MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ಚಂದ್ರಮುಖಿ ಚಿಕನ್ ಫ್ರೈ: ಖಾರ ಖಾರವಾದ ಟೇಸ್ಟಿ ಆಂಧ್ರ-ತಮಿಳುನಾಡು ಶೈಲಿಯ ಸೂಪರ್ ರೆಸಿಪಿ

ಚಂದ್ರಮುಖಿ ಚಿಕನ್ ಫ್ರೈ: ಖಾರ ಖಾರವಾದ ಟೇಸ್ಟಿ ಆಂಧ್ರ-ತಮಿಳುನಾಡು ಶೈಲಿಯ ಸೂಪರ್ ರೆಸಿಪಿ

ಖಾರವಾದ ಬಾಡೂಟ ಇಷ್ಟಪಡುವವರಿಗಾಗಿ ಆಂಧ್ರ-ತಮಿಳುನಾಡು ಶೈಲಿಯ ಚಂದ್ರಮುಖಿ ಚಿಕನ್ ಫ್ರೈ ಮಾಡುವ ವಿಧಾನ ಇಲ್ಲಿದೆ. ವಿಶೇಷ ಮಸಾಲೆಗಳನ್ನು ಬಳಸಿ ತಯಾರಿಸುವ ಈ ಖಾದ್ಯವು ವಿಭಿನ್ನ ರುಚಿಯನ್ನು ನೀಡುತ್ತದೆ ಮತ್ತು ಇದನ್ನು ಚಪಾತಿ, ರೊಟ್ಟಿ ಅಥವಾ ದೋಸೆಯೊಂದಿಗೆ ಸವಿಯಬಹುದು.

2 Min read
Author : Mahmad Rafik
Published : Jun 09 2026, 10:16 AM IST
Share this Photo Gallery
  • FB
  • TW
  • Linkdin
  • Whatsapp
18
ಆಂಧ್ರ ತಮಿಳುನಾಡು ಶೈಲಿಯ ಚಂದ್ರಮುಖಿ ಚಿಕನ್ ಫ್ರೈ
Image Credit : vismaifood/youtube

ಆಂಧ್ರ-ತಮಿಳುನಾಡು ಶೈಲಿಯ ಚಂದ್ರಮುಖಿ ಚಿಕನ್ ಫ್ರೈ

ಕೆಲವರಿಗೆ ಬಾಡೂಟ ಅಂದ್ರೆ ಖಾರ ಖಾರವಾಗಿರಬೇಕು ಮತ್ತು ನೋಡಿದ್ರೆ ಬಾಯಲ್ಲಿ ನೀರೂರಿಸುವಂತಿರಬೇಕಾಗುತ್ತದೆ. ಒಂದೇ ರೀತಿಯ ಚಿಕನ್ ಅಡುಗೆ ತಿಂದು ಬೇಸರವಾಗಿದ್ರೆ ಇಂದು ಆಂಧ್ರ-ತಮಿಳುನಾಡು ಶೈಲಿಯ ಚಂದ್ರಮುಖಿ ಚಿಕನ್ ಫ್ರೈ ಟ್ರೈ ಮಾಡಿ. ಖಂಡಿತ ಈ ಶೈಲಿಯ ಚಿಕನ್ ಅಡುಗೆ ನಿಮಗೆ ಇಷ್ಟವಾಗುತ್ತೆ ಮತ್ತು ಒಮ್ಮೆ ರುಚಿ ನೋಡಿದ್ಮೇಲೆ ನೀವೇ ಪದೇ ಪದೇ ಮಾಡಿಕೊಳ್ಳಲು ಆರಂಭಿಸುತ್ತೀರಿ. ಈ ಚಿಕನ್ ಫ್ರೈನಲ್ಲಿರುವ ವಿಶೇಷವಾದ ರುಚಿ ನಿಮ್ಮನ್ನು ಹೊಸ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ಚಂದ್ರಮುಖಿ ಚಿಕನ್ ಫ್ರೈ ಮಾಡಲು ಬೇಕಾಗುವ ಸಾಮಾಗ್ರಿಗಳು
Image Credit : vismaifood/youtube

