Interesting Facts : ಅಷ್ಟಕ್ಕೂ ಚಪಾತಿ ಯಾಕೆ ರೌಂಡ್ ಶೇಪ್‌ನಲ್ಲಿ ಇರ್ಬೇಕು?

ಗುಂಡಗಿರುವ, ಉಬ್ಬಿದ ಚಪಾತಿ ನೋಡಿದ ತಕ್ಷಣ ತಿನ್ಬೇಕು ಅನಿಸುತ್ತದೆ. ಈ ಚಪಾತಿಯನ್ನು ಬೇರೆ ಆಕಾರದಲ್ಲೂ ತಯಾರಿಸಬಹುದಲ್ಲ, ಯಾಕೆ ರೌಂಡ್ ಶೇಪ್ ನೀಡ್ಬೇಕು? ಇದು ನಮಗೆ ಕಷ್ಟ ಅನ್ನೋರು ಇದನ್ನು ಓದಿ. 
 

Interesting Facts, Why Are Chapatis And Roti Rolled in Round shape

ಚಪಾತಿ ಗುಂಡಗೆ ಆಗ್ಬೇಕು ಎಂಬುದು ಎಲ್ಲ ಹುಡುಗಿಯರ ಕನಸು ಅಂದ್ರೆ ತಪ್ಪಾಗೋದಿಲ್ಲ. ಗೋಲಾಕಾರದಲ್ಲಿ ಚಪಾತಿ ತಯಾರಿಸಿದ ಹುಡುಗಿಗೆ ಫುಲ್ ಮಾರ್ಕ್ಸ್  ಬೀಳೋದ್ರಲ್ಲಿ ಡೌಟೇ ಇಲ್ಲ. ಮೊದಲ ಬಾರಿ ಅಡುಗೆ ಮನೆಗೆ ಬರುವ ಹುಡುಗಿಯರಿಗೆ ಹಿರಿಯರು ನೀಡುವ ಮೊದಲ ಸಲಹೆಯೆಂದ್ರೆ ಚಪಾತಿಯನ್ನು ಗೋಲಾಕಾರದಲ್ಲಿ ತಯಾರಿಸು ಎಂದು. ಕೆಲವೊಮ್ಮೆ ಚಪಾತಿ ಬೇರೆ ಬೇರೆ ದೇಶದ ನಕ್ಷೆಗಳಾಗುತ್ತವೆ. ಅಮಿಬಾ ಆಕಾರ ಪಡೆಯುತ್ತವೆ. ಇದನ್ನು ತಿನ್ನಲು ತಯಾರಿಸಿದವರಿಗೇ ಇಷ್ಟ ಇರೋದಿಲ್ಲ. ಇನ್ನು ಮನೆಯ ಉಳಿದವರಿಗೆ ಸರ್ವ್ ಮಾಡೋದು ಹೇಗೆ?. ಅಷ್ಟಕ್ಕೂ ನಾವೆಲ್ಲ ಚಪಾತಿ ರೌಂಡ್ ಆಗಿಯೇ ಇರಬೇಕೆಂದು ಏಕೆ ಬಯಸ್ತೇವೆ ಎಂಬುದು ನಿಮಗೆ ಗೊತ್ತಾ?.

ಚಪಾತಿ ರೌಂಡ್ ಆಗಲು ಏನೆಲ್ಲ ಟ್ರಿಕ್ಸ್ ಪಾಲನೆ ಮಾಡ್ಬೇಕು ಎಂಬುದು ಮಹಿಳೆ (Women)ಯರಿಗೆ ತಿಳಿದಿರುತ್ತದೆ.  ರೊಟ್ಟಿ ಹಾಗೂ ಚಪಾತಿ ಗುಂಡಗೆ ಆಗಬೇಕೆಂದು ಯಾರು ನಿಯಮ ಮಾಡಿದ್ದಾರೆ ಎಂಬುದಕ್ಕೆ ಯಾರ ಬಳಿಯೂ ಉತ್ತರ ಇರಲಿಕ್ಕಿಲ್ಲ. ಆದ್ರೆ ಯಾಕೆ ಗುಂಡಗೆ (Round shape) ಆಗ್ಬೇಕು, ಅದಕ್ಕೆ ಕಾರಣವೇನು ಹಾಗೆ ಅದ್ರಿಂದ ಪ್ರಯೋಜನವೇನು ಎಂಬುದಕ್ಕೆ ಉತ್ತರವಿದೆ. ನಾವಿಂದು ಚಪಾತಿ ರೌಂಡ್ ಆಗಿರಲು ಕಾರಣ ಏನು ಎಂಬುದನ್ನು ನಿಮಗೆ ಹೇಳ್ತೆವೆ.

