ಚತ್ತೀಸಘಡ(ಜ.07): ಮದುವೆಯಾಗಿ, ವಿಚ್ಚೇಚದನ ಪಡೆದು ಅಥವಾ ಮೊದಲ ಪತ್ನಿಯಿಂದ ದೂರವಾಗಿ ಅಥವಾ ಗೊತ್ತಿಲ್ಲದೆ ಮತ್ತೊಂದು ಮದುವೆಯಾದ ಸಾಕಷ್ಟು ಘಟನೆಗಳು ಇವೆ. ಆದರೆ ಒಂದೇ ಮಂಟಂಪ, ಒಂದೆ ಮುಹೂರ್ತದಲ್ಲಿ ಕುಟುಂಬದವರ ಮುಂದೆ ತನ್ನ ಇಬ್ಬರೂ ಗೆಳತಿಯರನ್ನು ವರಿಸಿದ ಎಲ್ಲರ ಹುಬ್ಬೇರಿಸಿದ ಘಟನ ಚತ್ತೀಸ್‌ಘಡದಲ್ಲಿ ನಡೆದಿದೆ.

ವಯಸ್ಕ ಹೆಣ್ಣಿನ ಮದುವೆ ಹಾಗೂ ಮತಾಂತರ; ಮಹತ್ವದ ತೀರ್ಪು ನೀಡಿದ ಹೈಕೋರ್ಟ್!

24 ವರ್ಷದ ಚಂದು ಮೌರ್ಯ ಈ ಸಾಧಕ. ರೈತ ಹಾಗೂ ಕೂಲಿ ಕೆಲಸ ಮಾಡುವ ಚಂದು ಮೌರ್ಯ, ವಿದ್ಯುತ್ ಕಂಬ ಹಾಕುವ ಕೆಲಸದ ನಿಮಿತ್ತ ಬಸ್ತರ್ ಜಿಲ್ಲೆಯ ಹಳ್ಳಿಗೆ ತೆರಳಿದ್ದ ಈ ವೇಳೆ 21 ವರ್ಷದ ಸುಂದರಿ ಅನ್ನೋ ಹುಡಿಗಿಯ ಜೊತೆ ಪರಿಚಯವಾಗಿತ್ತು. ಬಳಿಕ ಪ್ರೀತಿಯಾಗಿ ಗಟ್ಟಿಗೊಂಡಿತ್ತು. ಈ ಪ್ರೀತಿ ಹೀಗೆ ಮುಂದುವರಿಯುತ್ತಿರುವಾಗಲೇ, ಚಂದು ಮೌರ್ಯನ ಲವ್ ಲೈಫ್‌ಗೆ 20 ವರ್ಷದ ಹಸೀನಾ ಭಾಗೆಲ್ ಆಗಮಿಸಿದ್ದಾಳೆ. 

ಲವ್‌ ಮ್ಯಾರೇಜ್‌ ಆಗಿ ಮೂರೇ ತಿಂಗಳಿಗೆ ಮತ್ತೊಂದು ಮದುವೆಯಾದ ಭೂಪ..

ಮದುವೆ ಕಾರ್ಯಕ್ರಮದಲ್ಲಿ ಚಂದು, ಹಸೀನಾಳನ್ನು ಭೇಟಿಯಾಗಿದ್ದ. ಪ್ರೀತಿ ತೀವ್ರವಾಗುತ್ತಿದ್ದಂತೆ ಚಂದು ತನಗೆ ಸುಂದರಿ ಅನ್ನೋ ಗೆಳತಿ ಇರುವುದಾಗಿ ಹಸೀನಾಳಿಗೆ ಹೇಳಿಕೊಂಡಿದ್ದಾನೆ. ಇಷ್ಟೇ ಅಲ್ಲ ಸುಂದರಿ ಹಾಗೂ ಹಸೀನಾ ಇಬ್ಬರನ್ನು ಜೊತೆಯಾಗಿ ಕೂರಿಸಿಕೊಂಡು ಮಹತ್ವದ ಮಾತುಕತೆ ನಡೆಸಿದ್ದಾರೆ. ಒಂದು ರೀತಿಯಲ್ಲಿ ಹೇಳುವುದಾದರೆ ಹೈ ಲೆವೆಲ್ ಅಥವಾ ಹೈಕಮಾಂಡ್ ಮೀಟಿಂಗ್‌. 

