- Home
- Life
- Food
- ಗೋಧಿಗಿಂತ ಈ 3 ವಿಧದ ಹಿಟ್ಟಿನಿಂದ ತಯಾರಿಸಿದ ಚಪಾತಿ ತಿಂದ್ರೆ ಏರೋದಿಲ್ಲ ಬ್ಲಡ್ ಶುಗರ್: ಒಮ್ಮೆ ಟ್ರೈ ಮಾಡಿ!
ಗೋಧಿಗಿಂತ ಈ 3 ವಿಧದ ಹಿಟ್ಟಿನಿಂದ ತಯಾರಿಸಿದ ಚಪಾತಿ ತಿಂದ್ರೆ ಏರೋದಿಲ್ಲ ಬ್ಲಡ್ ಶುಗರ್: ಒಮ್ಮೆ ಟ್ರೈ ಮಾಡಿ!
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಗೋಧಿ ಹಿಟ್ಟಿನ ಚಪಾತಿಗಳಿಗಿಂತ ಈ 3 ವಿಧದ ಹಿಟ್ಟಿನಿಂದ ಮಾಡಿದ ಚಪಾತಿಗಳು ಹೆಚ್ಚು ಪ್ರಯೋಜನಕಾರಿ. ಈ ಚಪಾತಿಗಳು ಮತ್ತು ಅವುಗಳನ್ನು ತಯಾರಿಸುವ ವಿಧಾನಗಳ ಬಗ್ಗೆ ಇಲ್ಲಿ ತಿಳಿಯಿರಿ.

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರಿಗೆ ಚಿಕ್ಕ ವಯಸ್ಸಿನಲ್ಲೇ ಸಕ್ಕರೆ ಕಾಯಿಲೆ ಬರುತ್ತಿದೆ. ಸರಿಯಾದ ಜೀವನಶೈಲಿ ಇಲ್ಲದಿರುವುದು ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಗಳಿಂದಾಗಿ ಸಕ್ಕರೆ ಕಾಯಿಲೆ ಬರುತ್ತಿದೆ. ದೇಹದಲ್ಲಿ ಇನ್ಸುಲಿನ್ ಕಡಿಮೆಯಾಗಿ, ರಕ್ತದಲ್ಲಿ ಸಕ್ಕರೆ ಹೆಚ್ಚಾಗುವುದರಿಂದ ಈ ಮಧುಮೇಹ ಬರುತ್ತದೆ. ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಕ್ಕರೆ ಇರುವವರು ಬೆಳಿಗ್ಗೆಯಿಂದ ರಾತ್ರಿಯವರೆಗೆ ತಮ್ಮ ಆಹಾರದ ಬಗ್ಗೆ ಜಾಗರೂಕರಾಗಿರಬೇಕು. ಕೆಲವು ರೀತಿಯ ಚಪಾತಿಗಳನ್ನು ತಿನ್ನುವುದರಿಂದ ಸಕ್ಕರೆ ನಿಯಂತ್ರಣದಲ್ಲಿರುತ್ತದೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ.
ಜೋಳದ ಚಪಾತಿ: ನಿಮಗೆ ಸಕ್ಕರೆ ಮಟ್ಟ ಹೆಚ್ಚಾಗಿದ್ದರೆ ಜೋಳದ ಹಿಟ್ಟಿನಿಂದ ಚಪಾತಿ ಮಾಡಿಕೊಂಡು ತಿನ್ನಿ. ಜೋಳದಲ್ಲಿ ಮೆಗ್ನೀಸಿಯಮ್, ಪ್ರೋಟೀನ್ ಮತ್ತು ನಾರಿನಂಶ ಇರುತ್ತದೆ. ಇವು ಸಕ್ಕರೆ ಮಟ್ಟವನ್ನು ನಿಯಂತ್ರಿಸಿ ದೇಹವನ್ನು ಆರೋಗ್ಯವಾಗಿಡುತ್ತವೆ. ಜೋಳದ ಚಪಾತಿಯಲ್ಲಿ ಪಿಷ್ಟ ಪದಾರ್ಥ ಕಡಿಮೆ ಇರುವುದರಿಂದ ಹಲವು ವೈದ್ಯರು ಈ ಚಪಾತಿ ತಿನ್ನಲು ಸಲಹೆ ನೀಡುತ್ತಾರೆ.
