Appe Midi Pickle: ಅಪ್ಪೇಮಿಡಿ ಉಪ್ಪಿನಕಾಯಿ ಹೀಗೆ ಮಾಡಿದ್ರೆ 3 ವರ್ಷವಾದ್ರೂ ಹಾಳಾಗಲ್ಲ; ರುಚಿಯೋ ರುಚಿ
Appe Midi Pickle Recipe: ಮಲೆನಾಡಿನ ಅಪ್ಪೆಮಿಡಿ ಉಪ್ಪಿನಕಾಯಿ ಎನ್ನುವುದು ಸಿಕ್ಕಾಪಟ್ಟೆ ಫೇಮಸ್. ಇನ್ನೇನು ಮಾವಿನಕಾಯಿ ಸೀಸನ್ ಬಂತು ಎಂದಕೂಡಲೇ ಅಪ್ಪೇಮಿಡಿ ಹುಡುಕಾಟ ಶುರು ಆಗುತ್ತದೆ. ಅಪ್ಪೇಮಿಡಿಯಿಂದ ಉಪ್ಪಿನಕಾಯಿ ಮಾಡಿಕೊಂಡು, ವರ್ಷಾನುಗಟ್ಟಲೇ ತಿನ್ನುತ್ತಾರೆ.

ಏನೇನು ಬೇಕು?
ಸಾಸಿವೆ-150 - 200 ಗ್ರಾಂ
ಅರಿಶಿನ ಪುಡಿ- 2 ಚಮಚ
ಇಂಗು: ಒಂದು ಸಣ್ಣ ತುಂಡು ಅಥವಾ 1 ಚಮಚ ಪುಡಿ
ಜೀರಿಗೆ
ಬೋಳುಕಾಳು
ಲವಂಗ
ಒಣಶುಂಠಿ
ಮೆಂತೆ100 ಅಪ್ಪೆಮಿಡಿ. ಎಲ್ಲ ಮಾವಿನಕಾಯಿಯಿಂದ ಈ ರೀತಿ ಉಪ್ಪಿನಕಾಯಿ ಮಾಡೋಕೆ ಬರೋದಿಲ್ಲ. ಅಪ್ಪೇಮಿಡಿ ಅಥವಾ ಜೀರಿಗೆ ಅಪ್ಪೇಮಿಡಿಯಿಂದ ಮಾತ್ರ ಉಪ್ಪಿನಕಾಯಿ ಮಾಡಬಹುದು

ಮಾವಿನಕಾಯಿಗೆ ತಕ್ಕಂತೆ ಉಪ್ಪು ಬೇಕು
250 - 300 ಗ್ರಾಂ ಒಣ ಕೆಂಪು ಮೆಣಸಿನಕಾಯಿ ಬೇಕಾಗುವುದು. ಖಾರಕ್ಕೆ ತಕ್ಕಂತೆ ಬ್ಯಾಡಗಿ ಮತ್ತು ಗುಂಟೂರು ಮೆಣಸು ಹಿಟ್ಟಿನ ಮಿಶ್ರಣವನ್ನು ನೀವೆ ಮನೆಯಲ್ಲಿ ಮಾಡಿಕೊಳ್ಳೋದು ಒಳ್ಳೆಯದು, ಅಥವಾ ಹೊರಗಡೆ ಮಿಲ್‌ನಲ್ಲಿ ಹಾಕಿಸಿಕೊಳ್ಳಿ
ಮಾವಿನಕಾಯಿ ತಯಾರಿ
ತಾಜಾ ಅಪ್ಪೆಮಿಡಿಗಳನ್ನು ತೊಳೆದು, ನೀರಿನಾಂಶ ಹೋಗುವಂತೆ ಒರೆಸಿಕೊಳ್ಳಿ. ಅದರ ತೊಟ್ಟನ್ನು ಪೂರ್ತಿಯಾಗಿ ತೆಗೆಯದೆ, ಉಪ್ಪು ಹಾಕಿ ಒಂದು ಪಿಂಗಾಣಿ ಡಬ್ಬದಲ್ಲಿ ಇಡಿ. ಅಥವಾ ಬೇರೆ ಬಕೆಟ್ ಇನ್ನಿತರ ದೊಡ್ಡ ಡಬ್ಬದಲ್ಲಿ ಹಾಕಿಡಬೇಕು. ಇದರ ಮೇಲೆ ತೂಕ ಇರುವ ಕಲ್ಲು ಕೂಡ ಹೇರಲಾಗುವುದು. ಹದಿನೈದು ದಿನದ ಬಳಿಕ ಈ ಮಾವಿನಕಾಯಿ ಚಿರುಟುವುದು, ಚೆನ್ನಾಗಿ ಚಿರುಟಿದ ಬಳಿಕ ಅದನ್ನು ತೆಗೆಯಿರಿ. ಹದಿನೈದು ದಿನದಲ್ಲಿ ನಾಲ್ಕು ಬಾರಿ ಸೌಟು ಹಾಕಿ, ಎಲ್ಲ ಮಾವಿನ ಕಾಯಿಗೂ ಉಪ್ಪು ತಾಕಿದೆಯೇ ಎಂದು ಚೆಕ್ ಮಾಡಿಕೊಳ್ಳಬೇಕು
ನೀರಿನ ಅಂಶ ಹಾಳಾಗಲ್ಲ
ಮೆಣಸಿನ ಹಿಟ್ಟು, ಆಮೇಲೆ ಮಸಾಲೆ ಪೌಡರ್, ಉಪ್ಪು ನೀರಿನ ಮಿಶ್ರಣ ಮಾಡಿ, ಇದನ್ನು ಆಮೇಲೆ ಚಿರುಟಿರುವ ಅಪ್ಪೇಮಿಡಿಗೆ ಹಾಕಿ ಸರಿಯಾದ ಡಬ್ಬದಲ್ಲಿ ಹಾಕಿಡಿ. ಇದನ್ನು ಸರಿಯಾಗಿ ಕವರ್ ಮಾಡಿಕೊಳ್ಳಿ. ಆಮೇಲೆ ನೀರಿನ ಅಂಶ ಸ್ವಲ್ಪವೂ ತಾಗಬಾರದು. ಈ ರೀತಿ ಮಾಡಿದರೆ ಉಪ್ಪಿನಕಾಯಿ ಮೂರು ವರ್ಷವಾದರೂ ಹಾಳಾಗಲ್ಲ.
ಪೌಡರ್ ಮಾಡಿಕೊಳ್ಳಿ
ನೀರಿಗೆ ಸರಿಯಾಗಿ ಉಪ್ಪು ಹಾಕಿ, ಉಪ್ಪು ನೀರು ಮಾಡಿಕೊಳ್ಳಿ
ಸಾಸಿವೆ, ಮೆಂತೆ, ಜೀರಿಗೆ, ಒಣಶುಂಠಿ, ಜಾಯಿಕಾಯಿ, ಬೋಳು ಕಾಳು, ಲವಂಗ ಎಲ್ಲವನ್ನು ಫ್ರೈ ಮಾಡಿಕೊಳ್ಳಿ, ಇದೆಲ್ಲವನ್ನು ಆಮೇಲೆ ಪೌಡರ್ ಮಾಡಿಕೊಳ್ಳಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

