ವಿವಾಹದಲ್ಲಿನ ಅಡೆತಡೆ ನಿವಾರಿಸುತ್ತೆ ಈ ಮದರಂಗಿ !
ಕೆಲವರ ಜಾತಕದಲ್ಲಿ ಕೆಲವು ಗ್ರಹ ಮತ್ತು ನಕ್ಷತ್ರಗಳು ಜಾತಕದವರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತೆ. ಕೆಲವೊಮ್ಮೆ ಅವುಗಳಿಂದಾಗಿ, ವಿವಾಹದಲ್ಲಿ ಅನೇಕ ಅಡೆತಡೆಗಳಲಾಗುತ್ತವೆ. ಕೆಲವು ಯೋಗಗಳು ಸಹ ಇವೆ, ಇದರಿಂದಾಗಿ ಅನೇಕ ಜನರು ಮದುವೆ ವಿಳಂಬ, ಮದುವೆ ನಿಶ್ಚಯ ಮತ್ತು ಮುರಿಯುವಿಕೆಯಂತಹ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ತಡವಾಗುತ್ತಿರುವ ಮದುವೆಯ ಸಮಸ್ಯೆಗಳನ್ನು ನಿವಾರಿಸಲು ನೀವೂ ಜ್ಯೋತಿಷ್ಯದ ಉಪಾಯಗಳನ್ನು ಟ್ರೈ ಮಾಡಬಹುದು. ಅವುಗಳ ಬಗ್ಗೆ ನೋಡೋಣ.
ಜ್ಯೋತಿಷ್ಯ ಶಾಸ್ತ್ರದಲ್ಲಿ, ವಿವಾಹದಲ್ಲಿನ(Marriage) ಈ ಅಡೆತಡೆಗಳನ್ನು ನಿವಾರಿಸಲು ಕೆಲವು ಅದ್ಭುತ ಪರಿಹಾರಗಳನ್ನು ಹೇಳಲಾಗಿದೆ. ಇವುಗಳಲ್ಲಿ ಒಂದು ಮೆಹಂದಿ ಪರಿಹಾರ. ಈ ಮೆಹಂದಿಯ ಟ್ರಿಕ್ಸ್ ಶೀಘ್ರ ವಿವಾಹಕ್ಕೆ ದಾರಿ ಮಾಡಿಕೊಡುತ್ತೆ. ಯಾವ ರೀತಿ ಮೆಹೆಂದಿಯಿಂದ ಮದುವೆ ಸಮಸ್ಯೆಗೆ ಪರಿಹಾರ ಸಿಗುತ್ತೆ ಎನ್ನುವ ಬಗ್ಗೆ ತಿಳಿದುಕೊಳ್ಳೋಣ.
ಮೆಹಂದಿ(Mehandi) ಟ್ರಿಕ್ಸ್
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯುವತಿಯ ಮದುವೆಗೆ ಅಡ್ಡಿಯಾಗುತ್ತಿದ್ದರೆ, ಅವಳು ಭಾನುವಾರ ಇನ್ನೊಬ್ಬ ಮಹಿಳೆಗೆ ಮೆಹಂದಿ ಮತ್ತು ಕುಂಕುಮವನ್ನು ದಾನ ಮಾಡಬೇಕು. ಇದನ್ನು ಮಾಡೋದರಿಂದ, ವಿವಾಹದಲ್ಲಿ ಬರುವ ಅಡೆತಡೆ ಸರಿಯಾಗುತ್ತೆ. ಬೇಗನೆ ಮದುವೆಯಾಗುವ ಭಾಗ್ಯ ನಿಮ್ಮದಾಗುತ್ತೆ ಎನ್ನಲಾಗುತ್ತದೆ.
