ನಿರ್ಜಲ ಏಕಾದಶಿ ದಿನ ತುಳಸಿಗೆ ಈ ವಸ್ತು ಅರ್ಪಿಸಿದ್ರೆ ನಿಮ್ಮ ವ್ರತ ವ್ಯರ್ಥ
ನಿರ್ಜಲ ಏಕಾದಶಿ ದಿನದಂದು ತಾಯಿ ತುಳಸಿ ಪೂಜೆಗೆ ವಿಶೇಷ ಮಹತ್ವದೆ. ನಿಮ್ಮ ಪೂಜೆಗೆ ಫಲ ಸಿಗ್ಬೇಕು ಅಂದ್ರೆ ತುಳಸಿಗೆ ಏನೆಲ್ಲ ಅರ್ಪಿಸಬೇಕು, ಏನು ಅರ್ಪಿಸಬಾರದು ಎಂಬುದನ್ನು ತಿಳಿದಿರಬೇಕು.

ನಿರ್ಜಲ ಏಕಾದಶಿ
ಹಿಂದೂ ಧರ್ಮದಲ್ಲಿ ನಿರ್ಜನ ಏಕಾದಶಿ ವಿಶೇಷ ಮಹತ್ವ ಪಡೆದಿದೆ. ನಿರ್ಜಲ ಏಕಾದಶಿ, ಎಲ್ಲಾ ಏಕಾದಶಿಗಳಲ್ಲಿ ಅತ್ಯಂತ ಮುಖ್ಯವಾದ ಏಕಾದಶಿ. ಪ್ರತಿ ವರ್ಷ ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿ ಬರುತ್ತದೆ. ಈ ವರ್ಷ ಜೂನ್ 25 ಅಂದ್ರೆ ನಾಳೆ ಗುರುವಾರ ನಿರ್ಜಲ ಏಕಾದಶಿ ಆಚರಿಸಲಾಗ್ತಿದೆ. ಈ ದಿನ ವ್ರತ ಮಾಡುವವರು ನೀರನ್ನೂ ಸೇವನೆ ಮಾಡದೆ ವ್ರತ ಮಾಡ್ತಾರೆ. ಈ ದಿನ ತುಳಸಿ ದೇವಿಗೆ ಪೂಜೆ ನಡೆಯುತ್ತದೆ. ಹಿಂದೂ ಧರ್ಮದಲ್ಲಿ, ತುಳಸಿ ಕೇವಲ ಸಸ್ಯವಲ್ಲ. ಅದು ದೇವರ ರೂಪ, ವಿಷ್ಣುಪ್ರಿಯಾ ಎಂದು ನಂಬಲಾಗಿದೆ. ಧರ್ಮಗ್ರಂಥಗಳಲ್ಲಿ, ತುಳಸಿಯನ್ನು ಸಸ್ಯಗಳ ರಾಣಿ ಮತ್ತು ಸಂತೋಷ ಮತ್ತು ಸಮೃದ್ಧಿಯ ಸಂಕೇತ ಎಂದು ಕರೆಯಲಾಗುತ್ತದೆ. ನಿರ್ಜಲ ಏಕಾದಶಿಯಂದು ನೀವು ತುಳಸಿಯಿಂದ ವಿಶೇಷ ಆಶೀರ್ವಾದವನ್ನು ಪಡೆಯಲು ಬಯಸಿದರೆ, ಪೂಜೆಯ ಸಮಯದಲ್ಲಿ ಕೆಲ ವಸ್ತುಗಳನ್ನು ಅಗತ್ಯವಾಗಿ ಅರ್ಪಿಸಬೇಕು.
ಅಕ್ಷತೆ
ನೀವು ನಿರ್ಜಲ ಏಕಾದಶಿಯಂದು ತುಳಸಿ ಪೂಜೆ ಮಾಡುವವರಾಗಿದ್ದರೆ ತುಳಸಿಗೆ ಅರಿಶಿನದಲ್ಲಿ ಕಲಸಿದ ಅಕ್ಷತೆಯನ್ನು ಅರ್ಪಿಸಿ. ವಿಷ್ಣು ಮತ್ತು ಲಕ್ಷ್ಮಿ ಇಬ್ಬರೂ ಅರಿಶಿನ ಮತ್ತು ಹಳದಿ ಪ್ರಿಯರಾಗಿದ್ದು, ಅವರ ಆಶೀರ್ವಾದ ನಿಮಗೆ ಲಭಿಸುತ್ತದೆ.
