ಕಿಂಗ್ ಕೊಹ್ಲಿಯ 2ನೇ ಮಗುವಿನ ಬಗ್ಗೆ 8 ವರ್ಷದ ಹಿಂದೇ ಭವಿಷ್ಯ ನುಡಿದಿದ್ದ ಜ್ಯೋತಿಷಿ, ಫ್ಯಾನ್ಸ್‌ಗೆ ಅಚ್ಚರಿ!
ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಇತ್ತೀಚೆಗೆ ತಮ್ಮ ಎರಡನೇ ಮಗುವಿಗೆ ಅಕಾಯ್ ಎಂದು ಹೆಸರಿಡಲಾಗಿದೆ ಎಂದಿದ್ದಾರೆ.
ಭಾರತದ ಮಾಜಿ ನಾಯಕ ಮತ್ತು ಬ್ಯಾಟಿಂಗ್ ದಿಗ್ಗಜ, ವಿರಾಟ್ ಕೊಹ್ಲಿ ಪತ್ನಿ ನಟಿ ಅನುಷ್ಕಾ ಶರ್ಮಾ ಫೆಬ್ರವರಿ 15 ರಂದು ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಅಕಾಯ್ ಎಂದು ಹೆಸರಿಡಲಾಗಿದೆ ಎಂದಿದ್ದಾರೆ .ಅವರ ಮಗನ ಜನನದ ಸುದ್ದಿಗಳ ನಡುವೆ, ಹಳೆಯ ಭವಿಷ್ಯವೂಂದು ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ "ಸ್ಟಾರ್ಸ್ ಮತ್ತು ಜ್ಯೋತಿಷ್ಯ" ಎಂಬ ಹೆಸರಿನಿಂದ ನಡೆಸಲ್ಪಡುವ ಜ್ಯೋತಿಷಿಯ ಭವಿಷ್ಯ ವೈರಲ್ ಆಗಿದೆ, 2016 ರಲ್ಲಿ ವಿರಾಟ್ ಕೊಹ್ಲಿ ಭವಿಷ್ಯವಾಣಿಯುನ್ನು ಜ್ಯೋತಿಷಿ ಹೇಳಿದ್ದಾರೆ.
ಜ್ಯೋತಿಷಿ ವಿರಾಟ್ ಕೊಹ್ಲಿ ಗೆ ಫೆಬ್ರವರಿ 2018 ಮತ್ತು ಸೆಪ್ಟೆಂಬರ್ 2020 ರ ನಡುವೆ ಮೊದಲ ಮಗುವಿನ ಜನನವನ್ನು ಭವಿಷ್ಯ ನುಡಿದಿದ್ದರು, ಹಾಗೆ ಕೊಹ್ಲಿ ದಂಪತಿ ಜನವರಿ 11, 2021 ರಂದು ವಾಮಿಕಾಳನ್ನು ಪರಿಚಯಿಸಿದರು. ಅದಲ್ಲದೆ ಜ್ಯೋತಿಷಿಯು 2021-2024 ರ ನಡುವೆ ವಿರಾಟ್‌ಗೆ ಮತ್ತೊಂದು ಮಗುವಿನ ಭಾಗ್ಯವಿದೆ ಎಂದಿದ್ದರು. .
ಜ್ಯೋತಿಷಿಯ ವೈರಲ್ ಭವಿಷ್ಯವು ವಿರಾಟ್ ಕೊಹ್ಲಿ ಅವರ ವೈಯಕ್ತಿಕ ಮತ್ತು ವೃತ್ತಿ ಜೀವನದ ಬಗ್ಗೆ ನು ಹೇಳಿದ್ದಾರೆ. ಅವರ ಪ್ರಕಾರ ಕೊಹ್ಲಿಯ ವೃತ್ತಿಜೀವನವು ಆಗಸ್ಟ್ 2025-ಫೆಬ್ರವರಿ 2027 ರ ನಡುವೆ ಆಗುತ್ತದೆ ಎಂದು ಹೇಳಿದ್ದಾರೆ.