ಮಕ್ಕಳಿಗಾಗಿ ಮಾಡಿಕೊಡಿ ರುಚಿಯಾದ 4 ವಿಭಿನ್ನ ಕ್ರಿಸ್ಪಿ & ಟೇಸ್ಟಿ ದೋಸೆಗಳು
ರೊಟೀನ್ ದೋಸೆ ತಿಂದು ಬೋರ್ ಆಗಿದ್ರೆ, ಈ ವಿಭಿನ್ನ ದೋಸೆಗಳನ್ನು ಟ್ರೈ ಮಾಡಿ. ಕ್ರಿಸ್ಪಿ ಮತ್ತು ಟೇಸ್ಟಿ ದೋಸೆಗಳಿಗೆ ಯಾರೂ ಇಲ್ಲ ಅನ್ನೋಲ್ಲ. ದೋಸೆ ಇಷ್ಟಪಡದವರೂ ಇವುಗಳಿಗೆ ಫ್ಯಾನ್ ಆಗ್ತಾರೆ.

ಬಾರ್ಲಿ ದೋಸೆ
ಬಾರ್ಲಿ ಆರೋಗ್ಯಕರ ಧಾನ್ಯ, ಹೆಚ್ಚು ನಾರಿನಂಶ ಮತ್ತು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿದೆ. ಬಾರ್ಲಿ ದೋಸೆ ಸಾಮಾನ್ಯ ಅಕ್ಕಿ ದೋಸೆಗಿಂತ ರುಚಿ ಮತ್ತು ಕ್ರಿಸ್ಪಿಯಾಗಿರುತ್ತದೆ. ಜೀರ್ಣಕ್ರಿಯೆಗೆ ಒಳ್ಳೆಯದು ಮತ್ತು ಶಕ್ತಿ ನೀಡುತ್ತದೆ.
ಬಾರ್ಲಿ ದೋಸೆಗೆ ಬೇಕಾಗುವ ಸಾಮಗ್ರಿಗಳು:
ಬಾರ್ಲಿ - 1 ಕಪ್, ಉದ್ದಿನಬೇಳೆ - 1/4 ಕಪ್, ಮೆಂತ್ಯ - 1/4 ಟೀ ಚಮಚ, ಉಪ್ಪು - ರುಚಿಗೆ ತಕ್ಕಷ್ಟು, ಎಣ್ಣೆ - ಬೇಕಾದಷ್ಟು.
ಬಾರ್ಲಿ ದೋಸೆ ಮಾಡುವ ವಿಧಾನ:
ಬಾರ್ಲಿ, ಉದ್ದಿನಬೇಳೆ, ಮೆಂತ್ಯೆಯನ್ನು 4-6 ಗಂಟೆ ನೆನೆಸಿ. ನುಣ್ಣಗೆ ರುಬ್ಬಿ, ಉಪ್ಪು ಹಾಕಿ 8-10 ಗಂಟೆ ಹುದುಗಿಸಿ. ಕಾವಲಿ ಮೇಲೆ ದೋಸೆ ಹಿಟ್ಟು ಹಾಕಿ ಎರಡೂ ಬದಿ ಕ್ರಿಸ್ಪಿಯಾಗಿ ಬೇಯಿಸಿ.
ಕಾಯಿ ದೋಸೆ
ದಕ್ಷಿಣ ಭಾರತದಲ್ಲಿ ಫೇಮಸ್ ಬ್ರೇಕ್‌ಫಾಸ್ಟ್. ತೆಂಗಿನಕಾಯಿಯ ಸಿಹಿ ರುಚಿ ಮತ್ತು ಕ್ರಿಸ್ಪಿಯಾಗಿರುತ್ತದೆ. ಜೀರ್ಣಿಸಿಕೊಳ್ಳಲು ಸುಲಭ. ಇದನ್ನು ನೀರ್ ದೋಸೆ ಅಂತಾನೂ ಕರೆಯಲಾಗುತ್ತದೆ.
ಕಾಯಿ ದೋಸೆಗೆ ಬೇಕಾಗುವ ಸಾಮಗ್ರಿಗಳು:
ಅಕ್ಕಿ - 1 ಕಪ್, ತುರಿದ ತೆಂಗಿನಕಾಯಿ - 1/2 ಕಪ್, ಮೆಂತ್ಯ - 1/4 ಟೀ ಚಮಚ, ಉಪ್ಪು - ರುಚಿಗೆ ತಕ್ಕಷ್ಟು, ಎಣ್ಣೆ - ಬೇಕಾದಷ್ಟು.
ಕಾಯಿ ದೋಸೆ ಮಾಡುವ ವಿಧಾನ:
ಅಕ್ಕಿ, ಮೆಂತ್ಯ ನೆನೆಸಿ, ತುರಿದ ತೆಂಗಿನಕಾಯಿ ಸೇರಿಸಿ ರುಬ್ಬಿ. ಉಪ್ಪು ಹಾಕಿ 6-8 ಗಂಟೆ ಹುದುಗಿಸಿ. ದೋಸೆ ಕಲ್ಲಿನ ಮೇಲೆ ಹಾಕಿ ಕ್ರಿಸ್ಪಿಯಾಗಿ ಬೇಯಿಸಿ. ಚಟ್ನಿ/ಸಾಂಬಾರ್ ಜೊತೆ ಸವಿಯಿರಿ.
