Cardiovascular Diseaseಗೆ ಕಾರಣವಾಗುತ್ತೆ ವಿಪರೀತ ಉಪ್ಪು, ಸಕ್ಕರೆ ಸೇವನೆ
ನಾವು ಸಾಮಾನ್ಯವಾಗಿ ಹಸಿವಾದಾಗ, ಅಥವಾ ಬೋರ್ ಅನಿಸಿದಾಗ ಏನೆನೋ ಆಹಾರ ಸೇವಿಸುತ್ತೇವೆ. ಇದರಿಂದ ಆರೋಗ್ಯಕ್ಕೆ ಹೆಚ್ಚು ಹಾನಿಯುಂಟಾಗುತ್ತೆ. ಅಧ್ಯಯನಗಳಲ್ಲಿ ತಿಳಿಸಿದಂತೆ, ಹೆಚ್ಚಿನ ಉಪ್ಪು, ಸಕ್ಕರೆ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಆಹಾರದ ಸೇವನೆಯು ಹೃದಯ ರಕ್ತನಾಳದ ಕಾಯಿಲೆಯ ಅಪಾಯವನ್ನುಂಟು ಮಾಡುತ್ತೆ. ನೀವು ಪ್ರತಿದಿನ ಸೇವಿಸುವ ಆಹಾರ ಪದ್ಧತಿಗಳು ನಿಮಗೆ ಹಾನಿ ಉಂಟುಮಾಡಬಹುದು. ಅವುಗಳ ಬಗ್ಗೆ ತಿಳಿಯಿರಿ.
ತಮಗೆ ಬೇಕೆನಿಸಿದ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಆಹಾರ ಸೇವನೆ ಇತ್ತೀಚಿಗೆ ಟ್ರೆಂಡ್ ಆಗಿದೆ. ಅಧ್ಯಯನಗಳಲ್ಲಿ, ಹೆಚ್ಚಿನ ಉಪ್ಪು (Salt), ಸಕ್ಕರೆ (Sugar) ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಆಹಾರ ಸೇವಿಸುವುದು ಹೃದಯ ರಕ್ತನಾಳದ ಕಾಯಿಲೆಗೆ (Cardiovascular Disease) ಸಂಬಂಧಿಸಿದೆ. ನೀವು ದಿನನಿತ್ಯ ಸೇವಿಸುವ ಆಹಾರಗಳು ನಿಮಗೆ ಹೇಗೆ ತೊಂದರೆಯನ್ನುಂಟು ಮಾಡುತ್ತಿವೆ ಅನ್ನೋದನ್ನು ನಾವಿಲ್ಲಿ ಹೇಳುತ್ತೇವೆ. ಆ ಬಗ್ಗೆ ತಿಳಿಯಿರಿ…
ಬಿಳಿ ಬ್ರೆಡ್ (White bread)
ಬಿಳಿ ಬ್ರೆಡ್ ಸೇವನೆಯು ಬೊಜ್ಜು, ಹೃದ್ರೋಗ ಮತ್ತು ಮಧುಮೇಹಕ್ಕೆ ಸಂಬಂಧಿಸಿದೆ. ಇದರಲ್ಲಿ ಪಿಷ್ಟ ಹೆಚ್ಚಾಗಿರುತ್ತೆ, ಇದು ಹೊಟ್ಟೆ ಉಬ್ಬರ, ಮಲಬದ್ಧತೆ ಮತ್ತು ಹೊಟ್ಟೆಯಲ್ಲಿ ಆಸಿಡ್ ರಿಫ್ಲಕ್ಸ್ ಅನ್ನು ಪ್ರಚೋದಿಸುತ್ತದೆ. ಸಂಶೋಧನೆ ಪ್ರಕಾರ, ಬಿಳಿ ಬ್ರೆಡ್ ವೇಗವಾಗಿ ಹೀರಿಕೊಳ್ಳುತ್ತದೆ ಮತ್ತು ಜೀರ್ಣವಾಗುತ್ತದೆ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ವೇಗವಾಗಿ ಹೆಚ್ಚಾಗುತ್ತದೆ. ಹಾಗಾಗಿ ವೈಟ್ ಬ್ರೆಡ್ ಸೇವನೆ ಸಾಧ್ಯವಾದಷ್ಟು ಅವಾಯ್ಡ್ ಮಾಡಿ.
ಕೆಚಪ್ (Ketchup)
ಸಮೋಸಾ, ಫ್ರೆಂಚ್ ಫ್ರೈಸ್, ಮತ್ತು ಸೈಡ್ ಡಿಪ್ ಆಗಿ, ಕೆಚಪ್ ಅಥವಾ ಟೊಮೆಟೊ ಸಾಸ್ ಬೆಸ್ಟ್ ಕಾಂಬಿನೇಶನ್ ಆಗಿರುತ್ತೆ. ಇದನ್ನು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಇದರ ಉಪ್ಪು, ಹುಳಿ, ಸಿಹಿ ರುಚಿ ಮತ್ತೆ ಮತ್ತೆ ತಿನ್ನುವಂತೆ ಪ್ರೇರೇಪಿಸುತ್ತೆ. ಇದರಲ್ಲಿ ಹೆಚ್ಚಿನ ಉಪ್ಪಿನ ಅಂಶ ಇರೋದ್ರಿಂದ ಇದು ಬಿಪಿ ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆ ಇದೆ.
ಚೈನೀಸ್ ಫುಡ್ (Chinese food)
ಚೈನೀಸ್ ಫುಡ್ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ದಿನವಿಡೀ ಕೆಲಸ ಮಾಡಿ, ನಮ್ಮದೇ ಅನ್ನ, ಸಾರು ಊಟ ಮಾಡುವ ಬದಲಾಗಿ ಚೈನೀಸ್ ಫುಡ್ ಸೇವಿಸಿದ್ರೆ ವಾವ್ ಎಂದೆನಿಸುತ್ತೆ. ಕರಿದ ಅನ್ನದೊಂದಿಗೆ ಡಂಪ್ಲಿಂಗ್ಸ್ ಮತ್ತು ಮಂಚೂರಿಯನ್ ಬಾಲ್ ಗಳು ರುಚಿಕರವಾಗಿರುತ್ತೆ, ಆದರೆ ಇದರಲ್ಲಿ ಉಪ್ಪು, ಕೊಬ್ಬು ಮತ್ತು ಸಕ್ಕರೆ ಅಂಶ ಹೆಚ್ಚಾಗಿರುತ್ತೆ, ಇದು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಸಹ ಹೆಚ್ಚಿಸುತ್ತದೆ.
ದವಸ ಧಾನ್ಯಗಳು(Cereals)
ನೀವು ರೆಗ್ಯುಲರ್ ಅಗಿ ಮುಂಜಾನೆ ಸೇವಿಸುವಂತಹ ಶುಗರೀ ಸಿರಿಯಲ್ ಡಯಟ್ ಆಹಾರ ನಿಮಗೆ ನಾರ್ಮನ್ ಅನಿಸಬಹುದು. ಆದರೆ ಇದು ನಿಮ್ಮ ಆರೋಗ್ಯಕ್ಕೆ ಮಾರಕವಾಗಬಹುದು. ಮುಂಜಾನೆ ಖಾಲಿ ಹೊಟ್ಟೆಗೆ ಸಿರಿಯಲ್ ಸೇವನೆಯಿಂದ ಉರಿಯೂತ ಉಂಟಾಗಬಹುದು.
ಹೊರಗಿನ ಜ್ಯೂಸ್ (Juice)
ಬೇಸಿಗೆಯಲ್ಲಿ ತಾಜಾ ಜ್ಯೂಸ್ ಕುಡಿಯಲು ಬಯಸುತ್ತೀರಿ, ಮನೆಯಲ್ಲಿ ಮಾಡಿದ ಜ್ಯೂಸ್ ನಲ್ಲಿ ಸಕ್ಕರೆ ಹೆಚ್ಚಾಗಿ ಸೇರಿಸದೇ ಕುಡಿಯುತ್ತೀರಿ. ಆದರೆ ಹೊರಗಡೆ ಜ್ಯೂಸ್ ಕುಡಿಯುವಾಗ ಅದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಸೇರಿಸಲಾಗುತ್ತೆ. ಇದರಿಂದಾಗಿ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತೆ.
ಆಲೂಗಡ್ಡೆ ಚಿಪ್ಸ್ (Potato chips)
ಆಲೂಗಡ್ಡೆ ಚಿಪ್ಸ್ ನಿಮ್ಮ ಬಾಯಿಗೆ ರುಚಿ ನೀಡುತ್ತೆ ಹೌದು. ಆದರೆ ಇದರಲ್ಲಿ ಕ್ಯಾಲೋರಿ, ಉಪ್ಪು ಮತ್ತು ಕೊಬ್ಬು ಎಲ್ಲವೂ ಹೆಚ್ಚಾಗಿರೋದ್ರಿಂದ ಇದರಿಂದ ಹೃದಯಕ್ಕೆ ಹಾನಿಯುಂಟು ಮಾಡುವ ಸಾಧ್ಯತೆ ಇದೆ. ಆದುದರಿಂದ ಚಿಪ್ಸ್ ಹೆಚ್ಚಾಗಿ ತಿನ್ನದೇ ಇರೋದಕ್ಕೆ ಟ್ರೈ ಮಾಡಿ.
ಈ ಮೇಲೆ ತಿಳಿಸಿದ ಎಲ್ಲಾ ಆಹಾರಗಳು ಸಹ ನೀವು ಆರೋಗ್ಯಕರ ಎಂದು ಅಂದುಕೊಳ್ಳಬೇಡಿ. ಇದನ್ನು ನಿಯಮಿತವಾಗಿ ಸೇವಿಸಿದರೆ ಹೃದಯಾಘಾತ(Heart attack) ಅಥವಾ ಪಾರ್ಶ್ವವಾಯುವಿಗೆ ಕಾರಣವಾಗುವ ಎಲ್ಲಾ ಸಾಧ್ಯತೆ ಇದೆ. ಆದುದರಿಂದ ಈ ಆಹಾರಗಳ ಸೇವನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.