ಪ್ರತಿ ಮಂತ್ರಕ್ಕೂ ಮೊದಲು ಓಂ ಎಂದು ಹೇಳೊದು ಯಾಕೆ?
ಹಿಂದೂ ಧರ್ಮದಲ್ಲಿ, ಯಾವುದೇ ಮಂತ್ರವನ್ನು ಪಠಿಸುವ ಮೊದಲು ಓಂ ಎಂದು ಪಠಿಸಲಾಗುತ್ತದೆ. ಇದು ಮೂರು ಪದಗಳಿಂದ ಮಾಡಲ್ಪಟ್ಟಿದೆ. ಆದರೆ ಪ್ರತಿ ಮಂತ್ರದ ಮೊದಲು ಓಂ ಅನ್ನು ಏಕೆ ಉಚ್ಚರಿಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಇಲ್ಲಿದೆ ಆ ಬಗ್ಗೆ ಮಾಹಿತಿ.
ಮಂತ್ರದ ಶಕ್ತಿ ಹೆಚ್ಚಾಗುತ್ತದೆ: ಓಂ ಮಂತ್ರವನ್ನು ಪಠಿಸುವುದರಿಂದ ಮನಸ್ಸು ಪರಿಶುದ್ಧವಾಗುತ್ತದೆ ಮತ್ತು ಮಂತ್ರಗಳನ್ನು ಹೆಚ್ಚು ಹೆಚ್ಚು ಪಠಿಸಲು ಸಾಧ್ಯವಾಗುತ್ತೆ. ಜೊತೆಗೆ ಮಂತ್ರದ ಶಕ್ತಿ ಹೆಚ್ಚಾಗುತ್ತದೆ ಎನ್ನಲಾಗುತ್ತೆ.
ದೋಷ ತಗಲೋದಿಲ್ಲ: ಓಂ ಮಂತ್ರವನ್ನು (chanting OM) ಪಠಿಸುವ ಮೂಲಕ ನೀವು ಅಂದುಕೊಂಡ ಪ್ರತಿಯೊಂದು ಆಸೆಯೂ ಈಡೇರುತ್ತದೆ. ಮಂತ್ರದ ಮೊದಲು ಓಂ ಎಂದು ಹೇಳಿದಾಗ ದೋಷ ಉಂಟಾಗೋದಿಲ್ಲ.
ತಪ್ಪಾಗೋದಿಲ್ಲ: ಮಂತ್ರವನ್ನು ಪಠಿಸುವಾಗ ಮೊದಲು ಓಂ (OM) ಎಂದು ಪಠಿಸಿದರೆ, ನೀವು ತಪ್ಪು ಮಾಡಿದರೂ ಸಹ ಅದು ತಪ್ಪು ಎಂದು ಪರಿಗಣಿಸಲಾಗೋದಿಲ್ಲ. ಹಾಗಾಗಿ ಓಂ ಅನ್ನೋದನ್ನು ಮರೆಯಬೇಡಿ.
ವೇದಗಳ ಸಾರ: ಕಟೋಪನಿಷತ್ತಿನ ಪ್ರಕಾರ, ಓಂ ಎಂಬ ಪದವು ವೇದಗಳ ಸಾರವನ್ನು ಒಳಗೊಂಡಿದೆ, ಸನ್ಯಾಸಿಗಳು (Sages) ಮತ್ತು ಯೋಗಿಗಳ ಸಾರವಾಗಿದೆ. ಆದ್ದರಿಂದ, ಮಂತ್ರವನ್ನು ಪಠಿಸಿದಾಗಲೆಲ್ಲಾ, ಓಂ ಎಂದು ಪಠಿಸಬೇಕು.
ಮೂರು ಅಕ್ಷರಗಳಿಂದ ಓಂ: 'ಓಂ' ಎಂಬ ಪದವು ಮೂರು ಅಕ್ಷರಗಳಿಂದ (three letters) ಮಾಡಲ್ಪಟ್ಟಿದೆ.ಅವುಗಳೆಂದರೆ ಅ, ಉ ಮತ್ತು ಮ. ಈ ಒಂದು ಪದವನ್ನು ಇಡೀ ಸೃಷ್ಟಿಯ ಸಂಕೇತವೆಂದು ಪರಿಗಣಿಸಲಾಗಿದೆ.
ಇದು ಸೃಷ್ಟಿಯ ಸಂಕೇತ: ಓಂ ಪದವನ್ನು ಸೃಷ್ಟಿಯ (origin) ಸಂಕೇತವೆಂದು ಪರಿಗಣಿಸಲಾಗುತ್ತದೆ. ಭಗವದ್ಗೀತೆಯ (Bhagavadgeeta) ಪ್ರಕಾರ, ಯಾವುದೇ ಮಂತ್ರ ಪಠಿಸುವಾಗ ಓಂ ಎಂದು ಹೇಳುವುದು ಉತ್ತಮವಾಗಿದೆ.
ಪುಣ್ಯ ಸಿಗುತ್ತೆ: ಶ್ರೀಮದ್ ಭಗವದ್ಗೀತೆಯ ಪ್ರಕಾರ, ಯಾವುದೇ ಮಂತ್ರದ ಮೊದಲು ಓಂ ಎಂದು ಪಠಿಸಿದರೆ, ವ್ಯಕ್ತಿಯು ಪುಣ್ಯವನ್ನು ಪಡೆಯುತ್ತಾನೆ ಎನ್ನಲಾಗುತ್ತೆ. ಹಾಗಾಗಿ ಓಂ ಎಂದು ಹೇಳಲು ಮರೆಯಬೇಡಿ.