MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • Vastu Tips : ಬೆಳಿಗ್ಗೆ ನೀವು ಮಾಡೋ ಈ ಸಣ್ಣ ಕೆಲ್ಸ ಇಡೀ ದಿನ ಹಾಳ್ಮಾಡುತ್ತೆ

Vastu Tips : ಬೆಳಿಗ್ಗೆ ನೀವು ಮಾಡೋ ಈ ಸಣ್ಣ ಕೆಲ್ಸ ಇಡೀ ದಿನ ಹಾಳ್ಮಾಡುತ್ತೆ

Vastu Tips : ದಿನದ ಆರಂಭ ಯಾವ್ಲಾಗೂ ಚೆನ್ನಾಗಿರಬೇಕು. ಬೆಳಿಗ್ಗೆ ಖುಷಿಯಿಂದ ಎದ್ದರೆ ದಿನ ಕಳೆದದ್ದು ತಿಳಿಯೋದಿಲ್ಲ. ಆದ್ರೆ ಬೆಳಿಗ್ಗೆ ಎದ್ದ ತಕ್ಷಣ ನಾವು ಮಾಡುವ ಸಣ್ಣ ತಪ್ಪುಗಳೇ ಇಡೀ ದಿನ ಹಾಳು ಮಾಡುತ್ವೆ. 

2 Min read
Author : Roopa Hegde
Published : Apr 20 2026, 07:25 PM IST
Share this Photo Gallery
  • FB
  • TW
  • Linkdin
  • Whatsapp
16
ಬೆಳಿಗ್ಗೆ ಈ ತಪ್ಪು ಮಾಡ್ಬೇಡಿ
Image Credit : Asianet News

ಬೆಳಿಗ್ಗೆ ಈ ತಪ್ಪು ಮಾಡ್ಬೇಡಿ

ಬೆಳಿಗ್ಗೆ ಎದ್ದ ತಕ್ಷಣ ಮಾಡುವ ಒಳ್ಳೆ ಕೆಲ್ಸಗಳು ನಮ್ಮ ಅರ್ಧ ದಿನದ ಭಾರವನ್ನು ಕಡಿಮೆ ಮಾಡುತ್ತೆ. ಬೆಳಿಗ್ಗೆ ಮನಸ್ಸು ಬಿಳಿಹಾಳೆಯಂತಿರುತ್ತದೆ. ಅದಕ್ಕೆ ಎದ್ದ ತಕ್ಷಣ ನಾವು ಮಾಡುವ ಕೆಲ್ಸವೇ ಬಣ್ಣ ಬಳಿಯುವುದು. ಅನೇಕ ಬಾರಿ ನಮ್ಮ ಅರಿವಿಲ್ಲದೆ ಕೆಲ ತಪ್ಪುಗಳನ್ನು ನಾವು ಬೆಳಿಗ್ಗೆ ಮಾಡಿರ್ತೇವೆ. ಅದು ನಮ್ಮ ಇಡೀ ದಿನವನ್ನು ಹಾಳು ಮಾಡುತ್ತೆ. ಪ್ರತಿ ದಿನದ ಆರಂಭ ಹಾಗೂ ಅಂತ್ಯ ಎರಡೂ ಚೆನ್ನಾಗಿರ್ಬೇಕು ಅಂದ್ರೆ ಬೆಳಿಗ್ಗೆ ಎದ್ದ ತಕ್ಷಣ ಕೆಲ ಕೆಲ್ಸಗಳನ್ನು ಅಪ್ಪಿತಪ್ಪಿಯೂ ಮಾಡ್ಬೇಡಿ.

26
ಕನ್ನಡಿ ನೋಡ್ಬೇಡಿ
Image Credit : Asianet News

ಕನ್ನಡಿ ನೋಡ್ಬೇಡಿ

ಬಹುತೇಕರ ಹವ್ಯಾಸ ಇದು. ಬೆಳಿಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ಕನ್ನಡಿಯಲ್ಲಿ ಮುಖ ನೋಡಿಕೊಳ್ತಾರೆ. ವಾಸ್ತು ಪ್ರಕಾರ ನಿದ್ದೆ ಮಾಡುವಾಗ, ಕೆಲವು ನಕಾರಾತ್ಮಕ ಶಕ್ತಿಯನ್ನು ನಮ್ಮ ದೇಹ ಹೊಂದಿರುತ್ತದೆ. ಕನ್ನಡಿ ಅದನ್ನು ಮತ್ತಷ್ಟು ವರ್ಧಿಸಬಹುದು. ಆದ್ದರಿಂದ, ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿ ನೋಡ್ಬೇಡಿ. ನಿಮ್ಮ ಅಂಗೈ ನೋಡಿಕೊಂಡು ಕರಾಗ್ರೇ ವಸತಿ ಲಕ್ಷ್ಮಿ ಮಂತ್ರ ಅಥವಾ ಇಷ್ಟದೇವರ ಮಂತ್ರವನ್ನು ಜಪಿಸಿ.