ಚಂದ್ರಮುಖಿ ಚಿಕನ್ ಫ್ರೈ ಮಾಡಲು ಬೇಕಾಗುವ ಸಾಮಾಗ್ರಿಗಳು

750 ಗ್ರಾಂ ಚಿಕನ್, ಒಂದೂವರೆ ಕಪ್ ನೀರು, ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, 2-3 ಟೀ ಸ್ಪೂನ್ ಎಣ್ಣೆ, 3 ಲವಂಗ, ಅರ್ಧ ತುಂಡು ಅನಾನಸ್ ಹೂವು, ಎರಡು ಏಲಕ್ಕಿ, ಒಂದೂವರೆ ಇಂಚು ದಾಲ್ಚಿನ್ನಿ, ಒಂದು ಚಮಚ ಮೆಣಸು, ಒಂದು ಚಮಚ ಜೀರಿಗೆ, ಮೂರು ಒಣ ಮೆಣಸಿನಕಾಯಿ, ಎರಡು ಚಮಚ ಕೊತ್ತಂಬರಿ, ಸ್ವಲ್ಪ ಸೋಂಪು, ಒಂದು ಈರುಳ್ಳಿ, 2-3 ಹಸಿಮೆಣಸಿನಕಾಯಿ, ಒಂದು ಹಿಡಿಯಷ್ಟು ಗೋಡಂಬಿ, ಸ್ವಲ್ಪ ಕರಿಬೇವು, ಒಂದೂವರೆ ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಒಂದು ಟೀ ಸ್ಪೂನ್ ಕಸೂರಿ ಮೇಥಿ, 2 ಟೀ ಸ್ಪೂನ್ ಅಚ್ಚ ಖಾರದ ಪುಡಿ, 2 ಟೀ ಸ್ಪೂನ್ ಒಣ ತೆಂಗಿನಕಾಯಿ ಪುಡಿ, ಸ್ವಲ್ಪ ಕೊತ್ತಂಬರಿ, ನಿಂಬೆ ರಸ ಮತ್ತು ಚೆಟ್ಟಿನಾಡು ಮಸಾಲ

Related Articles

Related image1
ಈ ಸಣ್ಣ ಟಿಪ್ಸ್ ಪಾಲಿಸಿದ್ರೆ ಕುಕ್ಕರ್‌ನಲ್ಲಿ ಮಾಡಿದ್ದಕ್ಕಿಂತಲೂ ರುಚಿಯಾಗಿರುತ್ತೆ ಚಿಕನ್.. ವಾಸನೆ ಬರಲ್ಲ, ಸಾಫ್ಟ್ ಆಗಿರುತ್ತೆ
Related image2
Chicken 65: ಈ ಬುಹಾರಿ ಹೋಟೆಲ್‌ ಖಾದ್ಯಕ್ಕೆ 'ಚಿಕನ್ 65' ಹೆಸರು ಹೇಗೆ ಬಂತು? ಇದರ ಹಿಂದಿದೆ ಭಾರೀ ರಹಸ್ಯ!
38
ಚಿಕನ್ ಬೇಯಿಸಿಕೊಳ್ಳುವುದು
Image Credit : vismaifood/youtube

ಚಿಕನ್ ಬೇಯಿಸಿಕೊಳ್ಳುವುದು

ಒಂದು ಪಾತ್ರೆಯಲ್ಲಿ ಚಿಕನ್ ತೆಗೆದುಕೊಂಡು ಅರ್ಧ ಕಪ್‌ನಷ್ಟು ನೀರು ಹಾಕಿಕೊಳ್ಳಿ. ಇದಕ್ಕೆ ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿಕೊಂಡು ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ. ಚಿಕನ್ ಶೇ.80ರಷ್ಟು ಬೆಂದಾಗ ಒಲೆ ಆಫ್ ಮಾಡಿ, ಹೆಚ್ಚುವರಿ ನೀರನ್ನು ಬೇರ್ಪಡಿಸಿಕೊಂಡು ಎತ್ತಿಟ್ಟುಕೊಳ್ಳಿ. ಶೇ.80ರಷ್ಟು ಚಿಕನ್ ಬೇಯಲು ಗರಿಷ್ಠ 5 ನಿಮಿಷ ಸಾಕು.