ಶೇಂಗಾ ಹಿಟ್ಟಿನ ದೋಸೆ:
ಶೇಂಗಾ ಹಿಟ್ಟಿನ ದೋಸೆ ಒಂದು ವಿಶಿಷ್ಟ ಮತ್ತು ಆರೋಗ್ಯಕರ ದೋಸೆ. ಇದನ್ನು ತ್ವರಿತವಾಗಿ ತಯಾರಿಸಬಹುದು, ಹುದುಗಿಸಬೇಕಾಗಿಲ್ಲ. ಪ್ರೋಟೀನ್ ಮತ್ತು ನಾರಿನಂಶದಿಂದ ಸಮೃದ್ಧ.
ಶೇಂಗಾ ಹಿಟ್ಟಿನ ದೋಸೆಗೆ ಬೇಕಾಗುವ ಸಾಮಗ್ರಿಗಳು:
ಅಕ್ಕಿ ಹಿಟ್ಟು - 1/2 ಕಪ್, ಶೇಂಗಾ ಹಿಟ್ಟು - 1/4 ಕಪ್, ರವೆ - 1/4 ಕಪ್, ಜೀರಿಗೆ - 1/2 ಟೀ ಚಮಚ, ಮೆಣಸು - 1/2 ಟೀ ಚಮಚ, ಈರುಳ್ಳಿ - 2, ಹಸಿಮೆಣಸಿನಕಾಯಿ - 2, ಉಪ್ಪು - ರುಚಿಗೆ ತಕ್ಕಷ್ಟು, ನೀರು - ಬೇಕಾದಷ್ಟು, ಎಣ್ಣೆ - ಬೇಕಾದಷ್ಟು.
ಶೇಂಗಾ ಹಿಟ್ಟಿನ ದೋಸೆ ಮಾಡುವ ವಿಧಾನ:
ಎಲ್ಲಾ ಪದಾರ್ಥಗಳನ್ನು ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ. ದೋಸೆ ಕಲ್ಲಿನ ಮೇಲೆ ಹಾಕಿ ಎಣ್ಣೆ ಹಾಕಿ ಕ್ರಿಸ್ಪಿಯಾಗಿ ಬೇಯಿಸಿ.
ಸಬ್ಬಕ್ಕಿ ದೋಸೆ:
ಸಬ್ಬಕ್ಕಿ ದೇಹಕ್ಕೆ ತಂಪು ಮತ್ತು ಶಕ್ತಿ ನೀಡುತ್ತದೆ. ಸಬ್ಬಕ್ಕಿ ದೋಸೆ ಮೃದು ಮತ್ತು ಕ್ರಿಸ್ಪಿಯಾಗಿರುತ್ತದೆ. ಜೀರ್ಣಿಸಿಕೊಳ್ಳಲು ಸುಲಭ. ಮಕ್ಕಳಿಗೆ ಇಷ್ಟವಾಗುತ್ತದೆ. ಮೊಸರು ಸೇರಿಸಿದರೆ ಮೃದುವಾಗುತ್ತದೆ.
ಸಬ್ಬಕ್ಕಿ ದೋಸೆಗೆ ಬೇಕಾಗುವ ಸಾಮಗ್ರಿಗಳು:
ಸಬ್ಬಕ್ಕಿ - 1/2 ಕಪ್, ಅಕ್ಕಿ ಹಿಟ್ಟು - 1/4 ಕಪ್, ರವೆ - 1/4 ಕಪ್, ಮೊಸರು - 1/4 ಕಪ್, ಹಸಿಮೆಣಸಿನಕಾಯಿ - 1, ಶುಂಠಿ - 1/2 ಇಂಚು, ಕೊತ್ತಂಬರಿ ಸೊಪ್ಪು - ಸ್ವಲ್ಪ, ಜೀರಿಗೆ - 1/2 ಟೀ ಚಮಚ, ಉಪ್ಪು - ರುಚಿಗೆ ತಕ್ಕಷ್ಟು, ನೀರು - ಬೇಕಾದಷ್ಟು, ಎಣ್ಣೆ - ಬೇಕಾದಷ್ಟು.
ಸಬ್ಬಕ್ಕಿ ದೋಸೆ ಮಾಡುವ ವಿಧಾನ:
ಸಬ್ಬಕ್ಕಿಯನ್ನು ನೆನೆಸಿ ರುಬ್ಬಿ. ಎಲ್ಲಾ ಪದಾರ್ಥಗಳನ್ನು ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ. ದೋಸೆ ಕಲ್ಲಿನ ಮೇಲೆ ಹಾಕಿ ಎಣ್ಣೆ ಹಾಕಿ ಕ್ರಿಸ್ಪಿಯಾಗಿ ಬೇಯಿಸಿ. ಚಟ್ನಿ/ಸಾಂಬಾರ್ ಜೊತೆ ಸವಿಯಿರಿ.