ಸೂಪರ್ ಫುಡ್ ಸ್ಟ್ರಾಬರಿ ತಿನ್ನೋದ್ರಿಂದ ಆಗೋ ಲಾಭ ಒಂದೆರಡಲ್ಲ!

ಚಪಾತಿ ರೌಂಡ್ (Round) ಆಗಿರಲು ಕಾರಣವೇನು? : 

ಚಪಾತಿ ತಯಾರಿಸೋದು ಸುಲಭ : ರೌಂಡ್ ಆಕಾರದಲ್ಲಿ ಚಪಾತಿ ಲಟ್ಟಿಸೋದು ಸುಲಭವಾ ಅಂತಾ ಹುಬ್ಬೇರಿಸಬೇಡಿ. ಬಹುತೇಕ ಮಹಿಳೆಯರು ಚಪಾತಿಯನ್ನು ದುಂಡಾಕಾರದಲ್ಲಿ ಲಟ್ಟಿಸ್ತಾರೆ. ನಿಮಗೆ ರೌಂಡ್ ಆಕಾರ ನೀಡೋದು ಉಳಿದದ್ದಕ್ಕಿಂತ ಸುಲಭ. ನೀವು ಲಟ್ಟಣಿಗೆಯನ್ನು ತರಿಸ್ತಾ ಹೋದ್ರೆ ಸಾಕು. ಚಪಾತಿ ರೌಂಡ್ ಆಗುತ್ತದೆ. ಅದೇ ನೀವು ಚಪಾತಿಯನ್ನು ಚೌಕಾಕಾರದಲ್ಲಿ ಅಥವಾ ಬೇರೆ ಶೇಪ್ ನಲ್ಲಿ ತಯಾರಿಸಬೇಕೆಂದ್ರೆ ಅದು ಸ್ವಲ್ಪ ಕಷ್ಟವಾಗುತ್ತದೆ. ಹಾಗೆ ನೀವು ದುಂಡಗೆ ತಯಾರಿಸಿದ ಚಪಾತಿಯ ಎಲ್ಲ ಕಡೆ ಸರಿಯಾಗಿ ಬೇಯುತ್ತದೆ. ಚೌಕದ ರೊಟ್ಟಿಯ ಅಂಚು ಹಸಿಯಾಗಿರೋದೇ ಹೆಚ್ಚು.

ಮೆದುಳು (Brain) ಸುಲಭವಾಗಿ ಪ್ರತಿಕ್ರಿಯಿಸುತ್ತದೆ : ನಮ್ಮ ಮೆದುಳಿಗೆ ವಿಶೇಷವಾಗಿ ನಮ್ಮ ಕಣ್ಣು (eye) ಗಳಿಗೆ ದುಂಡಾದ ಮೂಲೆಗಳಿಗೆ ಪ್ರತಿಕ್ರಿಯಿಸುವುದು ಸುಲಭ. ಇದರರ್ಥ ರೌಂಡ್ ವಸ್ತುಗಳನ್ನು ನೋಡುವುದು ಸುಲಭ ಮತ್ತು ಅದನ್ನು ಬಳಸುವುದು ಕೂಡ ಸುಲಭ. ಚಿತ್ರಗಳನ್ನು ಸಂಸ್ಕರಿಸುವ ಕಣ್ಣಿನ ಭಾಗ ಫೊವಿಯಾ, ಸರ್ಕಲ್ ಗಳನ್ನು ಬೇಗ ಗ್ರಹಿಸುತ್ತದೆ. ಅಂಚುಗಳು ತೀಕ್ಷ್ಣವಾದಷ್ಟೂ ವಸ್ತುಗಳು ಪ್ರಕಾಶಮಾನವಾಗಿ ಗೋಚರಿಸುತ್ತವೆ. ಒಂದು ವಸ್ತು ರೌಂಡರ್ ಆಗಿದ್ದರೆ, ಅದು ಕಡಿಮೆ ಪ್ರಕಾಶಮಾನವಾಗಿರುತ್ತದೆ.

