ಪಿರಿಯಡ್ಸ್ ನ ಈ ದಿನಗಳಲ್ಲಿ ಕೂಡಲು ತೊಳೆಯಬೇಡಿ… ಪಿತೃ ದೋಷ ಕಾಡುತ್ತೆ!
ಹಿಂದೂ ಧರ್ಮದಲ್ಲಿ, ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಕೆಲವು ನಿಯಮಗಳನ್ನು ನೀಡಲಾಗಿದೆ ಮತ್ತು ಅವುಗಳನ್ನು ಪಾಲಿಸದಿದ್ದರೆ, ಪಿತೃ ದೋಷವನ್ನು ಎದುರಿಸಬೇಕಾಗಬಹುದು. ಮುಟ್ಟಿನ ಸಮಯದಲ್ಲಿ ಕೂದಲು ತೊಳೆಯಲು ಏನು ನಿಯಮಗಳಿವೆ ನೋಡೋಣ.

ಋತುಚಕ್ರದ ಸಮಯದಲ್ಲಿ ಕೂದಲು ತೊಳೆಯುವ ನಿಯಮಗಳು
ಹಿಂದೂ ಧಾರ್ಮಿಕ ಗ್ರಂಥಗಳು ಋತುಚಕ್ರದ (periods)ಸಮಯದಲ್ಲಿ ಮಹಿಳೆಯರಿಗೆ ಕೆಲವು ನಿಯಮಗಳನ್ನು ನೀಡಿವೆ ಮತ್ತು ಈ ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ, ಸಮೃದ್ಧಿ ಇರುತ್ತೆ. ಮಹಿಳೆಯರು ವಿಶೇಷವಾಗಿ ಋತುಚಕ್ರದ ಸಮಯದಲ್ಲಿ ಯಾವ ದಿನ ಕೂದಲು ತೊಳೆಯಬೇಕು (hair wash) ಮತ್ತು ಯಾವ ದಿನ ಕೂದಲು ತೊಳೆಯಬಾರದು ಎಂದು ತಿಳಿದಿರಬೇಕು? ಏಕೆಂದರೆ ಇದು ಮಹಿಳೆಯರ ಮೇಲೆ ಮಾತ್ರವಲ್ಲದೆ ಇಡೀ ಕುಟುಂಬದ ಮೇಲೂ ಪರಿಣಾಮ ಬೀರುತ್ತದೆ. ಋತುಚಕ್ರದ ಸಮಯದಲ್ಲಿ ಕೂದಲು ತೊಳೆಯುವುದಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ನಿಯಮಗಳನ್ನು ತಿಳಿದುಕೊಳ್ಳೋಣ.
ಪಿತೃ ದೋಷ ಬರಬಹುದು
ಧಾರ್ಮಿಕ ಗ್ರಂಥಗಳ ಪ್ರಕಾರ, ಮಹಿಳೆಯರು ಅಮವಾಸ್ಯೆಯ ತಿಥಿಯಂದು ತಪ್ಪಿಯೂ ಕೂಡ ತಮ್ಮ ಕೂದಲನ್ನು ತೊಳೆಯಬಾರದು. ಹಾಗೆ ಮಾಡೋದ್ರಿಂದ ಪಿತೃ ದೋಷ (Pitru Dosha) ಉಂಟಾಗುತ್ತದೆ ಮತ್ತು ಪಿತೃ ದೋಷದಿಂದಾಗಿ ಮನೆಯಲ್ಲಿ ನಕಾರಾತ್ಮಕತೆ (negativity) ಬರುತ್ತದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ, ಪ್ರಗತಿಯು ಕುಂಟಿತವಾಗುತ್ತದೆ, ಅಷ್ಟೇ ಅಲ್ಲ ಸಂತಾನ ಸಮಸ್ಯೆಗಳು ಸಹ ಉದ್ಭವಿಸಬಹುದು.
ಮುಟ್ಟಿನ ಸಮಯದಲ್ಲಿ ಈ ದಿನ ಕೂದಲು ತೊಳೆಯಬೇಡಿ
ಮುಟ್ಟಿನ ಮೊದಲ ಮತ್ತು ಎರಡನೇ ದಿನದಂದು ಕೂದಲು ತೊಳೆಯುವುದು ನಿಷೇಧಿಸಲಾಗಿದೆ. ಈ ದಿನ ಕೂದಲು ತೊಳೆಯುವುದರಿಂದ ಮಹಿಳೆಯರಿಗೆ ಆರೋಗ್ಯ ಸಮಸ್ಯೆಗಳು (Health Issues) ಉಂಟಾಗುವುದಲ್ಲದೆ, ಜಾತಕದಲ್ಲಿ ಅನೇಕ ಗ್ರಹ ದೋಷಗಳೂ ಉಂಟಾಗಬಹುದು ಎಂದು ಹೇಳಲಾಗುತ್ತದೆ. ಆದ್ದರಿಂದ, ಮುಟ್ಟಿನ ಮೊದಲ ಮತ್ತು ಎರಡನೇ ದಿನದಂದು ಕೂದಲು ತೊಳೆಯುವುದನ್ನು ತಪ್ಪಿಸಿ.
ಈ ದಿನದಂದು ನಿಮ್ಮ ಕೂದಲನ್ನು ತೊಳೆಯಿರಿ
ಋತುಚಕ್ರದ ಮೂರನೇ ದಿನದಂದು ಕೂದಲು ತೊಳೆಯುವುದು ಶುಭವೆಂದು ಪರಿಗಣಿಸಲಾಗುತ್ತದೆ. ಮೂರನೇ ದಿನ ಕೂದಲು ತೊಳೆಯುವುದರಿಂದ ಋತುಚಕ್ರದ ಅಶುದ್ಧತೆ ಕೊನೆಗೊಳ್ಳುತ್ತದೆ ಮತ್ತು ಮಹಿಳೆಯರು ಪೂಜೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗವಹಿಸಬಹುದು ಎಂದು ಹೇಳಲಾಗುತ್ತದೆ.
ಈ ದಿನಗಳಲ್ಲೂ ಕೂದಲು ತೊಳೆಯಬಾರದು
ಧಾರ್ಮಿಕ ನಂಬಿಕೆಗಳ ಪ್ರಕಾರ, ಅಮವಾಸ್ಯೆಯ ಹೊರತಾಗಿ, ಪೂರ್ಣಿಮೆ ಮತ್ತು ಏಕಾದಶಿ ಉಪವಾಸದಂದು ಕೂದಲು ತೊಳೆಯುವುದು ಸಹ ನಿಷಿದ್ಧವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ವಿವಾಹಿತ ಮಹಿಳೆಯರು ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಸಹ ತಮ್ಮ ಕೂದಲನ್ನು ತೊಳೆಯಬಾರದು. ಹಾಗೆ ಮಾಡುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಗಂಡನು ಕೆಲವು ಶುಭ ಕಾರ್ಯಗಳಿಗಾಗಿ ಮನೆಯಿಂದ ಹೊರಗೆ ಹೋಗುತ್ತಿದ್ದರೆ, ಮಹಿಳೆಯರು ತಪ್ಪಿಯೂ ಕೂಡ ತಮ್ಮ ಕೂದಲನ್ನು ತೊಳೆಯಬಾರದು.
ಹಾಗಿದ್ರೆ ಯಾವಾಗ ಕೂದಲು ತೊಳೆಯಬೇಕು?
ಶುಕ್ರವಾರ (Friday) ಕೂದಲು ತೊಳೆಯಲು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಈ ದಿನ ಕೂದಲು ತೊಳೆಯುವುದರಿಂದ ಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳೆ ಮತ್ತು ಮನೆಯಲ್ಲಿ ಸಂತೋಷ, ಸಮೃದ್ಧಿ ಇರುತ್ತದೆ.