ಈ ರಾಶಿಯವರಿಗೆ ಬರೀ ಫ್ರೆಂಡ್ಸ್ ಮಾತ್ರವಲ್ಲ, ಗರ್ಲ್‌ಫ್ರೆಂಡ್ಸ್ ಸಹ ಹೆಚ್ಚು!
ರಕ್ತ ಸಂಬಂಧ ಅಲ್ಲದ, ಆದರೆ ಅದಕ್ಕೂ ಮಿಗಿಲಾದ ಒಂದು ಬಂಧವಿದ್ದರೆ ಅದು ಸ್ನೇಹ ಅಥವಾ ಫ್ರೆಂಡ್ಸ್ (Friends) ಎಂದೇ ಹೇಳಬಹುದು. ಸ್ನೇಹವು ಮನುಷ್ಯನು ತನಗಾಗಿ ತಾನೇ ಮಾಡಿಕೊಳ್ಳುವ ಸುಂದರ ಸಂಬಂಧ. ನಿಜವಾದ ಸ್ನೇಹಿತನು ಜೀವನವನ್ನು ಸುಂದರವಾಗಿಸಲು ಸಹಾಯ ಮಾಡಿದ್ರೆ, ಒಬ್ಬ ಕೆಟ್ಟ ಸ್ನೇಹಿತ ಜೀವನವನ್ನೇ ನಾಶಪಡಿಸಬಹುದು. ಅದಕ್ಕಾಗಿಯೇ ಹಿರಿಯರು ಹೇಳ್ತಾರೆ ಸ್ನೇಹ ಬೆಳೆಸುವಾಗಿ ಹುಷಾರಾಗಿರಿ ಅಂತ….
ನಿಮಗೆ ಶೇಕ್ ಹ್ಯಾಂಡ್ ಮಾಡ್ತಾರೆ, ಹೊಗಳುತ್ತಾರೆ ಎಂದ ಮಾತ್ರಕ್ಕೆ ಪ್ರತಿಯೊಬ್ಬರೂ ನಿಜವಾದ ಸ್ನೇಹಿತರಾಗಲು(Friend) ಖಂಡಿತಾ ಸಾಧ್ಯ ಇಲ್ಲ ಅಲ್ವಾ?. ಆಚಾರ್ಯ ಚಾಣಕ್ಯ ಹೇಳುತ್ತಾರೆ ನಿಜವಾದ ಸ್ನೇಹಿತನ ಪರಿಚಯವಾಗೋದು ಕಷ್ಟದ ಸಮಯದಲ್ಲಿ ಮಾತ್ರ. ಸಂತೋಷ ಮತ್ತು ದುಃಖದ ಸಮಯದಲ್ಲಿ ಜೊತೆಯಾಗಿ ನಿಲ್ಲುವವನು ನಿಜವಾದ ಸ್ನೇಹಿತ. ಹಾಗಿದ್ರೆ ಬನ್ನಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವ ರಾಶಿಯ ಜನರು ಸ್ನೇಹಿತರನ್ನು ಸಂಪಾದಿಸುವಲ್ಲಿ ನಿಪುಣರು ಎಂದು ತಿಳಿಯೋಣ.
ವೃಷಭ - (Taurus)
ಈ ರಾಶಿಯ ಮೇಲೆ ಶುಕ್ರ ಗ್ರಹದ ವಿಶೇಷ ಪರಿಣಾಮ ಇರೋದನ್ನು ನಾವು ಕಾಣಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಐಷಾರಾಮಿ ಜೀವನದ (Luxurious Life) ಅಂಶವೆಂದು ಪರಿಗಣಿಸಲಾಗಿದೆ. ಅಂದರೆ ಶುಕ್ರ ರಾಶಿಯವರು ಉತ್ತಮ ರೀತಿಯಲ್ಲಿ ಜೀವನವನ್ನು ನಡೆಸುತ್ತಾರೆ ಎಂದು ನಂಬಲಾಗಿದೆ.
ಶುಕ್ರನ ಪ್ರಭಾವದಿಂದಾಗಿ, ಈ ವೃಷಭ ರಾಶಿಯ ಜನರ ಸ್ನೇಹ ತುಂಬಾ ದೀರ್ಘವಾಗಿರುತ್ತದೆ. ಇತರರನ್ನು ಅಟ್ರಾಕ್ಟ್ (Attract) ಮಾಡುವ ವಿಶೇಷ ಪ್ರತಿಭೆಯನ್ನು ವೃಷಭ ರಾಶಿಯವರು ಹೊಂದಿರುತ್ತಾರೆ. ಅವರ ಮಾತು ಮತ್ತು ಲೈಫ್‌ಸ್ಟೈಲ್‌ನಿಂದಾಗಿ ಹೆಚ್ಚಿನ ಜನರು ಇಂಪ್ರೆಸ್ ಆಗ್ತಾರೆ, ಅಲ್ಲದೇ ಪ್ರತಿಯೊಬ್ಬರೂ ಅವರ ಹತ್ತಿರಕ್ಕೆ ಬರಲು ಬಯಸುತ್ತಾರೆ.
