ಸದಾ ಮನೆಯಲ್ಲಿ ಜಗಳ ಆಗ್ತಿದ್ರೆ ಡಸ್ಟ್ ಬಿನ್ ಕಾರಣ ! ಈಗ್ಲೇ ಜಾಗ ಬದಲಿಸಿ
Vastu tips : ಮನೆಯಲ್ಲಿರುವ ಪ್ರತಿ ವಸ್ತುವೂ ಬಹಳ ಮುಖ್ಯ. ವಾಸ್ತು ಪ್ರಕಾರ, ಎಲ್ಲವೂ ತನ್ನದೇ ಮಹತ್ವ ಹೊಂದಿದೆ. ಬೇಡದ ವಸ್ತುಗಳನ್ನು ತುಂಬಿಡುವ ಕಸದ ಡಬ್ಬ ಕೂಡ ಮನೆಯ ಶಾಂತಿ ಬದಲಿಸುವ ಶಕ್ತಿ ಹೊಂದಿದೆ. ಸರಿಯಾದ ಜಾಗದಲ್ಲಿ ಕಸದ ಡಬ್ಬ ಇಟ್ಟಿಲ್ಲ ಅಂದ್ರೆ ಏನೆಲ್ಲ ಆಗುತ್ತೆ ಗೊತ್ತಾ?

ಕಸದ ಬುಟ್ಟಿ ವಾಸ್ತು ಶಾಸ್ತ್ರ
ಮನೆ ಕೊಳಕನ್ನು ತುಂಬಿಡುವ ಕಸದ ಡಬ್ಬಕ್ಕೆ ಜಾಗ ಯಾಕ್ಬೇಕು, ಎಲ್ಲಾದ್ರೂ ಇಡೋಣ ಅಂತ ಬಹುತೇಕರು ಯೋಚನೆ ಮಾಡ್ತಾರೆ. ಆದ್ರೆ ವಾಸ್ತು ಪ್ರಕಾರ ಅದು ತಪ್ಪು. ಕಸದ ಬುಟ್ಟಿ ನಕಾರಾತ್ಮಕ ಶಕ್ತಿಯೊಂದಿಗೆ ಸಂಬಂಧ ಹಿಂದಿದೆ. ಹಾಗಾಗಿ ಅದನ್ನು ಸರಿಯಾದ ಜಾಗದಲ್ಲಿ ಇಡಬೇಕು. ಸರಿಯಾದ ದಿಕ್ಕನ್ನು ಆರಿಸದಿದ್ದರೆ ಮನೆಯಲ್ಲಿ ಶಾಂತಿಭಂಗವಾಗುತ್ತದೆ. ಅನಗತ್ಯ ಖರ್ಚು ಹೆಚ್ಚಾಗುತ್ತದೆ.
ಕಸದ ಬುಟ್ಟಿ ಇಡುವ ದಿಕ್ಕು
ವಾಸ್ತು ತಜ್ಞರ ಪ್ರಕಾರ, ಮನೆಯಲ್ಲಿ ಕಸದ ಬುಟ್ಟಿಯನ್ನು ಇಡಲು ನೈಋತ್ಯ ದಿಕ್ಕು ಅತ್ಯಂತ ಸೂಕ್ತವೆಂದು ಪರಿಗಣಿಸಲಾಗಿದೆ. ತ್ಯಾಜ್ಯ ಮತ್ತು ಅನಗತ್ಯ ವಸ್ತುಗಳನ್ನು ವಿಲೇವಾರಿ ಮಾಡಲು ಈ ದಿಕ್ಕನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ನೈಋತ್ಯ ದಿಕ್ಕಿನಲ್ಲಿ ಸಾಧ್ಯವಿಲ್ಲ ಎನ್ನುವವರು ವಾಯುವ್ಯ ದಿಕ್ಕಿನಲ್ಲಿ ಕಸದ ಬುಟ್ಟಿಯನ್ನು ಇಡಬಹುದು. ವಾಸ್ತುವಿನಲ್ಲಿ ತ್ಯಾಜ್ಯ ವಿಲೇವಾರಿಗೆ ಈ ದಿಕ್ಕನ್ನು ಸಹ ಅನುಕೂಲಕರವೆಂದು ಪರಿಗಣಿಸಲಾಗುತ್ತದೆ.
ಈಶಾನ್ಯ ದಿಕ್ಕಿನಲ್ಲಿಡ್ಬೇಡಿ
ಮನೆಯ ಈಶಾನ್ಯ ದಿಕ್ಕನ್ನು ಬಹಳ ಪವಿತ್ರ ದಿಕ್ಕೆಂದು ಪರಿಗಣಿಸಲಾಗುತ್ತದೆ. ಈ ಸ್ಥಳದಲ್ಲಿ ಕಸದ ಬುಟ್ಟಿಯನ್ನು ಇಡುವುದರಿಂದ ಮನೆಯಲ್ಲಿ ನಕಾರಾತ್ಮಕತೆ ಮತ್ತು ಮಾನಸಿಕ ಒತ್ತಡ ಹೆಚ್ಚಾಗುತ್ತದೆ.
ಆಗ್ನೇಯ ದಿಕ್ಕು ಬೇಡ
ವಾಸ್ತು ನಂಬಿಕೆಗಳ ಪ್ರಕಾರ, ಆಗ್ನೇಯ ದಿಕ್ಕು ಅಗ್ನಿ ಅಂಶದೊಂದಿಗೆ ಸಂಬಂಧಿಸಿದೆ. ಈ ದಿಕ್ಕಿನಲ್ಲಿ ಕಸದ ಬುಟ್ಟಿಯನ್ನು ಇಡುವುದು ಆರ್ಥಿಕ ಅಸಮತೋಲನ ಮತ್ತು ಅನಗತ್ಯ ವೆಚ್ಚಗಳಿಗೆ ಕಾರಣವಾಗುತ್ತದೆ.
ಉತ್ತರ ದಿಕ್ಕಿನಲ್ಲಿ ಕಸದ ಬುಟ್ಟಿ
ಉತ್ತರ ದಿಕ್ಕು ಸಂಪತ್ತು ಮತ್ತು ಅವಕಾಶಗಳೊಂದಿಗೆ ಸಂಬಂಧ ಹೊಂದಿದೆ. ಈ ದಿಕ್ಕಿನಲ್ಲಿ ಕಸದ ಬುಟ್ಟಿಯನ್ನು ಇಡುವುದು ಪ್ರಗತಿಗೆ ಅಡ್ಡಿಯಾಗುತ್ತದೆ. ಸಕಾರಾತ್ಮಕ ಅವಕಾಶಗಳನ್ನು ಕಡಿಮೆ ಮಾಡುತ್ತದೆ.ವಾಸ್ತು ಶಾಸ್ತ್ರದ ಪ್ರಕಾರ, ಪೂರ್ವ ದಿಕ್ಕನ್ನು ಹೊಸ ಶಕ್ತಿ ಮತ್ತು ಬೆಳವಣಿಗೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಕಸದ ಬುಟ್ಟಿಯನ್ನು ಇಡುವುದರಿಂದ ಕುಟುಂಬ ಸದಸ್ಯರ ಉತ್ಸಾಹ ಮತ್ತು ದಕ್ಷತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

