ಟೀ ರುಚಿ ಬರಲು ಟೀಪುಡಿ ಯಾವಾಗ ಸೇರಿಸಬೇಕು?, ಹೆಚ್ಚಿನ ಜನರು ತಪ್ಪು ಮಾಡುವುದು ಇಲ್ಲಿಯೇ..
Kitchen tips for tea: ಹೆಚ್ಚಿನ ಜನರು ಟೀ ಮಾಡುವಾಗ ಒಂದು ದೊಡ್ಡ ತಪ್ಪು ಮಾಡುತ್ತಾರೆ. ಟೀಪುಡಿ ಮತ್ತು ಸಕ್ಕರೆ ಎರಡನ್ನೂ ಒಟ್ಟೊಟ್ಟಿಗೆ ನೀರಿನಲ್ಲಿ ಹಾಕುತ್ತಾರೆ. ನೀರು ಕುದಿಯಲು ಪ್ರಾರಂಭಿಸುವ ಮೊದಲೇ ಎರಡೂ ಪದಾರ್ಥಗಳನ್ನು ಮಿಶ್ರಣ ಮಾಡುತ್ತಾರೆ. ಇದರಿಂದಾಗಿ ಟೀ ರುಚಿ ಚೆನ್ನಾಗಿರುವುದಿಲ್ಲ.

ಕೆಲವರ ಮನೆಯಲ್ಲಿ ಮಾತ್ರ ಟೇಸ್ಟಿಯಾಗಿರುತ್ತೆ
ಭಾರತದಲ್ಲಿ ಹೆಚ್ಚು ಕಡಿಮೆ ಪ್ರತಿಯೊಬ್ಬರಿಗೂ ಇಷ್ಟವಾಗುವ ಚಹಾದ ಬಣ್ಣ, ರುಚಿ ಎಲ್ಲವೂ ಪರ್‌ಫೆಕ್ಟ್ ಆಗಿರುತ್ತೆ. ಇದರ ಪರಿಮಳ ಯಾವ ಮಟ್ಟಕ್ಕೆ ಇರುತ್ತದೆಯೆಂದರೆ ಪಕ್ಕದ ಮನೆಯಲ್ಲಿ ತಯಾರಾಗುತ್ತಿದ್ದರೆ ಅದರ ಘಮ ನಿಮ್ಮ ಮನೆಗೇ ಬರುತ್ತದೆ. ಅಂದಹಾಗೆ ಎಲ್ಲರೂ ಟೀ ಮಾಡ್ತಾರೆ. ಆದರೆ ಕೆಲವರ ಮನೆಯಲ್ಲಿ ಮಾತ್ರ ಅದರ ರುಚಿ ಹೆಚ್ಚಿರುತ್ತದೆ. ಏಕೆ ಗೊತ್ತಾ?.
ಟೀಪುಡಿ ಎಷ್ಟು ಮತ್ತು ಯಾವಾಗ ಸೇರಿಸಬೇಕು?
ಟೀ ತಯಾರಿಸಲು ಸಹ ವಿಶೇಷ ವಿಧಾನವಿದೆ. ಎಷ್ಟು ನೀರು ಬೇಕು?, ಎಷ್ಟು ಹಾಲು ಬೇಕು?, ಯಾವಾಗ ಸಕ್ಕರೆ ಸೇರಿಸಬೇಕು? ಹಾಗೆಯೇ ಯಾವಾಗ ಟೀಪುಡಿ ಸೇರಿಸಬೇಕು? ಎಂಬುದನ್ನು ತಿಳಿದಿರಬೇಕು. ಇವೆಲ್ಲವೂ ಪಕ್ಕಾ ಇದ್ದಾಗ ರುಚಿ ಮತ್ತು ವಿಭಿನ್ನ ಸುವಾಸನೆಗೆ ಶುಂಠಿ, ಏಲಕ್ಕಿ, ತುಳಸಿ, ಲವಂಗ ಮತ್ತು ಇತರ ಪದಾರ್ಥಗಳನ್ನು ಟೀ ಜೊತೆ ಬೆರೆಸಿ ಕುಡಿದ್ರೆ ಬಣ್ಣ ಮತ್ತು ರುಚಿ ಎರಡೂ ಟೇಸ್ಟಿಯಾಗಿರುತ್ತದೆ. ಇದೆಲ್ಲಾ ಬಿಡಿ, ಈಗ ಟೀಪುಡಿ ಎಷ್ಟು ಮತ್ತು ಯಾವಾಗ ಸೇರಿಸಬೇಕು ಎಂಬುದನ್ನು ನೋಡೋಣ…
ರುಚಿ ಜೊತೆಗೆ ಬಣ್ಣವು ಅದ್ಭುತವಾಗಿರುತ್ತೆ
ಟೀ ಚೆನ್ನಾಗಿ ಬರಬೇಕೆಂದ್ರೆ ಮೊದಲಿಗೆ ಒಂದು ಪಾತ್ರೆಯಲ್ಲಿ ನೀರನ್ನ ಹಾಕಬೇಕು. ನೀವು 2 ಕಪ್ ಟೀ ತಯಾರಿಸುತ್ತಿದ್ದರೆ ಸುಮಾರು ಒಂದೂವರೆ ಕಪ್ ನೀರು ಹಾಕಿ ಮತ್ತು ನೀರು ಕುದಿಯಲು ಪ್ರಾರಂಭಿಸಿದಾಗ ಅದರಲ್ಲಿ ಟೀಪುಡಿ ಹಾಕಿ. ನೀವು 2 ಕಪ್ ಟೀ ಮಾಡುವುದರಿಂದ, ಅದರಲ್ಲಿ 2 ಸಣ್ಣ ಟೀ ಸ್ಪೂನ್ ಟೀಪುಡಿ ಹಾಕಿ. ಈಗ ತುರಿದ ಶುಂಠಿಯನ್ನು ಸೇರಿಸಿ. ಟೀ ಮತ್ತು ಶುಂಠಿ ನೀರಿನಲ್ಲಿ ಚೆನ್ನಾಗಿ ಕುದಿಸಿ. ಸುಮಾರು 1 ಕಪ್ ನಷ್ಟು ಉಳಿದಾಗ ಅದಕ್ಕೆ ಹಾಲು ಸೇರಿಸಿ. ಈಗ ಗ್ಯಾಸ್‌ನ ಜ್ವಾಲೆಯನ್ನು ಹೆಚ್ಚಿಸಿ ಮತ್ತು ಟೀ ಎರಡು ಬಾರಿ ಕುದಿಯಲು ಬಿಡಿ. ಈಗ ನಿಮ್ಮ ಆಯ್ಕೆಯ ಪ್ರಕಾರ ಸಕ್ಕರೆಯನ್ನು ಸೇರಿಸಿ ಮತ್ತು ಟೀಯನ್ನು 2-3 ಬಾರಿ ಕುದಿಸಿ. ಟೀ ಬಣ್ಣವು ಸಂಪೂರ್ಣವಾಗಿ ಅದ್ಭುತವಾಗಿರುತ್ತದೆ. ಈ ಟೀ ಕುಡಿಯುವಾಗ ಸಂಪೂರ್ಣ ರುಚಿಯನ್ನು ನೀವು ಪಡೆಯಬಹುದು. ಹಾಗೆಯೇ ಟೀಪುಡಿಯ ಮತ್ತು ಶುಂಠಿಯ ರುಚಿ ಗೊತ್ತಾಗುವುದರ ಜೊತೆಗೆ ಬಣ್ಣವು ಅದ್ಭುತವಾಗಿರುತ್ತದೆ.
ಜನರು ತಪ್ಪು ಮಾಡುವುದೆಲ್ಲಿ?
ಹೆಚ್ಚಿನ ಜನರು ಟೀ ಮಾಡುವಾಗ ಒಂದು ದೊಡ್ಡ ತಪ್ಪು ಮಾಡುತ್ತಾರೆ. ಅವರು ಟೀಪುಡಿ ಮತ್ತು ಸಕ್ಕರೆ ಎರಡನ್ನೂ ಒಟ್ಟೊಟ್ಟಿಗೆ ನೀರಿನಲ್ಲಿ ಹಾಕುತ್ತಾರೆ. ನೀರು ಕುದಿಯಲು ಪ್ರಾರಂಭಿಸುವ ಮೊದಲೇ ಎರಡೂ ಪದಾರ್ಥಗಳನ್ನು ಮಿಶ್ರಣ ಮಾಡುತ್ತಾರೆ. ಇದರಿಂದಾಗಿ ಟೀ ಬಣ್ಣವಾಗಲಿ, ರುಚಿಯಾಗಲಿ ಚೆನ್ನಾಗಿರುವುದಿಲ್ಲ. ಇನ್ನು ಕೆಲವರಂತೂ ಹಾಲು, ನೀರು, ಟೀಪುಡಿ ಮತ್ತು ಸಕ್ಕರೆ ಎಲ್ಲವನ್ನೂ ಒಟ್ಟಿಗೆ ಹಾಕಿ ಕುದಿಯಲು ಇಡುತ್ತಾರೆ. ಆದರೆ ಇದು ಟೀ ತಯಾರಿಸಲು ಸರಿಯಾದ ಮಾರ್ಗವಲ್ಲ.
ಹಾಲು ಮೊಸರಿನಂತಾಗುತ್ತೆ
ಪ್ರತಿಯೊಂದು ಪದಾರ್ಥವು ಕುದಿಯಲು ತನ್ನದೇ ಆದ ಸಮಯವನ್ನು ಹೊಂದಿರುತ್ತದೆ. ಅನೇಕ ಬಾರಿ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇರಿಸಿ ಟೀ ತಯಾರಿಸುವಾಗ ಶುಂಠಿ ಸೇರಿಸಿದ ತಕ್ಷಣ ಅದು ಮೊಸರು ಆಗುತ್ತದೆ. ಕೊನೆಗೆ ಹಾಲು ಮೊಸರಿನಂತಾದರೆ ಎಲ್ಲಾ ಪದಾರ್ಥ ವೇಸ್ಟ್ ಆಗುವುದು ಮಾತ್ರವಲ್ಲ, ನಿಮ್ಮ ಕಠಿಣ ಪರಿಶ್ರಮ ವ್ಯರ್ಥವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