ಮಾತುಕತೆಯಲ್ಲಿ ಚಂದು ಮೌರ್ಯ , ಇಬ್ಬರನ್ನು ಮದುವೆಗೆ ಒಪ್ಪಿಸಿದ್ದಾನೆ. ಬಳಿಕ ಇಬ್ಬರನ್ನು ವರಿಸುವ ಹೊಸ ಲಘ್ನ ಪತ್ರಿಕೆ ಪ್ರಿಂಟ್ ಮಾಡಿ ಕುಟುಂಬದವನ್ನು ಮದುವೆಗೆ ಆಹ್ವಾನಿಸಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಮಂದಿ ಮದುವೆಗೆ ಆಗಮಿಸಿದ್ದಾರೆ. ಕೊರೋನಾ ವೈರಸ್ ಕಾರಣ ಹೆಚ್ಚಿನವರನ್ನು ಕರೆದಿಲ್ಲ ಅನ್ನೋದು ಚಂದು ಮೌರ್ಯ ಹೇಳಿದ್ದಾರೆ.

ಸುಂದರಿ ಕಟುಂಬದವರು ಮದುವೆಗೆ ಗೈರಾಗಿದ್ದಾರೆ. ಆದರೆ ಚಂದು ಮೌರ್ಯ ಹಾಗೂ ಹಸೀನಾ ಕುಟುಂಬಸ್ಥರು, ಆಪ್ತರು ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಜನವರಿ 5 ರಂದು ಹಿಂದೂ ಸಂಪ್ರದಾಯದಂತ ಮದುವೆಯಾಗಿದ್ದಾನೆ. ಇಬ್ಬರು ಮಡದಿಯರ ಮುದ್ದಿನ ಗಂಡ ಚಂದು ಮದುವೆಗೆ ಸ್ಥಳೀಯ ಮಾಧ್ಯಮಗಳು ಹಾಜರಾಗಿತ್ತು. ಮದುವೆ ಬಳಿಕ ಮಾಧ್ಯಮಕ್ಕೂ ಪ್ರತಿಕ್ರಿಯೆ ನೀಡಿದ್ದಾನೆ.

ಇಬ್ಬರಿಗೂ ನನ್ನ ಮೇಲೆ ಅಪಾರ ಪ್ರೀತಿ. ಎರಡನೇಯವಳ ಪ್ರೀತಿ ಆರಂಭವಾಗುವಾಗಲೇ ಮೊದಲ ಪ್ರೀತಿ ಬಗ್ಗೆಯೂ ಹೇಳಿದ್ದೆ. ಇಬ್ಬರನ್ನು ಕೂರಿಸಿ ಮಾತನಾಡಿದ್ದೆ. ಇಬ್ಬರಿಗೂ ನನ್ನ ಬಿಟ್ಟು ಇರಲು ಸಾಧ್ಯವಿಲ್ಲ. ಹೀಗಾಗಿ ಒಬ್ಬರನ್ನೇ ಮದುವೆಯಾದರೆ ಮೋಸ ಮಾಡಿದಂತೆ. ಹೀಗಾಗಿ ಇಬ್ಬರನ್ನು ವರಿಸಿದ್ದೇನೆ ಎಂದಿದ್ದಾನೆ. ಮಾಧ್ಯಮವೊಂದು ಮೊದಲ ರಾತ್ರಿ ಎಂಬ ಪದ ಹೇಳಿದ್ದೆ ತಡ, ಪ್ರಶ್ನೆ ಪೂರ್ಣಗೊಳಿಸುವ ಮುನ್ನವೇ ಚಂದು ಮೌರ್ಯ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ.