ನೆನಪಿನ ಶಕ್ತಿ ಹೆಚ್ಚಿಸಲು ಮಕ್ಕಳಿಗೆ ಮಾಡಿಕೊಡಿ ಈ ಸೊಪ್ಪಿನ ಚಟ್ನಿ
Chutney Recipe: ಈ ಸೊಪ್ಪು ಬಳಸಿ ಮಾಡುವ ಚಟ್ನಿ ಮಕ್ಕಳ ನೆನಪಿನ ಶಕ್ತಿ ಹೆಚ್ಚಳವಾಗುತ್ತದೆ. ಕೇವಲ 10 ನಿಮಿಷದಲ್ಲಿ ಈ ಚಟ್ನಿಯನ್ನು ತಯಾರಿಸಬಹುದು. ಬಿಸಿ ಅನ್ನ ಅಥವಾ ದೋಸೆ, ಚಪಾತಿ ಮತ್ತು ಜೋಳದ ರೊಟ್ಟಿಗೆ ಈ ಚಟ್ನಿ ಒಳ್ಳೆಯ ಕಾಂಬಿನೇಷನ್ ಆಗುತ್ತದೆ.
ಇಂದಿನ ಮಕ್ಕಳು ತರಕಾರಿ, ಸೊಪ್ಪುಗಳನ್ನ ಸಾಕಷ್ಟು ತಿನ್ನೋದಿಲ್ಲ. ತಿನ್ನೋಕೆ ಒಂಥರಾ ಮುಖ ಮಾಡೋ ಮಕ್ಕಳಿಗೆ ಅವರಿಗೇ ಗೊತ್ತಾಗದ ಹಾಗೆ ಸೊಪ್ಪು ತಿನ್ನಿಸೋಕೆ ಚಟ್ನಿ ಮಾಡಿ ಕೊಡಬಹುದು.
ಬ್ರಾಹ್ಮಿ ಸೊಪ್ಪು ರಕ್ತ ಶುದ್ಧೀಕರಣಕ್ಕೂ ಸಹಾಯ ಮಾಡುತ್ತೆ. ಇದು ದೇಹದಲ್ಲಿ ಆಗುವ ಗಾಯಗಳನ್ನ ಗುಣಪಡಿಸುವ ಶಕ್ತಿ ಹೊಂದಿದೆ. ಈ ಚಟ್ನಿ ಮಾಡೋದು ಹೇಗೆ ಅಂತ ನೋಡೋಣ ಬನ್ನಿ
ಚಟ್ನಿ ತಯಾರಿಸುವ ವಿಧಾನ
ಮಿಕ್ಸಿ ಜಾರ್‌ಗೆ ಸೊಪ್ಪು, ಬೆಲ್ಲ, ಹುಣಸೆಹಣ್ಣು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ರುಬ್ಬಿಕೊಳ್ಳಿ. ನಂತರ ಇದಕ್ಕೆ ಜೀರಿಗೆ, ಸಾಸಿವೆಯ ಒಗ್ಗರಣೆ ಕೊಟ್ಟರೆ ಬ್ರಾಹ್ಮಿ ಸೊಪ್ಪಿನ ಚಟ್ನಿ ಸವಿಯಲು ಸಿದ್ಧವಾಗುತ್ತದೆ. (ಬೇಕಿದ್ರೆ ಹಸಿ,ಮೆಣಸಿನಕಾಯಿ ಹಾಕಿಕೊಳ್ಳಬಹುದು)
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.