Related Articles

Related image1
ಆಫೀಸ್ ಡೆಸ್ಕ್ ಮೇಲೆ ಈ ವಸ್ತುಗಳನ್ನಿಟ್ಟುಕೊಂಡ್ರೆ, ಪ್ರಮೋಷನ್ ಪಕ್ಕಾ!
Related image2
ನಿಮ್ಮ ಮನೆಯಲ್ಲಿ ಮನಿಪ್ಲಾಂಟ್ ಈ ರೀತಿ ಬೆಳಿತಿದ್ಯಾ? ಬ್ಯಾಂಕ್ ಬ್ಯಾಲೆನ್ಸ್ ಖಾಲಿಯಾಗುತ್ತೆ !
36
ಕೊಳಕು ಪಾತ್ರೆ
Image Credit : Asianet News

ಕೊಳಕು ಪಾತ್ರೆ

ಅನೇಕರಿಗೆ ರಾತ್ರಿ ಪಾತ್ರೆ ತೊಳೆಯಲು ಬೇಸರ. ಹಾಗಾಗಿ ಸಿಂಕ್ ನಲ್ಲಿ ಪಾತ್ರೆಯಿಟ್ಟು ಮಲಗ್ತಾರೆ. ಬೆಳಿಗ್ಗೆ ಆ ಪಾತ್ರೆಗಳನ್ನು ನೋಡೋದು ಒಳ್ಳೆಯದಲ್ಲ. ನೀವು ಎದ್ದ ತಕ್ಷಣ, ಸಿಂಕ್ ನಲ್ಲಿರುವ ಕೊಳಕು ಪಾತ್ರೆ ನೋಡೋದು ನಕಾರಾತ್ಮಕತೆ ಹೆಚ್ಚಿಸುತ್ತದೆ. ಆದಷ್ಟು ರಾತ್ರಿಯೇ ಕೆಲ್ಸ ಮುಗಿಸಿ. ಬೆಳಿಗ್ಗೆ ಸ್ವಚ್ಛವಾದ, ಸುಂದರವಾದ ಅಡುಗೆ ಮನೆ ನೋಡಿದ್ರೆ ಸಕಾರಾತ್ಮಕತೆ ಹೆಚ್ಚಾಗುತ್ತೆ. ಆಹ್ಲಾದಕರವಾಗಿ ದಿನ ಶುರುವಾಗುತ್ತೆ.

46
ನಿಂತ ಗಡಿಯಾರ
Image Credit : Asianet News

ನಿಂತ ಗಡಿಯಾರ

ಬೆಳಿಗ್ಗೆ ಎದ್ದ ತಕ್ಷಣ ನಿಂತಿರುವ ಗಡಿಯಾರ ಅಥವಾ ಹಾಳಾದ ವಸ್ತುಗಳನ್ನು ನೋಡುವುದು ಕೂಡ ಒಳ್ಳೆಯದಲ್ಲ. ಆದಷ್ಟು ಕೆಲ್ಸ ಮಾಡದ ಗಡಿಯಾರ, ವಾಚ್ ಗಳನ್ನು ಕಸಕ್ಕೆ ಹಾಕಿ. ಇಲ್ಲ ರಾತ್ರಿಯೇ ಅದನ್ನು ಸರಿಪಡಿಸಿ ಮಲಗಿ. ಮಲಗುವ ಕೋಣೆಯಲ್ಲಿ ಅನಗತ್ಯ, ಹಾಳಾದ ವಸ್ತುಗಳನ್ನು ಇಡಬೇಡಿ. ಇವು ಬೆಳಿಗ್ಗೆ ನಿಮ್ಮ ಕಣ್ಣಿಗೆ ಬಿದ್ರೆ ಅಶುಭದ ಸಂಕೇತ. ನಿಂತಿರುವ ಗಡಿಯಾರ ನಿಮ್ಮ ಸಮಯ ಮತ್ತು ಕೆಲಸಕ್ಕೆ ಅಡ್ಡಿಯುಂಟು ಮಾಡುತ್ತದೆ.