ಕೆಂಪು ಅಥವಾ ಹಳದಿ ಚುನರಿ
ಏಕಾದಶಿಯ ಶುಭ ಸಂದರ್ಭದಲ್ಲಿ, ತುಳಸಿ ಗಿಡದ ಸುತ್ತಲೂ ಹೊಸ ಕೆಂಪು ಅಥವಾ ಹಳದಿ ಚುನರಿಯನ್ನು ಸುತ್ತಬೇಕು. ಇದನ್ನು ತಾಯಿ ತುಳಸಿಯ ಗೌರವ ಮತ್ತು ವೈವಾಹಿಕ ಆನಂದದ ಸಂಕೇತವೆಂದು ಪರಿಗಣಿಸಲಾಗಿದೆ.ನೀವು ಚುನರಿ ಜೊತೆ ಬಳೆ, ಬಿಂದಿ, ಕುಂಕುಮ, ಅರಿಶಿನ ಸೇರಿದಂತೆ ಸೌಭಾಗ್ಯದ ಸಂಕೇತವಾಗಿರುವ ವಸ್ತುಗಳನ್ನು ತುಳಸಿಗೆ ಅರ್ಪಿಸಬೇಕು. ಇದು ಮನೆಯ ಸಂತೋಷ, ಸಮೃದ್ಧಿ ಹೆಚ್ಚಾಗಲು ಕಾರಣವಾಗುತ್ತದೆ.
ಕಲವಾ ದಾರ (ರಕ್ಷಾ ದಾರ)
ನೀವು ಕೆಂಪು ಬಣ್ಣದ ಕಲವಾ ದಾರವನ್ನು ತುಳಸಿ ಗಿಡಕ್ಕೆ ಏಳು ಬಾರಿ ಸುತ್ತಬೇಕು. ಕಲವಾವನ್ನು ಕಟ್ಟುವಾಗ, ನಿಮ್ಮ ಕುಟುಂಬದ ಸಂತೋಷ ಮತ್ತು ಶಾಂತಿಗಾಗಿ ಪ್ರಾರ್ಥಿಸಬೇಕು.
ತುಪ್ಪ ದೀಪ ಮತ್ತು ಪರಿಕ್ರಮ
ಸಂಜೆ, ತುಳಸಿಯ ಮುಂದೆ ಶುದ್ಧ ಹಸುವಿನ ತುಪ್ಪದಿಂದ ತುಂಬಿದ ದೀಪವನ್ನು ಬೆಳಗಿಸಿ. ದೀಪವನ್ನು ಬೆಳಗಿದ ನಂತರ, ತುಳಸಿಗೆ ಕನಿಷ್ಠ ಮೂರು ಅಥವಾ ಏಳು ಬಾರಿ ಪ್ರದಕ್ಷಿಣೆ ಹಾಕಿ.
ಜಲ ಅರ್ಪಣೆ ಬೇಡ
ತುಳಸಿ ದೇವಿ ನಿರ್ಜಲ ಏಕಾದಶಿಯಂದು ವಿಷ್ಣುವಿಗಾಗಿ ನಿರ್ಜಲ ಉಪವಾಸವನ್ನು ಆಚರಿಸುತ್ತಾಳೆ. ಈ ದಿನ ತುಳಸಿ ಗಿಡಕ್ಕೆ ನೀರನ್ನು ಅರ್ಪಿಸುವುದು ಒಳ್ಳೆಯದಲ್ಲ. ಹಾಗೆಯೇ ಅದರ ಎಲೆಗಳನ್ನು ಕೀಳುವುದಿಲ್ಲ ಉತ್ತಮವಲ್ಲ.ನಿರ್ಜಲ ಏಕಾದಶಿ ದಿನ ಅನಗತ್ಯವಾಗಿ ತುಳಸಿ ಗಿಡವನ್ನು ಮುಟ್ಟಬೇಡಿ. ದೂರದಿಂದಲೇ ಪೂಜೆ ಮಾಡಿ. ಹಾಗೆಯೇ ದೂರದಿಂದಲೇ ನಮಸ್ಕಾರ ಮಾಡಿ. ನೀವು ತುಳಸಿಯನ್ನು ಪದೇ ಪದೇ ಸ್ಪರ್ಶ ಮಾಡಿದ್ರೆ ಪೂಜೆ ಫಲ ಸಿಗುವುದಿಲ್ಲ.

