ಹಿಂದಿನ ದಿನದ ಚಪಾತಿ ತಿಂದ್ರೂ ಆರೋಗ್ಯಕ್ಕೆ ಒಳ್ಳೇಯದು!
ಆಹಾರದಲ್ಲಿ ಸಣ್ಣ ಬದಲಾವಣೆಗಳು ನಿಮ್ಮನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಚಪಾತಿ ಸಾಮಾನ್ಯವಾಗಿ ತಿನ್ನುತ್ತಲೇ ಇರುತ್ತೀರಿ ಅಲ್ವಾ? ಆದ್ರೆ ತಂಗಳ ಚಪಾತಿ ತಿನ್ನುವುದರಿಂದ ಕೂದ ಪ್ರಯೋಜನ ಇದೆ ಅನ್ನೋದು ನಿಮಗೆ ಗೊತ್ತಾ? ಇಲ್ಲಾ ಅಂದ್ರೆ ಇಲ್ಲಿದೆ ಕೇಳಿ ತಂಗಳ ಚಪಾತಿಯ ಪ್ರಯೋಜನಗಳು.
ತಂಗಳ ಚಪಾತಿ (stale chapati) ಹೆಸರನ್ನು ಕೇಳಿದ ಕೂಡಲೇ ಕೆಲವರು ಬಾಯಿ ಬಿಡಲು ಪ್ರಾರಂಭಿಸುತ್ತಾರೆ.ಆದರೆ ತಂಗಳ ಚಪಾತಿ ತಿನ್ನುವ ಸಂಪ್ರದಾಯ ಭಾರತದಲ್ಲಿ ಬಹಳ ಹಳೆಯದು. ಹೆಚ್ಚಿನ ಮನೆಗಳಲ್ಲಿ, ತಂಗಳ ಚಪಾತಿ ಅನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಲಾಗುತ್ತೆ. ತಂಗಳ ಚಪಾತಿ ತಿನ್ನುವುದು ಕೇವಲ ಸಂಪ್ರದಾಯವಲ್ಲ ಆದರೆ ಇದು ವೈಜ್ಞಾನಿಕವಾಗಿ ಪ್ರಯೋಜನಕಾರಿಯಾಗಿದೆ.
ಬೆಳಿಗ್ಗೆ ತಂಗಳ ಚಪಾತಿ ಸೇವಿಸುವುದರಿಂದ ಮಧುಮೇಹ (diabetes) ಮತ್ತು ರಕ್ತದೊತ್ತಡದಂತಹ ಅನೇಕ ರೀತಿಯ ಸಮಸ್ಯೆಗಳಿಗೆ ಪ್ರಯೋಜನ ಪಡೆಯಬಹುದು. ತಂಗಳ ಚಪಾತಿ ತಿನ್ನುವುದರ ಪ್ರಯೋಜನಗಳು ಯಾವುವು ಮತ್ತು ಅದನ್ನು ಏಕೆ ತಿನ್ನಬೇಕು ಎಂದು ಇಂದು ನಾವು ತಜ್ಞರ ಮೂಲಕ ನಿಮಗೆ ತಿಳಿಸುತ್ತೇವೆ.
ತಂಗಳ ಚಪಾತಿ ತಿನ್ನಲು ಸುರಕ್ಷಿತವೇ?
ಹಳಸಿದ ಬ್ರೆಡ್ ತಿನ್ನುವುದು ಸುರಕ್ಷಿತವೇ ಎಂಬ ಪ್ರಶ್ನೆ ಅನೇಕ ಜನರ ಪ್ರಶ್ನೆಯಾಗಿ ಉಳಿದಿದೆ. ಆಹಾರ ತಜ್ಞರು ಹೇಳುವಂತೆ ಹಳಸಿದ ರೊಟ್ಟಿಗಳು ಸಂಪೂರ್ಣವಾಗಿ ಆರೋಗ್ಯಕರ ಮತ್ತು ಸುರಕ್ಷಿತ ಆಯ್ಕೆ. ವಿಶೇಷವಾಗಿ ಉಪಾಹಾರಕ್ಕಾಗಿ ತಂಗಳ ಚಪಾತಿ ತಿನ್ನುವುದು ಹೆಚ್ಚು ಪ್ರಯೋಜನಕಾರಿ. ನೀವು ಇದನ್ನು ಹಾಲಿನೊಂದಿಗೆ ಸಹ ಸೇವಿಸಬಹುದು.
ತಂಗಳ ಚಪಾತಿ ತಿನ್ನುವುದರ ಪ್ರಯೋಜನಗಳು ಯಾವುವು ತಿಳಿಯೋಣ:
ತಂಗಳ ಚಪಾತಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ (health benefits), ಇದು ಮಧುಮೇಹ ಸೇರಿ ಅನೇಕ ರೀತಿಯ ರೋಗಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ.
ತಂಗಳ ಚಪಾತಿ ಫೈಬರ್‌ನಿಂದ ಸಮೃದ್ಧವಾಗಿದೆ ಮತ್ತು ಕಡಿಮೆ ಪ್ರಮಾಣದ ಸೋಡಿಯಂ (sodium) ಅನ್ನು ಸಹ ಹೊಂದಿದೆ, ಇದರೊಂದಿಗೆ, ಇದರಲ್ಲಿ ಗ್ಲೈಸೆಮಿಕ್ ಸೂಚ್ಯಂಕವು ಕಡಿಮೆಯಾಗಿದೆ. ಈ ಕಾರಣದಿಂದಾಗಿ ರಕ್ತದಲ್ಲಿನ ಸಕ್ಕರೆ ಮತ್ತು ರಕ್ತದೊತ್ತಡವನ್ನು (blood pressure) ನಿಯಂತ್ರಿಸಲು ಇದು ತುಂಬಾ ಸಹಾಯಕವಾಗಿದೆ.
ತಂಗಳ ಚಪಾತಿಯಲ್ಲಿರುವ ಫೈಬರ್ ತೂಕವನ್ನು ನಿಯಂತ್ರಿಸುವಲ್ಲಿ ಮತ್ತು ಚಯಾಪಚಯವನ್ನು ಹೆಚ್ಚಿಸುವಲ್ಲಿ ಸಹ ಪ್ರಯೋಜನಕಾರಿಯಾಗಿದೆ. ಅಷ್ಟೇ ಅಲ್ಲ ತಂಗಳ ಚಪಾತಿ ಜೀರ್ಣಾಂಗ ವ್ಯವಸ್ಥೆಯಲ್ಲಿ (digestive system) ಸುಲಭವಾಗಿ ಜೀರ್ಣವಾಗುತ್ತದೆ. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಸಹ ಬರೋದಿಲ್ಲ.
ನಿಮಗೆ ಗ್ಯಾಸ್, ಮಲಬದ್ಧತೆ, ಅಸಿಡಿಟಿ(Acidity) ಮೊದಲಾದ ಸಮಸ್ಯೆಗಳಿದ್ದರೂ ಸಹ, ತಂಗಳ ರೊಟ್ಟಿ ಸೇವಿಸುವ ಮೂಲಕ ನೀವು ಲಾಭ ಪಡೆಯಬಹುದು. ನೀವು ಮಾಡಬೇಕಾಗಿರುವುದು ಬೆಳಿಗ್ಗೆ ಇತರ ಯಾವುದೇ ಆಹಾರ ಸೇವಿಸುವ ಬದಲಾಗಿ ತಂಗಳ ರೊಟ್ಟಿ ಮತ್ತು ತಣ್ಣನೆಯ ಹಾಲು ಸೇವಿಸಿ.