MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ನರಕ ಚತುರ್ದಶಿಯಂದು ಅಭ್ಯಂಗ ಸ್ನಾನ ಯಾಕೆ? ಅದರ ಮಹತ್ವ ತಿಳಿಯಿರಿ

ನರಕ ಚತುರ್ದಶಿಯಂದು ಅಭ್ಯಂಗ ಸ್ನಾನ ಯಾಕೆ? ಅದರ ಮಹತ್ವ ತಿಳಿಯಿರಿ

ದೀಪಾವಳಿ ಹಬ್ಬ ಬಂತೆಂದರೆ ಮನೆಯಲ್ಲಿ ಸಂತೋಷ, ಸಂಭ್ರಮ ನೆಲೆಸುತ್ತದೆ. ಐದು ದಿನಗಳ ಈ ಬೆಳಕಿನ ಹಬ್ಬದಲ್ಲಿ ಪ್ರತಿಯೊಂದು ದಿನವೂ ಸಂಭ್ರಮವೋ ಸಂಭ್ರಮ. ಇದರಲ್ಲಿ ನರಕ ಚತುರ್ದಶಿಯೂ ಮಹತ್ವವನ್ನು ಪಡೆದಿದೆ. ನರಕ ಚತುರ್ದಶಿ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ನರಕ ಚತುರ್ದಶಿಯಂದು ಅಭ್ಯಂಗ ಸ್ನಾನವು ಬಹಳ ಮಹತ್ವದ್ದಾಗಿದೆ. ಈ ದಿನದಂದು, ಸೂರ್ಯೋದಯಕ್ಕೆ ಮೊದಲು ಎಣ್ಣೆ ಸ್ನಾನ ಮಾಡುವ ಸಂಪ್ರದಾಯವಿದೆ.

2 Min read
Suvarna News
Published : Oct 21 2022, 05:08 PM IST
Share this Photo Gallery
  • FB
  • TW
  • Linkdin
  • Whatsapp
17

ಹಿಂದೂ ಕ್ಯಾಲೆಂಡರ್ (hindu callender) ಪ್ರಕಾರ, ನರಕ ಚತುರ್ದಶಿಯನ್ನು ಈ ವರ್ಷ ಅಕ್ಟೋಬರ್ 24, 2022 ರಂದು ಆಚರಿಸಲಾಗುತ್ತದೆ. ನರಕ ಚತುರ್ದಶಿ ದೀಪಾವಳಿಯ ಒಂದು ದಿನ ಮೊದಲು ಬರುತ್ತದೆ. ನರಕ ಚತುರ್ದಶಿ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನದಂದು, ಯಮರಾಜ ಮತ್ತು ಭಗವಾನ್ ಕೃಷ್ಣನ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ, ಸಂತೋಷ ಮತ್ತು ಸಮೃದ್ಧಿಯನ್ನು ಬಯಸಿ ಮತ್ತು ಅಕಾಲಿಕ ಮರಣವನ್ನು ತಪ್ಪಿಸಲು ಈ ದಿನದಂದು ವಿಶೇಷ ಪೂಜೆ ಮಾಡಲಾಗುತ್ತೆ. 

27

ನರಕ ಚತುರ್ದಶಿಯಂದು ಅಭ್ಯಂಗ ಸ್ನಾನವು (oil bath) ಬಹಳ ಮಹತ್ವದ್ದಾಗಿದೆ. ಈ ದಿನದಂದು, ಸೂರ್ಯೋದಯಕ್ಕೆ ಮೊದಲು ಎಣ್ಣೆಯಿಂದ ಸ್ನಾನ ಮಾಡುವ ಸಂಪ್ರದಾಯವಿದೆ. ನರಕ ಚತುರ್ದಶಿಯಂದು ಅಭ್ಯಂಗ ಸ್ನಾನವನ್ನು ಏಕೆ ಮತ್ತು ಹೇಗೆ ಮಾಡಲಾಗುತ್ತದೆ ಮತ್ತು ಅದರ ಪ್ರಾಮುಖ್ಯತೆ ಏನು ಎಂದು ತಿಳಿಯೋಣ.

37

ಅಭ್ಯಾಂಗ ಸ್ನಾನದ ಮಹತ್ವ
ಧರ್ಮಗ್ರಂಥಗಳ ಪ್ರಕಾರ, ನರಕ ಚತುರ್ದಶಿಯಂದು ಸೂರ್ಯೋದಯಕ್ಕೆ ಮೊದಲು ದೇಹದ ಮೇಲೆ ಎಣ್ಣೆ ಹಚ್ಚುವ ಮೂಲಕ ಸ್ನಾನ ಮಾಡುವ ಪ್ರಕ್ರಿಯೆಯನ್ನು ಅಭ್ಯಂಗ ಸ್ನಾನ ಎಂದು ಕರೆಯಲಾಗುತ್ತದೆ.  ತ್ರಯೋದಶಿಯ ದಿನದಂದು ನೀರು ತುಂಬುವ ಮೂಲಕ ಹಬ್ಬಕ್ಕೆ ಶುಭಾರಂಭ ಮಾಡಲಾಗುತ್ತೆ. ಅಂದು ನೀರಿನ ಪಾತ್ರೆ, ಹಂಡೆಗಳನ್ನು ಶುದ್ದಿ ಮಾಡಿ ಪೂಜಿಸಿ ನೀರು ತುಂಬಲಾಗುತ್ತದೆ. ಮರುದಿನ ಮುಂಜಾನೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವುದು ಪದ್ಧತಿ. ಕೃಷ್ಣಪಕ್ಷದ ನರಕಚತುರ್ದಶಿಯಂದು ಎಲ್ಲರೂ ಅಭ್ಯಂಗ ಸ್ನಾನ ಮಾಡಬೇಕು.

47

ನರಕಚತುರ್ದಶಿಯ ಬ್ರಾಹ್ಮೀ ಮುಹೂರ್ತದಲ್ಲಿ ಅಭ್ಯಂಗ ಸ್ನಾನ ಮಾಡುವುದರಿಂದ ಗಂಗಾಸ್ನಾನದ ಫಲ ಸಿಗುತ್ತದೆ ಎನ್ನಲಾಗುತ್ತೆ. ಕೃಷ್ಣಚತುದರ್ಶಿಯ ದಿನದಂದು ಎಣ್ಣೆ ಮತ್ತು ಜಲದಲ್ಲಿ ವಿಶೇಷ ಶಕ್ತಿಯಿರುತ್ತದೆ ಎನ್ನಲಾಗುತ್ತೆ. ನರಕಾಸುರನನ್ನು ಕೊಂದ ಪಾಪಪರಿಹಾರಕ್ಕೆ ಶ್ರೀಕೃಷ್ಣನು ಎಣ್ಣೆ ಸ್ನಾನ ಮಾಡಿದನಂತೆ. ದೀಪಾವಳಿಯ ದಿನದಂದು ಅಭ್ಯಂಗ ಸ್ನಾನ ಮಾಡಿದರೆ ಸಕಲ ಪಾಪಗಳು ನಿವಾರಣೆಯಾಗಿ ಆಯಸ್ಸು ಮತ್ತು ಆರೋಗ್ಯ ವೃದ್ಧಿಸುವುದು ಎನ್ನುವ ನಂಬುಗೆಯಿದೆ.

57

ಅಭ್ಯಂಗ ಸ್ನಾನವನ್ನು ಹೇಗೆ ಮಾಡಲಾಗುತ್ತದೆ?
ಧರ್ಮಗ್ರಂಥಗಳ ಪ್ರಕಾರ, ನರಕ ಚತುರ್ದಶಿಯ ದಿನದಂದು ಬೆಳಗ್ಗೆ ಏಳಬೇಕು. ಸೂರ್ಯೋದಯಕ್ಕೆ ಮೊದಲು ಸ್ನಾನ ಮಾಡಿದ ನಂತರ ಎಳ್ಳೆಣ್ಣೆಯನ್ನು ದೇಹದ ಮೇಲೆ ಮಸಾಜ್ (oil massage) ಮಾಡಿ. ಎಣ್ಣೆಯಿಂದ ನಿಮ್ಮ ತಲೆಯನ್ನು ಚೆನ್ನಾಗಿ ಮಸಾಜ್ ಮಾಡಿ. ಇದರ ನಂತರ, ಬಹಳ ಶಾಂತ ಮನಸ್ಸಿನಿಂದ ಧ್ಯಾನ ಮಾಡುವಾಗ 15 ರಿಂದ 20 ನಿಮಿಷಗಳ ಕಾಲ ಕುಳಿತುಕೊಳ್ಳಿ.  ನಂತರ ತಲೆಗೆ ಮೈಗೆ ಬಿಸಿ ನೀರಿನ ಸ್ನಾನ ಮಾಡಿ. 

67

ಬೆಚ್ಚಗಿನ ಎಣ್ಣೆಯನ್ನು ಇಡೀ ದೇಹಕ್ಕೆ ಹಚ್ಚಿ ಮಸಾಜ್ ಮಾಡಿಕೊಂಡು ಕೆಲ ಹೊತ್ತು ಬಿಟ್ಟು ಸ್ನಾನ ಮಾಡೋದನ್ನು ಅಭ್ಯಂಗ ಸ್ನಾನ ಎನ್ನಲಾಗುತ್ತೆ. ಇದು ನಮ್ಮ ದೇಹಕ್ಕೆ ಆಯುರ್ವೇದ ಔಷಧಿಯಂತೆ ಕೆಲಸ ಮಾಡುತ್ತೆ. ಅಂಗಾಂಗಗಳಿಗೆ ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ಆರೋಗ್ಯಕ್ಕೆ ಸಹ ತುಂಬಾನೆ ಉತ್ತಮ. 

77

ಒತ್ತಡ ನಿವಾರಣೆ (stress free) : ದೇಹಕ್ಕೆ ಎಣ್ಣೆ ಹಚ್ಚುವುದು ಒಂದು ಬಗೆಯ ಸ್ಪರ್ಷ ಚಿಕಿತ್ಸೆ. ಅಭ್ಯಂಗ ಸ್ನಾನ ಮಾಡೊದರಿಂದ ನರನಾಡಿಗಳಿಗೆ ಚೈತನ್ಯ ನೀಡುತ್ತೆ. ಅಭ್ಯಂಗ ಸ್ನಾನ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಉತ್ತಮ ಪರಿಹಾರ ಸಿಗುತ್ತದೆ.

About the Author

SN
Suvarna News
ಆರೋಗ್ಯ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved