Shrikhand's History: ಇಂದು ಜನ ಬಾಯಿ ಚಪ್ಪರಿಸಿ ತಿನ್ನೋ ಶ್ರೀಕಂಡ್ ತಯಾರಿಸಿದ್ದು ಭೀಮ!
ಪೂರಿ ಜೊತೆ ಚಪಾತಿ ಜೊತೆ, ಅಥವಾ ಜನ ಹಾಗೇ ತಿನ್ನಲು ಇಷ್ಟಪಡುವ ಶ್ರೀಕಂಡ್ ಗೆ ಇದೆ 2500 ವರ್ಷಗಳ ಇತಿಹಾಸ. ಬನ್ನಿ ಈ ಸಿಹಿ ತಿನಿಸಿನ ಆರಂಭದ ಬಗ್ಗೆ ತಿಳಿಯೋಣ.

ಶ್ರೀಕಂಡ್ (Shrikhand) ಮೊಸರಿನಿಂದ ಮಾಡುವಂತಹ ಒಂದು ಸಿಹಿ ತಿನಿಸು. ಇದು ಉತ್ತರ ಭಾರತದಲ್ಲಿ ತುಂಬಾನೆ ಜನಪ್ರಿಯತೆ ಪಡೆದಂತಹ ತಿನಿಸು. ಈ ಸಿಹಿ ತಿಂಡಿಯ ಇತಿಹಾಸ 2500 ವರ್ಷಕ್ಕೂ ಹಳೆಯದ್ದು ಅಂದ್ರೆ ನೀವು ನಂಬಲೇಬೇಕು.
ಗಟ್ಟಿ ಮೊಸರನ್ನು ಕಟ್ಟಿ (hung curd), ಅದಕ್ಕೆ ಸಕ್ಕರೆ, ಕೇಸರಿ, ಮಾವಿನ ಹಣ್ಣು, ಏಲಕ್ಕಿ, ಏನಾದರೊಂದು ಸೇರಿಸಿ ಮಾಡಲಾಗುವಂತಹ ಕ್ರೀಮಿ ರಚನೆಯನ್ನು ಹೊಂದಿರುವ ಸಿಹಿ ತಿಂಡಿ, ಇದನ್ನ ಭಾರತೀಯರು ತುಂಬಾನೆ ಇಷ್ಟ ಪಟ್ಟು ತಿಂತಾರೆ.
ಅದರಲ್ಲೂ ಗುಜರಾತ್ ಮತ್ತು ಮಹಾರಾಷ್ಟ್ರದ ಜನರು ಈ ಸಿಹಿತಿಂಡಿಯನ್ನು ತುಂಬಾನೇ ಇಷ್ಟ ಪಡ್ತಾರೆ. ಇಲ್ಲಿನ ಜನರು ಪೂರಿ ಜೊತೆಗೆ, ಚಪಾತಿ ಜೊತೆಗೆ ಸಹ ಶ್ರೀಕಂಡ್ ಸೇವಿಸುತ್ತಾರೆ.
ಗುಜರಾತ್, ಮಹಾರಾಷ್ಟ್ರ ಬಿಡಿ, ಈ ಸಿಹಿ ತಿಂಡಿಯನ್ನು ಮೊದಲು ಬಾರಿ ತಯಾರಿಸಿದ್ದು ಯಾರು? ಎಲ್ಲಿ ತಯಾರಾಯಿತು? ಎಷ್ಟು ವರ್ಷಗಳ ಹಿಂದೆ ತಯಾರಾಗಿತ್ತು ಈ ತಿಂಡಿ ಅನ್ನೋದು ನಿಮಗೆ ತಿಳಿದ್ರೆ ನೀವು ಅಚ್ಚರಿ ಪಡೋದು ಖಚಿತಾ.
Shrikhand
ನಿಮಗೆ ಗೊತ್ತಾ? ಶ್ರೀಕಂಡ್ ಮೊದಲ ಬಾರಿಗೆ ತಯಾರಿಸಿದ್ದು ಭೀಮ (Bheema). ಹೌದು, ಮಹಾಭಾರತದಲ್ಲಿ ಬರುವಂತಹ ಪಾಂಡು ಪುತ್ರ ಭೀಮ ಸುಮಾರು 2500 ವರ್ಷಗಳ ಹಿಂದೆ ಶ್ರೀಕಂಡ ತಯಾರಿಸಿದ್ದರು.
ಪಾಂಡವರು (Pandavas( ಅಜ್ಞಾತವಾಸದಲ್ಲಿದ್ದಂತಹ ಸಂದರ್ಭದಲ್ಲಿ ಭೀಮ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ. ಭೀಮನ ಕೈ ರುಚಿ ತುಂಬಾನೆ ರುಚಿಯಾಗಿತ್ತು ಅನ್ನೋದು ಎಲ್ಲರಿಗೂ ಗೊತ್ತಿರುವ ಮಾತು. ಆ ಸಂದರ್ಭದಲ್ಲಿ ಭೀಮ ಮೊದಲ ಬಾರಿಗೆ ಶ್ರೀಕಂಡ ತಯಾರಿಸಿದ್ದರಂತೆ. ಅಷ್ಟೇ ಅಲ್ಲಾ ಇದಕ್ಕೆ ಅವರು ಶಿಖರಿಣಿ ಎಂದು ಹೆಸರಿಟ್ಟಿದ್ದರು.
11ನೇ ಶತಮಾನದ ಪುಸ್ತಕವಾದ ಲೋಕೋಪಕಾರದಲ್ಲಿ ಶಿಖರಿಣಿ (Shikharini) ರೆಸಿಪಿ ಬಗ್ಗೆ ಉಲ್ಲೇಖ ಇದೆ. 1508 ರಲ್ಲಿ ಬರೆಯಲಾದಂತಹ ಪಾಕ ಶಾಸ್ತ್ರದ ಪುಸ್ತಕ ಸೂಪ ಶಾಸ್ತ್ರದಲ್ಲಿ ಈ ರೆಸಿಪಿ ಬಗ್ಗೆ ಉಲ್ಲೇಖ ಇದ್ದು, ಅದರಲ್ಲಿ ಶ್ರೀಕಂಡ್ ಎಂದು ಬರೆಯಲಾಗಿದೆ.
Shrikhand
ಹಿಂದೆ ಮೊಸರನ್ನು ಗಟ್ಟಿಯಾಗಿ ಕಟ್ಟಿ ಇಡೋದಕ್ಕೆ ಮುಖ್ಯ ಕಾರಣ ಅಂದ್ರೆ, ಅದನ್ನು ಬೇರೆ ಬೇರೆ ಸಮಾಗ್ರಿಗಳ ಜೊತೆಗೆ ಮಿಕ್ಸ್ ಮಾಡೋದು ಸುಲಭವಾಗುತ್ತಿತ್ತು. ಇದು ತಿನ್ನೋದಕ್ಕೂ ಚೆನ್ನಾಗಿರುತ್ತಿತ್ತಂತೆ. ಅದನ್ನೇ ಶ್ರೀಕಂಡ್ ಮಾಡೋದಕ್ಕೂ ಬಳಕೆ ಮಾಡಲಾಗಿತ್ತು.