ಮೂವತ್ತರ ವಯಸ್ಸಿನಲ್ಲಿ ಯುವಕರನ್ನು ಕಾಡೋ ಈ ಡೇಂಜರಸ್ ಕಾಯಿಲೆಗಳ ಬಗ್ಗೆ ಗೊತ್ತಿರಲಿ
ಇವತ್ತಿನ ದಿನಗಳಲ್ಲಿ ಒತ್ತಡದ ಜೀವನಶೈಲಿ ಹಾಗೂ ಕಳಪೆ ಆಹಾರಕ್ರಮದಿಂದ ವಯಸ್ಸಾಗೋ ಮೊದಲೇ ಎಲ್ಲರೂ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಾರೆ. ಅದರಲ್ಲೂ ಯುವಕರು ಗಂಭೀರವಾದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಯುವಕರನ್ನು ಕಾಡೋ ಅಪಾಯಕಾರಿ ರೋಗಗಳ ಬಗ್ಗೆ ಮಾಹಿತಿ ಇಲ್ಲಿದೆ.
ಇವತ್ತಿನ ದಿನಗಳಲ್ಲಿ ಒತ್ತಡದ ಜೀವನಶೈಲಿ ಹಾಗೂ ಕಳಪೆ ಆಹಾರಕ್ರಮದಿಂದ ವಯಸ್ಸಾಗೋ ಮೊದಲೇ ಎಲ್ಲರೂ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಾರೆ. ಅದರಲ್ಲೂ ಯುವಕರು ಗಂಭೀರವಾದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಸರಿಯಾದ ಸಮಯದಲ್ಲಿ ಈ ಕಾಯಿಲೆಗಳತ್ತ ಗಮನಹರಿಸದಿದ್ದರೆ ಜೀವಕ್ಕೇ ಅಪಾಯವಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.
ಆದರೆ, ದೈನಂದಿನ ಅಭ್ಯಾಸಗಳಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ಇವುಗಳನ್ನು ಸರಿಪಡಿಸಬಹುದು. ಆದರೂ ಯುವಕರನ್ನು ಕಾಡೋ ಈ ಡೇಂಜರಸ್ ಕಾಯಿಲೆಗಳು ಯಾವುವು ತಿಳಿಯೋಣ. ಇವುಗಳ ಬಗ್ಗೆ ತಿಳಿದುಕೊಳ್ಳುವ ಮೂಲಕ ನೀವು ಆರೋಗ್ಯ ಸಮಸ್ಯೆಯಾಗುವುದನ್ನು ಮೊದಲೇ ತಿಳಿದುಕೊಂಡು ತಡೆಯಬಹುದು.
ಸ್ಥೂಲಕಾಯತೆ
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಗತ್ತಿನಲ್ಲಿ ಹೆಚ್ಚಿನ ಜನರು ಸ್ಥೂಲಕಾಯತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅನುಚಿತ ಜೀವನಶೈಲಿಯೇ ಇದಕ್ಕೆ ಕಾರಣ. ಇದು ಅನೇಕ ರೋಗಗಳ ಆರಂಭ ಎಂದೇ ಹೇಳಬಹುದು.
1990ರಿಂದ 2024 ರವರೆಗೆ ಬೊಜ್ಜು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಆದ್ದರಿಂದ, ಅದನ್ನು ಕಡಿಮೆ ಮಾಡುವತ್ತ ಗಮನ ಹರಿಸಬೇಕು. ಆಯುರ್ವೇದವು ಪಿತ್ತ ಮತ್ತು ಕಫವನ್ನು ನಿಯಂತ್ರಿಸಲು ಮತ್ತು ಬೊಜ್ಜು ನಿಯಂತ್ರಿಸಲು ಚಯಾಪಚಯ ಪ್ರಕ್ರಿಯೆಯನ್ನು ನಿಯಂತ್ರಿಸಲು ಸಲಹೆ ನೀಡುತ್ತದೆ.
ಹೃದ್ರೋಗ ಸಮಸ್ಯೆ
ಇಂದು ಅನೇಕ ಯುವಕರು ಹೃದಯ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಪ್ರತಿ ವರ್ಷ ಜಗತ್ತಿನಲ್ಲಿ 30 ಪ್ರತಿಶತಕ್ಕೂ ಹೆಚ್ಚು ಸಾವುಗಳು ಈ ಕಾರಣದಿಂದ ಸಂಭವಿಸುತ್ತವೆ.
ವಿಶೇಷವಾಗಿ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಬೊಜ್ಜು ಹೊರತುಪಡಿಸಿ, ಹೃದ್ರೋಗಗಳು ಭಾರತದಲ್ಲಿ ಯುವಜನರಲ್ಲಿ ವೇಗವಾಗಿ ಹೆಚ್ಚುತ್ತಿವೆ. ಇದಕ್ಕೆ ದೊಡ್ಡ ಕಾರಣವೆಂದರೆ ಆಹಾರದಲ್ಲಿ ಪೋಷಕಾಂಶಗಳ ಕೊರತೆ ಮತ್ತು ಅನಾರೋಗ್ಯಕರ ಜೀವನಶೈಲಿ.
ಮಧುಮೇಹ
ಅಧಿಕ ರಕ್ತದೊತ್ತಡದಿಂದ ಉಂಟಾಗುವ ಮಧುಮೇಹವು ಮುಂದಿನ ದಿನಗಳಲ್ಲಿ ಸಾಂಕ್ರಾಮಿಕ ರೋಗವಾಗಿ ಪರಿಣಮಿಸಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ದೇಶದಲ್ಲಿ ಈ ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಇದು ಅನಾರೋಗ್ಯಕರ ಜೀವನಶೈಲಿ, ಹೆಚ್ಚಿನ ಕ್ಯಾಲೋರಿ ಆಹಾರ, ಒತ್ತಡ ಮತ್ತು ನಿದ್ರೆಯ ಕೊರತೆಯಿಂದಾಗಿ. ಇದನ್ನು ನಿಯಂತ್ರಿಸಲು ಆಯುರ್ವೇದದಲ್ಲಿ ಹಲವು ಸಲಹೆಗಳಿವೆ.
ಉದಾಹರಣೆಗೆ, ಸಿಹಿತಿಂಡಿಗಳನ್ನು ತಪ್ಪಿಸುವುದು, ದೈನಂದಿನ ವ್ಯಾಯಾಮ, ಒತ್ತಡವನ್ನು ತಪ್ಪಿಸುವುದನ್ನು ಮಾಡಬೇಕು ಸಮಯಕ್ಕೆ ಸರಿಯಾಗಿ ತಿನ್ನುವುದು, ಧ್ಯಾನ, ಯೋಗ ಮೊದಲಾದ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.