ದಿನಕ್ಕೊಂದು ಸೇಬು ಮಾತ್ರವಲ್ಲ, ಬಾಳೆಹಣ್ಣೂ ಡಾಕ್ಟರನ್ನು ದೂರವಿಡುತ್ತೆ!
ಕಾಲದ ಹಂಗಿಲ್ಲದೇ, ಸರ್ವಕಾಲಕ್ಕೂ ಸಿಗೋ ಹಣ್ಣೆಂದರೆ ಬಾಳೆಹಣ್ಣು. ಪಚ್ಚಬಾಳೆ ತಿಂದ್ರೆ ಕೆಲವು ಸೈಡ್ ಎಫೆಕ್ಟ್ಸ್ ಆಗಬಹುದು. ಆದರೆ, ಏಲಕ್ಕೆ ಹಾಗೂ ಪುಟ್ಟು ಬಾಳೆ ಆರೋಗ್ಯಕ್ಕೆ ಬಹಳ ಪ್ರಯೋಜನ ನೀಡಬಲ್ಲದು. ವೈದ್ಯರನ್ನು ದೂರವಿಡುವ ಈ ಹಣ್ಣಿನಿಂದ ಸ್ಮೋಕಿಂಗ್ ಸಹ ಕ್ವಿಟ್ ಮಾಡಬಹುದು.

ಬಾಳೆಹಣ್ಣು
ಬಾಳೆಹಣ್ಣನ್ನು ಇಷ್ಟಪಟ್ಟು, ದಿನಾಲೂ ತಿನ್ನೋ ಹಲವರಿದ್ದಾರೆ. ಬೆಳಗಿನ ಉಪಾಹಾರ ಅಥವಾ ಮಧ್ಯಾಹ್ನ ಊಟದ ನಂತರ ತಿನ್ನುತ್ತಾರೆ. ದಿನಕ್ಕೊಂದು ಬಾಳೆಹಣ್ಣು ತಿಂದರೆ ನಿಮ್ಮ ಆರೋಗ್ಯಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ವಿಟಮಿನ್‌ಗಳು, ಖನಿಜ, ನಾರಿನಂಶ ಹೇರಳವಾರೋ ಕಡಿಮೆ ಬೆಲೆಯ ಈ ಹಣ್ಣು ಅನೇಕ ರೋಗಗಳಿಗೆ ಮದ್ದಾಗಬಲ್ಲದು.
ಬಾಳೆಹಣ್ಣಲ್ಲಿರೋ ಫ್ರಕ್ಟೋಸ್, ಕಾರ್ಬೋಹೈಡ್ರೇಟ್, ಗ್ಲೂಕೋಸ್, ಸುಕ್ರೋಸ್‌ನಂತಹ ಸಕ್ಕರೆಗಳು ಹೇರಳವಾಗಿವೆ ಇವು ನಮ್ಮ ದೇಹಕ್ಕೆ ಅಗತ್ಯ ಶಕ್ತಿ ನೀಡುತ್ತವೆ. ಬಾಳೆಹಣ್ಣಲ್ಲಿ ನಾರಿನಂಶವೂ ಇರುತ್ತದೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಜೊತೆಗೆ ಮಲಬದ್ಧತೆಯಂತಹ ಸಮಸ್ಯೆಗಳನ್ನು ಗುಣಪಡಿಸಬಲ್ಲದು. ಬಾಳೆಹಣ್ಣಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ಪೊಟ್ಯಾಷಿಯಮ್ ಹೇರಳವಾಗಿದೆ. ಅಷ್ಟೇ ಅಲ್ಲ ಈ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಸಹ ಇರುತ್ತವೆ. ಇವು ನಮ್ಮ ದೇಹವನ್ನು ಆರೋಗ್ಯವಾಗಿಡುತ್ತವೆ.
ರಕ್ತದೊತ್ತಡ ಹೆಚ್ಚಾಗುತ್ತದೆ ಎಂಬ ಭಯವೂ ಬೇಡ. ಏಕೆಂದರೆ ಬಾಳೆ ಹಣ್ಣು ರಕ್ತದೊತ್ತಡವನ್ನು ನಿಯಂತ್ರಿಸಿ, ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಲ್ಲದು. ಈ ಹಣ್ಣಿನಲ್ಲಿರುವ ಪೊಟ್ಯಾಷಿಯಮ್ ಹೃದಯವನ್ನು ಆರೋಗ್ಯವಾಗಿಡುತ್ತದೆ. ಈ ಹಣ್ಣಿನ ನಾರಿನಂಶವು ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ.
ಬಾಳೆಹಣ್ಣಲ್ಲಿ ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲವಿದೆ. ಇದು ನಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ, ಇತರ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಇವು ನಮ್ಮ ಚರ್ಮವನ್ನು ಆರೋಗ್ಯವಾಗಿಡುತ್ತವೆ. ಬಾಳೆಹಣ್ಣುಗಳನ್ನು ತಿಂದರೆ ನಮ್ಮ ಮೂತ್ರಪಿಂಡಗಳ ಕಾರ್ಯನಿರ್ವಹಣೆ ಸುಧಾರಿಸುತ್ತದೆ. ಏಕೆಂದರೆ ಇದರಲ್ಲಿರುವ ಪೊಟ್ಯಾಷಿಯಮ್ ಮೂತ್ರಪಿಂಡಗಳಲ್ಲಿ ಕಲ್ಲುಗಳು ಉಂಟಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಈ ಹಣ್ಣಿನಲ್ಲಿರುವ ನಾರಿನಂಶ ಹೊಟ್ಟೆಯನ್ನು ಬೇಗ ತುಂಬಿಸುತ್ತದೆ. ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡುತ್ತದೆ. ಚಯಾಪಚಯವನ್ನು ಹೆಚ್ಚಿಸಿ ನೀವು ಆರೋಗ್ಯವಾಗಿ ತೂಕ ಇಳಿಸಿಕೊಳ್ಳುವಂತೆ ಮಾಡುತ್ತದೆ.
ಬಾಳೆಹಣ್ಣ ಮೂಳೆಯನ್ನು ಗಟ್ಟಿಯಾಗುತ್ತವೆ. ಕ್ಯಾಲ್ಸಿಯಂ ಹೇರಳವಾಗಿರುವ ಈ ಹಣ್ಣನ್ನು ನಿಯಮಿತವಾಗಿ ಸೇವಿಸಿದರೆ ಮೂಳೆಗಳು ಆರೋಗ್ಯವಾಗಿರುತ್ತವೆ. ಬಲವಾಗಿರುತ್ತವೆ. ಬಾಳೆಹಣ್ಣುಗಳಲ್ಲಿ ವಿಟಮಿನ್ ಸಿ, ಬಿ6 ಸಹ ಹೇರಳವಾಗಿದೆ. ಇವು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.