ಇಂತಹ ಪೋಷಕರು ಶತ್ರುಗಳಿಗೆ ಸಮ ಎನ್ನುತ್ತಾರೆ ಆಚಾರ್ಯ ಚಾಣಕ್ಯ!
ಆಚಾರ್ಯ ಚಾಣಕ್ಯನು ಕೆಲವೊಂದು ಪೋಷಕರನ್ನು ತಮ್ಮ ಮಕ್ಕಳ ಶತ್ರುಗಳಂತೆ ವರ್ಣಿಸಿದ್ದಾನೆ. ತಮ್ಮ ಜೀವನದುದ್ದಕ್ಕೂ, ಅವರ ಮಕ್ಕಳು ಕೇವಲ ಒಂದು ತಪ್ಪಿಗೆ ತಮ್ಮ ಹೆತ್ತವರನ್ನು ಶಪಿಸುತ್ತಲೇ ಇರುತ್ತಾರೆ. ಅಂತಹ ಪೋಷಕರು ಯಾರು ನೋಡೋಣ,
ಪೋಷಕರು ಅಂದ್ರೆ ಮಕ್ಕಳಿಗೆ ದಾರಿದೀಪ, ಮಕ್ಕಳ ಜೀವನದ ಬೆಳಕು ಅನ್ನೋದನ್ನು ನಾವು ಹಿಂದಿನಿಂದ ಕ್ಲಿಯುತ್ತಾ ಬಂದಿದ್ದೇವೆ. ಆದರೆ ಕೆಲವೊಂದು ಪೋಷಕರಿದ್ದರೆ ಮಕ್ಕಳಿಗೆ ಯಾವುದೇ ಶತ್ರುಗಳ ಅವಶ್ಯಕತೆ ಇಲ್ವೇ ಇಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ (Acharya Chanakya).
ಹಾಗಿದ್ರೆ ಯಾವ ಪೋಷಕರು ಶತ್ರುಗಳಿಗೆ ಸಮಾನ ಅನ್ನುತ್ತಾರೆ ಚಾಣಕ್ಯ ಗೊತ್ತಾ? ಯಾವ ಪೋಷಕರು ಮಕ್ಕಳಿಗೆ ವಿದ್ಯಾಭ್ಯಾಸ ಅಥವಾ ಶಿಕ್ಷಣ ನೀಡುವುದಿಲ್ಲವೋ ಅಂತಹ ಪೋಷಕರು ಶತ್ರುಗಳಿಗೆ (enemies) ಸಮ ಎನ್ನುತ್ತಾರೆ ಚಾಣಕ್ಯ.
ಚಾಣಕ್ಯ ಹೀಗೆ ಯಾಕೆ ಹೇಳುತ್ತಾರೆ ಅಂದ್ರೆ, ವಿಧ್ಯಾಭ್ಯಾಸ (education) ಇಲ್ಲದ ವ್ಯಕ್ತಿ ಇತರ ವಿದ್ಯಾವಂತ ವ್ಯಕ್ತಿಯ ನಡುವೆ ಇದ್ದರೆ, ಅವರಿಗೆ ಗೌರವವೇ ಇರೋದಿಲ್ಲ. ಇದರಿಂದ ಅವರ ಮರ್ಯಾದೆ ಹೋಗುವುದೇ ಹೆಚ್ಚು. ಹೌದಲ್ವಾ?
ವಿಧ್ವಾನರ ತಂಡದಲ್ಲಿ ಅವಿದ್ಯಾವಂತ ವ್ಯಕ್ತಿ ಇದ್ದರೆ, ಅವರ ಅವಮಾನ (insult) ಹೇಗಾಗುತ್ತದೆ ಅಂದರೆ ಹಂಸಗಳ ತಂಡದಲ್ಲಿ ಒಂದು ಕೊಕ್ಕರೆ ಬಂದು ಸೇರಿಕೊಂಡರೆ, ಯಾವ ಮರ್ಯಾದೆ ಸಿಗುತ್ತೋ ಅದೇ ಮರ್ಯಾದೆ ಇವರಿಗೆ ಸಿಗುತ್ತೆ.
ಆಚಾರ್ಯ ಚಾಣಕ್ಯ ಹೇಳುವಂತೆ ಯಾವ ವ್ಯಕ್ತಿಯೂ ಸಹ ಗರ್ಭದಿಂದ ಹೊರ ಬರುವಾಗಲೇ ಬುದ್ಧಿವಂತನಾಗಿರೋದಕ್ಕೆ ಸಾಧ್ಯಾನೆ ಇಲ್ಲ. ಮಕ್ಕಳಿಗೆ ಶಿಕ್ಷಣ ನೀಡಿದಾಗ ಮಾತ್ರ ಅವರು ಬುದ್ಧಿವಂತರಾಗಲು ಸಾಧ್ಯ. ಹಾಗಾಗಿ ಅವರಿಗೆ ಶಿಕ್ಷಣ ನೀಡಿ ಎನ್ನುತ್ತಾರೆ.
ಕೊಕ್ಕರೆಯು ಬಿಳಿ ಬಣ್ಣದ್ದೇ ಆಗಿರಬಹುದು, ಆದರೆ ಒಂದು ಕೊಕ್ಕರೆ ಬಂದು ಹಂಸಗಳ ನಡುವೆ ಕುಳಿತು ತಾನು ಹಂಸ ಎನ್ನಲು ಸಾಧ್ಯವೇ? ಇಲ್ಲ , ಇದರಿಂದ ಕೊಕ್ಕರೆಗೆ ಅವಮಾನ ಖಚಿತ. ಅದೇ ರೀತಿ ವಿದ್ಯಾವಂತರ ಗುಂಪಿನಲ್ಲಿ ಒಬ್ಬ ಅವಿದ್ಯಾವಂತ ಇದ್ದರೆ, ಅವನಿಗೆ ಅವಮಾನ ಗ್ಯಾರಂಟಿ.
ಹಾಗಾಗಿ ಪ್ರತಿಯೊಬ್ಬ ತಂದೆ -ತಾಯಿಯರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ, ಸಂಸ್ಕಾರ ನೀಡಬೇಕು. ಈ ವಿದ್ಯಾಭ್ಯಾಸದಿಂದಲೇ ಅವರು ಜೀವನದಲ್ಲಿ ಗೌರವದಿಂದ (respect), ತಲೆ ಎತ್ತಿ ಬಾಳಲು ಸಾಧ್ಯ.