1, 5, 9 ಸ್ಥಾನದಿಂದ ತ್ರಿಕೋನ ಯೋಗ; ಐದು ರಾಶಿಗಳ ಜನರ ಲೈಫ್ ಫುಲ್ ಚೇಂಜ್ ಆಗುತ್ತೆ!
1, 5 ಮತ್ತು 9ನೇ ತ್ರಿಕೋನ ಸ್ಥಾನಗಳ ಅಧಿಪತಿಗಳ ಸಂಯೋಗದಿಂದ ಶಕ್ತಿಶಾಲಿ ತ್ರಿಕೋನ ರಾಜಯೋಗವು ರೂಪುಗೊಳ್ಳುತ್ತದೆ. ಈ ಯೋಗದ ಪ್ರಭಾವದಿಂದ 5 ರಾಶಿಯವರಿಗೆ ಜೀವನದಲ್ಲಿ ಅನಿರೀಕ್ಷಿತ ಶುಭ ಬದಲಾವಣೆಗಳು, ಆರ್ಥಿಕ ಲಾಭ ಮತ್ತು ವೃತ್ತಿಯಲ್ಲಿ ಪ್ರಗತಿ ಉಂಟಾಗಲಿದೆ.

1, 5 ಮತ್ತು 9 ತ್ರಿಕೋನ ಸ್ಥಾನ
ಅತ್ಯಂತ ಶಕ್ತಿಶಾಲಿ ಯೋಗಗಳಲ್ಲಿ ಒಂದಾಗಿರುವ ತ್ರಿಕೋನ ರಾಜಯೋಗ ರಚನೆಯಾದ ಸಂದರ್ಭದಲ್ಲಿ ಕೆಲವು ರಾಶಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಜೀವನದಲ್ಲಿ ಅನಿರೀಕ್ಷಿತ ಶುಭಕರ ಬದಲಾವಣೆಳನ್ನು ಕೆಲವು ರಾಶಿಯವರು ಕಾಣುತ್ತಾರೆ. ಉದಾಹರಣೆಗೆ ದೀರ್ಘಕಾಲದ ಆರ್ಥಿಕ ಸಮಸ್ಯೆ, ಗೌರವ ಹೆಚ್ಚಳ ಸೇರಿದಂತೆ ಹಲವು ಲಾಭಗಳನ್ನು ಕಾಣುತ್ತಾರೆ.
1, 5 ಮತ್ತು 9 ತ್ರಿಕೋನ ಸ್ಥಾನಗಳನ್ನು ಪವಿತ್ರ ಮತ್ತು ಅದೃಷ್ಟದ ಸ್ಥಳಗಳೆಂದು ಪರಿಗಣಿಸಲಾಗುತ್ತದೆ. ಈ ಸ್ಥಾನಗಳ ಅಧಿಪತಿಗಳು ಒಂದಕ್ಕೊಂದು ಸೇರಿದಾಗ ಅಥವಾ ಪರಸ್ಪರ ದೃಷ್ಟಿ ಬೀರಿದಾಗ ತ್ರಿಕೋನ ರಾಜಯೋಗವು ರೂಪುಗೊಳ್ಳುತ್ತದೆ.
ವೃಷಭ ರಾಶಿ
ಸ್ಪರ್ಧೆಗಳಲ್ಲಿ ಅನುಕೂಲಕರ ವಾತಾವರಣ ನಿರ್ಮಾಣ, ಹಣದ ಹರಿವು ಹೆಚ್ಚಳ, ಹೊಸ ವ್ಯವಹಾರ ಅಥವಾ ಪಾಲುದಾರಿಕೆ ಒಪ್ಪಂದಕ್ಕೆ ಶುಭ ಸಮಯ, ಉದ್ಯೋಗಾಕಂಕ್ಷಿಗಳಿಗೆ ಶುಭ ಸುದ್ದಿ, ಕುಟುಂಬದಲ್ಲಿ ಸಂತೋಷ ನೆಲೆಸುತ್ತದೆ.
ಮೀನ ರಾಶಿ
ವೃತ್ತಿಜೀವನದಲ್ಲಿ ಪ್ರಗತಿ, ಹೊಸ ಆದಾಯ ಮೂಲಗಳ ಸೃಷ್ಟಿ, ಕುಟುಂಬದಲ್ಲಿ ಶುಭಕಾರ್ಯಗಳು, ಹೂಡಿಕೆಗಳಲ್ಲಿ ಲಾಭ, ಆರೋಗ್ಯ ಸುಧಾರಣೆ, ಸ್ನೇಹಿತರು ಮತ್ತು ಸಂಬಂಧಿಕರಿಂದ ಬೆಂಬಲ
ತುಲಾ ರಾಶಿ
ನ್ಯಾಯಾಲಯದ ಪ್ರಕರಣಗಳು ಇತ್ಯರ್ಥ, ಸಾಲದ ಹೊರೆ ಕಡಿಮೆ, ವ್ಯಾಪಾರದಲ್ಲಿ ವೃದ್ಧಿ ಮತ್ತು ಗ್ರಾಹಕರ ಸಂಖ್ಯೆ ಏರಿಕೆ, ವಿದೇಶಿ ಅವಕಾಶಗಳು, ಮದುವೆ ಮಾತುಕತೆ, ಮಂಗಳಕಾರ್ಯ, ಮನಃಶಾಂತಿ ಮತ್ತು ಆತ್ಮವಿಶ್ವಾಸ ಹೆಚ್ಚಳ
ಧನು ರಾಶಿ
ಅನಿರೀಕ್ಷಿತ ಹಣದ ಹರಿವು, ಉನ್ನತ ಶಿಕ್ಷಣ, ವಿದೇಶ ಪ್ರವಾಸ, ಹೊಸ ಪ್ರಯತ್ನ ಯಶಸ್ಸು, ದೀರ್ಘಕಾಲದ ಇಚ್ಛೆಗಳ ಈಡೇರಿಕೆ, ಕುಟುಂಬ ಬಾಂಧವ್ಯ ಹೆಚ್ಚಳ, ವ್ಯಾಪಾರದಲ್ಲಿ ಚೇತರಿಕೆ
ಸಿಂಹ ರಾಶಿ
ಪದೋನ್ನತಿ ಸಾಧ್ಯತೆ, ಮೇಲಾಧಿಕರಿಗಳಿಂದ ಮೆಚ್ಚುಗೆ ಮತ್ತು ಬೆಂಬಲ, ಹೊಸ ಜವಾಬ್ದಾರಿಗಳ ಜೊತೆ ಸವಾಲುಗಳು, ಸಂಬಳ ಏರಿಕೆ, ಹೂಡಿಕೆಗಳಿಂದ ಉತ್ತಮ ಲಾಭ, ಸಮಾಜದಲ್ಲಿ ಗೌರವ ಮತ್ತು ಜನಪ್ರಿಯತೆ ಹೆಚ್ಚಳ, ಹೊಸ ಒಪ್ಪಂದಗಳಿಗೆ ಸಹಿ
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

