- Home
- Life
- Food
- ಚಳಿಗಾಲದಲ್ಲಿ ತಿನ್ನಲೇಬೇಕಾದ ತರಕಾರಿಗಳಿವು: ಆದರೆ ಈ ಸಮಸ್ಯೆ ಇರೋರು ಮಾತ್ರ ಜಾಸ್ತಿ ತಿನ್ನುವಂತಿಲ್ಲ!
ಚಳಿಗಾಲದಲ್ಲಿ ತಿನ್ನಲೇಬೇಕಾದ ತರಕಾರಿಗಳಿವು: ಆದರೆ ಈ ಸಮಸ್ಯೆ ಇರೋರು ಮಾತ್ರ ಜಾಸ್ತಿ ತಿನ್ನುವಂತಿಲ್ಲ!
ಚಳಿಗಾಲದಲ್ಲಿ ಸುಖವಾಗಿರಲು ಯಾವುದೇ ಕಾಯಿಲೆಗಳು ಬರದದಂತಿರಲು ತಿನ್ನುವ ಆಹಾರವೂ ತುಬಾ ಮುಖ್ಯ. ಚಳಿಗಾಲದಲ್ಲಿ ಯಾವಾ ಆಹಾರ ತಿನ್ನಬೇಕು? ಕೆಲವರು ಏಕೆ ತಿನ್ನಬಾರದು? ಇಲ್ಲಿದೆ ಸಂಪೂರ್ವಣ ವಿವರ

ಚಳಿಗಾಲದಲ್ಲಿ ತಿನ್ನಬೇಕಾದ ತರಕಾರಿಗಳಿವು!
ಮೈ ನಡುಗಿಸುವ ಚಳಿಗಾಲ ಆರಂಭವಾಗಿದೆ. ಇದರ ಜೊತೆಗೆ ಚಳಿಗಾಲದಲ್ಲಿ ತಿನ್ನುವ ಆಹಾರವು ಕೂಡ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅಂದರೆ ಇಲ್ಲಿ ಕಾಲ ಅಷ್ಟೇ ಅಲ್ಲ, ಕಾಲಕ್ಕೆ ತಕ್ಕಂತೆ ಆಹಾರ ಪದ್ಧತಿಯೂ ಬದಲಾಗಬೇಕು. ಚಳಿಗಾಲದ ವಾತಾವರಣವೆ ಬೇರೆ. ಕೆಲವೊಂದು ತರಕಾರಿಗಳು ತಿನ್ನಬಾರದು. ಇನ್ನು ಚಳಿಗಾಲದಲ್ಲಿ ದೇಹಕ್ಕೆ ಅಗತ್ಯವಾದ ಜೀವಸತ್ವಗಳು, ಖನಿಜಗಳು, ಫೈಬರ್ ಸಾಕಷ್ಟು ಪ್ರಮಾಣದಲ್ಲಿ ಬೇಕು. ಹೀಗಾಗಿ ಎಂದಿನಂತೆ ಅನ್ನ ಸಾಂಬಾರು ಸಾಲದು. ಮಾರುಕಟ್ಟೆಯಲ್ಲಿ ಸಿಗುವ ಕೆಲವು ತರಕಾರಿಗಳು ಚಳಿಗಾಲದಲ್ಲಿ ಯಥೇಚ್ಛವಾಗಿ ತಿನ್ನಬೇಕು. ವಿಶೇಷವಾಗಿ ಗ್ರೀನ್ಸ್, ಕ್ಯಾರೆಟ್, ಬೀಟ್ರೂಟ್ ಮತ್ತು ಎಲೆಕೋಸು ಮುಂತಾದ ತರಕಾರಿಗಳು ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ಒದಗಿಸುತ್ತವೆ. ಚಳಿಗಾಲದಲ್ಲಿ ಯಾವ್ಯಾವ ತರಕಾರಿಗಳು ತಿನ್ನಬೇಕು, ಯಾವವು ತಿನ್ನಬಾರದು ಎಂಬುದನ್ನ ಇಲ್ಲಿ ತಿಳಿಯೋಣ.