56
ಕಾಡು ಪ್ರಾಣಿಗಳ ಫೋಟೋ
Image Credit : Asianet News

ಕಾಡು ಪ್ರಾಣಿಗಳ ಫೋಟೋ

ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಕಾಡು ಪ್ರಾಣಿಗಳ ಫೋಟೋ ಹಾಕಿಕೊಳ್ಳೋದು ಫ್ಯಾಷನ್ ಆಗಿದೆ. ಆದ್ರೆ ಬೆಳಿಗ್ಗೆ ಹಿಂಸಾತ್ಮಕ ಪ್ರಾಣಿ ಅಥವಾ ದುಃಖದ ಚಿತ್ರವನ್ನು ನೋಡಿದ ತಕ್ಷಣ ಕಿರಿಕಿರಿ ಉಂಟಾಗುತ್ತದೆ. ನೀವು ಕಾಡು ಪ್ರಾಣಿಗಳ ಬದಲು ಉದಯಿಸುತ್ತಿರುವ ಸೂರ್ಯ, ಹೂವು ಅಥವಾ ಶಾಂತ ಸ್ವಭಾವದ ಚಿತ್ರವನ್ನು ಹಾಕಿಕೊಳ್ಳಿ. ಆದಷ್ಟು ಇಂಥ ಚಿತ್ರಗಳನ್ನು ನೋಡಿ.

66
ನೆರಳು ನೋಡ್ಬೇಡಿ
Image Credit : Asianet News

ನೆರಳು ನೋಡ್ಬೇಡಿ

ಜ್ಯೋತಿಷ್ಯದ ಪ್ರಕಾರ, ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಸ್ವಂತ ಅಥವಾ ಇತರರ ನೆರಳುಗಳನ್ನು ನೋಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಹಾಗೆ ಮಾಡುವುದರಿಂದ ಭಯ ಮತ್ತು ಒತ್ತಡ ಹೆಚ್ಚಾಗುತ್ತದೆ. ನಿಮ್ಮ ದಿನವನ್ನು ಬೆಳಕು ಮತ್ತು ಸ್ಪಷ್ಟತೆಯೊಂದಿಗೆ ಪ್ರಾರಂಭಿಸಲು ಪ್ರಯತ್ನಿಸಿ. ಆದಷ್ಟು ನಿಮ್ಮ ಅಥವಾ ಪರರ ನೆರಳನ್ನು ಬೆಳಿಗ್ಗೆ ಎದ್ದ ತಕ್ಷಣ ನೋಡ್ಬೇಡಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ವಾಸ್ತು ಸಲಹೆಗಳು
ಹಬ್ಬ
ಜ್ಯೋತಿಷ್ಯ

Latest Videos
Recommended Stories
Recommended image1
ಶನಿ ಮಹರ್ದಶೆ ಆರಂಭ, ಈ ರಾಶಿಗಳಿಗೆ 19 ವರ್ಷಗಳ ಕಾಲ ರಾಜಯೋಗ!
Recommended image2
ಮೇ ತಿಂಗಳಲ್ಲಿ ಯಮ ಹಿಮ್ಮುಖ, ಈ 5 ರಾಶಿಗೆ ಸುವರ್ಣ ಸಮಯ ಆರಂಭ, ಹೊಸ ಉದ್ಯೋಗ
Recommended image3
ಬುಧ ಗ್ರಹಣದಿಂದ 4 ರಾಶಿ ಜೀವನ ಬದಲು, ಅಪಾರ ಸಂಪತ್ತು, ಸಾಲ ಮುಕ್ತ
Related Stories
Recommended image1
ಆಫೀಸ್ ಡೆಸ್ಕ್ ಮೇಲೆ ಈ ವಸ್ತುಗಳನ್ನಿಟ್ಟುಕೊಂಡ್ರೆ, ಪ್ರಮೋಷನ್ ಪಕ್ಕಾ!
Recommended image2
ನಿಮ್ಮ ಮನೆಯಲ್ಲಿ ಮನಿಪ್ಲಾಂಟ್ ಈ ರೀತಿ ಬೆಳಿತಿದ್ಯಾ? ಬ್ಯಾಂಕ್ ಬ್ಯಾಲೆನ್ಸ್ ಖಾಲಿಯಾಗುತ್ತೆ !
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved