳಬೇಕು.
ಆದರೆ ನುಗ್ಗೆ ಸೊಪ್ಪನ್ನು ತೆಗೆದು ಅದನ್ನು ಬೇಯಿಸುವುದು ಕಷ್ಟ. ಕ್ಲೀನ್ ಮಾಡೋದು ಕಷ್ಟ ಎನ್ನುವ ಕಾರಣಕ್ಕೇ ಜನರು ಇದನ್ನು ಬಳಸಲು ಹಿಂದೇಟು ಹಾಕುತ್ತಾರೆ. ಈ ನುಗ್ಗೆ ಸೊಪ್ಪು ಬಿಡಿಸಲು ಒಂದು ಸುಲಭ ಸಲಹೆ ಇದೆ. ಅದಕ್ಕಾಗಿ ಮೊದಲು ಒಂದು ಪ್ಲಾಸ್ಟಿಕ್ ಅಕ್ಕಿ ಚೀಲವನ್ನು ತೆಗೆದುಕೊಳ್ಳಿ. ಅದರಲ್ಲಿ ಒಂದು ಕಟ್ಟು ನುಗ್ಗೆ ಸೊಪ್ಪನ್ನು ಹಾಕಿ ಬಿಗಿಯಾಗಿ ಕಟ್ಟಿ, ಆ ಚೀಲದ ಮೇಲೆ 2 ಭಾರವಾದ ದೋಸೆ ಕಲ್ಲಿರಿಸಿ.
ತೂಕದ ದೋಸೆ ಕಲ್ಲುಗಳಾಗಿದ್ದರೆ ಒಳ್ಳೆಯದು. 2 ರಿಂದ 3 ಗಂಟೆಗಳ ಕಾಲ ಆ ದೋಸೆ ಕಲ್ಲುಗಳು ಹಾಗೆಯೇ ಇರಬೇಕು. ಇದಾದ ನಂತರ ನುಗ್ಗೆ ಸೊಪ್ಪಿನ ಕಟ್ಟನ್ನು ಅಕ್ಕಿ ಚೀಲದಲ್ಲೇ ಅಲ್ಲಾಡಿಸಿದರೆ, ಅದರಲ್ಲಿ ಅರ್ಧದಷ್ಟು ಸೊಪ್ಪುಗಳು ಉದುರಿಹೋಗುತ್ತವೆ. ಹೀಗೆಯೇ ಮತ್ತೆ ಅಲ್ಲಾಡಿಸಿದರೆ, ಎಲ್ಲಾ ಸೊಪ್ಪುಗಳು ಆ ಚೀಲದೊಳಗೆ ಉದುರಿಹೋಗುತ್ತವೆ. ಈ ಮೂಲಕ ಯಾವುದೇ ತೊಂದರೆಯಿಲ್ಲದೆ ಸುಲಭವಾಗಿ ನುಗ್ಗೆ ಸೊಪ್ಪನ್ನು ಬಿಡಿಸಬಹುದು.