ಕ್ಯಾರೆಟ್
ಕ್ಯಾರೆಟ್ನಲ್ಲಿ ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದೆ. ಇದು ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ. ಉತ್ತಮ ದೃಷ್ಟಿ, ಚರ್ಮದ ಆರೋಗ್ಯ ಮತ್ತು ರೋಗನಿರೋಧಕ ವ್ಯವಸ್ಥೆಯ ಸಾಮಾನ್ಯ ಕಾರ್ಯನಿರ್ವಹಣೆಗೆ ವಿಟಮಿನ್ ಎ ಅವಶ್ಯಕವಾಗಿದೆ. ಕ್ಯಾರೆಟ್ನಲ್ಲಿ ಫೈಬರ್ ಕೂಡ ಇರುತ್ತದೆ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಕ್ಯಾರೆಟ್ ಅನ್ನು ಕಚ್ಚಾ, ಸಲಾಡ್ ರೂಪದಲ್ಲಿ ಅಥವಾ ತರಕಾರಿಯಾಗಿ ತಿನ್ನಬಹುದು.
ಪಾಲಕ್ ಸೊಪ್ಪು: ಯಾರು ತಿನ್ನಬೇಕು? ಯಾರು ತಿನ್ನಬಾರದು?
ಪಾಲಕ್ ಸೊಪ್ಪು ಕಬ್ಬಿಣ, ಫೋಲೇಟ್, ವಿಟಮಿನ್ ಕೆ, ವಿಟಮಿನ್ ಎ ಮತ್ತು ಫೈಬರ್ ನಂತಹ ಪೋಷಕಾಂಶ ತುಂಬಾ ಸಿಗುತ್ತೆ. ದೇಹದೊಳಗಿನ ಇವು ಕೆಂಪು ರಕ್ತ ಕಣಗಳ ಹೆಚ್ಚಳ ಮಾಡುತ್ತಲ್ಲದೆ, ಮೂಳೆಗಳ ಬೆಳವಣಿಗೆ ಜೊತೆಗೆ ದೇಹದ ಸಾಮಾನ್ಯ ಕಾರ್ಯಗಳಿಗೆ ಶಕ್ತಿ ನೀಡುತ್ತದೆ.. ಚಳಿಗಾಲದಲ್ಲಿ ಪಾಲಕ್ ಸೊಪ್ಪನ್ನು ಬೇಳೆ, ಕರಿ ಮತ್ತು ಸೂಪ್ ರೂಪದಲ್ಲಿ ಕುಡಿಯಬಹುದು. ಆದರೆ ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಇರುವ ಜನರು ಹೆಚ್ಚು ಪಾಲಕ್ ಸೊಪ್ಪು ತಿನ್ನದಿರುವುದು ಉತ್ತಮ.
ಬೀಟ್ರೂಟ್: ಚಳಿಗಾಲದಲ್ಲಿ ಬೀಟ್ರೂಟ್ ಏಕೆ ತಿನ್ನಬೇಕು?
ಬೀಟ್ರೂಟ್ ತಿನ್ನುವುದು ತುಂಬಾ ಮುಖ್ಯ. ಅದರಲ್ಲಿನ ಫೋಲೇಟ್, ಪೊಟ್ಯಾಸಿಯಮ್, ಫೈಬರ್ ಮತ್ತು ನೈಸರ್ಗಿಕ ನೈಟ್ರೇಟ್ಗಳಿಂದ ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತನೆಗೊಂಡು ರಕ್ತನಾಳಗಳ ಸುಧಾರಿಸುತ್ತದೆ. ಅಲ್ಲದೆ ದೇಹದೊಳಗೆ ರಕ್ತ ಪರಿಚಲನೆಗೆ ಒಳ್ಳೆಯದು. ಬೀಟ್ರೂಟ್ ಅನ್ನು ಬೇಯಿಸಿ ತರಕಾರಿಯಾಗಿ ಅಥವಾ ಸಲಾಡ್ನಲ್ಲಿ ತಿನ್ನಬಹುದು.