ಒಂದು ಸಣ್ಣ ಕನ್ನಡಿ, ಬಳೆಗಳು(Bangles) ಮತ್ತು ಕೆಲವು ರೂಪಾಯಿಗಳನ್ನು ಮೆಹಂದಿಯೊಂದಿಗೆ ದಾನ ಮಾಡೋದರಿಂದ ವಿಶೇಷ ಪ್ರಯೋಜನವಿದೆ. 7 ಭಾನುವಾರ ಇದನ್ನು ಮಾಡುವ ಮೂಲಕ, ಮದುವೆಯಲ್ಲಿನ ಅಡೆತಡೆಗಳನ್ನು ನಿವಾರಿಸಬಹುದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ.
ವಧುವಿಗೆ ಮೆಹಂದಿಯನ್ನು ಹಚ್ಚುವಾಗ, ಅವಳ ಸ್ವಲ್ಪ ಮೆಹಂದಿಯನ್ನು ಮದುವೆ ನಿಶ್ಚಯವಾಗದ ಯುವತಿಗೆ ಹಚ್ಚಿದರೆ, ಆಗ ಆಕೆಗೆ ಮದುವೆಯ ಯೋಗ ಬೇಗ ಪ್ರಾರಂಭವಾಗುತ್ತೆ ಎಂದು ನಂಬಲಾಗಿದೆ. ನೀವು ಇದನ್ನು ಮಾಡಿ ನೋಡಿ. ವಧುವಿಗೆ ಹಾಕಿದ ಮೆಹೆಂದಿಯನ್ನು ಮದುವೆಯಾಗದ ಯುವತಿಯ ಕೈಗೆ ಹಚ್ಚಿದ್ರೆ ಶೀಘ್ರವೇ ಕಲ್ಯಾಣ ಯೋಗ ಪ್ರಾಪ್ತಿಯಾಗುತ್ತೆ ಎನ್ನಲಾಗಿದೆ.
ಗಂಡ ಮತ್ತು ಹೆಂಡತಿಯ ನಡುವೆ ಪ್ರೀತಿ (Love) ಹೆಚ್ಚಿಸಲು ಮೆಹಂದಿ ತಂತ್ರಗಳನ್ನು ಸಹ ತುಂಬಾ ಉಪಯುಕ್ತವೆಂದು ಪರಿಗಣಿಸಲಾಗುತ್ತೆ. ಇದಕ್ಕಾಗಿ, ಇಡೀ ಉದ್ದಿನ ಜೊತೆ ಕಪ್ಪು ಮೆಹಂದಿಯನ್ನು ಮಿಶ್ರಣ ಮಾಡಿ. ಈಗ ಈ ಮೆಹಂದಿ ಬೇಳೆಯನ್ನು ಗಂಡ ಹೆಂಡತಿಯ ಮನೆಯ ದಿಕ್ಕಿಗೆ ಎಸೆಯಿರಿ. ಇದು ಇಬ್ಬರ ನಡುವಿನ ಪ್ರೀತಿಯನ್ನು ಹೆಚ್ಚಿಸುತ್ತೆ.
ಒಬ್ಬ ಮಹಿಳೆ ತನ್ನ ಕೈಯಲ್ಲಿ ಮೆಹಂದಿಯೊಂದಿಗೆ ಗಂಡನ (Husband) ಹೆಸರನ್ನು ಬರೆದರೆ ಮತ್ತು ನಂತರ ಗಂಡನ ಹೆಸರನ್ನು ತನ್ನ ಮನಸ್ಸಿನಲ್ಲಿ 21 ಬಾರಿ ಜಪಿಸಿದರೆ, ಆಗ ಗಂಡ ಮತ್ತು ಹೆಂಡತಿಯ ಸಂಬಂಧವು ಬಲಗೊಳ್ಳುತ್ತೆ ಎಂದು ನಂಬಲಾಗಿದೆ. ಇದು ಸುಲಭ ಪ್ರಯತ್ನವಾಗಿರೋದ್ರಿಂದ ಇದನ್ನು ನೀವು ಸಹ ಮಾಡಿ ನೋಡಬಹುದು.