Bangalore's Best Bites: ನಮ್ಮ ಬೆಂಗಳೂರಲ್ಲಿ ಯಾವ ಹೊಟೇಲಲ್ಲಿ ಯಾವ ತಿಂಡಿ ತಿನ್ನೋದು ಬೆಸ್ಟ್
ಬೆಂಗಳೂರಲ್ಲಿ ನೀವು ಆಹಾರಗಳ ವೆರೈಟಿಯನ್ನು ಟ್ರೈ ಮಾಡಲು ಬಯಸಿದ್ರೆ, ಯಾವ ರೆಸ್ಟೋರೆಂಟಲ್ಲಿ ಯಾವ ಆಹಾರ ಜನಪ್ರಿಯವಾಗಿದೆ ತಿಳಿಯೋಣ.

ನೀವು ಬೆಂಗಳೂರಿನಲ್ಲಿ ನೆಲೆಸಿದ್ದೀರಾ? ದೋಸೆ ತಿನ್ನೋದಕ್ಕೆ ಬೆಸ್ಟ್ ತಾಣ ಯಾವುದು? ಚಿಕನ್ ಘೀ ರೋಸ್ಟ್ ತಿನ್ನಲು ಬೆಸ್ಟ್ ಜಾಗ ಯಾವುದು? ಮಸಾಲಪುರಿ ತಿನ್ನೋದಕ್ಕೆ ಯಾವ ಜಾಗ ಬೆಸ್ಟ್ ಎಂದು ಯೋಚನೆ ಮಾಡುತ್ತಿದ್ದರೆ ಈ ಲಿಸ್ಟ್ ನಿಮಗಾಗಿ.
ಬ್ರಾಹ್ಮಿಣ್ಸ್ ಅಲ್ಲಿ ಬ್ರೇಕ್ ಫಾಸ್ಟ್
ಮೆದುವಾಗಿರುವ ಇಡ್ಲಿ, ಕ್ರಂಚಿಯಾಗಿರುವ ವಡೆ, ಪರ್ಫೆಕ್ಟ್ ಆಗಿರುವ ಫಿಲ್ಟರ್ ಕಾಫಿ (filter coffee). ನಿಮ್ಮ ದಿನವನ್ನು ಆರಂಭಿಸೋದಕ್ಕೆ ಇನ್ನೇನು ಬೇಕು ಹೇಳಿ. ಇದು ಬೆಸ್ಟ್ ತಿಂಡಿ.
ಸಿಟಿಆರ್/ವಿದ್ಯಾರ್ಥಿ ಭವನ ದೋಸೆ
ಸಿಟಿಆರ್ ಮತ್ತು ವಿದ್ಯಾರ್ಥಿ ಭವನದಲ್ಲಿ ದೋಸೆ ತಿನ್ನುವ ರುಚಿಯೇ ಬೇರೆ. ಬಾಯಲ್ಲಿ ನೀರೂರುವಂತೆ ಮಾಡುತ್ತೆ ಅಲ್ಲಿನ ದೋಸೆಗಳು.
ಮಂಗಳೂರು ಕಿಚನ್ ನಲ್ಲಿ ಚಿಕನ್ ಘೀರೋಸ್ಟ್
ಸ್ಪೈಸಿಯಾಗಿರುವ, ತುಪ್ಪದ ಘಮ ಜೊತೆಗೆ ಹಲವು ಫ್ಲೇವರ್ ಗಳಲ್ಲಿ ತಯಾರಾಗುವ ಬಾಯಿ ಚಪ್ಪರಿಸಿ ತಿನ್ನುವಂತೆ ಮಾಡುತ್ತೆ ಮಂಗಳೂರು ಕಿಚನ್ ನಲ್ಲಿ ಸಿಗುವಂತಹ ಚಿಕನ್ ಘೀರೋಸ್ಟ್.
ಡೆತ್ ಬೈ ಚಾಕಲೇಟ್ -ಕಾರ್ನರ್ ಹೌಸ್
ಚಾಕಲೇಟ್ ಪ್ರಿಯರು ತಿನ್ನಲೇ ಬೇಕಾದಂತಹ ಒಂದು ಟೇಸ್ಟಿಯಾದ ಡೆಸರ್ಟ್ ಡೆತ್ ಬೈ ಚಾಕಲೇಟ್ (death by chocolates)ನೀವು ಟ್ರೈ ಮಾಡ್ಲೇಬೇಕು.
ಇಂದಿರಾನಗರದ ಕೆಫೆ ಹೋಪಿಂಗ್
ಇಲ್ಲಿನ ಇಂಟೀರಿಯರ್ ಕಾಂಟಿನೆಂಟಲ್, ಇಟಾಲಿಯನ್ ಆಹಾರಗಳು, ಜಾಗ ಎಲ್ಲವೂ ಪರ್ಫೆಕ್ಟ್ ಆಗಿದೆ.
ಸ್ಟ್ರೀಟ್ ಫುಡ್ ವಿವಿಪುರಂ
ಸ್ಪೈಸಿ ಮಸಾಲ ಪುರಿಯಿಂದ ಹಿಡಿದು, ಮಸಾಲೆ ದೋಸೆ, ಜಿಲೇಬಿವರೆಗೂ ವೆರೈಟ್ ಸ್ಟ್ರೀಟ್ ಫುಡ್ (Street food) ಟ್ರೈ ಮಾಡಬೇಕು ಅಂದ್ರೆ ನೀವು ವಿವಿಪುರಂ ಹೋಗಿ.
ಟಪಲ್ಸ್ ನಲ್ಲಿ ಬರ್ಗರ್ ಮತ್ತು ಫ್ರೈಸ್
ಬೆಂಗಳೂರು ಕಾಲೇಜು ವಿದ್ಯಾರ್ಥಿಗಳಿಗೆ ಬೆಸ್ಟ್ ಆಗಿರುತ್ತೆ ಟಫಲ್ಸ್ ನ ಬರ್ಗರ್ (burger) ಮತ್ತು ಫ್ರೈಸ್