ಮಿಥುನ ರಾಶಿ -(Gemini)
ಯಾರ ರಾಶಿಯು ಮಿಥುನ ರಾಶಿಯಾಗಿದೆಯೋ ಅಂತವರು ಸ್ನೇಹ ಸಂಬಂಧಕ್ಕೆ ವಿಶೇಷ ಪ್ರಾಮುಖ್ಯತೆ ನೀಡುತ್ತಾರೆ. ಅವರು ಯಾರೊಂದಿಗೂ ಸುಲಭವಾಗಿ ಸ್ನೇಹಿತರಾಗುವುದಿಲ್ಲ, ಆದರೆ ಒಮ್ಮೆ ಅವರು ಯಾರೊಂದಿಗಾದರೂ ಸ್ನೇಹಿತರಾದರೆ ಅವರು ಅದನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳುತ್ತಾರೆ.
ಮಿಥುನ ರಾಶಿಯ ಅಧಿಪತಿ ಬುಧ ಗ್ರಹ. ಜ್ಯೋತಿಷ್ಯ ಶಾಸ್ತ್ರದಲ್ಲಿ, ಬುಧನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಈ ಗ್ರಹದ ಜನರು ತರ್ಕ, ಹಾಸ್ಯ ಪ್ರಜ್ಞೆ, ಗಣಿತ, ಬರವಣಿಗೆ, ಹಾಡುಗಾರಿಕೆ ಇತ್ಯಾದಿಳಲ್ಲಿ ಮುಂದಿರುತ್ತಾರೆ. ಈ ರಾಶಿ -ಗ್ರಹವನ್ನು ಹೊಂದಿರುವವರು ಉತ್ತಮ ಪ್ರತಿಭೆಗಳಾಗುತ್ತಾರೆ, ಈ ಕಾರಣದಿಂದಾಗಿ ಅವರು ಎಲ್ಲೇ ಇದ್ದರೂ ಜನಪ್ರಿಯರಾಗುತ್ತಾರೆ. ಅವರು ಸ್ನೇಹದಲ್ಲಿ(Friendship) ಬೇಗ ಮೋಸ ಹೋಗುತ್ತಾರೆ. ಆದ್ದರಿಂದ ಅವರು ಸರಿಯಾಗಿ ಯೋಚಿಸಿ ಸ್ನೇಹಿತರನ್ನು ಮಾಡಿಕೊಳ್ಳಬೇಕು.
ವೃಶ್ಚಿಕ -(Scorpio)
ಈ ರಾಶಿಯ ಜನರಿಗೆ ಸ್ನೇಹಿತರು ತುಂಬಾ ಸೀಮಿತವಾಗಿರುತ್ತಾರೆ, ಆದರೆ ಅವರೆಲ್ಲರೂ ಕೊನೆಯ ಕ್ಷಣದವರೆಗೂ ಒಟ್ಟಿಗೆ ಇರುತ್ತಾರೆ. ಸ್ನೇಹಿತರಾದ ನಂತರವೂ, ಅವರು ವೃಶ್ಚಿಕ ರಾಶಿಯವರ ಅನೇಕ ರಹಸ್ಯಗಳ ಬಗ್ಗೆ ತಿಳಿದಿರುವುದಿಲ್ಲ. ಯಾಕೆಂದರೆ ಈ ರಾಶಿಯ ಜನ ತಮ್ಮ ಬಗ್ಗೆ ಯಾರಿಗೂ ಸುಲಭವಾಗಿ ವಿಷಯಗಳನ್ನು ಬಿಟ್ಟುಕೊಡುವುದಿಲ್ಲ.
ಈ ರಾಶಿಯ ಅಧಿಪತಿ ಮಂಗಳ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳನನ್ನು ಧೈರ್ಯ, ಶಕ್ತಿ, ತಂತ್ರ ಇತ್ಯಾದಿಗಳ ಗ್ರಹ ಎಂದು ಪರಿಗಣಿಸಲಾಗಿದೆ. ತುಂಬಾ ಶ್ರಮಜೀವಿಗಳಾದ ಇವರು ಜೀವನದಲ್ಲಿ ಉನ್ನತ ಸ್ಥಾನಕ್ಕೇರುತ್ತಾರೆ. ಇವರ ಕೆಲಸವನ್ನು ಎಲ್ಲರೂ ಹೊಗಳುತ್ತಾರೆ. ಈ ರಾಶಿಯ ಜನರಿಗೆ ಗರ್ಲ್ ಫ್ರೆಂಡ್ಸ್ (Girl Friend) ಕೂಡ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಇವರು ಸಿದ್ಧಾಂತಿಗಳು.ಇವರು ಸ್ನೇಹದಲ್ಲಿ ಮಿತಿಯನ್ನು ಯಾವತ್ತೂ ದಾಟುವುದಿಲ್ಲ. ಅದಕ್ಕಾಗಿಯೇ ಸ್ನೇಹಿತರು ಇವರನ್ನು ಗೌರವಿಸುತ್ತಾರೆ.