ದಪ್ಪಗಾಗೊಲ್ಲ ಚಪಾತಿ : ಚಪಾತಿ ತೆಳುವಾಗಿ, ಮೃದುವಾಗಿದ್ದರೆ ತಿನ್ನಲು ರುಚಿ. ಆಗ ಚಪಾತಿಯ ಎಲ್ಲ ಭಾಗ ಸರಿಯಾಗಿ ಬೇಯುತ್ತದೆ. ನೀವು ಚಪಾತಿಯನ್ನು ಗುಂಡಗೆ ತಯಾರಿಸಿದಾಗ ಅದನ್ನು ಅತಿ ಹೆಚ್ಚು ತೆಳ್ಳಗೆ ಲಟ್ಟಿಸಬಹುದು. ಅದೇ ಬೇರೆ ಆಕಾರ ನೀಡಿದಾಗ ಚಪಾತಿ ಇಷ್ಟು ತೆಳುವಾಗುವುದಿಲ್ಲ. ಲಟ್ಟಣಿಗೆಯನ್ನು ಒಂದು ಕಡೆಯಿಂದ ಇನ್ನೊಂದು ಕಡೆ ತಿರುಗಿಸಿದಾಗ ಹಿಟ್ಟು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವ ಬದಲು ಹರಡಿಕೊಳ್ಳುತ್ತದೆ. ಹಾಗಾಗಿ ಅಂಚುಗಳನ್ನು ಕೂಡ ನೀವು ತೆಳ್ಳಗೆ ಮಾಡ್ಬಹುದು. ಅದೇ ಬೇರೆ ಆಕಾರದಲ್ಲಿದ್ದಾಗ ಹಿಟ್ಟು ಹರಡಿಕೊಳ್ಳುವುದಿಲ್ಲ. ಅಂಚು ದಪ್ಪವಾಗುತ್ತದೆ.

ಈ ಸಮಸ್ಯೆ ಇದೆ ಅಂದ್ರೆ ಬಾಳೆಹಣ್ಣನ್ನು ತಿನ್ನಲೇ ಬಾರದು!

ಉಬ್ಬಿದ ರೊಟ್ಟಿ ಬೇಕೆಂದ್ರೆ ಗುಂಡಗೆ ತಯಾರಿಸಿ : ಉಬ್ಬಿದ ರೊಟ್ಟಿ ನೋಡಿದ್ರೆ ಏನೋ ಖುಷಿಯಾಗುತ್ತದೆ. ಬಿಸಿ ಬಿಸಿಯಾಗಿರುವ ಉಬ್ಬಿದ ಚಪಾತಿ ತಿನ್ನುವ ಮಜವೇ ಬೇರೆ. ಆದ್ರೆ ಮನೆಯಲ್ಲಿ ಮಾಡಿದ ಚಪಾತಿ ಊದಿಕೊಂಡಿಲ್ಲವೆಂದಾಗ ಹಿಟ್ಟಿಗೆ ಬೈಯ್ಯುತ್ತೇವೆ. ಇದಕ್ಕೆ ನೀವು ರೊಟ್ಟಿಗೆ ನೀಡಿದ ಆಕಾರ ಕೂಡ ಕಾರಣವಾಗಿರಬಹುದು. ಚಪಾತಿ ದುಂಡಗಿನ ಆಕಾರದಲ್ಲಿದ್ದರೆ ನಿಮ್ಮ ಚಪಾತಿ ಊದಿಕೊಳ್ಳುತ್ತದೆ. ಚಪಾತಿ ಬೇರೆ ಆಕಾರದಲ್ಲಿದ್ದರೆ ಉಬ್ಬೋದು ಕಷ್ಟ.

Latest Videos
Follow Us:
Download App:
  • android
  • ios