ತಯಾರಿಸುವ ವಿಧಾನ: ಒಂದು ಕಪ್ ಜೋಳದ ಹಿಟ್ಟಿಗೆ ಒಂದು ಚಮಚ ತುಪ್ಪ, ಸ್ವಲ್ಪ ಉಪ್ಪು ಹಾಕಿ ನೀರು ಹಾಕುತ್ತಾ ಚಪಾತಿ ಹಿಟ್ಟಿನಂತೆ ಕಲಸಿ. ಸ್ವಲ್ಪ ಹೊತ್ತು ಬಿಟ್ಟು ಚಪಾತಿ ಮಾಡಿಕೊಂಡು ತಿನ್ನಿ.
ರಾಗಿ ಚಪಾತಿ: ರಾಗಿಯಲ್ಲಿ ನಾರಿನಂಶ ಹೆಚ್ಚಾಗಿರುವುದರಿಂದ ಇದರಿಂದ ಮಾಡಿದ ಚಪಾತಿ ತಿನ್ನುವುದು ಸಕ್ಕರೆ ಇರುವವರಿಗೂ ಒಳ್ಳೆಯದು. ಇದು ಸಕ್ಕರೆ ಮಟ್ಟ ಹೆಚ್ಚಾಗದಂತೆ ತಡೆಯುತ್ತದೆ. ಅಷ್ಟೇ ಅಲ್ಲ, ರಾಗಿಯಲ್ಲಿ ಖನಿಜಗಳು ಮತ್ತು ಅಮೈನೋ ಆಮ್ಲಗಳು ಹೆಚ್ಚಾಗಿರುವುದರಿಂದ ಅವು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಆದ್ದರಿಂದ ರಾತ್ರಿಯ ವೇಳೆ ಸಕ್ಕರೆ ಇರುವವರು ರಾಗಿ ಚಪಾತಿ ತಿನ್ನಬಹುದು.
ತಯಾರಿಸುವ ವಿಧಾನ: ಒಂದು ಕಪ್ ರಾಗಿ ಹಿಟ್ಟಿಗೆ ನೀರು ಹಾಕುತ್ತಾ ಚಪಾತಿ ಹಿಟ್ಟಿನಂತೆ ಕಲಸಿ. ಚಪಾತಿಗಳು ಒಡೆಯದಂತೆ ನಿಧಾನವಾಗಿ ಕಲಸಿ. ಚಪಾತಿ ತಟ್ಟುವಾಗ ಒಂದು ಬಟ್ಟೆಯಿಂದ ನಿಧಾನವಾಗಿ ಒತ್ತಿ ಹಾಕುತ್ತಾ ತಟ್ಟಿದರೆ ಚೆನ್ನಾಗಿ ಬರುತ್ತವೆ.
ಓಟ್ಸ್ ಚಪಾತಿ: ಓಟ್ಸ್ ತಿಂದರೆ ತೂಕ ಇಳಿಯುತ್ತದೆ ಎಂದು ನಿಮಗೆ ತಿಳಿದಿದೆ. ಆದರೆ ಸಕ್ಕರೆ ಇರುವವರಿಗೂ ಓಟ್ಸ್ ತುಂಬಾ ಒಳ್ಳೆಯದು. ಓಟ್ಸ್ ಚಪಾತಿ ತಿಂದರೆ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಮುಖ್ಯವಾಗಿ ಟೈಪ್ 2 ಮಧುಮೇಹ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಓಟ್ಸ್‌ನಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುತ್ತದೆ. ಇದರಲ್ಲಿರುವ ನಾರಿನಂಶ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಓಟ್ಸ್‌ನಲ್ಲಿರುವ ಬೀಟಾ ಗ್ಲುಕಾನ್ ಮಧುಮೇಹ ಬರುವ ಸಾಧ್ಯತೆಯನ್ನೂ ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಇದು ಹೃದಯ ಸಂಬಂಧಿ ಕಾಯಿಲೆಗಳಿಂದಲೂ ರಕ್ಷಿಸುತ್ತದೆ.
ತಯಾರಿಸುವ ವಿಧಾನ: ಮೊದಲು ಓಟ್ಸ್ ಅನ್ನು ಮಿಕ್ಸಿಯಲ್ಲಿ ಚೆನ್ನಾಗಿ ಪುಡಿ ಮಾಡಿ, ಗೋಧಿ ಹಿಟ್ಟಿನೊಂದಿಗೆ ಕಲಸಿ. ಅದಕ್ಕೆ ಸ್ವಲ್ಪ ಉಪ್ಪು ಹಾಕಿ, ನೀರು ಹಾಕುತ್ತಾ ಚಪಾತಿ ಹಿಟ್ಟಿನಂತೆ ಕಲಸಿ. ನಂತರ ಚಪಾತಿ ಮಾಡಿಕೊಂಡು ತಿನ್ನಿ.