ಕುದುರೆ ಹಾಲು ಮಾರಿ ಮಿಲಿಯೇನರ್ ಆದ ಬ್ರಿಟಿಷ್ ರೈತ!
ಹಾಲು ಸೂಪರ್ ಫುಡ್ ಎಂದು ಪರಿಗಣಿಸಲಾಗುತ್ತದೆ. ಹಾಲಿನ ಸೇವನೆಯಿಂದ ಅನೇಕ ಲಾಭಗಳಿವೆ. ಮೂಳೆಗಳು ಬಲಗೊಳ್ಳುತ್ತವೆ. ಇದಲ್ಲದೆ, ಇತರ ಅನೇಕ ಪೌಷ್ಠಿಕಾಂಶಗಳು ಹಾಲಿನಲ್ಲಿವೆ. ಈ ಕಾರಣಕ್ಕಾಗಿ, ಮಕ್ಕಳಿಂದ ವೃದ್ಧರವರೆಗೆ, ಹಾಲನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು. ಹಸು ಮತ್ತು ಎಮ್ಮೆಯಲ್ಲದೇ, ಆಡುಗಳ ಹಾಲನ್ನು ಕೂಡ ಭಾರತದಲ್ಲಿ ಬಳಸಲಾಗುತ್ತದೆ. ಆದರೆ ನಿಮಗೆ ಗೊತ್ತಾ? ಕುದುರೆ ಹಾಲಿನ ಬಗ್ಗೆ? ಸದ್ಯಕ್ಕೆ ಇದು ಪ್ರಪಂಚದ ಅತಿ ದುಬಾರಿ ಹಾಲು. ಒಂದು ಲೀಟರ್ ಕುದುರೆ ಹಾಲು ಎರಡೂವರೆ ಸಾವಿರ ರೂಪಾಯಿಗಳಿಗಿಂತ ಹೆಚ್ಚು ದುಬಾರಿ. ಇದನ್ನು ಮಾರುವ ಮೂಲಕ ಯುಕೆಯಲ್ಲಿ ಒಬ್ಬ ರೈತ ಕೋಟ್ಯಾಧಿಪತಿಯಾಗಿದ್ದಾನೆ. ಹೌದು, ಈ ವ್ಯಕ್ತಿಯು ಕುದುರೆ ಹಾಲನ್ನು ಮಾರುವ ಮೂಲಕ ತನ್ನ ದೊಡ್ಡ ಬ್ಯುಸಿನೆಸ್ ಸ್ಥಾಪಿಸಿದ್ದಾನೆ.
ಯುಕೆಯ ಸೋಮರ್‌ಸೆಟ್‌ನಲ್ಲಿ ವಾಸಿಸುವ 62 ವರ್ಷದ ಫ್ರಾಂಕ್ ಶೆಲ್ಲಾರ್ಡ್ ಕುದುರೆಯ ಹಾಲನ್ನು ಮಾರುವ ಮೂಲಕ ಮಿಲಿಯನೇರ್ ಆಗಿದ್ದಾರೆ. ಅವರ ಬಳಿ ಒಟ್ಟು 14 ಕುದುರೆಗಳಿವೆ.
ಈ ಹಾಲು ಲೀಟರ್‌ಗೆ 2 ಸಾವಿರ 628 ರೂಪಾಯಿಗೆ ಮಾರಾಟವಾಗುತ್ತದೆ. ಬ್ರಿಟನ್‌ನಲ್ಲಿ ಕುದುರೆ ಹಾಲಿಗೆ ಬೇಡಿಕೆ ಇದ್ದಕ್ಕಿದ್ದಂತೆ ಹೆಚ್ಚಾಗಿದೆ. ಹೆಚ್ಚುತ್ತಿರುವ ಗ್ರಾಹಕರ ಸಂಖ್ಯೆಯನ್ನು ನೋಡಿ, ಫ್ರಾಂಕ್ ತನ್ನ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಿದ್ದಾರೆ.
ಕುದುರೆ ಹಾಲನ್ನು 250 ಮಿಲಿ ಬಾಟಲಿಯಲ್ಲಿ ಪ್ಯಾಕ್ ಮಾಡುವ ಮೂಲಕ ಮಾರುತ್ತಾರೆ. ಇದರ ಬೆಲೆ 600 ರೂಪಾಯಿಗಳಿಗಿಂತ ಹೆಚ್ಚು.
ಮಾರ್ಕೆಟಿಂಗ್‌ನಿಂದಾಗಿಯೇ ಹಸುವಿನ ಹಾಲು ಪ್ರಸಿದ್ಧವಾಯಿತು ಎಂದು ಫ್ರಾಂಕ್ ದಿ ಟೈಮ್ಸ್ ಮೀಡಿಯಾದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಯುಕೆಯ ಸೆಲೆಬ್ರಿಟಿಗಳು ಸೇರಿದಂತೆ ಒಟ್ಟು 150ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದ್ದಾರೆ ಫ್ರಾಂಕ್.
ಹಸುವಿನ ಹಾಲಿಗಿಂತ ಕುದುರೆ ಹಾಲು ಹೆಚ್ಚು ಪೌಷ್ಠಿಕ ಗುಣಗಳನ್ನು ಹೊಂದಿದೆ. ಈ ಹಾಲನ್ನು ಅವರು ಪ್ರತಿದಿನ ಒಂದು ಲೀಟರ್ ಕುಡಿಯುತ್ತಾರೆ. ಇದು ನನ್ನ ದೇಹದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ ಎಂದು ಫ್ರಾಂಕ್ ವಿವರಿಸುತ್ತಾರೆ.
ಈ ಹಾಲಿನಲ್ಲಿ ಫ್ಯಾಟ್ ಅಂಶ ಬಹಳ ಕಡಿಮೆ. ಅಲ್ಲದೆ, ಇದು ವಿಟಮಿನ್ ಸಿಯ ಉತ್ತಮ ಮೂಲ. ತಾಯಿಯ ಹಾಲು ಮಾತ್ರ ಈ ಗುಣಲಕ್ಷಣಗಳನ್ನು ಹೊಂದಿದೆ. ತನ್ನ ಮಗಳು ಮತ್ತು ಅಜ್ಜಿಗೆ ಸಹ ಕುದುರೆ ಹಾಲನ್ನು ಕುಡಿಸುತ್ತಾರೆ ಫ್ರಾಂಕ್ .
ಸದ್ಯಕ್ಕೆ ಇದು ಪ್ರಪಂಚದ ಅತಿ ದುಬಾರಿ ಹಾಲು.