48
ಮಸಾಲಾ ಪೇಸ್ಟ್ ತಯಾರಿಸುವ ವಿಧಾನ
Image Credit : vismaifood/youtube

ಮಸಾಲಾ ಪೇಸ್ಟ್ ತಯಾರಿಸುವ ವಿಧಾನ

ಮಸಾಲೆ ಪೇಸ್ಟ್ ಮಾಡಿಕೊಳ್ಳಲು ಒಲೆ ಆನ್ ಮಾಡ್ಕೊಂಡು ಬಾಣಲೆ ಇಟ್ಕೊಳ್ಳಿ. ಈಗ ಇದಕ್ಕೆ ಲವಂಗ, ಅನಾನಸ್ ಹೂವು, ಏಲಕ್ಕಿ, ದಾಲ್ಚಿನ್ನಿ, ಮೆಣಸು ಸೇರಿಸಿಕೊಳ್ಳಿ. ಈ ಎಲ್ಲಾ ಮಸಾಲೆ ಪದಾರ್ಥಕ್ಕೆ 2 ಟೀ ಸ್ಪೂನ್‌ನಷ್ಟು ಎಣ್ಣೆ ಸೇರಿಸಿ ಪರಿಮಳ ಬರೋವರೆಗೂ ಹುರಿದುಕೊಳ್ಳಿ. ಪರಿಮಳ ಬಂದ ನಂತರ ಇದೇ ಬಾಣಲೆಗೆ ಒಣಮೆಣಸಿಕಾಯಿ, ಜೀರಿಗೆ, ಧನಿಯಾ, ಸೋಂಪು ಸೇರಿಸಿಕೊಂಡು ಸ್ವಲ್ಪ ಹುರಿದುಕೊಂಡು ಬೇರೊಂದು ಪಾತ್ರೆಗೆ ಹಾಕಿಕೊಳ್ಳಿ.

58
 ಈರುಳ್ಳಿ, ಹಸಿಮೆಣಸಿನಕಾಯಿ
Image Credit : vismaifood/ youtube

ಈರುಳ್ಳಿ, ಹಸಿಮೆಣಸಿನಕಾಯಿ

ನಂತರ ಇದೇ ಬಾಣಲೆಗೆ ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿಯನ್ನು ಫ್ರೈ ಮಾಡಿಕೊಳ್ಳಬೇಕು. ಕೊನೆಗೆ ಎಲ್ಲಾ ಮಸಾಲೆ ಪದಾರ್ಥ ಮತ್ತು ಈರುಳ್ಳಿ-ಹಸಿಮೆಣಸಿನಕಾಯಿ ತಣ್ಣಗಾದ ಮೇಲೆ ಜಾರ್‌ನಲ್ಲಿ ಹಾಕಿಕೊಂಡು ಸಣ್ಣದಾಗಿ ರುಬ್ಬಿಕೊಳ್ಳಿ.

68
ಗೋಡಂಬಿ, ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕ
Image Credit : vismaifood/youtube

ಗೋಡಂಬಿ, ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕ

ತದನಂತರ ಒಲೆ ಮೇಲೆ ಮತ್ತೊಂದು ಪ್ಯಾನ್ ಇಟ್ಕೊಂಡು ಎಣ್ಣೆ ಹಾಕಿಕೊಳ್ಳಿ. ಇದಕ್ಕೆ ಏಲಕ್ಕಿ, ಲವಂಗ, ದಾಲ್ಚಿನ್ನಿ ಸೇರಿಸಿ ಹುರಿಯಿರಿ. ತದನಂತರ ಗೋಡಂಬಿ, ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕರೀಬೇವು ಸೇರಿಸಿಕೊಂಡು ಎರಡರಿಂದ ಮೂರು ನಿಮಿಷ ಬೇಯಿಸಿಕೊಳ್ಳಬೇಕು. 

78
ರುಬ್ಬಿಕೊಂಡಿರುವ ಮಸಾಲೆ
Image Credit : vismaifood/youtube

ರುಬ್ಬಿಕೊಂಡಿರುವ ಮಸಾಲೆ

ಈಗ ಇದಕ್ಕೆ ರುಬ್ಬಿಕೊಂಡಿರುವ ಮಸಾಲೆ ಹಾಕಿ ತಳಕ್ಕೆ ಅಂಟಿಕೊಳ್ಳದಂತೆ ಎರಡು ನಿಮಿಷ ಬೇಯಿಸಿಕೊಳ್ಳಬೇಕು. ಕೊನೆಗೆ ಇದಕ್ಕೆ ಬೇಯಿಸಿಕೊಂಡಿರುವ ಚಿಕನ್ ಸೇರಿಸಿ ಚೆನ್ನಾಗಿ ಮಸಾಲೆಯಲ್ಲಿ ಮಿಕ್ಸ್ ಮಾಡಿಕೊಳ್ಳಿ.

88
 ಚಪಾತಿ, ರೊಟ್ಟಿ, ದೋಸೆಕ್ಕೆ ಇದು ಒಳ್ಳೆಯ ಕಾಂಬಿನೇಷನ್
Image Credit : vismaifood/youtube

ಚಪಾತಿ, ರೊಟ್ಟಿ, ದೋಸೆಕ್ಕೆ ಇದು ಒಳ್ಳೆಯ ಕಾಂಬಿನೇಷನ್

ಅಂತಿಮವಾಗಿ ಕಸೂರಿ ಮೇಥಿ, ಅಚ್ಚ ಖಾರದ ಪುಡಿ, ಒಣತೆಂಗಿನಕಾಯಿ ಪುಡಿ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಎರಡು ನಿಮಿಷ ಬೇಯಿಸಿಕೊಂಡ್ರೆ ಚಿಕನ್ ರೆಡಿಯಾಗುತ್ತದೆ. ಅಂತಿಮವಾಗಿ ಒಲೆ ಆಫ್ ಮಾಡಿ ಕೋತಂಬರಿ ಸೊಪ್ಪು, ನಿಂಬೆರಸ ಮತ್ತು ಚೆಟ್ಟಿನಾಡ್ ಮಸಾಲೆ ಸೇರಿಸಿದ್ರೆ ರುಚಿಯಾದ ಚಂದ್ರಮುಖಿ ಚಿಕನ್ ಫ್ರೈ ಸವಿಯಲು ಸಿದ್ಧವಾಗುತ್ತದೆ. ಚಪಾತಿ, ರೊಟ್ಟಿ, ದೋಸೆಕ್ಕೆ ಇದು ಒಳ್ಳೆಯ ಕಾಂಬಿನೇಷನ್ ಆಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಚಿಕನ್
ರೆಸಿಪಿ
ಆಹಾರ
Latest Videos
Recommended Stories
Recommended image1
ಆಹಾರದಲ್ಲಿ ಸಿಕ್ಕಿತು ಕೀಟ, ಗ್ರಾಹಕನಿಗೆ 5 ಭಾನುವಾರ 10 ಬಿರಿಯಾನಿ ಉಚಿತವಾಗಿ ನೀಡಲು ಕೋರ್ಟ್ ಆದೇಶ
Recommended image2
Zomato ಅಪ್ಲಿಕೇಶನ್‌ಗೆ ಟೋಪಿ ಹಾಕಿದ ಗ್ರಾಹಕರು, ರೆಸ್ಟೋರೆಂಟ್‌: ಕಮಿಷನ್, ಪ್ಲಾಟ್‌ಫಾರ್ಮ್ ಫೀಸ್‌ನಿಂದ ಬಚಾವ್‌ ಆಗಲು ಸಿಕ್ತು ಟ್ರಿಕ್‌
Recommended image3
ಗುಲಾಬ್ ಜಾಮೂನು ಸಾಫ್ಟ್ ಆಗಲು ಈ ಟ್ರಿಕ್ಸ್ ಬಳಸಿ; ಹಿಟ್ಟು ಕಲಿಸಿಕೊಳ್ಳುವಾಗ ಸೇರಿಸಿಕೊಳ್ಳಿ
Related Stories
Recommended image1
ಈ ಸಣ್ಣ ಟಿಪ್ಸ್ ಪಾಲಿಸಿದ್ರೆ ಕುಕ್ಕರ್‌ನಲ್ಲಿ ಮಾಡಿದ್ದಕ್ಕಿಂತಲೂ ರುಚಿಯಾಗಿರುತ್ತೆ ಚಿಕನ್.. ವಾಸನೆ ಬರಲ್ಲ, ಸಾಫ್ಟ್ ಆಗಿರುತ್ತೆ
Recommended image2
Chicken 65: ಈ ಬುಹಾರಿ ಹೋಟೆಲ್‌ ಖಾದ್ಯಕ್ಕೆ 'ಚಿಕನ್ 65' ಹೆಸರು ಹೇಗೆ ಬಂತು? ಇದರ ಹಿಂದಿದೆ ಭಾರೀ ರಹಸ್ಯ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved