ಈ ವರ್ಷದ ನಾಗಪಂಚಮಿಯಂದು 5 ರಾಶಿಗಳಿಗೆ ಸಂಪತ್ತಿನ ಯೋಗ! ಹಣಕಾಸಿನ ಅಡೆತಡೆಗಳೆಲ್ಲಾ ದೂರ
2026ರ ನಾಗಪಂಚಮಿಯು ಆಗಸ್ಟ್ 17ರ ಸೋಮವಾರದಂದು ವಿಶೇಷ ಯೋಗಗಳೊಂದಿಗೆ ಆಚರಿಸಲ್ಪಡುತ್ತದೆ. ಈ ಶುಭ ದಿನದಂದು 5 ರಾಶಿಯವರಿಗೆ ವೃತ್ತಿ, ಆರ್ಥಿಕ ಮತ್ತು ವೈಯಕ್ತಿಕ ಜೀವನದಲ್ಲಿ ಮಹತ್ತರವಾದ ಸಕಾರಾತ್ಮಕ ಬದಲಾವಣೆಗಳು ಮತ್ತು ಅದೃಷ್ಟದ ಅವಕಾಶಗಳು ಕಾದಿವೆ.
16

Image Credit : Gemini
Naga Panchami
2026ನೇ ಸಾಲಿನ ನಾಗಪಂಚಮಿಯನ್ನು ಆಗಸ್ಟ್ 17, ಸೋಮವಾರದಂದು ಆಚರಿಸಲಾಗುತ್ತದೆ. ಸೋಮವಾರ ಶಿವನಿಗೆ ಪ್ರಿಯವಾದ ದಿನವಾದ್ದರಿಂದ, ಈ ವರ್ಷದ ನಾಗಪಂಚಮಿಗೆ ಹೆಚ್ಚಿನ ಮಹತ್ವವಿದೆ ಎಂದು ಜ್ಯೋತಿಷ್ಯ ನಂಬಿಕೆಗಳು ಹೇಳುತ್ತವೆ.
ಶುಕ್ಲ ಪಕ್ಷದ ಪಂಚಮಿ, ಸೋಮವಾರ ಮತ್ತು ನಿರ್ದಿಷ್ಟ ನಕ್ಷತ್ರ-ಯೋಗಗಳ ಸಂಯೋಜನೆಯು ಈ ದಿನವನ್ನು ಇನ್ನಷ್ಟು ವಿಶೇಷವಾಗಿಸುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಕೆಲವು ಪಂಚಾಂಗಗಳಲ್ಲಿ ಆಗಸ್ಟ್ 16-17ರ ಅವಧಿಯಲ್ಲಿ ರವಿ ಯೋಗ, ಸರ್ವಾರ್ಥ ಸಿದ್ಧಿ ಯೋಗದಂತಹ ಶುಭ ಯೋಗಗಳನ್ನೂ ಉಲ್ಲೇಖಿಸಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
26
Image Credit : SOCIAL MEDIA
ಕುಂಭ ರಾಶಿ
- ವ್ಯಾಪಾರ ಮತ್ತು ವ್ಯವಹಾರದಲ್ಲಿ ಹೊಸ ಅವಕಾಶಗಳು ಸೃಷ್ಟಿ
- ಆದಾಯ ಹೆಚ್ಚಳ
- ನಿರೀಕ್ಷಿಸುತ್ತಿದ್ದ ಆರ್ಥಿಕ ಪ್ರಗತಿ ಸಿಗುವ ಸಾಧ್ಯತೆ
- ವಿದೇಶಕ್ಕೆ ಹೋಗಿ ಕೆಲಸ ಮಾಡಲು ಬಯಸುವವರಿಗೂ ಅನುಕೂಲಕರ ಸುದ್ದಿ
- ಸಾಲದ ಹೊರೆಗಳನ್ನು ಹಂತಹಂತವಾಗಿ ಕಡಿಮೆ ಮಾಡುವ ಅವಕಾಶವೂ ಸೃಷ್ಟಿ
- ಆಸ್ತಿ ಅಥವಾ ಭೂಮಿ ಸಂಬಂಧಿತ ವ್ಯಾಜ್ಯಗಳಲ್ಲಿ ಸಿಲುಕಿರುವವರಿಗೆ ಅನುಕೂಲಕರ ತಿರುವು
36
Image Credit : SOCIAL MEDIA
ಮೇಷ ರಾಶಿ
- ಉತ್ಸಾಹಭರಿತ ಬದಲಾವಣೆ, ಕೆಲಸದ ಮತ್ತೆ ವೇಗ ಪಡೆದು ಪೂರ್ಣಗೊಳ್ಳುವ ಸಾಧ್ಯತೆ
- ವ್ಯಾಪಾರ ಮಾಡುವವರಿಗೆ ಹೊಸ ಯೋಜನೆಗಳು ಅಥವಾ ವಿಸ್ತರಣಾ ಪ್ರಯತ್ನಗಳಲ್ಲಿ ಪ್ರಗತಿ
- ಶ್ರಮಕ್ಕೆ ತಕ್ಕ ಫಲದ ಜೊತೆಗೆ ಲಾಭವೂ ಹೆಚ್ಚಾಗುವ ಸಾಧ್ಯತೆ
- ಉದ್ಯೋಗಾಕಾಂಕ್ಷಿಗಳಿಗೆ ಅನಿರೀಕ್ಷಿತವಾಗಿ ಉತ್ತಮ ಅವಕಾಶ
- ಕಚೇರಿಯಲ್ಲಿ ಬಡ್ತಿ, ಸಂಬಳ ಹೆಚ್ಚಳ ಅಥವಾ ಹೆಚ್ಚುವರಿ ಜವಾಬ್ದಾರಿ
- ಅನಿರೀಕ್ಷಿತ ಆದಾಯ ಬರುವ ಸಾಧ್ಯತೆ
46
Image Credit : OTHERS
ಧನು ರಾಶಿ
- ವೃತ್ತಿ ಮತ್ತು ಹಣಕಾಸಿನ ವಿಷಯಗಳಲ್ಲಿ ಭರವಸೆ
- ಪ್ರಯತ್ನಗಳಿಗೆ ಸೂಕ್ತ ಮನ್ನಣೆ, ಕೆಲಸದ ಸ್ಥಳದಲ್ಲಿ ಪ್ರಭಾವ ಹೆಚ್ಚಳ
- ಉದ್ಯೋಗಾಕಾಂಕ್ಷಿಗಳಿಗೆ ಹೊಸ ಅವಕಾಶಗಳು
- ಕೆಲಸದಲ್ಲಿರುವವರ ಪ್ರತಿಭೆ ಮೇಲಧಿಕಾರಿಗಳ ಗಮನಕ್ಕೆ ಬರಲಿದೆ
- ತಂದೆ ಅಥವಾ ಕುಟುಂಬದ ಅನುಭವಿ ಹಿರಿಯರ ಬೆಂಬಲ
- ಆದಾಯದ ಮೂಲಗಳು ಹೆಚ್ಚಾಗಿ, ಉಳಿತಾಯವನ್ನು ಸುಧಾರಿಸಲು ಅವಕಾಶಗಳು ಸೃಷ್ಟಿ
- ಆತ್ಮವಿಶ್ವಾಸ ಹೆಚ್ಚಳ
- ಬಹಳ ದಿನಗಳಿಂದ ಪೂರ್ಣಗೊಳಿಸಲು ಸಾಧ್ಯವಾಗದಿದ್ದ ಕೆಲವು ಕೆಲಸಗಳನ್ನು ಯಶಸ್ವಿಯಾಗಿ ಮುಗಿಯಲಿವೆ
56
Image Credit : OTHERS
ಕರ್ಕಾಟಕ ರಾಶಿ
- ಹಲವು ಉತ್ತಮ ಬದಲಾವಣೆ, ಕೆಲಸಗಳಿಗೆ ಸಿಗಲಿದೆ ವೇಗ ಮತ್ತು ಪೂರ್ಣತೆ
- ಅನುಭವಿ/ಪ್ರಭಾವಿಗಳ ಪರಿಚಯ ಮತ್ತು ಮಾರ್ಗದರ್ಶನ
- ಕ್ರೀಡೆ, ಕಲೆ ಮತ್ತು ಮನರಂಜನಾ ಕ್ಷೇತ್ರಗಳಲ್ಲಿರುವವರಿಗೆ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶ
- ಕೆಲಸದಲ್ಲಿ ಬೇಕಾದ ಪ್ರಗತಿಗೆ ಪೂರಕವಾದ ವಾತಾವರಣ ನಿರ್ಮಾಣ
- ವಿವಾಹಿತರಿಗೆ ಈ ಸಮಯ ವಿಶೇಷವಾಗಿ ಸಂತೋಷಕರವಾಗಿರಬಹುದು.
- ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿ
66
Image Credit : SOCIAL MEDIA
ಸಿಂಹ ರಾಶಿ
- ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ಅನುಕೂಲಕರ ಫಲಿತಾಂಶ
- ನಾಯಕತ್ವದ ಸ್ಥಾನಗಳಲ್ಲಿರುವವರಿಗೆ ಸಾಮರ್ಥ್ಯವನ್ನು ಪ್ರದರ್ಶಿಸಲು ಉತ್ತಮ ಅವಕಾಶ
- ಸ್ಥಗಿತಗೊಂಡಿದ್ದ ಕೆಲಸಗಳು ಮತ್ತೆ ವೇಗ ಪಡೆಯಬಹುದು
- ವ್ಯಾಪಾರ ಮಾಡುವವರಿಗೆ ಹೊಸ ಗ್ರಾಹಕರು ಅಥವಾ ಲಾಭದಾಯಕ ಒಪ್ಪಂದಗಳು ಸಿಗುವ ಸಾಧ್ಯತೆ
- ಹೊಸ ಜವಾಬ್ದಾರಿ ಅಥವಾ ಬೇರೆ ಕಂಪನಿಯಲ್ಲಿ ಉತ್ತಮ ಅವಕಾಶ
- ಕೆಲವರಿಗೆ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವ ಅವಕಾಶ
- ಸಮಾಜದಲ್ಲಿ ನಿಮ್ಮ ಮೌಲ್ಯ ಮತ್ತು ಗೌರವ ಹೆಚ್ಚಳ
Latest Videos

