Astrology Tips: ಮಂತ್ರದ ಕೊನೆಯಲ್ಲಿ ಮೂರು ಬಾರಿ ಓಂ ಶಾಂತಿ ಅನ್ನೋದೇಕೆ?
ಮಂತ್ರ ಹೇಳಿದ್ಮೇಲೆ ಓಂ ಶಾಂತಿ ಹೇಳದೆ ಹೋದ್ರೆ ಮಂತ್ರ ಅಪೂರ್ಣವಾದಂತೆ. ಇದೇ ಕಾರಣಕ್ಕೆ ಜನರು ಮಂತ್ರ ಮುಗಿದ್ಮೇಲೆ ಮೂರು ಬಾರಿ ಓಂ ಶಾಂತಿ ಪಠಿಸ್ತಾರೆ. ಆದ್ರೆ ಅದ್ರ ಹಿಂದೆ ಇನ್ನೂ ಅನೇಕ ಕಾರಣವಿದೆ.
ಮಂತ್ರ ಉಚ್ಛಾರಣೆ ಮಾಡಿದ ತಕ್ಷಣ ಹೂ, ಹಣ್ಣಾಗಿ ಬದಲಾಗದೆ ಇರಬಹುದು. ಅದ್ಭುತ ಘಟನೆಯೊಂದು ಘಟಿಸದೆ ಇರಬಹುದು. ಆದ್ರೆ ಮನಸ್ಸಿಗೆ ನೆಮ್ಮದಿ ಸಿಗೋದು ನೂರಕ್ಕೆ ನೂರು ಸತ್ಯ. ಪೂಜೆಯಲ್ಲಿ ಪಠಿಸುವ ಪ್ರತಿಯೊಂದು ಮಂತ್ರವೂ ತನ್ನದೇ ಆದ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಪ್ರತಿ ದಿನ ನೀವು ಮಂತ್ರ ಪಠಿಸುವುದ್ರಿಂದ ಜೀವನದಲ್ಲಿ ಸಾಕಷ್ಟು ಪ್ರಯೋಜನವನ್ನು ಪಡೆಯುತ್ತೀರಿ.
ಯಾವುದೇ ಮಂತ್ರ (Mantra) ವನ್ನು ಪಠಿಸಿದ ನಂತರ ನಾವು ಓಂ ಶಾಂತಿ (Om Shanti) ಎಂದು ಪಠಣ ಮಾಡ್ತೇವೆ. ಅನೇಕರಿಗೆ ಕೊನೆಯಲ್ಲಿ ಓಂ ಶಾಂತಿ ಅಂತಾ ಉಚ್ಚರಿಸೋದು ಏಕೆ ಎಂಬುದೇ ತಿಳಿದಿರೋದಿಲ್ಲ. ನಾವಿಂದು ಎಲ್ಲ ಮಂತ್ರದ ನಂತ್ರ ಓಂ ಶಾಂತಿ ಅಂತಾ ಮೂರು ಬಾರಿ ಹೇಳೋದು ಏಕೆ ಎಂಬುದನ್ನು ನಿಮಗೆ ತಿಳಿಸ್ತೇವೆ.
ಗುಡಿಯೊಳಗೆ ದೇವರಿಲ್ಲ..ಈ ದೇವಾಲಯದಲ್ಲಿ ನಡೆಯುತ್ತೆ ಮಹಿಳೆಯ ಸ್ತನದ ಪೂಜೆ
ಮೂರು ಬಾರಿ ಓಂ ಶಾಂತಿ : ದೇವರ ಪೂಜೆ ಮಂತ್ರವಿರಲಿ ಇಲ್ಲ ಬೇರೆ ಯಾವುದೇ ಮಂತ್ರವಿರಲಿ ಅದ್ರ ಕೊನೆಯಲ್ಲಿ ಮೂರು ಬಾರಿ ಓಂ ಶಾಂತಿ, ಶಾಂತಿ, ಶಾಂತಿ ಎನ್ನುತ್ತ ಮಂತ್ರವನ್ನು ಕೊನೆ ಮಾಡ್ತೇವೆ. ಮೂರು ಬಾರಿ ಓಂ ಶಾಂತಿ ಹೇಳಲು ಒಂದು ಕಾರಣ ತ್ರಿವಾರಂ ಸತ್ಯ. ಇದರರ್ಥ ಜ್ಯೋತಿಷ್ಯ (Astrology) ದಲ್ಲಿ ಯಾವುದೇ ಮಂತ್ರ ಅಥವಾ ಭರವಸೆಯನ್ನು ಮೂರು ಬಾರಿ ಹೇಳಿದಾಗ ಅದು ನಿಜವಾಗುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ನೀವು ಶಾಂತಿಯನ್ನು ಬಯಸುತ್ತಿರುವಾಗ ಶಾಂತಿ ಎಂಬ ಶಬ್ಧವನ್ನು ಮೂರು ಬಾರಿ ಜಪಿಸಿದಾಗ ನೀವು ನಿಜವಾಗಿಯೂ ಮಾನಸಿಕ ಶಾಂತಿಯನ್ನು ಪಡೆಯುತ್ತೀರಿ ಎಂದರ್ಥ. ಶಾಂತಿ ಎಂಬ ಪದವು ಸಾಮರಸ್ಯ, ಮೌನ, ಅಹಿಂಸೆ, ಸೌಹಾರ್ದತೆಯನ್ನು ಪ್ರತಿನಿಧಿಸುತ್ತದೆ. ಈ ಕಾರಣದಿಂದಾಗಿ ನಾವು ಈ ಮಂತ್ರವನ್ನು ಜಪಿಸಿದ್ರೆ ಜೀವನದಲ್ಲಿ ವಿಶೇಷ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಮೂರು ಲೋಕದ ಸಂಕೇತ : ಯಾವುದೇ ಮಂತ್ರದ ನಂತರ ಶಾಂತಿ ಮಂತ್ರವನ್ನು ಮೂರು ಬಾರಿ ಜಪಿಸಿದರೆ, ಅದು ಮೂರು ಲೋಕಗಳಿಗೂ ಸಮಾನವಾದ ಫಲಿತಾಂಶವನ್ನು ನೀಡುತ್ತದೆ ಎಂಬ ನಂಬಿಕೆ ಜ್ಯೋತಿಷ್ಯದಲ್ಲಿದೆ. ಮೂರು ಲೋಕ ಅಂದ್ರೆ ಭೂ ಲೋಕ, ಪಾತಾಳ ಲೋಕ, ಸ್ವರ್ಗ ಲೋಕವೆಂದು ಅರ್ಥವಲ್ಲ. ಇದರರ್ಥ ಆಂತರಿಕ ಶಾಂತಿ, ಜಗತ್ತಿನ ಶಾಂತಿ ಮತ್ತು ಆತ್ಮದ ಶಾಂತಿಯಾಗಿದೆ. ನೀವು ಮೂರು ಬಾರಿ ಓಂ ಶಾಂತಿ ಪಠಿಸುವುದ್ರಿಂದ ಶಾಂತಿ, ನೆಮ್ಮದಿ ನಿಮಗೆ ಲಭಿಸುತ್ತದೆ.
ಮನೆಯಲ್ಲಿರುವ ಎಲ್ಲಾ ದೋಷವನ್ನು ನಿವಾರಿಸುತ್ತೆ ಹಸು
ಕೊನೆಯ ಬಾರಿ ಹೇಳುವ ಶಾಂತಿಗಿದೆ ಮಹತ್ವ : ನೀವು ಮೂರು ಬಾರಿ ಓಂ ಶಾಂತಿ ಎನ್ನುತ್ತೀರಿ. ಕೊನೆಯಲ್ಲಿ ಬರುವ ಶಾಂತಿಯನ್ನು ಮೃದುವಾಗಿ ಹೇಳ್ತೀರಿ. ಈ ಮೃದುವಾದ ಪಠಣೆ ಬಹಳ ಮುಖ್ಯ. ಬಾಹ್ಯ ದುಃಖಗಳಿಂದ ಮುಕ್ತರಾಗಿದ್ದರೂ, ಆಂತರಿಕ ಶಾಂತಿ ನಿಮಗೆ ಸಿಕ್ಕಿಲ್ಲವೆಂದ್ರೆ ನೀವು ಶಾಂತರಾಗಲು ಸಾಧ್ಯವಿಲ್ಲ. ನೀವು ಆಂತರಿಕ ಶಾಂತಿಯನ್ನು ಹೊಂದಿದ್ದರೆ ಬಾಹ್ಯ ತೊಡಕಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕೊನೆಯಲ್ಲಿ ಹೇಳುವ ಶಾಂತಿ ಆತಂರಿಕ ವಿಷ್ಯಕ್ಕೆ ಸಂಬಂಧಿಸಿದೆ.
ಸಮಸ್ಯೆಗಳಿಂದ ಪರಿಹಾರ : ಓಂ ಶಾಂತಿ ಎಂದು ಮೂರು ಬಾರಿ ಪಠಿಸುವುದರಿಂದ ಜೀವನದಲ್ಲಿ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಮಂತ್ರವನ್ನು ಹೇಳೋದ್ರಿಂದ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ. ಧನಾತ್ಮಕ ಶಕ್ತಿಯಲ್ಲಿ ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ.
ಇದ್ರಿಂದ ಇದೆ ಇಷ್ಟೆಲ್ಲ ಲಾಭ : ಓಂ ಶಾಂತಿ ಮಂತ್ರ ಪಠಣೆ ಮಾಡುವುದ್ರಿಂದ ಜೀವನದಲ್ಲಿ ಶಕ್ತಿ ಹೆಚ್ಚಿಸುತ್ತದೆ. ಇದು ದೇಹದ ಸಮಸ್ಯೆಯನ್ನು ಗುಣಪಡಿಸುವ ಕಾರ್ಯವಿಧಾನವನ್ನು ಸಕ್ರಿಯಗೊಳಿಸುತ್ತದೆ. ಈ ಮಂತ್ರ ಒತ್ತಡವನ್ನು ನಿವಾರಿಸಲು ಮತ್ತು ಧ್ಯಾನಸ್ಥ ಮನಸ್ಥಿತಿಗೆ ಹೋಗಲು ನೆರವಾಗುತ್ತದೆ. ದಿನದ ಆರಂಭದಲ್ಲಿ ಮತ್ತು ಕೊನೆಯಲ್ಲಿ ನೀವು ಶಾಂತಿ ಮಂತ್ರ ಹೇಳಿದ್ರೆ ನಿಮ್ಮ ಮನಸ್ಸು, ಆತ್ಮಕ್ಕೆ ನೆಮ್ಮದಿ ಸಿಗುತ್ತದೆ.