ಬ್ರೊಕೊಲಿ
ಬ್ರೊಕೊಲಿಯಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, ಫೋಲೇಟ್, ಫೈಬರ್ ಮತ್ತು ಅಂಟಿಯಾಕ್ಸೈಡ್(antioxidant compounds)ಇವೆ. ಇವು ದೇಹದಲ್ಲಿನ ರೋಗನಿರೋಧಕ ವ್ಯವಸ್ಥೆಯನ್ನ ಸುಧಾರಿಸಿ, ಮೂಳೆಯ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಪ್ರಯೋಜನವಾಗಿದೆ. ಬ್ರೊಕೊಲಿಯನ್ನು ಲಘುವಾಗಿ ಆವಿಯಲ್ಲಿ ಬೇಯಿಸಿ ಅಥವಾ ಕಡಿಮೆ ಎಣ್ಣೆಯಿಂದ ಬೇಯಿಸಿ ತಿನ್ನುವುದು ಉತ್ತಮ.
ಎಲೆಕೋಸು
ಎಲೆಕೋಸಿನಲ್ಲಿ ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಫೈಬರ್ ತುಂಬಾ ಇದೆ. ಹೀಗಾಗಿ ಇದನ್ನು ನಿಯಮಿತ ಸೇವನೆಯಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿ, ಮೂಳೆಗಳ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ ವಿಶೇಷ ಅಂದ್ರೆ ಇದರಲ್ಲಿ ಕ್ಯಾಲೋರಿಗಳು ಕಡಿಮೆ ಇರುವುದರಿಂದ ತೂಕ ನಿಯಂತ್ರಣ ಮಾಡೂವವರಿಗೂ ಉತ್ತಮ.
ಚಳಿಗಾಲದಲ್ಲಿ ಮೂಲಂಗಿ ಸೇವನೆ: ಯಾರು ತಿನ್ನಬೇಕು?
ಮೂಲಂಗಿಯಲ್ಲಿ ನೀರಿನ ಅಂಶ ಹೆಚ್ಚಿದೆ ಜೊತೆಗೆ ಫೈಬರ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇವು ದೇಹಕ್ಕೆ ಹೈಡ್ರೆಶನ್ ನೀಡುತ್ತವೆ. ಹೀಗಾಗಿ ಇವುಗಳ ಸೇವನೆ ಜೀರ್ಣಕ್ರಿಯೆಗೂ ಒಳ್ಳೆದು. ಮೂಲಂಗಿಯನ್ನು ತರಕಾರಿ ಮಾಡಿಕೊಂಡು ಅಥವಾ ಹಸಿಯಾಗಿ ತಿನ್ನಬಹುದು. ಮೂಲಂಗಿ ತಿನ್ನುವುದರಿಂದ ಗ್ಯಾಸ್ ಅಥವಾ ಉಬ್ಬರ ಸಮಸ್ಯೆ ಆಗಬಹುದು. ಹೀಗಾಗಿ ಅಂತಹ ಜನರು ತಿನ್ನುವ ಮುನ್ನ ಚೆನ್ನಾಗಿ ಬೇಯಿಸುವುದು ಮುಖ್ಯ.
ಮೆಂತ್ಯೆ
ಮೆಂತ್ಯವು ಕಬ್ಬಿಣ, ಫೋಲೇಟ್, ವಿಟಮಿನ್ ಕೆ ಮತ್ತು ಫೈಬರ್ನಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಇವು ರಕ್ತ ಕಣಗಳ ಉತ್ಪಾದನೆ, ಮೂಳೆಯ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಮೆಂತ್ಯವನ್ನು ದ್ವಿದಳ ಧಾನ್ಯಗಳು, ಕರಿಬೇವು ಅಥವಾ ರೊಟ್ಟಿಗಳಲ್ಲಿ ಸೇವಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.















